ಗಡ್ಡೆ ಎಂದು ‘ಅದನ್ನೇ’ ಕತ್ತರಿಸಿದ ವೈದ್ಯರು – ಮುಂದೇನಾಯ್ತು ಗೊತ್ತಾ?
ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಬಳಿ ತೆರಳಿ ನಾವು ಔಷಧಿ ಪಡೆದುಕೊಳ್ಳುತ್ತೇವೆ. ಅವರು ಕೊಟ್ಟ ಔಷಧಿಯಿಂದ ನಾವು ಚೇತರಿಸಿಕೊಳ್ಳುತ್ತೇವೆ. ಆದರೆ ಕೆಲವೊಂದು ಬಾರಿ ವೈದ್ಯರಿಂದಲೂ ಎಡವಟ್ಟುಗಳಾಗುತ್ತವೆ. ಇದರಿಂದಾಗಿ ರೋಗಿಗಳು ದೊಡ್ಡ ಮಟ್ಟದ ತೊಂದರೆ ಅನುಭವಿಸುತ್ತಾರೆ. ವೈದ್ಯರ ಎಡವಟ್ಟಿನಿಂದಾಗಿ ಕೆಲ ರೋಗಿಗಳ ಜೀವ ಹೋದ ಪ್ರಸಂಗಗಳು ನಡೆದಿವೆ. ಇಲ್ಲೊಬ್ಬ ವೈದ್ಯ ಮಾಡಿದ ತಪ್ಪಿನಿಂದಾಗಿ ರೋಗಿಯೊಬ್ಬ ತನ್ನ ಗುಪ್ತಾಂಗವನ್ನೇ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ: ಸ್ಮಾರ್ಟ್ ಫೋನ್ ಖರೀದಿಸಿದರೆ 2 ಕ್ಯಾನ್ ಬಿಯರ್ ಫ್ರೀ – ಮೊಬೈಲ್ ಗಾಗಿ ಬಂದವರಿಗೆ ಸಿಕ್ಕಿದ್ದು ಲಾಠಿ ಏಟು!
ಇಟಲಿಯಲ್ಲಿ 60 ವರ್ಷದ ವ್ಯಕ್ತಿಯೊಬ್ಬ ಅನಾರೋಗ್ಯ ಇದೆಯೆಂದು ವೈದ್ಯರ ಬಳಿ ತೆರಳಿದ್ದಾನೆ. ಈ ವೇಳೆ ಗುಪ್ತಾಂಗದ ಪಕ್ಕ ಟ್ಯೂಮರ್ (ಗಡ್ಡೆ) ಇದೆ ಎಂದು ವೈದ್ಯರು ಹೇಳಿದ್ದಾರೆ. ಹೀಗಾಗಿ ಆತ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಒಪ್ಪಿಕೊಂಡಿದ್ದಾನೆ. ಆದರೆ ವೈದ್ಯ ಆಪರೇಷನ್ ವೇಳೆ ರೋಗಿಯ ಗುಪ್ತಾಂಗವನ್ನೇ ಕತ್ತರಿಸಿದ್ದಾರೆ. ನಂತರ ಆ ರೋಗಿಗೆ ಯಾವುದೇ ರೀತಿಯ ಗಡ್ಡೆಯೇ ಇರಲಿಲ್ಲ ಎನ್ನುವ ವಿಚಾರ ಬಯಲಾಗಿದೆ.
60 ವರ್ಷದ ವ್ಯಕ್ತಿಗೆ ಸಿಫಿಲಿಸ್ ಇತ್ತು ಅದನ್ನು ಔಷಧಿಗಳಿಂದ ಗುಣಪಡಿಸಬಹುದಿತ್ತು. ಇದಕ್ಕೆ ಸರ್ಜರಿ ಮಾಡಬೇಕಾಗಿರಲಿಲ್ಲ. ಆದರೆ ವೈದ್ಯರ ಎಡವಟ್ಟಿನಿಂದ ವ್ಯಕ್ತಿ ಗುಪ್ತಾಂಗವನ್ನೇ ಕಳೆದುಕೊಳ್ಳಬೇಕಾಯಿತು. ಇಟಲಿಯ ಆರೋಗ್ಯ ಇಲಾಖೆಯು ವೈದ್ಯರ ವಿರುದ್ಧ ತನಿಖೆ ಆರಂಭಿಸಿದೆ. ಮಾರ್ಚ್ 9ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ಕಳೆದ ವರ್ಷ ಯುರೋಪ್ನಲ್ಲಿ ಇಂಥದ್ದೇ ಘಟನೆ ನಡೆದಿತ್ತು. ವೈದ್ಯರ ನಿರ್ಲಕ್ಷ್ಯದಿಂದ ಶಸ್ತ್ರ ಚಿಕಿತ್ಸೆಯಲ್ಲಿ ರೋಗಿಯ ಜನನಾಂಗವನ್ನೇ ತೆಗೆದುಹಾಕಲಾಗಿತ್ತು. ರೋಗಿಯು ಕೋರ್ಟ್ ಮೆಟ್ಟಿಲೇರಿದಾಗ ವ್ಯಕ್ತಿಗೆ 62,000 ಯೂರೋ ಪರಿಹಾರವನ್ನು ಪಾವತಿಸಲು ಆದೇಶಿಸಲಾಗಿತ್ತು.