ಬಿಗ್‌ಬಿ ಮೊಮ್ಮಗನ ಜೊತೆ ಶಾರುಖ್ ಪುತ್ರಿಯ ಡೇಟಿಂಗ್ – ಕೆಬಿಸಿಗೆ ಬಂದ ಸುಹಾನಾ ಖಾನ್‌ಗೆ ಅಮಿತಾಬ್ ಕೇಳಿದ ಪ್ರಶ್ನೆ ಏನು ಗೊತ್ತಾ?

ಬಿಗ್‌ಬಿ ಮೊಮ್ಮಗನ ಜೊತೆ ಶಾರುಖ್ ಪುತ್ರಿಯ ಡೇಟಿಂಗ್ – ಕೆಬಿಸಿಗೆ ಬಂದ ಸುಹಾನಾ ಖಾನ್‌ಗೆ ಅಮಿತಾಬ್ ಕೇಳಿದ ಪ್ರಶ್ನೆ ಏನು ಗೊತ್ತಾ?

ಬಾಲಿವುಡ್‌ನ ಬೃಹತ್ ಕಂಬಗಳು ಬಿಗ್‌ಬಿ ಅಮಿತಾಬ್ ಬಚ್ಚನ್ ಮತ್ತು ಕಿಂಗ್‌ಖಾನ್ ಶಾರುಖ್ ಖಾನ್. ಇವರಿಬ್ಬರ ಕುಟುಂಬದ ಕುಡಿಗಳು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಮಾತುಗಳು ಹಲವು ದಿನಗಳಿಂದ ಕೇಳಿಬರುತ್ತಿದೆ. ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಮತ್ತು ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಡೇಟಿಂಗ್‌ನಲ್ಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದರ ಮಧ್ಯೆ ಸುಹಾನ್ ಖಾನ್, ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮಕ್ಕೆ ಬಂದಿದ್ದಾಳೆ.

ಇದನ್ನೂ ಓದಿ: ವಿನಯ್, ನಮ್ರತಾ ಹಾಕಿದ ಗೆರೆ ದಾಟುವುದಿಲ್ಲ ಸ್ನೇಹಿತ್..!- ಕ್ಯಾಪ್ಟನ್ ಆಗಿ ಸ್ನೇಹಿತ್‌ಗೌಡ ತಾರತಮ್ಯ

ಜೋಯಾ ಅಖ್ತರ್ ಅವರ ದಿ ಆರ್ಚೀಸ್’ ಚಿತ್ರದೊಂದಿಗೆ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಮತ್ತು ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಲಿದ್ದಾರೆ. ಡಿಸೆಂಬರ್ 7 ರಂದು ಇವರ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ನಟ ಶಾರುಖ್ ಖಾನ್ ಮಗಳು ಸುಹಾನಾ ಖಾನ್‌ಗೆ ಈಗ 22 ವರ್ಷ ವಯಸ್ಸು. ಸುಹಾನಾ ಖಾನ್ ತಮಗಿಂತ ಆರು ತಿಂಗಳು ಚಿಕ್ಕ ವಯಸ್ಸಿನ ಅಗಸ್ತ್ಯ ನಂದಾ ಜೊತೆ ಹಲವು ಸ್ಥಳಗಳಲ್ಲಿ, ಪಾರ್ಟಿಗಳಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದು, ಈ ಜೋಡಿ ಈಗಾಗಲೇ ಭಾರಿ ಸದ್ದು ಮಾಡುತ್ತಿದ್ದಾರೆ.

ಇದೀಗ ಶಾರುಖ್ ಖಾನ್ ಪುತ್ರಿ ಸುಹಾನಾ, ತಮ್ಮ ಡೇಟಿಂಗ್ ಪಾರ್ಟನರ್ ಅಗಸ್ತ್ಯರ ಅಜ್ಜ ಅಮಿತಾಭ್ ಬಚ್ಚನ್ ಅವರ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ಕೌನ್ ಬನೇಗಾ ಕರೋಡ್‌ಪತಿ 15′ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ನಡುವೆ ಇವರಿಬ್ಬರ ಪ್ರಶ್ನೋತ್ತರ ನಡೆದಿದ್ದು, ಹಾಸ್ಯದ ಮಾತುಕತೆ ನಡೆದಿದೆ. ನೀವು ಕೆಬಿಸಿಯಲ್ಲಿ ಬರುವುದನ್ನು ತಿಳಿದಾಗ ಶಾರುಖ್ ಸಾಬ್ ಏನು ಹೇಳಿದ್ರು ಎಂದು ಅಮಿತಾಭ್ ಬಚ್ಚನ್ ಕೇಳಿದ್ದಾರೆ. ಅದಕ್ಕೆ ಸುಹಾನಾ ಖಾನ್, ತಮಾಷೆಯಾಗಿ ನೀವು ಅವರ ಜೊತೆ ಹಲವು ಚಿತ್ರಗಳಲ್ಲಿ ಅಪ್ಪನ ಪಾತ್ರ ಮಾಡಿದ್ದೀರಿ. ಅದಕ್ಕಾಗಿ ನನಗೆ ಸುಲಭದ ಪ್ರಶ್ನೆ ಕೇಳಬೇಕೆಂದು ಕೋರಿಕೊಳ್ಳುತ್ತೇನೆ ಎಂದರು. ಇನ್ನೊಂದೆಡೆ, ಸುಹಾನಾ ಖಾನ್ ಕೆಬಿಸಿ ಶೂಟಿಂಗ್ ಮುಗಿಸಿ ಸೆಟ್‌ನಿಂದ ಹೊರಹೋಗುವ ವಿಡಿಯೋ ವೈರಲ್ ಆಗುತ್ತಿದೆ.

ದಿ ಆರ್ಚೀಸ್ ಜನಪ್ರಿಯ ಆರ್ಚೀಸ್ ಕಾಮಿಕ್ಸ್ ಸರಣಿಯ ಭಾರತೀಯ ರೂಪಾಂತರ ಇದಾಗಿದೆ.  ಸುಹಾನಾ ಖಾನ್ ಮತ್ತು ಅಗಸ್ತ್ಯನಂದ ನಡುವೆ ಮೊದಲು ಪ್ರೀತಿ ಮೂಡಿದ್ದು ಕೂಡಾ ಇದೇ ಚಿತ್ರದ ಸೆಟ್‌ನಲ್ಲಿ ಎನ್ನಲಾಗುತ್ತಿದೆ.  ಸುಹಾನಾ ವೆರೋನಿಕಾ ಲಾಡ್ಜ್ ಪಾತ್ರವನ್ನು ನಿರ್ವಹಿಸಿದ್ದರೆ, ಅಗಸ್ತ್ಯ ಆರ್ಚಿ ಆಂಡ್ರ್ಯೂಸ್ ಪಾತ್ರವನ್ನು ನಿರ್ವಹಿಸಿದ್ದಾರೆ. ಬೋನಿ ಕಪೂರ್ ಮತ್ತು ಶ್ರೀದೇವಿ ಅವರ ಕಿರಿಯ ಪುತ್ರಿ ಖುಷಿ ಕಪೂರ್ ಕೂಡ ‘ಆರ್ಚೀಸ್’ ಚಿತ್ರದ ಮೂಲಕ ಪದಾರ್ಪಣೆ ಮಾಡುತ್ತಿದ್ದಾರೆ.

ಅಂದಹಾಗೆ ಅಗಸ್ತ್ಯ, ಅಮಿತಾಭ್ ಬಚ್ಚನ್ ಅವರ ಮಗಳು ಶ್ವೇತಾ ಬಚ್ಚನ್ ಅವರ ಮಗ. ಕೆಲ ತಿಂಗಳ ಹಿಂದೆ ನಡೆದ ಪಾರ್ಟಿಯೊಂದರಲ್ಲಿ ಸುಹಾನಾ ಖಾನ್ ಅವರನ್ನು ಕಾರು ಹತ್ತಿಸಿದ ಅಗಸ್ತ್ಯ ನಂದ ಪ್ರೀತಿಯ  ಫ್ಲೈಯಿಂಗ್ ಕಿಸ್ ಕೊಟ್ಟಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.  ಕಪೂರ್ ಕುಟುಂಬ ಆಯೋಜಿಸಿದ್ದ ಕ್ರಿಸ್ಮಸ್ ಪಾರ್ಟಿಯಲ್ಲಿ ಅಗಸ್ತ್ಯ ಹಾಗೂ ಸುಹಾನಾ ಅವರನ್ನು ತನ್ನ ಸಂಗಾತಿ ಎಂದು ಪರಿಚಯಿಸಿದರು ಎಂದು ಸುದ್ದಿ ಕೂಡ ಆಗಿತ್ತು.  ಇಬ್ಬರೂ  ಚಿತ್ರದ ಸೆಟ್ ಗಳಲ್ಲಿ ಒಟ್ಟಿಗೆ ಸಾಕಷ್ಟು ಸಮಯ ಕಳೆಯುತ್ತಿರುತ್ತಾರೆ ಎನ್ನಲಾಗಿದೆ.

Sulekha