ಚಳಿಗಾಲದಲ್ಲಿ ಪಪ್ಪಾಯಿ ಹಣ್ಣು ಸೇವಿಸಬೇಕು ಯಾಕೆ? – ಈ ಹಣ್ಣಿನಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ?

ಚಳಿಗಾಲದಲ್ಲಿ ಪಪ್ಪಾಯಿ ಹಣ್ಣು ಸೇವಿಸಬೇಕು ಯಾಕೆ? – ಈ ಹಣ್ಣಿನಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ?

ಪಪ್ಪಾಯಿ ಹಣ್ಣುಗಳನ್ನು ಅಯ್ಯೋ.. ಇದನ್ಯಾರು ತಿಂತಾರೆ ಅಂತ ದೂರ ಇಡೋರೇ ಜಾಸ್ತಿ ಜನ.. ಆದ್ರೆ ಈ ಹಣ್ಣಿನ ಗುಣಗಳು ಗೊತ್ತಿದ್ದವರು ಮಾತ್ರ ತಮ್ಮ ಡಯಟ್‌ನಲ್ಲಿ ಪಪ್ಪಾಯಿಗೆ ಪರ್ಮನೆಂಟ್‌ ಸ್ಥಾನ ಕೊಟ್ಟಿರುತ್ತಾರೆ.. ಅದರಲ್ಲೂ ಚಳಿಗಾಲದಲ್ಲಿ ಪಪ್ಪಾಯಿ ಹಣ್ಣು ತಿನ್ನುವುದನ್ನು ಅಭ್ಯಾಸ ಮಾಡಿಕೊಂಡರೆ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.. ಯಾವ ಕಾರಣಕ್ಕಾಗಿ ಚಳಿಗಾಲದಲ್ಲಿ ಪಪ್ಪಾಯಿ ತಿನ್ನೋದು ಉತ್ತಮ ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಈ ಹಳ್ಳಿಯಲ್ಲಿದೆ ವಿಚಿತ್ರ ರೂಲ್ಸ್!  – ಮದುವೆ ಆಗ್ಬೇಕಂದ್ರೆ ಸಸ್ಯಾಹಾರಿ ಆಗಿರಬೇಕು..!

ಪಪ್ಪಾಯಿ ಹಣ್ಣು ವಿಟಮಿನ್‌ ಗಳ ಆಗರವಾಗಿದೆ. ಅದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ ಗುಣದಿಂದಾಗಿ ಇದನ್ನು ನಿಮ್ಮ ಚಳಿಗಾಲದ ಆಹಾರದ ಪಟ್ಟಿಯಲ್ಲಿ ಸೇರಿಸಲೇಬೇಕು.. ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್‌ ಸಿ ಹೇರಳವಾಗಿ ಸಿಗೋದ್ರಿಂದಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ಚಳಿಗಾಲದಲ್ಲಿ ಪದೇ ಪದೆ ಕಾಡುವ ಶೀತ ಜ್ವರದಿಂದ ದೂರವಿರಲು ಪಪ್ಪಾಯಿ ಹಣ್ಣಿನ ನಿಯಮಿತ ಸೇವನೆ ಅತ್ಯವಶ್ಯಕ.

ಇನ್ನು ಪಪ್ಪಾಯ ಹಣ್ಣಿನಲ್ಲಿರುವ ಪಾಪೈನ್‌ ಎನ್‌ಜೈಮ್‌ಗಳು, ಜೀರ್ಣಕ್ರಿಯೆ ಸರಿಯಾಗಿಸಲು ಸಹಾಯ ಮಾಡುತ್ತವೆ.. ಅಜೀರ್ಣ ಸಮಸ್ಯೆಗೆ ಪಪ್ಪಾಯಿ ಸೇವನೆ ಬೆಸ್ಟ್‌ ಮದ್ದುಅಂದ್ರೂ ತಪ್ಪಾಗಲಾರದು.. ಇನ್ನು ಚಳಿಗಾಲದಲ್ಲಿ ಚರ್ಮ ನಿಸ್ತೇಜಗೊಳ್ಳುವುದು ಸಾಮಾನ್ಯ.. ಆದ್ರೆ ಪಪ್ಪಾಯಿಯಲ್ಲಿರುವ ವಿಟಮಿನ್‌ ಎ ಮತ್ತು ವಿಟಮಿನ್‌ ಸಿ ಯಿಂದಾಗಿ ಚರ್ಮ ಚಳಿಗಾಲದಲ್ಲೂ ಹೊಳಪು ಕಳೆದುಕೊಳ್ಳದಂತೆ ನೋಡಿಕೊಳ್ಳುತ್ತದೆ..

ಇನ್ನು ಪಪ್ಪಾಯಿಯಲ್ಲಿರುವ ಫೈಬರ್‌, ಪೊಟಾಷಿಯಂ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳಿಂದಾಗಿ ಬ್ಲಡ್ ಪ್ರೆಷರ್‌ ನಾರ್ಮಲ್‌ ಆಗಿರುತ್ತದೆ.. ಅಷ್ಟೇ ಅಲ್ಲದೆ ಹೃದಯ ಸಂಬಂಧಿ ಕಾಯಿಲೆಗಳಿಂದಲೂ ದೂರ ಇರಿಸುತ್ತದೆ.. ಇನ್ನು ಲೋ ಕೆಲೊರಿ ಹಾಗೂ ಹೈ ಫೈಬರ್‌ ಹೊಂದಿರುವ ಕಾರಣದಿಂದ ತೂಕ ಇಳಿಸುವ ನಿಟ್ಟಿನಲ್ಲೂ ಪಪ್ಪಾಯಿ ಅತ್ಯುತ್ತಮ ಆಹಾರ.. ಅಂದರೆ ಹೊಟ್ಟೆ ತುಂಬಾ ಪಪ್ಪಾಯಿ ಹಣ್ಣು ತಿಂದರೂ ತೂಕ ಹೆಚ್ಚಾಗುವ ಬದಲು ದೇಹದಲ್ಲಿರುವ ಪ್ರೊಟೀನ್‌ಗಳನ್ನು ಸರಿಯಾಗಿ ಕರಗಿಸಿ, ದೇಹದ ತೂಕ ಕಡಿಮೆ ಮಾಡಿಸುವಲ್ಲಿ ಸಹಕಾರಿಯಾಗಿದೆ..

ಇನ್ನು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕೀಲು ನೋವು, ಗಂಟು ನೋವಿಗೂ ಪಪ್ಪಾಯಿ ಅತ್ಯುತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ.. ಪಪ್ಪಾಯಿಯಲ್ಲಿರುವ ಉರಿಯೂತವನ್ನು ತಡೆಯುವ ಅಂಶಗಳು, ಕೀಲು ನೋವು ದೂರವಾಗುವಂತೆ ಮಾಡುತ್ತದೆ.. ಇನ್ನು ಪಪ್ಪಾಯಿ ಹಣ್ಣಿನಲ್ಲಿರುವ ದ್ರವಾಂಶದಿಂದಾಗಿ ದೇಹ ಡೀಹೈಡ್ರೈಟ್‌ ಆಗುವುದನ್ನೂ ತಪ್ಪಿಸುವುದರಿಂದ ಚಳಿಗಾಲದಲ್ಲಿ ರೆಗ್ಯುಲರ್‌ ಆಗಿ ಪಪ್ಪಾಯಿ ಹಣ್ಣು ಸೇವನೆಯನ್ನು ಅಭ್ಯಾಸ ಮಾಡಿಕೊಳ್ಳಿ.. ಅದರಲ್ಲೂ ಬೆಳಗ್ಗೆಯೇ ಖಾಲಿ ಹೊಟ್ಟೆಗೆ ಪಪ್ಪಾಯಿ ಹಣ್ಣು ಸೇವನೆ ಅತ್ಯುತ್ತಮ ಎನ್ನುವುದು ತಜ್ಞರು ನೀಡುವ ಸಲಹೆ..

Shwetha M