ರೋಗಿಗೆ ವೈದ್ಯನಿಂದ ರಕ್ತದಾನ – ಡಾಕ್ಟರ್ ಮಾನವೀಯತೆಗೆ ಮೆಚ್ಚುಗೆ

ರೋಗಿಗೆ ವೈದ್ಯನಿಂದ ರಕ್ತದಾನ – ಡಾಕ್ಟರ್ ಮಾನವೀಯತೆಗೆ ಮೆಚ್ಚುಗೆ

ಡೆಹ್ರಾಡೂನ್:  ಶಸ್ತ್ರ ಚಿಕಿತ್ಸೆಗೂ ಮುನ್ನ ರೋಗಿಗೆ ರಕ್ತದ ಅನಿವಾರ್ಯವಿದ್ದ ಕಾರಣ ವೈದ್ಯರೊಬ್ಬರು ತಮ್ಮ ರಕ್ತವನ್ನೇ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ವ್ಯಕ್ತಿಯೊಬ್ಬ ಗುಂಡಿಯೊಂದಕ್ಕೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದ. ಈತನನ್ನು ಡೆಹ್ರಾಡೂನ್‍ನ ಡೂನ್ ಪಿಜಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಹೀಗಾಗಿ ವ್ಯಕ್ತಿಯನ್ನು ಮೂರು ದಿನಗಳ ಕಾಲ ಐಸಿಯುನಲ್ಲಿ ಇರಿಸಿದ ವೈದ್ಯರು ನಂತರ ಅವರಿಗೆ ತೊಡೆಯ ಮೂಳೆ ಶಸ್ತ್ರ ಚಿಕಿತ್ಸೆ ಮಾಡಲು ನಿರ್ಧರಿಸಿದ್ದಾರೆ. ಆದರೆ ರೋಗಿಗೆ ರಕ್ತದ ಕೊರತೆ ಇದ್ದಿದ್ದರಿಂದ ಆಪರೇಷನ್ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದರು.

ಇದನ್ನೂ ಓದಿ: ಡಿಜಿಟಲ್ ಪತ್ರಕರ್ತರಿಗೂ ಕೇಂದ್ರದಿಂದ ಶೀಘ್ರದಲ್ಲೇ ಮಾನ್ಯತೆ

ಈ ವೇಳೆ ರೋಗಿಯ ಮಗಳು ರಕ್ತ ನೀಡಲು ಮುಂದಾಗಿದ್ದಾರೆ. ಆದರೆ ಆರೋಗ್ಯ ಸಮಸ್ಯೆಗಳಿದ್ದಿದ್ದರಿಂದ ಆಕೆಯಿಂದ ರಕ್ತವನ್ನು ಪಡೆಯಲು ಸಾಧ್ಯವಿಲ್ಲ. ಅಲ್ಲದೇ ಈ ಶಸ್ತ್ರಚಿಕಿತ್ಸೆ ಮುಂದೂಡಿದರೆ ರೋಗಿಯ ಜೀವಕ್ಕೂ ಅಪಾಯವಿದೆ ಎಂದು ವೈದ್ಯರು ಹೇಳಿದ್ದಾರೆ. ಆಗ ಅದೇ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಕ ಡಾ.ಶಶಾಂಕ್ ಸಿಂಗ್ ತಮ್ಮ ರಕ್ತವನ್ನು ರೋಗಿಗೆ ದಾನ ಮಾಡಲು ನಿರ್ಧರಿಸಿದ್ದಾರೆ. ಇದರ ಬೆನ್ನಲ್ಲೇ ಆಪರೇಷನ್ ಮಾಡಿ ರೋಗಿಯ ಪ್ರಾಣ ಉಳಿಸಿದ್ದಾರೆ. ವೈದ್ಯರ ಸಮಯಪ್ರಜ್ಞೆಗೆ  ಎಲ್ಲೆಡೆ ಪ್ರಶಂಶೆ ವ್ಯಕ್ತವಾಗುತ್ತಿದೆ.

suddiyaana