ಗುಂಡು ಹಾರಿಸಿಕೊಂಡು ಕೆಎಲ್ಇ ವೈದ್ಯ ಆತ್ಮಹತ್ಯೆ – ತಲೆಗೆ ಶೂಟ್ ಮಾಡಿಕೊಂಡ ಡಾಕ್ಟರ್ ದಾರುಣ ಅಂತ್ಯ

ಗುಂಡು ಹಾರಿಸಿಕೊಂಡು ಕೆಎಲ್ಇ ವೈದ್ಯ ಆತ್ಮಹತ್ಯೆ – ತಲೆಗೆ ಶೂಟ್ ಮಾಡಿಕೊಂಡ ಡಾಕ್ಟರ್ ದಾರುಣ ಅಂತ್ಯ

ಅವರು ಅದೆಷ್ಟೋ ರೋಗಿಗಳ ಕಾಯಿಲೆ ಗುಣಪಡಿಸಿದವರು. 40 ದಶಕಗಳಿಂದ ವೈದ್ಯ ವೃತ್ತಿಯಲ್ಲಿ ತೊಡಗಿಕೊಂಡವರು. ಆದರೆ, ಅವರಿಗೆ ಬಂದ ಕಾಯಿಲೆಯನ್ನು ಎದುರಿಸಲು ಆಗಲೇ ಇಲ್ಲ. ತನಗೆ ಬಂದ ಕಾಯಿಲೆಯಿಂದ ಮನನೊಂದ ಆ ವೈದ್ಯರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ:ದುಬಾರೆ ದುರಂತ ಎಫೆಕ್ಟ್ – ಪನ್ಸೋಲಿ, ಸಕ್ರೆಬೈಲ್ ಆನೆ ಬಿಡಾರಕ್ಕೆ ನೋ ಎಂಟ್ರಿ

ಅಂಕೋಲಾ ಮೂಲದ ಡಾ. ದಿನೇಶ ಲಕ್ಷ್ಮಣ ಭಟ್ಕಳ ಅವರು ಬೆಳಗಾವಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಮಂಡೋಲಿ ರಸ್ತೆಯಲ್ಲಿನ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಮನೆಯ ಗ್ಯಾಲರಿಯಲ್ಲಿ ತಲೆಗೆ ಶೂಟ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಡಾ. ದಿನೇಶ ಭಟ್ಕಳ ಅವರು 40 ವರ್ಷಗಳಿಂದ  ಕಾರ್ಯನಿರ್ವಹಿಸುತ್ತಿದ್ದರು. ಡಾ. ದಿನೇಶ ಲಕ್ಷ್ಮಣ ಭಟ್ಕಳ ಅವರು ಲಂಗ್ಸ್ ಕ್ಯಾನ್ಸರ್‌‌ಗೆ ತುತ್ತಾಗಿದ್ದರು ಎನ್ನಲಾಗುತ್ತಿದೆ. ಕ್ಯಾನ್ಸರ್​ ಬಂದ ಬಳಿಕ ನೊಂದಿದ್ದ ಡಾ. ದಿನೇಶ್ ಅವರು ಇದೇ ವಿಚಾರಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.  ಸ್ಥಳಕ್ಕೆ ಟಿಳಕವಾಡಿ ಸಿಪಿಐ ಸೇರಿದಂತೆ ಕೆಲವು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿಯ ಟಿಳಕವಾಡಿವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟ‌ನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಇನ್ನು ಆತ್ಮಹತ್ಯೆಗೂ ಮುನ್ನ ಡಾ. ಪ್ರಭಾಕರ ಕೋರೆ ಅವರಿಗೆ ಸಂದೇಶ ಕಳಿಸಿದ್ದರು. ನನಗೆ ನೀವು ಇಷ್ಟು ವರ್ಷಗಳ ಕಾಲ ಸಾಕಷ್ಟು ಸಹಾಯ ಮಾಡಿದ್ದೀರಿ. ಆದರೆ ನನಗೆ ತೀವ್ರ ಎದೆನೋವು ಕಾಡುತ್ತಿದೆ. ಆದ್ದರಿಂದ ನಾನು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ಇದು ನನ್ನ ಸ್ವಂತ ನಿರ್ಧಾರ. ದಯವಿಟ್ಟು ನನ್ನ ಕುಟುಂಬಕ್ಕೆ ಸಹಾಯ ಮಾಡಿ. ನಗರ ಪೊಲೀಸ್ ಆಯುಕ್ತರಿಗೂ ಮಾಹಿತಿ ನೀಡಿ ಎಂದು ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

Sulekha

Leave a Reply

Your email address will not be published. Required fields are marked *