ಅಭಿಮಾನಿಗಳ ಮನಗೆದ್ದ ಅಪ್ಪ ಮಗಳ ಭಾವನಾತ್ಮಕ ಬಂಧ – ಲವ್ ಮಾಕ್ಟೇಲ್- 3 ಸಿನಿಮಾ ಹೇಗಿದೆ ಗೊತ್ತಾ?

ಅಭಿಮಾನಿಗಳ ಮನಗೆದ್ದ ಅಪ್ಪ ಮಗಳ ಭಾವನಾತ್ಮಕ ಬಂಧ – ಲವ್ ಮಾಕ್ಟೇಲ್- 3 ಸಿನಿಮಾ ಹೇಗಿದೆ ಗೊತ್ತಾ?

ಡಾರ್ಲಿಂಗ್ ಕೃಷ್ಣ ಅವರು ನಟಿಸಿ, ನಿರ್ದೇಶನ ಮಾಡಿದ ಲವ್ ಮಾಕ್ಟೇಲ್ 3 ಸಿನಿಮಾ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಯುಗಾದಿ ಹಬ್ಬಕ್ಕೆ ಅಭಿಮಾನಿಗಳಿಗೆ ಡಾರ್ಲಿಂಗ್ ಕೃಷ್ಣ ಅವರು ಒಂದೊಳ್ಳೆ ಸಿನಿಮಾವನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ:ವಿಶ್ವದಾದ್ಯಂತ ಧುರಂಧರ್ 2 ಅಬ್ಬರ! – ಅಬ್ಬಬ್ಬಾ.. ಪ್ರೀಮಿಯರ್‌ ಶೋ​ನಿಂದ ಗಳಿಸಿದ್ದು ಇಷ್ಟೊಂದಾ?

ಲವ್ ಮಾಕ್ಟೇಲ್ 3 ಸಿನಿಮಾ ಯುಗಾದಿ ಹಬ್ಬಕ್ಕೆ ತೆರೆಮೇಲೆ ಬಂದಿದೆ. ಡಾರ್ಲಿಂಗ್ ಕೃಷ್ಣ ಅಭಿನಯದ ಈ ಸಿನಿಮಾದಲ್ಲಿ ಕೃಷ್ಣ ಅಭಿನಯವೇ ಹೈಲೆಟ್. ಲವ್ ಮಾಕ್ಟೇಲ್ ಚಿತ್ರದ ಕಥೆ ಲವ್ ಮಾಕ್ಟೇಲ್ 2 ಸಿನಿಮಾದಲ್ಲಿ ಮುಂದುವರೆಸಿದ್ದರು ಡಾರ್ಲಿಂಗ್ ಕೃಷ್ಣ. ಪಾರ್ಟ್ ಟುನಲ್ಲಿ ಕಥೆ ಸ್ವಲ್ಪ ಗಂಭೀರ ಸ್ವರೂಪ ಪಡೆದಿತ್ತು. ಆದರೆ, ಮೂರನೇ ಭಾಗದಲ್ಲಿ ಸಿನಿಮಾ ಒಂದೊಳ್ಳೇ ಲೆವೆಲ್‌ಗೆ ಹೋಗಿದೆ. ಜೊತೆಗೆ ಲವ್ ಮಾಕ್ಟೇಲ್ 3 ಚಿತ್ರದಲ್ಲಿ ಕಥೆ ಮತ್ತು ಪಾತ್ರಗಳು ಮುಂದುವರೆದಿದ್ದು, ಇದು ಡಾರ್ಲಿಂಗ್ ಕೃಷ್ಣ ಅವರ ಅದ್ಭುತ ಪ್ರತಿಭೆಗೆ ಸಾಕ್ಷಿಯಾಗಿದೆ. ಲವ್ ಮಾಕ್ಟೇಲ್ 2 ಸಿನಿಮಾದಲ್ಲಿ ಪತ್ನಿಯನ್ನು ಕಳೆದುಕೊಂಡು ಒಂಟಿಯಾಗಿದ್ದ ಆದಿ, ಒಂದು ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದರು. ನಂತರ ಆದಿ ಬದುಕಿನಲ್ಲಿ ಏನೆಲ್ಲ ಬದಲಾವಣೆ ಆಗುತ್ತದೆ ಎಂಬುದನ್ನು ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ತೋರಿಸಲಾಗಿದೆ. ಇಡೀ ಸಿನಿಮಾದಲ್ಲಿ ತಂದೆ-ಮಗಳ ಅನುಬಂಧದ ಕಥೆಯಿದೆ. ಹೆಣ್ಣು ಮಗುವಿನ ತಂದೆಯಾಗಿ ಕೃಷ್ಣ ಅವರ ಅಭಿನಯ ಎಕ್ಸಲೆಂಟ್. ಮಗಳ ಪಾತ್ರದಲ್ಲಿ ಬಾಲನಟಿ ಸಂವೃತಾ ಫುಲ್ ಮಾರ್ಕ್ಸ್ ಪಡೆದಿದ್ದಾಳೆ. ಈ ಸಿನಿಮಾದಲ್ಲಿ ನಿಧಿಮಾ ಆಗಿ ಕಾಣಿಸುವ ಮುದ್ದು ಹುಡುಗಿ ಸಂವೃತಾ ನಂತರ ರಮ್ಯಾ ಆಗಿ ಬದಲಾಗುತ್ತಾಳೆ. ಈ ಸವಾಲಿನ ಪಾತ್ರದಲ್ಲಿ ಮುದ್ದು ನಟಿ ಸಂವೃತಾ ಪ್ರೇಕ್ಷಕರ ಮನಗೆದ್ದಿದ್ದಾಳೆ. ಮಿಲನಾ ನಾಗರಾಜ್ ಕೂಡಾ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜೊತೆಗೆ ಜಗದೀಶ್, ಮತ್ತು ಅಭಿಲಾಷ್ ಕೂಡಾ ಈ ಸಿನಿಮಾದಲ್ಲಿ ನಟಿಸಿದ್ದಾರೆ.

Sulekha