ಟೀಂ ಇಂಡಿಯಾ ಸೋತಿದ್ದೆಲ್ಲಿ ಗೊತ್ತಾ? – ಜಡ್ಡು ಪರಾಕ್ರಮದ ಸೀಕ್ರೆಟ್‌ ಏನು?

ಟೀಂ ಇಂಡಿಯಾ ಸೋತಿದ್ದೆಲ್ಲಿ ಗೊತ್ತಾ? – ಜಡ್ಡು ಪರಾಕ್ರಮದ ಸೀಕ್ರೆಟ್‌ ಏನು?

22 ರನ್‌ಗಳು.. ಗೆಲುವಿಗೆ ಉಳಿದಿದ್ದು ಕೇವಲ ಇಪ್ಪತ್ತೆರಡೇ ಮೆಟ್ಟಿಲುಗಳು.. ಗೆದ್ದೇ ಗೆಲ್ಲುವೆ.. ಗೆಲ್ಲಿಸಿಯೇ ತೀರುವೆ ಎಂಬ ರವೀಂದ್ರ ಜಡೇಜಾ ಹಠ.. ಅವರಿಗೆ ಜೊತೆಯಾಗಿದ್ದು ನಿತೀಶ್‌ ರೆಡ್ಡಿ.. ಜಸ್‌ಪ್ರೀತ್‌ ಬುಮ್ರಾ.. ಮೊಹಮದ್‌ ಸಿರಾಜ್‌.. ನಿತೀಶ್‌ ಕುಮಾರ್‌ ರೆಡ್ಡಿ ಹೊರತುಪಡಿಸಿದ್ರೆ ಉಳಿದಿಬ್ಬರು ಪ್ಯೂರ್‌ ಬೌಲರ್‌ಗಳು.. ಬುಮ್ರಾ ಇದೇ ಇಂಗ್ಲೆಂಡ್‌ ವಿರುದ್ಧ ಮೊಹಮ್ಮದ್‌ ಶಮಿ ಜೊತೆ ಆಡಿದ್ದ ಭರ್ಜರಿ ಜೊತೆಯಾಟವನ್ನು ನೆನಪಿಸುವಂತೆ ಜಡ್ಡು ಜೊತೆಗೂ ಬ್ಯಾಟ್‌ ಬೀಸಿದ್ದರು.. 54 ಎಸೆತಗಳನ್ನು ಬುಮ್ರಾ ಎದುರಿಸಿದ್ದರೆ, 30 ಎಸೆತಗಳ ಮುಂದೆ ಸಿರಾಜ್‌ ಬ್ಯಾಟ್‌ ಹಿಡಿದು ನಿಂತಿದ್ದರು. ಟೈಲ್‌ ಎಂಡರ್‌ಗಳು ಇಷ್ಟೊಂದು ಬಾಲ್‌ಗಳನ್ನು ಎದುರಿಸಿ, ಪಾರ್ಟ್‌ನರ್‌ಶಿಪ್‌ ಬಿಲ್ಡ್‌ ಮಾಡೋದೇ, ಎದುರಾಳಿಗಳ ಜಂಘಾಬಲ ಉಡುಗಿಸಿಬಿಡುತ್ತದೆ.. ಆದರೆ ಕಡೆಗೂ ಜಡ್ಡು ಏಕಾಂಗಿ ಹೋರಾಟಕ್ಕೆ ಫಲ ಸಿಗಲೇ ಇಲ್ಲ. ಬ್ಯಾಡಲಕ್ ಟೀಮ್ ಇಂಡಿಯಾ. ಇಷ್ಟನ್ನೇ ಹೇಳೋಕ್ಕಾಗೋದು. ಯಾಕೆಂದ್ರೆ, ಟೀಮ್ ಇಂಡಿಯಾ ಮುಂದೆ ಬಿಗ್ ಟಾರ್ಗೆಟ್ ಇರಲಿಲ್ಲ.  ಆದರೆ,  ಟಾರ್ಗೆಟ್ ಗಿಂತಲೂ ಜಾಸ್ತಿ ಇಂಗ್ಲೆಂಡ್ ಆಟಗಾರರ ಮೈಂಡ್ ಗೇಮ್ ಅಂತೂ ಟಾರ್ಚರ್ ರೀತಿ ಕಾಣ್ಸಿತ್ತು. 192 ರನ್‌ಗೆ ಇಂಡಿಯಾದೆದುರು ಆಲೌಟ್ ಆಗಿದ್ದು, ಇಂಗ್ಲೆಂಡ್ ಆಟಗಾರರಿಗೆ ಸಹಿಸಿಕೊಳ್ಳಲು ಆಗ್ತಿರಲಿಲ್ಲ. ಹೀಗಾಗಿಯೇ ಟೀಮ್ ಇಂಡಿಯಾ ಬ್ಯಾಟಿಂಗ್ ಬಂದ ಮೊದಲ ಬಾಲ್‌ನಿಂದಲೇ ಸ್ಲೆಡ್ಜಿಂಗ್ ಶುರುಮಾಡಿದ್ದರು. ಒಂದೊಂದು ಬಾಲ್‌ಗೂ ಅಗ್ರೆಸ್ಸಿವ್ ಆಗಿ ರಿಯಾಕ್ಷನ್ ಕೊಡ್ತಿದ್ರು. ಫೈನಲಿ ಗೆಲ್ಲಬಹುದಾಗಿದ್ದ ಮ್ಯಾಚ್‌ಅನ್ನು ಟೀಮ್ ಇಂಡಿಯಾ ಕ್ರಿಕೆಟ್ ಕಾಶಿಯಲ್ಲಿ ಸೋತಿದೆ.. ಮೂರನೇ ಟೆಸ್ಟ್‌ನಲ್ಲಿ ಬ್ರಿಟಿಷರು ಯಂಗ್ ಇಂಡಿಯಾವನ್ನು ಇಂಚಿಂಚೂ ಕಾಡಿದ್ದು ಹೇಗೆ?. ಬೋರಿಂಗ್ ಕ್ರಿಕೆಟ್ ಅಂತಾ ಗೇಲಿ ಮಾಡಿದ ಗಿಲ್ ಜಾರಿ ಬಿದ್ರಾ?, ಇಂಗ್ಲೆಂಡ್ ಕ್ಯಾಪ್ಟನ್ ಇರೋದೇ ಹೀಗೆನಾ ಅನ್ನೋ ಬಗ್ಗೆ ವಿವರಣೆ ಇಲ್ಲಿದೆ.

ಇದನ್ನೂ ಓದಿ:  ಮೈದಾನದಲ್ಲೇ ಪ್ಯಾಂಟ್ ಬಿಚ್ಚಿದ ಆಕಾಶ್ ದೀಪ್ – ಆಂಗ್ಲರಿಗೆ ಅಪ್ಪನಂತೆ ಉತ್ತರಿಸ್ತಾರಾ ಪಂತ್? 

ಇಂಗ್ಲೆಂಡ್ ತಂಡ ಇಂಡಿಯಾ ಟೀಮ್ ಎದುರು ಮಾರಕ ಬೌಲಿಂಗ್ ದಾಳಿ ನಡೆಸಿದ್ದೇನೋ ಹೌದು. ಆದ್ರೆ, ಎಲ್ಲಕ್ಕಿಂತ ಹೆಚ್ಚಾಗಿ ಸೈಕಲಾಜಿಕಲ್ ಗೇಮ್ ಮೂಲಕವೇ ಗೆದ್ದು ಬೀಗಿದೆ.. ಇದ್ರ ಮಧ್ಯೆ ಇಂಗ್ಲೆಂಡ್ ತಂಡದ ಸಹಾಯಕ ಕೋಚ್ ಮಾರ್ಕಸ್ ಟ್ರೆಸ್ಕೊಥಿಕ್ ಒಂದು ಗಂಟೆಯೊಳಗೆ ಪಂದ್ಯ ಮುಗಿಸುತ್ತೇವೆ ಅಂತಾ ಘೋಷಣೆ ಕೂಡಾ ಮಾಡಿದ್ದರು. ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲೋದು ನಾವು. ಐದನೇ ದಿನದಾಟವನ್ನು ಕೇವಲ ಒಂದು ಗಂಟೆಯೊಳಗೆ ಮುಗಿಸುತ್ತೇವೆ ಅಂತಾ ಇಂಗ್ಲೆಂಡ್ ತಂಡದ ಸಹಾಯಕ ಕೋಚ್ ಪಂದ್ಯ ಸ್ಟಾರ್ಟ್ ಆಗೋ ಮೊದ್ಲೇ ಸ್ಟೇಟ್‌ಮೆಂಟ್ ಕೊಟ್ಟಿದ್ರು. ಇದಕ್ಕೆ ಇಂಡಿಯಾ ಫ್ಯಾನ್ಸ್ ಬನ್ನಿ, ನಾವಾ ನೀವಾ ಅಂತಾ ನೋಡೇಬಿಡೋಣ ಅಂತಾನೂ ಚಾಲೆಂಜ್ ಮಾಡಿದ್ರು. ಬಟ್.. ಲಾರ್ಡ್ಸ್ ಪಿಚ್ ಹೆಲ್ಪ್ ಮಾಡಿದ್ದು ಬೌಲರ್ಸ್‌ಗೆ. ಕೊನೇ ದಿನ ಲಾರ್ಡ್ಸ್​ ಪಿಚ್​ನಲ್ಲಿ ಬೌನ್ಸ್​ ವರ್ಕ್ ಆಗಿತ್ತು. ಇದು ಬೌನ್ಸರ್ ಎಸೆಯಬಲ್ಲ ಬೌಲರ್​ಗಳಿಗೆ ಸಹಾಯವಾಯ್ತು. ಸೋ.. ಟೀಮ್ ಇಂಡಿಯಾದ ವಿಕೆಟ್ ಒಂದೊಂದಾಗಿಯೇ ಪತನಗೊಳ್ಳೋಕೆ ಶುರುವಾಯ್ತು. ಮೊದಲ ಒಂದು ಗಂಟೆಯೊಳಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು ಟೀಮ್ ಇಂಡಿಯಾ. ಆದ್ರೆ, 7ನೇ ವಿಕೆಟ್‌ಗೆ ಜೊತೆಯಾದ ಜಡೇಜಾ ಮತ್ತು ನಿತೀಶ್ ರೆಡ್ಡಿ ಒಂದು ಹೋಪ್ಸ್ ಕೊಟ್ರು. ಈ ಜೋಡಿ ಕ್ರೀಸ್‌ನಲ್ಲಿ ನಿಂತಿದ್ದರೆ ಟೀಮ್ ಇಂಡಿಯಾ ಕಡೆ ಪಂದ್ಯ ವಾಲುತ್ತಿತ್ತು ಅಂತಾನೇ ಭರವಸೆಯಿತ್ತು.. ಬಟ್.. ಇನ್ನೇನು ಲಂಚ್ ಬ್ರೇಕ್ ತಗೋಬೇಕು. ಆಗ ನಿತೀಶ್ ಔಟಾದ್ರು. ಆಗ ಕ್ಲಿಯರ್ ಆಗಿ ಇಂಗ್ಲೆಂಡ್ ಕೈ ಮೇಲಾಗಿತ್ತು. ಟೋಟಲಿ ಹೇಳ್ಬೇಕು ಅಂದ್ರೆ ಇಂಗ್ಲೆಂಡ್ ವೇಗಕ್ಕೆ ಇಂಡಿಯಾ ಮಿಡಲ್ ಆರ್ಡರ್ ಬ್ರೇಕ್ ಆಗಿ ಹೋಯ್ತು. ಟೀಮ್ ಇಂಡಿಯಾ ಬ್ಯಾಟಿಂಗ್ ಗೆ ಬಂದಿದ್ದೇ ಗೊತ್ತಾಗಿಲ್ಲ ಎಂಬಂತೆ, ಒಂದರ ಮೇಲೆ ಒಂದು ವಿಕೆಟ್ ಉರುಳಿಹೋಯ್ತು. ಸ್ಟೋಕ್ಸ್ ಜೊತೆಗೆ ಜೋಫ್ರಾ ಜುಗಲ್‌ಬಂದಿಗೆ ಭಾರತದ ಪತನವಾಯ್ತು. ಇದಾದ ಮೇಲೆ ನಡೆದಿದ್ದು ಒಂಥರಾ ಮಿರಾಕಲ್ ಫರ್ಫಾಮೆನ್ಸ್. ರವೀಂದ್ರ ಜಡೇಜಾಗೆ ಸಾಥ್ ನೀಡಿದ ಬುಮ್ರಾ, ಟೀಂ ಇಂಡಿಯಾ ಫ್ಯಾನ್ಸ್ ಗೆ ಸಖತ್ ಥ್ರಿಲ್ ಕೊಟ್ರು. ಅದ್ರಲ್ಲೂ ಬೂಮ್ ಬೂಮ್  ಅಂತಾ ಒಂದು ಬೌಂಡರಿ ಬೇರೆ ಬಾರಿಸಿದ್ರು. ಮೈದಾನದಲ್ಲಿದ್ದ ಇಂಡಿಯಾ ಫ್ಯಾನ್ಸ್ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ರೆ ಬುಮ್ರಾ ಕೂಡಾ ಜಡ್ಡು ಭಾಯ್ ಜೊತೆ ಸೇರಿ ಗೆಲ್ಲೋ ಆಸೆ ತೋರಿಸಿದ್ರು. ಜಡೇಜಾಗೆ ತುಂಬಾ ಚೆನ್ನಾಗಿಯೇ ಸಾಥ್‌ ಕೊಟ್ರು.. ನೀನು ಬ್ಯಾಟ್ ಬೀಸು.. ನಾನು ವಿಕೆಟ್‌ ಉಳಿಸ್ತೀನಿ ಎಂಬ ರೀತಿಯಲ್ಲೇ ಇಬ್ಬರ ಆಟ ಸಾಗಿತ್ತು.. ಆ ಟೈಮ್‌ಲ್ಲೂ ಇಂಡಿಯಾ ಗೆಲ್ಲೋ ಆಸೆ ಚಿಗುರಿತ್ತು. ಇವರಿಬ್ಬರ ಜೋಡಿ ಬ್ರೇಕ್ ಮಾಡಲು ಇಂಗ್ಲೆಂಡ್ ಆಟಗಾರರು ಅಕ್ಷರಶಃ ಪರದಾಡಿದ್ರು. ಜೋ ರೂಟ್ ಬೌಲಿಂಗ್ ಮಾಡಿದ್ರು. ರೆಸ್ಟ್‌ನಲ್ಲಿದ್ದ ಬಶೀರ್ ಕೂಡಾ ಬೌಲಿಂಗ್‌ಗೆ ಓಡೋಡಿ ಬಂದ್ರು. ಆದ್ರೂ ಟೀಮ್ ಇಂಡಿಯಾ ಸ್ಟಾರ್ ಬೌಲರ್ಸ್ ಬ್ಯಾಟಿಂಗ್ ಲೈನ್‌ನಲ್ಲಿ ತಡೆಗೋಡೆಯಾಗಿ ನಿಂತ್ರು. 22 ಓವರ್​ಗಳ ಕಾಲ ತಾಳ್ಮೆಯಿಂದ ಆಡಿದ್ದ ಬುಮ್ರಾ ಬೆನ್​ ಸ್ಟೋಕ್ಸ್ ಎಸೆದ ಶಾರ್ಟ್ ಬಾಲ್​ನಲ್ಲಿ ಬೌಂಡರಿ ಬಾರಿಸುವ ಯತ್ನಕ್ಕೆ ಕೈಹಾಕಿ ಕ್ಯಾಚ್ ನೀಡಿದ್ರು. ಅಲ್ಲಿಗೆ ಗೆದ್ದೇ ಬಿಟ್ವಿ ಎಂಬಂತೆ ಆಡ್ತಿದ್ದ ಇಂಗ್ಲೆಂಡ್‌ಗೆ ಕೊನೇ ಬ್ಯಾಟರ್ ಆಗಿ ಬಂದ ಸಿರಾಜ್ ಬಾಯ್‌ ಕೂಡ ನೀರಿಳಿಸಿದ್ರು.. ಸಿರಾಜ್ ಜೊತೆ ಮತ್ತೆ ಏಕಾಂಗಿ ಹೋರಾಟ ನೀಡಿದ ಜಡೇಜಾ ಗೆಲುವಿನ ಗುರಿಯನ್ನ 22 ರನ್‌ಗಳವರೆಗೂ ತಂದ್ರು. ತಂಡದ ಪ್ರಮುಖ ಬ್ಯಾಟ್ಸ್‌ಮನ್​ಗಳ ಪೆವಿಲಿಯನ್‌ ಪರೇಡ್ ನಡುವೆ ಬಾಲಂಗೋಚಿಗಳು ಕಡೇವರೆಗೂ ಗೆಲುವಿಗಾಗಿ ನೀಡಿದ ಹೋರಾಟ ನಿಜಕ್ಕೂ ಗ್ರೇಟ್. ಅದ್ರಲ್ಲೂ ಎರಡು ವಿಕೆಟ್​ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರೊಂದಿಗೆ ರವೀಂದ್ರ ಜಡೇಜಾ ಕಟ್ಟಿದ ಜೊತೆಯಾಟ ಬ್ರಿಟಿಷ್ ಪಡೆಗೆ ಒಂದು ಕ್ಷಣ ಸೋಲಿನ ಭೀತಿ ಸೃಷ್ಟಿಸಿದ್ದು ನಿಜ. ಗೆಲ್ಲಲು 22 ರನ್ ಇರುವಾಗ ಸಿರಾಜ್ ಔಟಾಗಿರೋ ರೀತಿ ಮಾತ್ರ ರಿಯಲಿ ಬ್ಯಾಡಲಕ್.. 13.2  ಓವರ್​ಗಳ ಕಾಲ ಇಂಗ್ಲೆಂಡ್​ ಬೌಲರ್​ಗಳನ್ನ ಸಮರ್ಥವಾಗಿ ಎದುರಿಸಿದ ಜಡೇಜಾ ಮತ್ತು ಸಿರಾಜ್ 23 ರನ್ ಸೇರಿಸಿದ್ದರು. ಒಂದು ಬ್ಯಾಡ್​​ಲಕ್​ ಗೆಲುವನ್ನ ಕಿತ್ತು ಕೊಳ್ತು. ಶೋಯೆಬ್​ ಬಶೀರ್​ ಎಸೆದ 74.5ನೇ ಎಸೆತ ಸಿರಾಜ್​ ಸಕ್ಸಸ್​ಫುಲ್​ ಆಗಿ ಡಿಫೆಂಡ್​ ಮಾಡಿದ್ರು. ಆದ್ರೆ, ಕೆಳಗೆ ಬಿದ್ದ ಬಾಲ್​ ತೆವಳುತ್ತಾ ಸಾಗಿ ಸ್ಟಂಪ್​ಗೆ ಬಡಿದು ಬಿಡ್ತು. ಕೊಟ್ಯಂತರ ಅಭಿಮಾನಿಗಳ ಕನಸು ನುಚ್ಚು ನೂರಾಯ್ತು. ಇಂಡಿಯಾ ಸೋತರೂ ಜಡೇಜಾರ ಏಕಾಂಗಿ ಹೋರಾಟಕ್ಕೆ ಫ್ಯಾನ್ಸ್ ಜೈ ಹೋ ಅಂದಿದ್ದಾರೆ. ಅನುಭವಿ ಆಲ್‌ರೌಂಡರ್‌ ರವೀಂದ್ರ ಜಡೇಜಾ, ಈ ಹಿಂದೆ ಲಾರ್ಡ್ಸ್‌ನಲ್ಲಿ ಆಡಿದ್ದ ಎರಡೂ ಮ್ಯಾಚ್‌ಗಳಲ್ಲಿ ಟೀಂ ಇಂಡಿಯಾ ಗೆದ್ದಿತ್ತು.. ಲಕ್ಕಿ ಗ್ರೌಂಡ್‌ನಲ್ಲಿ ಜಡೇಜಾ, ಇಂಗ್ಲೆಂಡ್‌ ಆಟಗಾರರ ಕೀಟಲೆಗಳನ್ನು ಸಹಿಸಿಕೊಂಡಿದ್ದರು.. ಮೆಂಟಲಿ ತಾವೆಷ್ಟು ಟಫ್‌ ಅನ್ನೋದನ್ನು ತೋರಿಸಿದ್ರು.. ಜಡ್ಡುವನ್ನು ಮೈದಾನದಲ್ಲಿ ಕೆಣಕಿದಷ್ಟು ಅವರ ಬ್ಯಾಟಿಂಗ್‌ ಶಕ್ತಿ ಹೆಚ್ಚುತ್ತಾ ಹೋಗುತ್ತದೆ ಎನ್ನುವುದು ಲಾರ್ಡ್ಸ್‌ ಗ್ರೌಂಡ್‌ನಲ್ಲಿ ಮತ್ತೊಮ್ಮೆ ಸಾಬೀತಾಗಿದೆ.. ಅದಕ್ಕೆ ಅವರನ್ನು ಅಭಿಮಾನಿಗಳು.. ಸರ್‌ ಜಡೇಜಾ ಅಂತ ಪ್ರೀತಿಯಿಂದ ಕರೆಯೋದು..

ಇನ್ನು ಇಂಡಿಯಾ ಸೋಲಿಗೆ ನಮ್ಮ ಬೌಲರ್ಸ್ ಕೊಟ್ಟ ಹೆಚ್ಚುವರಿ ರನ್ ಕೂಡಾ ಒಂದು ಕಾರಣ. ಏಕೆಂದರೆ ಎರಡನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್‌ ತಂಡದ ಆಟಗಾರರು ತಮ್ಮ ಬ್ಯಾಟ್​ನಿಂದ ಕಲೆಹಾಕಿದ್ದು, ಕೇವಲ 160 ರನ್ ಮಾತ್ರ ಅಂದರೆ, ಈಗ ಭಾರತ ಹೊಡಿದಿರುವ ರನ್​ಗಳಿಗಿಂತ 10 ರನ್ ಕಡಿಮೆ. ಆದಾಗ್ಯೂ ಇಂಗ್ಲೆಂಡ್‌ ತಂಡ 192 ರನ್ ಕಲೆಹಾಕಲು ಟೀಂ ಇಂಡಿಯಾ ವೇಗಿಗಳು ವೈಡ್, ನೋ ಬಾಲ್, ಬೈಸ್, ಲೆಗ್ ಬೈಸ್​ಗಳ ಮೂಲಕ ಉಚಿತವಾಗಿ ನೀಡಿದ 32 ರನ್​ಗಳು ಕಾರಣವಾದವು. ಟೆಸ್ಟ್ ಕ್ರಿಕೆಟ್​ನಲ್ಲಿ ಈ ರೀತಿಯಾಗಿ ರನ್​ ಹರಿಯುವುದು ಸರ್ವೆ ಸಾಮಾನ್ಯ. ಆದರೆ, ಲಾರ್ಡ್ಸ್‌ ಟೆಸ್ಟ್​ನಲ್ಲಿ ಇಂಗ್ಲೆಂಡ್‌ ತಂಡಕ್ಕೆ ಹೋಲಿಸಿದರೆ, ಟೀಂ ಇಂಡಿಯಾ ದುಪ್ಪಟ್ಟು ರನ್‌ಗಳನ್ನು ಬಿಟ್ಟುಕೊಟ್ಟಿತ್ತು. ಈ ಮೂಲಕ ಗಿಲ್ ಪಡೆ ಆಂಗ್ಲರ ಗೆಲುವಿಗೆ ಕಾರಣರಾದ್ರು.

ಅದೇನೇ ಇರಲಿ, ಜುಲೈ 14 ಇಂಗ್ಲೆಂಡ್ ಗೆ ಸ್ಪೆಷಲ್ ಡೇ. ಆವತ್ತು 2019, ಜುಲೈ 14ರಂದು ಒಡಿಐ ವರ್ಲ್ಡ್ ಕಪ್ ಗೆಲ್ತಾರೆ ಇಂಗ್ಲೆಂಡ್. ಅಲ್ಲೂ ಕೂಡಾ ಸ್ಟೋಕ್ಸ್ ಟೀಂ ಗೆಲುವಿಗೆ ದೊಡ್ಡ ಕಾಂಟ್ರಿಬ್ಯೂಷನ್ ಕೊಟ್ಟಿದ್ರು. ಈಗ ಇಂಡಿಯಾ ಎದುರು ಕೂಡಾ ಬಿಗ್ ವಿಕ್ಟರಿ ಲಾರ್ಡ್ಸ್‌ನಲ್ಲಿ ಸಿಕ್ಕಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಎರಡನ್ನೂ ಗೆದ್ದರಷ್ಟೇ ಸರಣಿ ಟೀಂ ಇಂಡಿಯಾ ಪಾಲಾಗಲಿದೆ.. ಗಿಲ್‌ ನೇತೃತ್ವದ ಯಂಗ್‌ ಇಂಡಿಯಾ ಅಂತದ್ದೊಂದು ಸಾಧನೆ ಮಾಡಲಿ ಎಂಬುದಷ್ಟೇ ಅಭಿಮಾನಿಗಳ ಹಾರೈಕೆ..

 

Sulekha