ತೊಂಡೆಕಾಯಿ ಸೇವನೆಯಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ?

ತೊಂಡೆಕಾಯಿ ಸೇವನೆಯಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ?

ಗಾತ್ರದಲ್ಲಿ ಸಣ್ಣದು. ಆರೋಗ್ಯ ವಿಚಾರದಲ್ಲಿ ಕೊಡುಗೆ ದೊಡ್ಡದು. ಹೌದು. ತೊಂಡೆಕಾಯಿ ಸೇವನೆ ಬಾಯಿಗೂ ರುಚಿ. ಆರೋಗ್ಯಕ್ಕೂ ಪ್ರಯೋಜನಕಾರಿ. ತೊಂಡೆಕಾಯಿ ಸೇವನೆಯಿಂದ ಆರೋಗ್ಯ ವೃದ್ಧಿಯಾಗುವುದು ಅಲ್ಲದೇ ದೀರ್ಘಕಾಲದ ಕಾಯಿಲೆಯಿಂದಲೂ ದೂರ ಇರಬಹುದು. ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಅಜೀರ್ಣ ಅಥವಾ ಮಲಬದ್ಧತೆಯಂತಹ ಸಮಸ್ಯೆಗಳು ಕಂಡು ಬರುವವರು, ಮಿತ ವಾಗಿ ತಮ್ಮ ಆಹಾರ ಪದ್ಧತಿಯಲ್ಲಿ ತೊಂಡೆಕಾಯಿಯನ್ನು ಸೇರಿಸಿ ಕೊಂಡರೆ ಬಹಳ ಒಳ್ಳೆಯದು.

ಇದನ್ನೂ ಓದಿ:  ಫಸ್ಟ್ ತಿನ್ನಿ ಆಮೇಲೆ ಬಿಲ್ ಪೇ ಮಾಡಿ! – ಮಾವು ಖರೀದಿಗೂ ಬಂತು ಇಎಂಐ!

ತೊಂಡೆಕಾಯಿಯಲ್ಲಿ ಅಧಿಕ ಪ್ರಮಾಣದ ನೀರಿನಾಂಶ ಹಾಗೂ ನಾರಿನಾಂಶವಿರುತ್ತದೆ. ಈ ಕಾರಣ ದಿಂದಾಗಿ ಮನುಷ್ಯನಲ್ಲಿ ಕಂಡು ಬರುವ ಜೀರ್ಣಕ್ರಿಯೆಗೆ ಸಂಬಂಧ ಪಟ್ಟ ಆರೋಗ್ಯ ಸಮಸ್ಯೆಗಳನ್ನು ದೂರಮಾಡಬಹುದು. ಈಗಾಗಲೇ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು, ತಮ್ಮ ಆಹಾರ ಪದ್ಧತಿಯಲ್ಲಿ ತೊಂಡೆ ಕಾಯಿಯನ್ನು ಬಳಸಿಕೊಳ್ಳಬಹುದು. ಯಾಕೆಂದ್ರೆ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ ಯಾಗದಂತೆ ತಡೆಯುವ ಗುಣಲಕ್ಷಣಗಳು ತೊಂಡೆಕಾಯಿಯಲ್ಲಿದೆ.

2009ರಲ್ಲಿ ನಡೆದ ಒಂದು ವೈದ್ಯಕೀಯ ಸಂಶೋಧನೆಯಲ್ಲಿ ಕೂಡ, ಮಿತವಾಗಿ ತೊಂಡೆಕಾಯಿ ಸೇವನೆ ಮಾಡುವುದರಿಂದ, ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುವುದರ ಜೊತೆಗೆ, ಮಧುಮೇಹ ಕಾಯಿಲೆಯೂ ಕೂಡ ನಿಯಂತ್ರಣದಲ್ಲಿ ಇರುತ್ತದೆ ಎನ್ನುವ ವರದಿಯನ್ನು ಕೂಡ ನೀಡಲಾಗಿದೆ.

ತೊಂಡೆಕಾಯಿಯನ್ನು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ ಕ್ಯಾನ್ಸರ್ ರೋಗದ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು. ದೇಹದ ಪ್ರಮುಖ ಅಂಗಾಂಗಳಾದ ಕಿಡ್ನಿಗಳಲ್ಲಿ ನಮ್ಮ ದೇಹದಿಂದ ಹೊರ ಹೋಗಬೇಕಾದ ವಿಷಕಾರಿ ಅಂಶಗಳು ಸಂಸ್ಕರಣೆಯಾಗಿ ಮೂತ್ರದ ಮೂಲಕ ಹೊರಗೆ ಹೋಗುತ್ತವೆ. ಕಿಡ್ನಿಗಳು ಆರೋಗ್ಯವಾಗಿ ಇರ ಬೇಕೆಂದರೆ, ಆಹಾರ ಪದ್ಧತಿ ಯಲ್ಲಿ ಕೆಲವೊಂದು ಬದಲಾವಣೆ ತಂದುಕೊಳ್ಳ ಬೇಕಾಗುತ್ತದೆ. ಹೀಗಾಗಿ ದೈನಂದಿನ ಆಹಾರ ಪದ್ಧತಿಯಲ್ಲಿ ಮಿತವಾಗಿ, ತೊಂಡೆಕಾಯಿಯನ್ನು ಕೂಡ ಸೇರಿಸಿಕೊಂಡರೆ ಬಹಳ ಒಳ್ಳೆಯದು. ಇದಕ್ಕೆ ಮುಖ್ಯ ಕಾರಣ, ಈ ತರಕಾರಿಯಲ್ಲಿ ಕಂಡು ಬರುವ ಕ್ಯಾಲ್ಸಿಯಂ ಅಂಶ, ಕಿಡ್ನಿಯಲ್ಲಿ ಕಲ್ಲು ಜಮೆ ಆಗದಂತೆ ತಡೆಯುವುದು ಮಾತ್ರವಲ್ಲದೆ, ಕಿಡ್ನಿಗಳ ಆರೋಗ್ಯವನ್ನು ಕೂಡ ವೃದ್ಧಿಸುತ್ತದೆ.

suddiyaana