ನೀವು ಮಧ್ಯಾಹ್ನದ ವೇಳೆ ನಿದ್ದೆ ಮಾಡ್ತೀರಾ?

ನೀವು ಮಧ್ಯಾಹ್ನದ ವೇಳೆ ನಿದ್ದೆ ಮಾಡ್ತೀರಾ?

ಒಬ್ಬ ಮನುಷ್ಯನಿಗೆ ಸಾಮಾನ್ಯವಾಗಿ 8 ಗಂಟೆಗಳ ನಿದ್ದೆ ಸಾಕು. ಆದರೆ ಕೆಲಸದ ಒತ್ತಡದಿಂದ ಕೆಲವೊಮ್ಮೆ 8 ಗಂಟೆಗಳ ಕಾಲ ರಾತ್ರಿ ವೇಳೆ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಧ್ಯಾಹ್ನದ ವೇಳೆ ಅನೇಕರು ನಿದ್ರೆ ಮಾಡ್ತಾರೆ. ಆದ್ರೆ ಮಧ್ಯಾಹ್ನದ ವೇಳೆ ಮಲಗೋದು ಒಳ್ಳೆದಾ ಕೆಟ್ಟದಾ ಅನ್ನೋ ಚರ್ಚೆ ಆಗುತ್ತಲೇ ಇರುತ್ತೆ. ಇದೀಗ ನ್ಯಾಷನಲ್ ಸ್ಲೀಪ್ ಫೌಂಡೇಶನ್  ಅಧ್ಯಯನ ನಡೆಸಿದ್ದು, ಅದರ ವರದಿ ಸುಮಾರು 33 ಪ್ರತಿಶತ ಹದಿಹರೆಯದವರು ನಿಯಮಿತವಾಗಿ ಮಧ್ಯಾಹ್ನದ ನಂತರ ನಿದ್ರೆ ಮಾಡುತ್ತಾರೆ. ಮಧ್ಯಾಹ್ನದ ನಿದ್ರೆಯು ಹೆಚ್ಚಿನ ಶಕ್ತಿಯನ್ನು ನೀಡುತ್ತದೆ ಅಂತಾ ಉಲ್ಲೇಖವಾಗಿದೆ.

ಇದನ್ನೂ ಓದಿ: ಬೆಳಗ್ಗೆ ಎದ್ದಾಗ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆಯೇ? ಅದಕ್ಕೇನು ಕಾರಣ ಗೊತ್ತಾ?

ಮಧ್ಯಾಹ್ನ ನಿದ್ರೆ ಮಾಡಿದ್ರೆ ದೇಹದ ಉಷ್ಣತೆಯು ಸ್ವಲ್ಪ ಕಡಿಮೆಯಾಗುತ್ತದೆ. ಇದರಿಂದಾಗಿ ನಾವು ಜಡರಾಗುತ್ತೇವೆ ಮತ್ತು ಕಡಿಮೆ ಚಟುವಟಿಕೆಯಿಂದ ಕೂಡಿರುತ್ತೇವೆ. ಆದ್ದರಿಂದ ಸ್ವಲ್ಪ ನಿದ್ರೆ ರಿಫ್ರೆಶ್ ಮಾಡಲು ಸಹಾಯ ಮಾಡುತ್ತದೆ. ಮಧ್ಯಾಹ್ನದ ನಿದ್ದೆಯು ಜಾಗರೂಕತೆಯನ್ನು ಸುಧಾರಿಸಲು ಮತ್ತು ಅರಿವಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ದಿನವಿಡೀ ಹೆಚ್ಚು ಗಮನಹರಿಸಲು ನಿಮಗೆ ಸಹಾಯ ಮಾಡುತ್ತದೆ.

ಮಧ್ಯಾಹ್ನದ ನಿದ್ದೆಯು ಆತಂಕವನ್ನು ಕಡಿಮೆ ಮಾಡುತ್ತದೆ. ಇದರಿಂದ ನಿಮ್ಮಲ್ಲಿರುವ ಅನಾವಶ್ಯಕ ಆತಂಕವನ್ನೂ ಕಡಿಮೆ ಮಾಡಬಹುದು. ನಿದ್ರೆಯು ಮನಸ್ಥಿತಿಯನ್ನು ಸುಧಾರಿಸುವುದರ ಜತೆಗೆ ಭಾವನಾತ್ಮಕ ಯೋಗಕ್ಷೇಮವನ್ನು ಸುಧಾರಿಸುತ್ತದೆ. ಅಧಿಕ ಬಿಪಿಯನ್ನು ನಿಯಂತ್ರಿಸುತ್ತದೆ. ಮಧುಮೇಹ, ಪಿಸಿಒಡಿ ಮತ್ತು ಥೈರಾಯ್ಡ್ ಸಮಸ್ಯೆಗಳಿಗೆ ಸಣ್ಣ ಪರಿಹಾರವಾಗಿ ಮಧ್ಯಾಹ್ನದ ನಿದ್ದೆ ಕೂಡ ಉಪಯುಕ್ತವಾಗಿದೆ. ನಿದ್ರೆಗಳು ಸ್ನಾಯುವಿನ ವಿಶ್ರಾಂತಿಯನ್ನು ಸುಧಾರಿಸುತ್ತದೆ.

Shwetha M