ಊಟ ಮಾಡುವಾಗ, ವಾಶ್‌ ರೂಮ್‌ನಲ್ಲಿ ಫೋನ್‌ ಬಳಸುತ್ತೀರಾ? – ಅಪಾಯ ಕಾದಿದೆ ಎಚ್ಚರ!

ಊಟ ಮಾಡುವಾಗ, ವಾಶ್‌ ರೂಮ್‌ನಲ್ಲಿ ಫೋನ್‌ ಬಳಸುತ್ತೀರಾ? – ಅಪಾಯ ಕಾದಿದೆ ಎಚ್ಚರ!

ಊಟ ಮಾಡುವಾಗ, ಶೌಚಾಲಯಕ್ಕೆ ಹೋಗುವಾಗ ಅನೇಕರು ಮೊಬೈಲ್ ಬಳಸುತ್ತಾರೆ. ಊಟ ಮಾಡುವಾಗ ಮೊಬೈಲ್‌ ಬಳಕೆ ಮಾಡುವುದು ಅಪಾಯಕಾರಿ.  ಇದರಿಂದಾಗಿ ನಿಮ್ಮ ಆರೋಗ್ಯ ಹಾಳಾಗುತ್ತಿದೆ ಎಂದು ಅಧ್ಯಯನದಿಂದ ಗೊತ್ತಾಗಿದೆ.

ಊಟದ ತಟ್ಟೆ ಮುಂದೆ ಕುಳಿತುಕೊಳ್ಳುವ ಮುನ್ನ ಕೈ ತೊಳೆಯೋ ಬದಲು ಮೊಬೈಲ್ ಹುಡುಕೋ ಜನರೇ ಹೆಚ್ಚಿದ್ದಾರೆ. ಇನ್ನು ಮಕ್ಕಳು ಊಟ ಮಾಡಲ್ಲ ಎನ್ನುವ ಕಾರಣಕ್ಕೆ ಪಾಲಕರು ಮಕ್ಕಳ ಕೈಗೆ ಮೊಬೈಲ್ ನೀಡಿ ಬಾಯಿಗೆ ಆಹಾರ ತುರುಕುತ್ತಾರೆ. ಆದ್ರೆ ಮೊಬೈಲ್ ನೋಡ್ತಾ ಊಟ ಮಾಡಿದ್ರೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಅಂತಾರೆ ತಜ್ಞರು.

ಇದನ್ನೂ ಓದಿ: ಮೊಬೈಲ್‌ ಉತ್ಪಾದನೆಯಲ್ಲಿ ಭಾರತ ನಂ.1 ದೇಶವಾಗಲು ಇನ್ನೊಂದೇ ಹೆಜ್ಜೆ ಬಾಕಿ! – ಇಷ್ಟೊಂದು ಪ್ರಗತಿ ಸಾಧಿಸಲು ಕಾರಣವೇನು?

ನಾವು ತಿನ್ನುವಾಗ ನಮ್ಮ ಗಮನವೆಲ್ಲ ಮೊಬೈಲ್ ಮೇಲಿರುತ್ತೆ. ನಾವೆಷ್ಟು ಆಹಾರ ಸೇವನೆ ಮಾಡಿದ್ದೇವೆ, ನಮ್ಮ ಹೊಟ್ಟೆ ತುಂಬಿದ್ಯಾ ಅನ್ನೋದನ್ನೂ ನಾವು ಗಮನಿಸಲ್ಲ. ಅತಿಯಾಗಿ ತಿಂದ್ರೆ ಬೊಜ್ಜು ಬೆಳೆಯುತ್ತದೆ.  ಮೊಬೈಲ್ ನೋಡ್ತಾ ಊಟ ಮಾಡಿದ್ರೆ ಜಗಿದು ನುಂಗಲ್ಲ. ಇದ್ರಿಂದ ಜೀರ್ಣಕ್ರಿಯೆ ಸರಿಯಾಗಿ ಆಗಲ್ಲ. ಇದರಿಂದಾಗಿ ಅನೇಕ ರೋಗಗಳು ನಮ್ಮನು ಕಾಡಲು ಆರಂಭಿಸುತ್ತವೆ.

ಇನ್ನು ಅನೇಕರು ಶೌಚಾಲಯಕ್ಕೆ ಹೋದಾಗ್ಲೂ ಯೂಸ್ ಮಾಡ್ತಾರೆ. ಟಾಯ್ಲೆಟ್​ಗೆ ಫೋನ್​​ ತಗೊಂಡು ಹೋದ್ರೆ ಅಲ್ಲಿರುವ ಅಪಾಯಕಾರಿ ಬ್ಯಾಕ್ಟೀರಿಯಾಗಳು ಫೋನ್‌ನಲ್ಲಿ ಅಂಟಿಕೊಳ್ಳುತ್ತೆ. ಅಲ್ಲಿಂದ ನಿಮ್ಮ ಹಾಸಿಗೆ, ಅಡುಗೆಮನೆಗೆ ಬರುತ್ತೆ. ಇದರಿಂದಾಗಿ ತೀವ್ರ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ‌ ಮೊಬೈಲ್ ಬಳಕೆ ವಿಚಾರದಲ್ಲೂ ಎಚ್ಚರವಿರಲಿ.

Shwetha M