ಡಿಕೆ ಬ್ರದರ್ಸ್ ಗೆ ಶಾಕ್ ಕೊಟ್ರಾ ಡಾಕ್ಟರ್.. – ಸಮೀಕ್ಷೆ ನಿಜವಾಗುತ್ತಾ?

ಡಿಕೆ ಬ್ರದರ್ಸ್ ಗೆ ಶಾಕ್ ಕೊಟ್ರಾ ಡಾಕ್ಟರ್.. – ಸಮೀಕ್ಷೆ ನಿಜವಾಗುತ್ತಾ?

ಕರ್ನಾಟಕದಲ್ಲಿ ಈಗಾಗ್ಲೇ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಗಿದಿದ್ದು, ಇನ್ನೂ 14 ಕ್ಷೇತ್ರಗಳಿಗೆ ಮತದಾನ ಬಾಕಿ ಇದೆ. ಉತ್ತರ ಕರ್ನಾಟಕವನ್ನ ಟಾರ್ಗೆಟ್ ಮಾಡಿರೋ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು​ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದೆಡೆ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದ ನಡುವೆಯೂ ಜೆಡಿಎಸ್ ತನ್ನ ದೋಸ್ತಿ ಪಕ್ಷ ಬಿಜೆಪಿಗಾಗಿ ಕ್ಯಾಂಪೇನ್ ಮಾಡ್ತಿದೆ. ಆದ್ರೆ 28 ಲೋಕಸಭಾ ಕ್ಷೇತ್ರಗಳ ಪೈಕಿ ಭಾರೀ ಕುತೂಹಲ ಕೆರಳಿಸಿರೋ ಕ್ಷೇತ್ರ ಅಂದ್ರೆ ಅದು ಬೆಂಗಳೂರು ಗ್ರಾಮಾಂತರ ಕ್ಷೇತ್ರ. ಒಂದ್ಕಡೆ ದೊಡ್ಡಗೌಡ್ರ ಅಳಿಯ ಹೃದಯವಂತ ಡಾಕ್ಟರ್ ಅಂತಾನೇ ಕರೆಸಿಕೊಳ್ಳೋ ಸಿಎನ್ ಮಂಜುನಾಥ್. ಮತ್ತೊಂದ್ಕೆಡೆ ಕಾಂಗ್ರೆಸ್​ನ ಪವರ್​ಫುಲ್ ಲೀಡರ್ ಡಿ.ಕೆ ಶಿವಕುಮಾರ್ ಅವ್ರ ಸೋದರ ಡಿ.ಕೆ ಸುರೇಶ್. ಆರಂಭದಲ್ಲಿ ಡಿಕೆ ಸುರೇಶ್​ರೇ ಗೆಲ್ತಾರೆ ಅನ್ನೋ ವಾತಾವರಣ ಇದ್ರೂ ಕೂಡ ಕ್ರಮೇಣ ಅದು ಮಂಜುನಾಥ್ ಅವ್ರ ಕಡೆ ಜನರ ಒಲವು ವಾಲಿತ್ತು. ಹೀಗಾಗಿ ಈ ಕ್ಷೇತ್ರದಲ್ಲಿ ಯಾರೇ ಗೆದ್ರೂ ಅದೂ ಅತಿದೊಡ್ಡ ದಾಖಲೆ ಆಗಲಿದೆ.

ಇದನ್ನೂ ಓದಿ: ಕೋವಿಶೀಲ್ಡ್​ ಪಡೆದವರು ತಂಪುಪಾನಿಯ, ಐಸ್​ ಕ್ರೀಮ್ ಸೇವಿಸಬಹುದಾ? – ಆರೋಗ್ಯ ಇಲಾಖೆ ಹೇಳಿದ್ದೇನು?

ಯಾರೇ ಗೆದ್ದರೂ ದಾಖಲೆ! 

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಆದರೂ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ ಮತ್ತು ಬಿಜೆಪಿ -ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್‌ ಮಂಜುನಾಥ್‌ ನಡುವೆ ನೇರ ಹಣಾಹಣಿ ನಡೆದಿದೆ. ಹಾಗಾಗಿ ಈ ಉಭಯರಲ್ಲಿ ಯಾರೇ ಗೆದ್ದರೂ ಹೊಸ ದಾಖಲೆ ಬರೆದಂತಾಗುತ್ತದೆ. ಈಗಾಗ್ಲೇ 3 ಬಾರಿ ಸಂಸದರಾಗಿ ಆಯ್ಕೆ ಆಗಿರುವ ಡಿ.ಕೆ.ಸುರೇಶ್‌ ಈ ಬಾರಿಯೂ ಗೆಲುವು ಸಾಧಿಸಿದರೆ, ಸತತ ನಾಲ್ಕನೇ ಬಾರಿಗೆ ಗೆಲುವು ದಾಖಲಿಸುವ ಮೂಲಕ ದಾಖಲೆ ಬರೆಯಲಿದ್ದಾರೆ.  ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದರೆ, ಬಿಜೆಪಿದೇ ಇದೇ ದೊಡ್ಡ ಸಾಧನೆಯಾಗಲಿದೆ. ಮೈತ್ರಿ ಗೆಲುವು ಇತಿಹಾಸ ಸೃಷ್ಟಿಸಲಿದೆ. ಕಳೆದ 2019ರ ಲೋಕಸಭೆ ಚುನಾವಣೆ ವೇಳೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್‌, ಬಿಜೆಪಿ ಅಭ್ಯರ್ಥಿಯಾಗಿ ಅಶ್ಚತ್ಥ್ ನಾರಾಯಣ್‌ಗೌಡ ಸ್ಪರ್ಧಿಸಿದ್ದರು. ಆದ್ರೆ ಡಿಕೆ ಬ್ರದರ್ಸ್ ಪ್ರಾಬಲ್ಯದ ಎದುರು ಸೋಲು ಕಂಡಿದ್ರು.

ಅಸಲಿಗೆ 2019 ರ ಚುನಾವಣೆಯಲ್ಲಿ ಜೆಡಿಎಸ್‌ ಪಡೆಯು ಡಿ.ಕೆ.ಸುರೇಶ್‌ ಅವರಿಗೆ ಬಲ ಬೆಂಬಲ ನೀಡಿತ್ತು. ಡಿ.ಕೆ.ಸುರೇಶ್‌ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಾಜಿ ಸಿಎಂ ಜೆಡಿಎಸ್‌ ನಾಯಕ ಹೆಚ್‌.ಡಿ.ಕುಮಾರಸ್ವಾಮಿ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ದುಡಿದಿದ್ದಾರೆ. ಅಲ್ಲದೇ ಮೋದಿ ಹವಾ ಕೂಡ ಕೆಲಸ ಮಾಡಿರುವುದರಿಂದ ಬಿಜೆಪಿ ನೂತನ ದಾಖಲೆ ಬರೆಯುವುದು ಶತಸಿದ್ಧ ಎಂಬ ತೀರ್ಮಾನಕ್ಕೆ ಬಂದಿರುವ ಬಿಜೆಪಿಗರು ಹೆಚ್ಚಿನ ಹುಮ್ಮಸ್ಸಿನಲ್ಲಿದ್ದಾರೆ. ಕ್ಷೇತ್ರದಲ್ಲಿ ಮಂಜುನಾಥ್ ಪರವೂ ಅಲೆ ಎದುರಾಗಿದ್ದರಿಂದ ಡಿಕೆ ಬ್ರದರ್ಸ್​ಗೂ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗೇ ಆಂತರಿಕ ಸರ್ವೇ ರಿಪೋರ್ಟ್ ತರಿಸಿಕೊಂಡಿದ್ದ ಡಿಕೆಶಿ ತಮ್ಮನ ಗೆಲುವಿಗಾಗಿ ವಾರಗಟ್ಟಲೆ ಪ್ರಚಾರ ಮಾಡಿದ್ದರು. ಗೆಲುವು ಕಷ್ಟ ಅನ್ನೋ ವರದಿಯಿಂದಾಗಿ ಕಡೇ ಕ್ಷಣದವರೆಗೂ ಮತದಾರರ ಮನ ಗೆಲ್ಲೋ ಕಸರತ್ತು ನಡೆಸಿದ್ದರು.

ಯಾರಿಗೆ ಗ್ರಾಮಾಂತರ ಗದ್ದುಗೆ?

ಅಸಲಿಗೆ ಚಿಕ್ಕಬಳ್ಳಾಪುರ ಕ್ಷೇತ್ರ ಪುನರ್‌ ವಿಂಗಡಣೆಯಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆದ 2009ರ ಚುನಾವಣೆಯಲ್ಲಿ ಬಿಜೆಪಿಯ ಸಿ.ಪಿ.ಯೋಗೇಶ್ವರ್‌ ವಿರುದ್ಧ ಗೆದ್ದಿದ್ದ ಹೆಚ್‌.ಡಿ.ಕುಮಾರಸ್ವಾಮಿ 2013ರಲ್ಲಿ ವಿಧಾನಸಭಾ ಚುನಾವಣೆಗಾಗಿ ರಾಜೀನಾಮೆ ಸಲ್ಲಿಸಿದ್ದರು. 2013 ರಲ್ಲಿ ಎದುರಾದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ಡಿ.ಕೆ.ಸುರೇಶ್‌ ಅವರು ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಮಣಿಸಿದ್ದರು. 2014 ರಲ್ಲಿ ಪುನರಾಯ್ಕೆಯಾದ ಡಿ.ಕೆ.ಸುರೇಶ್‌, 2019ರಲ್ಲಿಯು ಹ್ಯಾಟ್ರಿಕ್‌ ಗೆಲುವು ದಾಖಲಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿಗೆಲುವು ಸಾಧಿಸಿದರೆ ಬಿಜೆಪಿ ಜೆಡಿಎಸ್​ಗೆ ಬಹುದೊಡ್ಡ ಹೊಡೆತ ನೀಡಿದಂತಾಗುತ್ತೆ.  ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌.ಮಂಜುನಾಥ್‌ ಗೆಲುವು ಸಾಧಿಸಿದರೂ ದಾಖಲೆಯಾಗಲಿದೆ. ಒಂದು ವೇಳೆ ಇವರಿಬ್ಬರನ್ನು ಹೊರತು ಪಡಿಸಿ 3ನೇ ಅಭ್ಯರ್ಥಿ ಗೆಲುವು ಸಾಧಿಸಿದರೆ ಅದೂ ಮತ್ತೊಂದು ವಿಶೇಷಕ್ಕೆ ಕಾರಣವಾಗಲಿದೆ.

ಸದ್ಯ ಲೋಕಸಭಾ ಚುನಾವಣಾ ಅಖಾಡದಲ್ಲಿ 14 ಕ್ಷೇತ್ರಗಳಲ್ಲಿ ಮತದಾನ ಮುಗಿದಿದ್ದು ಅಭ್ಯರ್ಥಿಗಳು ಸೋಲು ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಅದ್ರಲ್ಲೂ ಬೆಂಗಳೂರು ಗ್ರಾಮಾಂತರ ಭಾರೀ ಕುತೂಹಲ ಮೂಡಿಸಿದೆ. ಒಂದು ವೇಳೆ ಡಿಕೆ ಸುರೇಶ್ ಮತ್ತೊಮ್ಮೆ ಗೆದ್ದರೆ ಡಿಕೆ ಬ್ರದರ್ಸ್ ಹಿಡಿದ ಕ್ಷೇತ್ರದಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ಹಾಗೇ ಸೋದರನ ಗೆಲುವು ಡಿಕೆಶಿಗೆ ಬಲ ತುಂಬಲಿದೆ. ಒಂದು ವೇಳೆ ಡಾಕ್ಟರ್ ಎದುರು ಸೋತ್ರೆ ಅದು ಒಂದು ರೀತಿ ಡಿಕೆಶಿಗೆ ಹಿನ್ನಡೆ ಉಂಟು ಮಾಡಿದಂತಾಗುತ್ತೆ. ಮತ್ತೊಂದೆಡೆ ದೊಡ್ಡಗೌಡ್ರ ಅಳಿಯ ಮಂಜುನಾಥ್ ಏನಾದ್ರೂ ಗೆದ್ರೆ ಮೈತ್ರಿನಾಯಕರ ಪಾಲಿಗೆ ಬಹುದೊಡ್ಡ ಗೆಲುವಾಗಲಿದೆ. ಈಗಾಗ್ಲೇ ಮತದಾನೋತ್ತರ ಸಮೀಕ್ಷೆಗಳಲ್ಲಿ ಅಚ್ಚರಿಯ ಫಲಿತಾಂಶ ಕೂಡ ಹೊರಬಿದ್ದಿದೆ. 60 ಪರ್ಸೆಂಟ್ ಸಮೀಕ್ಷೆಗಳು ಡಿ.ಕೆ ಸುರೇಶ್ ಗೆಲ್ತಾರೆ ಅಂತೇಳಿದ್ರೆ 40 ಪರ್ಸೆಂಟ್ ಸರ್ವೇ ರಿಪೋರ್ಟ್ ವೈದ್ಯ ಡಾಕ್ಟರ್ ಸಿ.ಎನ್ ಮಂಜುನಾಥ್ ಪರ ಬಂದಿದೆ. ಹೀಗಾಗಿ ಅಂತಿಮವಾಗಿ ಸಂಸದರಾಗೋದು ಯಾರು ಅನ್ನೋದನ್ನ ತಿಳಿದುಕೊಳ್ಳಲು ಇನ್ನೂ ಒಂದು ತಿಂಗಳು ಕಾಯಲೇಬೇಕಿದೆ.

Shwetha M