ಪ್ರಾಣಿಗಳಿಗಿಂತಲೂ ಮನುಷ್ಯನ ಆಯಸ್ಸು ಯಾಕೆ ಜಾಸ್ತಿ ಗೊತ್ತಾ?

ಪ್ರಾಣಿಗಳಿಗಿಂತಲೂ ಮನುಷ್ಯನ ಆಯಸ್ಸು ಯಾಕೆ ಜಾಸ್ತಿ ಗೊತ್ತಾ?

ಮನುಷ್ಯ ಅತೀ ಬುದ್ದಿವಂತ ಪ್ರಾಣಿ. ಆದರೆ ಆತ ಕೇವಲ ಬುದ್ದಿವಂತಿಕೆಯಲ್ಲಿ ಮಾತ್ರ ನಮ್ಮ ಸುತ್ತ ಮುತ್ತಲಿನ ಪ್ರಾಣಿಗಳನ್ನು ಮೀರಿಸಿಲ್ಲ. ಮನುಷ್ಯ ತನ್ನ ಆಯಸ್ಸಿನ ವಿಚಾರದಲ್ಲೂ ಎಲ್ಲಾ ಪ್ರಾಣಿಗಳಿಗಿಂತ ಮುಂದು.

ಕಲಿಯುಗದಲ್ಲಿ ಮನುಷ್ಯನಿಗೆ 100 ವರುಷ ಆಯಸ್ಸು ಅನ್ನೋ ಮಾತಿದೆ. ಆದರೆ 100 ವರುಷಗಿಂತ ಜಾಸ್ತಿ ವರುಷ ಬದುಕಿದ ಜನರು ಕೂಡಾ ಇದ್ದಾರೆ. ಇನ್ನೂ 100 ವರುಷ ಹೋಗಿ  ಮನುಷ್ಯನ ಆಯಸ್ಸು 80 ರ ವರೆಗೆ ಬಂದಿದೂ ಇದೆ. ಆದರೂ ಪ್ರಾಣಿಗಳಿಗೆ ಹೋಲಿಸಿದಾಗ ಮನುಷ್ಯನ ಆಯಸ್ಸು ಹೆಚ್ಚು. ಯಾವತ್ತಾದ್ರೂ ಮನುಷ್ಯನ ದೀರ್ಘ ಆಯಸ್ಸಿನ ಬಗ್ಗೆ ಕುತೂಹಲ ಇದ್ದರೆ ಈ ಲೇಖನ  ಓದಿ.

ಮನುಷ್ಯ ಮತ್ತು ಇತರ ಪ್ರಾಣಿಗಳ ದೀರ್ಘ ಆಯಸ್ಸಿನ ಹಿಂದಿರುವ ಗುಟ್ಟು ಮಾತ್ರ ಇಲ್ಲಿವರೆಗೂ ರಹಸ್ಯವಾಗಿಯೇ ಇತ್ತು. ಹಾಗೇ ಹೀಗೆ ಕೆಲವೊಂದು ಊಹೆಗಳನ್ನ ಮನುಷ್ಯ ಊಹಿಸಿಕೊಂಡರೂ ವೈಜ್ಞಾನಿಕ ಸಮುದಾಯದಲ್ಲಿ ಈ ಕುರಿತಾಗಿ ಯಾವುದೇ ವೈಜ್ಞಾನಿಕ ಪುರಾವೆಗಳೂ ಇಲ್ಲವಾಗಿತ್ತು. ಆದರೆ ಇತ್ತೀಚೆಗೆ ಈ ಕುರಿತಾಗಿ ಒಂದು ಹೊಸ ಸಂಶೋಧನೆಯೊಂದು ನಡೆದಿದೆ. ಮನುಷ್ಯ ಯಾಕೆ ನಮ್ಮ ಸುತ್ತ ಮುತ್ತ ಸಿಗೋ ಪ್ರಾಣಿಗಳಿಗಿಂತ ಅತೀ ಹೆಚ್ಚು ಕಾಲ ಜೀವಿಸುತ್ತಾನೆ ಅನ್ನೋ ಮಾಹಿತಿಯೊಂದು  ಹೊರಬಂದಿದೆ.

ಇದನ್ನೂ ಓದಿ: ಭೂಮಿಯಂತಿರುವ ಮತ್ತೊಂದು ಗ್ರಹ ಪತ್ತೆ! – ಮಾನವನ ವಾಸಕ್ಕೆ ಯೋಗ್ಯವಾಗಿದ್ಯಾ ಈ ಗ್ರಹ?

ಇಲ್ಲಿವರೆಗೂ ಪ್ರಾಣಿ ಪಕ್ಷಿಗಳ ಜೀವಿತಾವಧಿಯ ಕುರಿತಾಗಿ ಕೆಲವೊಂದು ಕಲ್ಪನೆಗಳಿದ್ದವು. ಪ್ರಾಣಿಯ ಆಯಸ್ಸು ಮತ್ತು ಅದರ ಗಾತ್ರ ಒಂದಕ್ಕೊಂದು ನಂಟು ಹೊಂದಿದ್ದವು ಅಂತಾ ಮನುಷ್ಯ ಅಂದುಕೊಂಡಿದ್ದ. ದೇಹದ ಗಾತ್ರವೂ ಸಣ್ಣದಿದ್ದರೆ ಅದು ದೇಹಕ್ಕೆ ಬೇಕಾಗಿರೋ ಕ್ಯಾಲೋರಿ ಶಕ್ತಿಯನ್ನ ಬೇಗನೆ ಉರಿಸುತ್ತದೆ ಹಾಗೇ ಅದರಿಂದಾಗಿ ಅದರ ಜೀವಿತಾವಧಿಯನ್ನ ಕಡಿಮೆ ಮಾಡುತ್ತದೆ. ಉದಾಹರಣೆಗೆ ಇಲಿಯ ಜೀವಿತಾವಧಿ ಯು ಅಂದಾಜು 3.7 ವರ್ಷಗಳೂ ಇದ್ದರೆ ನಾಯಿಯ ಆಯಸ್ಸು 10-13 ವರುಷಗಳ ವರೆಗೆ ಇರುತ್ತದೆ ಎಂದು ಮನುಷ್ಯನ ಅಂದಾಜು ಆಗಿತ್ತು. ಆದರೆ ಇದೂ illogical logic ಅನ್ನೋದು ಜಿರಾಫೆಯನ್ನ ಮನುಷ್ಯನ ಗಾತ್ರ ಕ್ಕೆ ಹೋಲಿಸಿದಾಗ ಗೊತ್ತಾಗಿ ಬಿಡುತ್ತೆ. ಗಾತ್ರದಲ್ಲಿ ಜಿರಾಫೆಗಿಂತ ಸಣ್ಣದಾಗಿರುವ ಮನುಷ್ಯ ನ ನಿರ್ದಿಷ್ಟ ಆಯಸ್ಸು 70 -80 ವರುಷಗಳ ವರೆಗೆ ಇದ್ದರೆ ಜಿರಾಫೆ ಯ ಜೇವಿತಾವಧಿ ಕೇವಲ 26 ವರುಷಗಳು.

ಹಾಗಿದ್ರೆ ಮನುಷ್ಯನ ಆಯಸ್ಸು ಯಾಕೆ ಜಾಸ್ತಿ ಇದೆ ಅನ್ನೋ ಪ್ರಶ್ನೆಗೆ ಉತ್ತರದ ಹುಡುಕಾಟವನ್ನ ಕ್ಯಾಂಬ್ರಿಡ್ಜ್ ನ Wellcome Sanger (ವೆಲ್ಲ್ಕಮೆ ಸ್ಯಾಂಜರ್) ವಿದ್ಯಾಲಯ ನಡೆಸಿದೆ. ಕಡಿಮೆ ಅಥವಾ ಹೆಚ್ಚು ಆಯಸ್ಸಿನ ಹಿಂದಿರುವ ಮುಖ್ಯ ಕಾರಣ ಮನುಷ್ಯ ಸೇರಿದಂತೆ ಎಲ್ಲಾ ಪ್ರಾಣಿಗಳಲ್ಲಿ ನಡೆಯುತ್ತಿರುವ DNA ರೂಪಾಂತರ ಮತ್ತು ಅನುವಂಶಿಕ ಕೊಳೆತ. ಈ DNA mutation ಪ್ರತಿ ಜೀವಿಯ ಜೀವಕೋಶದಲ್ಲಿ ಸಾಮಾನ್ಯವಾಗಿ ನಡೆಯುತ್ತಾ ಇರುತ್ತವೆ. ಮನುಷ್ಯನ ಜೀವಕೋಶದಲ್ಲಿ ಒಂದು ವರುಷದಲ್ಲಿ ಸುಮಾರು 47 ಬಾರಿ ರೂಪಾಂತರ ನಡೆಯುತ್ತಾ ಇರುತ್ತವೆ.  ಆದರೆ ಅವುಗಳಲ್ಲಿ ಹೆಚ್ಚಿನವು ಅಪಾಯಕಾರಿಯಲ್ಲ. ಆದರೆ ಕೆಲವೊಮ್ಮೆ ಕೆಲವೊಂದು DNA mutation ಕೆಲವೊಂದು ಕ್ಯಾನ್ಸರ್ ನಂತಹ ಕಾಯಿಲೆಗಳಿಗೆ ತುತ್ತಾಗುತ್ತವೆ. ಅಂದ ಹಾಗೇ ಈ ಹೊಸ ಸಂಶೋಧನೆಯ ಪ್ರಕಾರ ಹೆಚ್ಚು ಸಮಯದವರೆಗೂ ಜೀವಿಸುವ ಪ್ರಾಣಿಗಳಲ್ಲಿ DNA ರೂಪಾಂತರ ಬಹು ನಿಧಾನವಾಗಿ ಕಂಡುಬಂದಿದ್ದು ಅದೂ ಪ್ರಾಣಿಯ  ದೀರ್ಘಯಸ್ಸಿಗೆ ಕಾರಣವಾಗಿ ಬಿಡುತ್ತದೆ ಎಂದು ಅಧ್ಯಯನದಿಂದ ಗೊತ್ತಾಗಿದೆ.

ಮನುಷ್ಯ ಒಂದು ವರುಷದಲ್ಲಿ 47 ಬಾರಿ DNA ರೂಪಾಂತರಿಕೆ ಯನ್ನ ಎದುರಿಸಿದರೆ ಇನ್ನೂ ಕಡಿಮೆ ಜೀವಿತಾವಧಿ ಅಂದರೆ  3.7 ವರುಷ ಬದುಕುವ  ಇಲಿಗಳು ವರುಷದಲ್ಲಿ 796 ಬಾರಿ DNA mutation ನಿಂದ ಬಳಲುತ್ತಿದೆ. ಹಾಗಾಗಿ ಈ DNA ರೂಪಾಂತರ ಮನುಷ್ಯ ಮತ್ತು ಪ್ರಾಣಿಗಳ ವಯಸ್ಸಾಗುವಿಕೆಗೆ ಮುಖ್ಯ ಕಾರಣ ಎಂದು ವಿಜ್ಞಾನಿಗಳು ವಿಶ್ಲೇಷಣೆ ಮಾಡಿದ್ದಾರೆ.

ಒಟ್ಟಿನಲ್ಲಿ ಈ ಸಂಶೋಧನೆ ಇಲ್ಲಿವರೆಗೂ ರಹಸ್ಯವಾಗಿಯೇ ಇದ್ದ ವಯಸ್ಸಾಗುವಿಕೆ ಎಂಬ ವಿಚಾರದ ಬಗ್ಗೆ ಬೆಳಕನ್ನ ಚೆಲ್ಲಿದೆ. ಈ ಅಧ್ಯಯನವು ಕೇವಲ ಪ್ರಾಣಿಗಳ ಆಯಸ್ಸಿನ ಬಗ್ಗೆ ಮಾತ್ರ ತಿಳಿದುಕೊಳ್ಳುವಲ್ಲಿ ಸಹಾಯಕಾರಿಯಲ್ಲಾ ಜೊತೆಗೆ ಈ DNA mutation ಮನುಷ್ಯನ ದೇಹದಲ್ಲಿ ಯಾವ ಪರಿಣಾಮವನ್ನ ಬೀರುತ್ತಾ ಇದೆ ಅನ್ನುವ ಬಗ್ಗೆ ಕೂಡಾ ತಿಳಿಸುತ್ತದೆ. ಈ DNA ರೂಪಾಂತರ  ಮನುಷ್ಯನ ಜೀವಕೋಶವನ್ನ ಆರೋಗ್ಯವಾಗಿಸಬಹುದು ಅಥವಾ ವ್ಯತಿರಿಕ್ತ ಪರಿಣಾಮವನ್ನು ಕೂಡಾ ಕೊಡಬಹುದು. ಹಾಗಾಗಿ ಇದುವೇ ನೋಡೀ ಮನುಷ್ಯನ 80 ವರುಷ ಅಥವಾ 120 ವರುಷಕ್ಕೂ ಹೆಚ್ಚು ಬಾಳಿ ಬದುಕಿದವರ ವಯಸ್ಸಿನ ಹಿಂದಿರುವ ಗುಟ್ಟು.

suddiyaana