ಉಪವಾಸ ಮಾಡುವಾಗ ಬಿಪಿ, ಶುಗರ್ ಮಾತ್ರೆ ಸೇವಿಸ್ತೀರಾ?

ಉಪವಾಸ ಮಾಡುವಾಗ ಬಿಪಿ, ಶುಗರ್ ಮಾತ್ರೆ ಸೇವಿಸ್ತೀರಾ?

ಈಗಾಗ್ಲೇ ಸಾಲು ಸಾಲು ಹಬ್ಬಗಳು ಬರ್ತಾಇವೆ. ಅನೇಕ ಮಹಿಳೆಯರು ನಾನಾ ಕಾರಣಕ್ಕೆ ವ್ರತ, ಪೂಜೆ ಅಂತಾ ಉಪವಾಸ ಮಾಡ್ತಾರೆ. ಕೆಲವರು ಘನ ಆಹಾರ ಸೇವನೆ ಬದಲು ಕೇವಲ ದ್ರವ ಆಹಾರ ಸೇವನೆ ಮಾಡಿ ಉಪವಾಸ ಮಾಡ್ತಾರೆ. ಇನ್ನು ಕೆಲವರು ಸಂಪೂರ್ಣ ಉಪವಾಸವಿರುತ್ತಾರೆ. ಅಂದ್ರೆ ಬೆಳಿಗ್ಗೆಯಿಂದ ರಾತ್ರಿಯವರೆಗೂ ಆಹಾರ, ಜ್ಯೂಸ್, ನೀರು ಏನನ್ನೂ ಸೇವನೆ ಮಾಡೋದಿಲ್ಲ. ತಿಂಗಳಲ್ಲಿ ಒಂದು ಉಪವಾಸ ಮಾಡೋದು ಯೋಗ್ಯವೆಂದು ತಜ್ಞರು ಹೇಳ್ತಾರೆ. ಉಪವಾಸ ಮಾಡುವುದ್ರಿಂದ ದೇಹ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಮೆದುಳು ಸರಿಯಾಗಿ ಕೆಲಸ ಮಾಡಲು ಸಹಾಯವಾಗುತ್ತದೆ.

ಭಾರತದ ಕೆಲ ಹಬ್ಬ, ಪೂಜೆಗಳಲ್ಲಿ ಎಲ್ಲರೂ ಉಪವಾಸ ಮಾಡಬೇಕೆಂಬ ನಿಯಮವಿದ್ದರೂ ವೃದ್ಧರು, ಗರ್ಭಿಣಿಯರು, ಮಕ್ಕಳನ್ನು ಇದರಿಂದ ಹೊರಗಿಡುತ್ತಾರೆ. ಹಾಗೆಯೇ ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವವರು ಉಪವಾಸ ಮಾಡಬೇಕಾಗಿಲ್ಲ ಎನ್ನುತ್ತಾರೆ. ಹಾಗಿದ್ದೂ ಅನಾರೋಗ್ಯಕ್ಕೆ ಒಳಗಾದ ಕೆಲವರು ಉಪವಾಸ ಮಾಡುವ ನಿರ್ಧಾರ ಕೈಗೊಂಡಿರುತ್ತಾರೆ. ಮೊದಲಿನಿಂದಲೂ ಖಾಯಿಲೆಯಿಂದ ಬಳಲುತ್ತಿರುವ ಜನರಿಗೆ ಪ್ರತಿ ದಿನ ಮಾತ್ರೆ ಸೇವನೆ ಮಾಡಬೇಕಾಗುತ್ತದೆ. ಒಂದು ಹೊತ್ತಿನ ಮಾತ್ರೆ ಬಿಟ್ಟರೂ ಸಮಸ್ಯೆಯಾಗುತ್ತೆ ಎನ್ನುವವರಿದ್ದಾರೆ. ಈ ವೇಳೆ ಖಾಲಿ ಹೊಟ್ಟೆಯಲ್ಲಿ ಬಿಪಿ ಶುಗರ್ ಗೆ ಸಂಬಂಧಿಸಿದ ಮಾತ್ರೆಗಳನ್ನು ಸೇವಿಸ್ತಾರೆ.

ಇದನ್ನೂ ಓದಿ: ಲ್ಯಾಂಬೋರ್ಗಿನಿ ಕಾರ್‌ನಲ್ಲಿ ಹಿಟ್‌ಮ್ಯಾನ್ ವೇಗದ ಡ್ರೈವಿಂಗ್ – ರೋಹಿತ್ ಶರ್ಮಾಗೆ ಫೈನ್, ಮೂರು ನೋಟೀಸ್

ಇಂತವರು ಒಂದು ವಿಷ್ಯ ನೆನಪಲ್ಲಿಟ್ಟುಕೊಳ್ಳಬೇಕು.  ಉಪವಾಸದ ಸಮಯದಲ್ಲಿ ನಮ್ಮ ದೇಹದಲ್ಲಿ ಅನೇಕ ಬದಲಾವಣೆ ಆಗುತ್ತದೆ. ಹಾರ್ಮೋನ್ ಬದಲಾವಣೆ, ಪೋಷಕಾಂಶಗಳಲ್ಲಿ ಬದಲಾವಣೆ ಆಗುತ್ತದೆ. ಹಾಗಾಗಿ ಉಪವಾಸದ ಸಮಯದಲ್ಲಿ ಮಾತ್ರೆ ತೆಗೆದುಕೊಳ್ಳಬಾರದು ಅಂತಾ ತಜ್ಞರು ಹೇಳ್ತಾರೆ. ಮಾತ್ರೆಗಳ ಸೇವನೆಗೆ ವೈದ್ಯರು ನಿರ್ದಿಷ್ಟ ಸೂಚನೆ ನೀಡ್ತಾರೆ. ಅಂದ್ರೆ ನೀವು ಸೇವನೆ ಮಾಡುವ ಮಾತ್ರೆಗಳು ಆಹಾರವನ್ನು ಅವಲಂಬಿಸಿರುತ್ತವೆ.. ನೀವು ಆಹಾರ ಸೇವನೆ ಮಾಡದೆ ಮಾತ್ರೆಗಳನ್ನು ಸೇವಿಸಿದಾಗ ಅವುಗಳು ನಿಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

Shwetha M