ನಿಮ್ಮ ಪತಿ ಸಿಎಂ ಆಗ್ತಾರಾ ಎನ್ನುವ ಪ್ರಶ್ನೆಗೆ ಡಿ.ಕೆ ಶಿವಕುಮಾರ್ ಪತ್ನಿ ಉಷಾ ಹೇಳಿದ್ದೇನು ಗೊತ್ತಾ?

ನಿಮ್ಮ ಪತಿ ಸಿಎಂ ಆಗ್ತಾರಾ ಎನ್ನುವ ಪ್ರಶ್ನೆಗೆ ಡಿ.ಕೆ ಶಿವಕುಮಾರ್ ಪತ್ನಿ ಉಷಾ ಹೇಳಿದ್ದೇನು ಗೊತ್ತಾ?

ರಾಜ್ಯಾದ್ಯಂತ ಮತದಾರರು ಮತಗಟ್ಟೆಗಳಲ್ಲಿ ಹಕ್ಕು ಚಲಾಯಿಸುತ್ತಿದ್ದಾರೆ. ಅಭ್ಯರ್ಥಿಗಳು ಕೂಡ ತಮ್ಮ ಕುಟುಂಬ ಸಮೇತರಾಗಿ ಬಂದು ವೋಟಿಂಗ್ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಕೂಡ ಫ್ಯಾಮಿಲಿ ಸಮೇತ ದೊಡ್ಡ ಆಲಹಳ್ಳಿಯ ಮತಗಟ್ಟೆ ಸಂಖ್ಯೆ 245ರಲ್ಲಿ ಮತ ಚಲಾಯಿಸಿದ್ದಾರೆ. ಪತ್ನಿ ಉಷಾ, ಪುತ್ರ ಆಕಾಶ್, ಪುತ್ರಿ ಆಭರಣ, ಸಹೋದರ ಡಿ.ಕೆ ಸುರೇಶ್ ಜತೆ ಆಗಮಿಸಿ ಮತದಾನ ಮಾಡಿದ್ದಾರೆ.

ಇದನ್ನೂ ಓದಿ : ವೋಟರ್ ಸ್ಲಿಪ್ ಮರೆತು ಬಂದ ಪ್ರಮೋದಾ ದೇವಿ – ಮತ್ತೆ ದಾಖಲೆ ತಂದು ಹಕ್ಕು ಚಲಾಯಿಸಿದ ರಾಜಮಾತೆ

ಮತದಾನದ ಬಳಿಕ ಡಿ.ಕೆ ಶಿವಕುಮಾರ್ ಪತ್ನಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ನಿಮ್ಮ ಪತಿ ಸಿಎಂ ಆಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್​ ಪತ್ನಿ ಉಷಾ ಇದು ಹೈಕಮಾಂಡ್​ ನಿರ್ಧಾರ ಮಾಡುತ್ತೆ ಎಂದಿದ್ದಾರೆ. ಹಾಗೂ ಕನಕಪುರ ಕ್ಷೇತ್ರದಲ್ಲಿ ಪತಿ ಡಿ.ಕೆ ಶಿವಕುಮಾರ್ ಗೆಲ್ಲೋದಾಗಿ ತಿಳಿಸಿದ್ದಾರೆ.

ಇಂದು ರಾಜ್ಯದ 224 ಕ್ಷೇತ್ರದಲ್ಲಿ ಏಕಕಾಲದಲ್ಲಿ ಮತದಾನ ನಡೆಯುತ್ತಿದ್ದು, ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಬಂದು ಮತದಾನ ಮಾಡುತ್ತಿದ್ದಾರೆ. ಮುಂಜಾನೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಶುರುವಾಗಿದ್ದು, ಈಗಾಗಲೇ ಮತದಾರರು ಮತಗಟ್ಟೆಗೆ ಬಂದು ಮತ ಹಾಕುತ್ತಿದ್ದಾರೆ.

suddiyaana