ಮಯಾಂಕ್ ಅಗರ್ವಾಲ್ ವಿಮಾನದಲ್ಲಿ ಕುಡಿದಿರುವ ಡ್ರಿಂಕ್ಸ್ ಯಾವುದು ಗೊತ್ತಾ? – ಕನ್ನಡಿಗನ ಅದೃಷ್ಟ ಚೆನ್ನಾಗಿತ್ತು..!
ಟೀಂ ಇಂಡಿಯಾದ ಕ್ರಿಕೆಟರ್, ಕರ್ನಾಟಕದ ತಂಡದ ಕ್ಯಾಪ್ಟನ್ ಮಯಾಂಕ್ ಅಗರ್ವಾಲ್ ಐಸಿಯುಗೆ ದಾಖಲಾಗಿದ್ರು. ವಿಮಾನದಲ್ಲಿ ಪ್ರಯಾಣಿಸ್ತಾ ಇದ್ದಾಗ ಮಯಾಂಕ್ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾಗಿದ್ದು ಆಸ್ಪತ್ರೆಗೆ ಅಡ್ಮಿಟ್ ಆಗಿದ್ರು. ಅಷ್ಟಕ್ಕೂ ಕನ್ನಡಿಗನಿಗೆ ಆಗಿರೋ ಆರೋಗ್ಯ ಸಮಸ್ಯೆ ಏನು? ಐಸಿಯುಗೆ ದಾಖಲಾಗುವಂಥದ್ದೇನಾಯ್ತು? ಮಯಾಂಕ್ ಅಗರ್ವಾಲ್ ಈಗ ಹೇಗಿದ್ದಾರೆ ?
ಇದನ್ನೂ ಓದಿ: ಮುಂದಿನ ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾದಲ್ಲಿ ಬದಲಾವಣೆಗಳೇನು?- ಯಾರು ಔಟ್? ಯಾರು ಇನ್?
ತ್ರಿಪುರಾದ ಅಗರ್ತಲಾದಲ್ಲಿ ರಣಜಿ ಟೂರ್ನಿಯ ಗ್ರೂಪ್ ಸಿ ಪಂದ್ಯದ ಬಳಿಕ ಕರ್ನಾಟಕ ಟೀಮ್ ಜೊತೆಗೆ ಮಯಾಂಕ್ ಅಗರ್ವಾಲ್ ತಂಡದ ಜೊತೆಗೆ ದೆಹಲಿಗೆ ಹೊರಟಿದ್ರು. ಫೆಬ್ರವರಿ 2ರಿಂದ ಸೂರತ್ನಲ್ಲಿ ಕರ್ನಾಟಕ ತಂಡ ರೈಲ್ವೇಸ್ ವಿರುದ್ಧ ಆಡ್ತಾ ಇದೆ. ಹೀಗಾಗಿ ಅಗರ್ತಲಾದಿಂದ ದೆಹಲಿಗೆ ವಿಮಾನದಲ್ಲಿ ತೆರಳ್ತಾ ಇದ್ರು. ದೆಹಲಿ ಮೂಲವಾಗಿ ಸೂರತ್ಗೆ ಹೋಗ್ಬೇಕಿತ್ತು. ವಿಮಾನದಲ್ಲಿ ಕುಳಿತ ಕೂಡಲೆ ಮಯಾಂಕ್ ಅಗರ್ವಾಲ್ ಏನೋ ಡ್ರಿಂಕ್ಸ್ನ್ನ ತಗೊಂಡಿದ್ದಾರೆ. ಅಂದ್ರೆ ಕೂಲ್ಡ್ರಿಂಕ್ಸ್ ರೀತಿಯದ್ದು. ಇನ್ನೇನು ಫ್ಲೈಟ್ ಟೇಕಾಫ್ ಆಗಬೇಕು ಅನ್ನೋವಷ್ಟರಲ್ಲೇ ಮಯಾಂಕ್ ಅಗರ್ವಾಲ್ಗೆ ಹೆಲ್ತ್ ಅಪ್ಸೆಟ್ ಆಗಿದೆ. ಗಂಟಲು ಸುಟ್ಟಂತಾ ಅನುಭವ ಆಗಿದೆ. ಅಷ್ಟೇ ಅಲ್ಲ, ವಾಮಿಟ್ ಕೂಡ ಮಾಡಿದ್ದಾರೆ. ಕೂಡಲೇ ಮಯಾಂಕ್ ಅಗರ್ವಾಲ್ರನ್ನ ಫ್ಲೈಟ್ನಿಂದ ಕೆಳಕ್ಕೆ ಇಳಿಸಿ ನೇರವಾಗಿ ಅಗರ್ತಲಾದಲ್ಲಿರೋ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ. ವೈದ್ಯರು ಐಸಿಯುನಲ್ಲಿ ಟ್ರೀಟ್ಮೆಂಟ್ ಕೊಟ್ಟಿದ್ದಾರೆ. ಗುಡ್ನ್ಯೂಸ್ ಏನಂದ್ರೆ, ಅದೃಷ್ಟವಶಾತ್ ಮಯಾಂಕ್ ಅಗರ್ವಾಲ್ ಅಪಾಯದಿಂದ ಪಾರಾಗಿದ್ದಾರೆ. ಹಾಗೆಯೇ ಹಾಸ್ಪಿಟಲ್ನಿಂದ ಡಿಸ್ಚಾರ್ಜ್ ಆಗಿ ಬೆಂಗಳೂರಿಗೆ ವಾಪಸ್ ಆಗ್ತಾ ಇದ್ದಾರೆ. ಒಂದಷ್ಟು ದಿನಗಳ ಕಾಲ ರೆಸ್ಟ್ ತೆಗೆದುಕೊಳ್ಳುವಂತೆ ವೈದ್ಯರು ಮಯಾಂಕ್ ಅಗರ್ವಾಲ್ಗೆ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ಮಯಾಂಕ್ ಫೆಬ್ರವರಿ 2ರಿಂದ ಶುರುವಾಗೋ ರೈಲ್ವೇಸ್ ವಿರುದ್ಧದ ಮ್ಯಾಚ್ನಲ್ಲಿ ಆಡ್ತಾ ಇಲ್ಲ. ಮಯಾಂಕ್ ಬದಲಿಗೆ ವೈಸ್ಕ್ಯಾಪ್ಟನ್ ನಿಖಿಲ್ ಜೋಸ್ ಕರ್ನಾಟಕ ಟೀಮ್ನ್ನ ಲೀಡ್ ಮಾಡ್ತಾ ಇದ್ದಾರೆ ಅಂತಾ ಕೆಎಸ್ಸಿಎ ಸ್ಪಷ್ಟಪಡಿಸಿದೆ.
ಹಾಗಿದ್ರೆ ಮಯಾಂಕ್ ಅಗರ್ವಾಲ್ ಫ್ಲೈಟ್ನಲ್ಲಿ ಕುಡಿದಿದ್ದು ಏನನ್ನ? ಡ್ರಿಂಕ್ಸ್ ತಗೊಳ್ತಿದ್ದ ಹಾಗೆ ಮಯಾಂಕ್ಗೆ ಹೆಲ್ತ್ ಅಪ್ಸೆಟ್ ಆಗಿರೋದ್ಯಾಕೆ ಅನ್ನೋದು ಎಲ್ಲರ ಪ್ರಶ್ನೆ. ಅಗರ್ತಲಾದ ಹಾಸ್ಪಿಟಲ್ನಲ್ಲಿ ವೈದ್ಯರು ಮಯಾಂಕ್ ಅಗರ್ವಾಲ್ಗೆ ವಿವಿಧ ಟೆಸ್ಟ್ಗಳನ್ನ ಕೂಡ ಮಾಡಿದ್ದಾರೆ. ಬ್ಲಡ್ ಸ್ಯಾಂಪಲ್ನ್ನ ಕೂಡ ಪಡೆದಿದ್ದಾರೆ. ಫ್ಲೈಟ್ನಲ್ಲಿ ಕುಡಿದಿದ್ದು ಏನನ್ನ ಅನ್ನೋ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ. ಬಟ್ ಎಕ್ಸಾಕ್ಟ್ಲಿ ಮಯಾಂಕ್ ಆಗರ್ವಾಲ್ ಕುಡಿದಿದ್ದು ಏನನ್ನ? ಅದ್ರಲ್ಲೇನಾದ್ರೂ ಮಿಶ್ರಣವಾಗಿತ್ತಾ ಈ ಬಗ್ಗೆ ಇನ್ನೂ ಕೂಡ ಮಾಹಿತಿ ರಿವೀಲ್ ಆಗಿಲ್ಲ. ಆ್ಯಕ್ಚುವಲಿ ಇಂಡಿಗೋ ವಿಮಾನದ ಸೀಟ್ ಬಳಿಯಿರೋ ಚೀಲದಲ್ಲಿದ್ದ ಪಾನೀಯವನ್ನೇ ಮಯಾಂಕ್ ಅಗರ್ವಾಲ್ ಕುಡಿದಿರೋದು. ಮಯಾಂಕ್ ಕುಳಿತಲ್ಲೇ ಒಂದು ಪೌಚ್ ಇತ್ತಂತೆ. ಅದ್ರಲ್ಲಿದ್ದ ಬಾಟಲಿಯನ್ನ ಓಪನ್ ಮಾಡಿ ಮಯಾಂಕ್ ಸ್ವಲ್ಪ ಕುಡಿದಿದ್ದಾರೆ ಅಷ್ಟೇ. ಅಷ್ಟರಲ್ಲೇ ಮಯಾಂಕ್ ಅಗರ್ವಾಲ್ಗೆ ಹೆಲ್ತ್ ಅಪ್ಸೆಟ್ ಆಗಿದೆ. ಆರಂಭದಲ್ಲಿ ಮಾತನಾಡೋಕೂ ಸಾಧ್ಯವಾಗಿಲ್ಲ ಅಂತಾ ಮಯಾಂಕ್ ಮ್ಯಾನೇಜರ್ ನೀಡಿರೋ ಪೊಲೀಸ್ ಕಂಪ್ಲೇಂಟ್ನಲ್ಲಿ ಮೆನ್ಷನ್ ಆಗಿದೆ. ಇದೀಗ ಪೊಲೀಸರು ಕೂಡ ಈ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ. ಪ್ರಕರಣ ಸಂಬಂಧ ಇಂಡಿಗೋ ವಿಮಾನ ಸಿಬ್ಬಂದಿಯನ್ನ ಕೂಡ ವಿಚಾರಣೆಗೊಳಪಡಿಸೋದು ಗ್ಯಾರಂಟಿ. ಮೋಸ್ಟ್ಲಿ ವಿಮಾನದಲ್ಲಿಡಲಾಗಿದ್ದ ಯಾವುದೋ ಲಿಕ್ವಿಡ್ ಬಾಟಲಿಯನ್ನ ಡ್ರಿಂಕ್ಸ್ ಅಂತಾ ಭಾವಿಸಿ ಮಯಾಂಕ್ ಅಗರ್ವಾಲ್ ಕುಡಿದಿರಬೇಕು ಎನ್ನಲಾಗ್ತಿದೆ. ಎನಿವೇ ಮಯಾಂಕ್ ಜೀವಕ್ಕೆ ಯಾವುದೇ ಸಮಸ್ಯೆ ಎದುರಾಗಿಲ್ಲ. ವಿಮಾನ ಟೇಕಾಫ್ ಆಗೋ ಮುನ್ನವೇ ಈ ಇನ್ಸಿಡೆಂಟ್ ನಡೆದಿದ್ರಿಂದ ಮಯಾಂಕ್ರನ್ನ ಕೂಡ ಕೂಡ ಡಿಬೋರ್ಡ್ ಮಾಡಿ ಆಸ್ಪತ್ರೆಗೆ ಅಡ್ಮಿಟ್ ಮಾಡೋಕೆ ಸಾಧ್ಯವಾಯ್ತು. ಒಂದು ಫ್ಲೈಟ್ ಟೇಕಾಫ್ ಆಗಿರ್ತಿದ್ರೆ ಪ್ರಾಬ್ಲಂ ಆಗ್ತಿತ್ತೋ ಏನೊ. ಈ ಮಯಾಂಕ್ ಅಗರ್ವಾಲ್ ಇನ್ಸಿಡೆಂಟ್ ಎಲ್ಲರಿಗೂ ಒಂದು ಪಾಠವೇ. ಯಾಕಂದ್ರೆ, ಲಿಕ್ವಿಡ್ ಟೈಪ್ ಏನೋ ಇಟ್ಟಿದ್ದಾರೆ ಅನ್ನೋ ಮಾತ್ರಕ್ಕೆ ಹಾಗೆ ಕಣ್ಮುಚ್ಚಿ ಕುಡಿಯೋದು ತುಂಬಾನೆ ಡೇಂಜರ್. ಎನಿವೇ ಫೆಬ್ರವರಿ 2ರಂದು ಶುರುವಾಗೋ ರೈಲ್ವೇಸ್ ವಿರುದ್ಧದ ಮ್ಯಾಚ್ನಲ್ಲಂತೂ ಮಯಾಂಕ್ ಅಗರ್ವಾಲ್ ಆಡ್ತಾ ಇಲ್ಲ. ಬಟ್ ಆದಷ್ಟು ಬೇಗ ಕರ್ನಾಟಕ ಟೀಮ್ನ್ನ ಜಾಯಿನ್ ಆಗ್ತಾರೆ ಅಂತಾ ಕೆಎಸ್ಸಿಎ ಸ್ಪಷ್ಟಪಡಿಸಿದೆ. ಇನ್ನು ಐಪಿಎಲ್ನಲ್ಲಿ ಈ ಬಾರಿ ಮಯಾಂಕ್ ಹೈದರಾಬಾದ್ ಸನ್ರೈಸರ್ಸ್ ಪರ ಆಡ್ತಾ ಇದ್ದಾರೆ.