ಗ್ರೀನ್‌ ಟೀ ಮಾಡುವಾಗ ನೀವೂ ಈ ತಪ್ಪುಗಳನ್ನು ಮಾಡುತ್ತೀರಾ? – ಆರೋಗ್ಯ ಹದಗೆಡಬಹುದು ಎಚ್ಚರ!

ಗ್ರೀನ್‌ ಟೀ ಮಾಡುವಾಗ ನೀವೂ ಈ ತಪ್ಪುಗಳನ್ನು ಮಾಡುತ್ತೀರಾ? – ಆರೋಗ್ಯ ಹದಗೆಡಬಹುದು ಎಚ್ಚರ!

ದೇಹದ ಫಿಟ್ನೆಸ್ ಅನ್ನು ಚೆನ್ನಾಗಿ ಕಾಪಾಡಿಕೊಳ್ಳಲು ಬಹುತೇಕರು ವಿವಿಧ ಆಹಾರಗಳನ್ನು ಮತ್ತು ಪಾನೀಯಗಳನ್ನು ಸೇವಿಸುತ್ತಾರೆ. ಅಂತಹ ಪಟ್ಟಿಯಲ್ಲಿರುವ ಒಂದು ಸಾಮಾನ್ಯವಾದ ಪಾನೀಯ ಎಂದರೆ ಅದು ಗ್ರೀನ್ ಟೀ ಅಂತಾನೆ ಹೇಳಬಹುದು. ಅನೇಕರು ದೇಹದ ತೂಕವನ್ನು ಕಡಿಮೆ ಮಾಡುತ್ತದೆ ಅಂತಾ ಗ್ರೀನ್ ಟೀ ಅನ್ನು ಕುಡಿಯುತ್ತಿರುತ್ತಾರೆ. ಬೆಳಗಿನ ಸಮಯದಲ್ಲಿ ಗ್ರೀನ್​ ಟೀ ಸೇವಿಸಲು ಆರೋಗ್ಯ ತಜ್ಞರು ಸಹ ಶಿಫಾರಸು ಮಾಡುತ್ತಾರೆ. ಆದರೆ, ಗ್ರೀನ್​ ಟೀ ಪ್ರಯೋಜನ ಮಾತ್ರ ತಿಳಿದುಕೊಂಡು ಅದನ್ನು ಸೇವಿಸುವುದರಿಂದ ಕೆಲವು ತೊಂದರೆಗಳು ಎದುರಾಗುವ ಸಾಧ್ಯತೆಯೂ ಇರುತ್ತದೆ. ಏಕೆಂದರೆ, ಗ್ರೀನ್ ಟೀ ಕುಡಿಯುವಾಗ ಏನಾದರೂ ತಪ್ಪಾದಲ್ಲಿ ಅದು ಆರೋಗ್ಯ ಕಾಪಾಡುವುದಕ್ಕಿಂತ  ತುಂಬಾ ಹಾನಿಯನ್ನುಂಟು ಮಾಡುತ್ತದೆ.

ಇದನ್ನೂ ಓದಿ:ವಯಸ್ಸಿಗೂ ಮೊದಲೇ ನಿಮ್ಮ ಕೂದಲು ಬಿಳಿಯಾಗಿದ್ಯಾ? – ಈ ಮನೆಮದ್ದು ಬಳಸಿ ನಿಮ್ಮ ಕೂದಲಿನ ಆರೈಕೆ ಮಾಡಿ

ಗ್ರೀನ್‌ ಟೀ ಕುಡಿದರೆ ಆರೋಗ್ಯ ವೃದ್ಧಿಸುತ್ತದೆ. ದೇಹದ ತೂಕ ಕಡಿಮೆಯಾಗುತ್ತದೆ. ಇಡೀ ದಿನ ಹುಮ್ಮಸ್ಸಿನಿಂದ ಇರಲು ಸಹಾಯ ಮಾಡುತ್ತದೆ ಎಂದು ಕೈಗೆ ಸಿಕ್ಕಿದ್ದನ್ನೇ ಹಾಕಿ ತಯಾರಿಸುತ್ತಾರೆ. ಹೀಗೆ ನಾಲಗೆ ರುಚಿಗೆ ಹಾಗೂ ಯಾರದ್ದೋ ಮಾತು ಕೇಳಿ ಗ್ರೀನ್‌  ಟೀ ಅನ್ನು ಸರಿಯಾಗಿ ತಯಾರಿಸದಿದ್ದಲ್ಲಿ, ನಿಮ್ಮ ದೇಹಕ್ಕೆ ಯಾವುದೇ ಪ್ರಯೋಜನಗಳು ಸಿಗುವುದಿಲ್ಲ. ಇದೇ ರೀತಿ ಸೇವಿಸಿದರೆ ದೇಹಕ್ಕೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಹಾಗಾದ್ರೆ ಗ್ರೀನ್​ ಟೀ ಮಾಡುವಾಗ ಯಾವ ತಪ್ಪನ್ನು ಮಾಡಬಾರದು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ..

ಖಾಲಿ ಹೊಟ್ಟೆಯಲ್ಲಿ ಕುಡಿಯಬೇಡಿ: ಗ್ರೀನ್​ ಟೀ ಕುಡಿಯುವುದು ಒಳ್ಳೆಯದು. ಆದರೆ, ಬೆಳಗಿನ ಜಾವದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಒಳ್ಳೆಯದಲ್ಲ. ಗ್ರೀನ್​ ಟೀನಲ್ಲಿರುವ ಟ್ಯಾನಿನ್‌ಗಳು ಹೊಟ್ಟೆಯ ತೊಂದರೆ ಮತ್ತು ಅಜೀರ್ಣವನ್ನು ಉಂಟುಮಾಡಬಹುದು.

ಅಗತ್ಯಕ್ಕಿಂತ ಹೆಚ್ಚು ಸೇವಿಸಬೇಡಿ: ಅತಿಯಾದ ಗ್ರೀನ್​ ಟೀ ಸೇವನೆ ಅನೇಕ ತೊಂದರೆಗಳನ್ನು ಉಂಟು ಮಾಡುತ್ತದೆ. ಹೆಚ್ಚಾಗಿ ಗ್ರೀನ್​ ಟೀ ಕುಡಿಯುವುದರಿಂದ ಹೃದಯ ಬಡಿತ ಮತ್ತು ನಿದ್ರಾಹೀನತೆ ಹೆಚ್ಚಾಗುತ್ತದೆ. ತೂಕವನ್ನು ಕಡಿಮೆ ಮಾಡಲು ಗ್ರೀನ್​ ಟೀ ಬಳಸಲು ಬಯಸುವುದಾದರೆ, ನೀವು ಸಣ್ಣ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.

ರಾತ್ರಿಹೊತ್ತು ಸೇವಿಸಬೇಡಿ: ರಾತ್ರಿಹೊತ್ತು ಗ್ರೀನ್​ ಟೀ ಸೇವಿಸುವುದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಗ್ರೀನ್​ ಟೀನಲ್ಲಿರುವ ಕೆಫೀನ್ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ದೇಹಕ್ಕೆ ಅಗತ್ಯವಿರುವ ವಿಶ್ರಾಂತಿಯನ್ನು ನೀಡುವುದಿಲ್ಲ. ಅಂದರೆ ರಾತ್ರಿಯಲ್ಲಿ ಗ್ರೀನ್ ಟೀ ಕುಡಿಯುವುದು ನಿದ್ರೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಗ್ರೀನ್ಟೀ ಬ್ಯಾಗ್ಗಳನ್ನು ಮರುಬಳಸಬೇಡಿ: ಕೆಲವರು ಗ್ರೀನ್​ ಟೀ ಬ್ಯಾಗ್​ಗಳನ್ನು ಮರುಬಳಕೆ ಮಾಡುತ್ತಾರೆ. ಈ ರೀತಿ ಎಂದಿಗೂ ಮಾಡಬಾರದು. ಗ್ರೀನ್ ಟೀ ಬ್ಯಾಗ್‌ಗಳನ್ನು ಮರುಬಳಕೆ ಮಾಡುವುದರಿಂದ ಚಹಾದ ರುಚಿಯೇ ಹಾಳಾಗುತ್ತದೆ. ಹಾಗಾಗಿ ಯಾವಾಗಲೂ ತಾಜಾ ಟೀ ಬ್ಯಾಗ್​​ಗಳನ್ನು ಬಳಸುವುದು ಆರೋಗ್ಯಕ್ಕೆ ಉತ್ತಮ.

suddiyaana