ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು ಅನ್ನಿಸುವುದು ಏಕೆ? – ವೈಜ್ಞಾನಿಕ ಕಾರಣವೇನು ಗೊತ್ತಾ?

ಅಡುಗೆಮನೆಯಲ್ಲಿ ಅತ್ಯಗತ್ಯವಾಗಿ ಬೇಕಾಗಿರುವ ಪದಾರ್ಥ ಅಂದ್ರೆ ಅದು ಉಪ್ಪು. ಇದು ಕೇವಲ ರುಚಿ ಹೆಚ್ಚಿಸಲು ಮಾತ್ರವಲ್ಲ, ಹಲವು ಉಪಯೋಗಗಳನ್ನು ಹೊಂದಿದೆ. ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಅನ್ನೋ ಗಾದೆ ಮಾತು ಎಲ್ಲರಿಗೆ ಗೊತ್ತಿದೆ. ಉಪ್ಪು ತಿಂದಾದ ಮೇಲೆ ಸಾಕಷ್ಟು ಬಾಯಾರಿಕೆಯಾಗುತ್ತೆ. ನೀರು ಕುಡಿಯೋವರೆಗೂ ಸರಿಯಾಗಲ್ಲ. ಆದ್ರೆ ಉಪ್ಪು ತಿಂದ ಮೇಲೆ ಬಾಯಾರಿಕೆ ಆಗೋದು ಯಾಕೆ ಅನ್ನೋದು ಅನ್ನೋಕರಿಗೆ ಗೊತ್ತಿಲ್ಲ. ಉಪ್ಪು ತಿಂದ ಮೇಲೆ ನೀರು ಕುಡಿಬೇಕು ಅನ್ನೋದಿಕ್ಕೂ ಒಂದು ಕಾರಣ ಇದೆ.
ಇದನ್ನೂ ಓದಿ: ಮ್ಯಾಂಚೆಸ್ಟರ್ ಕೋಟೆ ಭೇದಿಸುತ್ತಾ ಭಾರತ? – 89 ವರ್ಷಗಳ ಶಾಪ ವಿಮೋಚನೆಯಾಗುತ್ತಾ?
ನಾವು ತಿನ್ನುವ ಆಹಾರದಲ್ಲಿ ಉಪ್ಪಿನ ಅಂಶ ಹೆಚ್ಚಾಗಿದ್ರೆ ಪದೇ ಪದೆ ಬಾಯಾರಿಕೆಯಾಗುತ್ತೆ. ಆದ್ರೆ ಅಷ್ಟೊಂದು ಬಾಯಾರಿಕೆ ಆಗಲು ಕೂಡ ವೈಜ್ಞಾನಿಕ ಕಾರಣವಿದೆ. ಉಪ್ಪಿನಲ್ಲಿ ಸೋಡಿಯಂ ಎಂಬ ಖನಿಜಾಂಶ ಹೆಚ್ಚಿರುತ್ತದೆ. ನಾವು ಉಪ್ಪು ಆಹಾರ ಸೇವಿಸಿದಾಗ ಶರೀರದಲ್ಲಿ ಸೋಡಿಯಂನ ಪ್ರಮಾಣ ಹೆಚ್ಚಾದ್ರೆ ಹೆಚ್ಚು ಬಾಯಾರಿಕೆಯಾಗುತ್ತೆ.
ಮನುಷ್ಯನ ದೇಹದಲ್ಲಿ ಸೋಡಿಯಂ ಮತ್ತು ನೀರಿನ ಸಮತೋಲನ ಇರಬೇಕು. ದೇಹದಲ್ಲಿ ಸೋಡಿಯಂ ಹೆಚ್ಚಾಗುತ್ತಿದ್ದಂತೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಹೀಗಾಗಿ ದೇಹದಲ್ಲಿ ನೀರಿನ ಮಟ್ಟ ಸರಿದೂಗಿಸುವುದಕ್ಕಾಗಿ ನಮಗೆ ನೀರು ಕುಡಿಯಬೇಕೆಂದು ಅನಿಸುತ್ತದೆ. ಈ ಸಮಯದಲ್ಲಿ ಮೆದುಳಿನ ಹೈಪೋಥಾಲಮಸ್ ಎಂಬ ಅಂಗವನ್ನು ಸಕ್ರಿಯಗೊಳ್ಳುತ್ತದೆ. ಇದು ನಮ್ಮ ಮೆದುಳಿಗೆ ನೀರು ಕುಡಿಯಬೇಕು ಎಂಬ ಸಂದೇಶವನ್ನು ಕಳುಹಿಸುತ್ತದೆ, ಅದಕ್ಕಾಗಿಯೇ ನಮಗೆ ಬಾಯಾರಿಕೆ ಕಾಡುತ್ತದೆ. ನೀರಿನ ಸಮತೋಲನವನ್ನು ಕಾಪಾಡುವುದು ದೇಹದ ಪ್ರಾಕೃತಿಕ ಯಂತ್ರಣೆಯ ಭಾಗವಾಗಿದೆ.

ನೋಡಿರಿ

