ನಾಡಹಬ್ಬಕ್ಕೆ ಸಜ್ಜಾದ ಅರಮನೆ ನಗರಿ – ಈ ಬಾರಿಯ ಜಂಬೂಸವಾರಿ ಆನೆಗಳ ವಯಸ್ಸು ಹಾಗೂ ತೂಕ ಎಷ್ಟು ಗೊತ್ತಾ?

ನಾಡಹಬ್ಬಕ್ಕೆ ಸಜ್ಜಾದ ಅರಮನೆ ನಗರಿ – ಈ ಬಾರಿಯ ಜಂಬೂಸವಾರಿ ಆನೆಗಳ ವಯಸ್ಸು ಹಾಗೂ ತೂಕ ಎಷ್ಟು ಗೊತ್ತಾ?

ಮೈಸೂರು: ಮೈಸೂರು ದಸರಾದ ವಿಶೇಷ ಆಕರ್ಷಣೆ ಜಂಬೂಸವಾರಿ. ತಾಯಿ ಚಾಮುಂಡೇಶ್ವರಿ ಹೊತ್ತು ಸಾಗುವ ಗಜಪಡೆಯೇ ಗಮನ ಸೆಳೆಯುವಂತದ್ದು. ಈ ಬಾರಿಯ ದಸರಾದಲ್ಲಿ ಭಾಗವಹಿಸುವ ಆನೆಗಳು ಮೈಸೂರಿಗೆ ಈಗಾಗಲೇ ಆಗಮಿಸಿವೆ. ನಗರದ ಅಶೋಕಾಪುರಂ ನಲ್ಲಿರುವ ಅರಣ್ಯಭವನದಲಿ ಅಭಿಮನ್ಯು ಅಂಡ್ ಟೀಮ್ ರೆಸ್ಟ್ ಮಾಡ್ತಿದೆ. ಆನೆಗಳ ಆರೋಗ್ಯದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ನಿಗಾ ವಹಿಸಿದ್ದು, ಎಲ್ಲಾ ಆನೆಗಳು ಸಂತಸದಿಂದ ಕಾಲ ಕಳೆಯುತ್ತಿವೆ. ಅಭಿಮನ್ಯು ಅಂಡ್ ಟೀಮ್ ನಿಧಾನವಾಗಿ ಮೈಸೂರಿನ ವಾತಾವರಣಕ್ಕೆ ಅಡ್ಜಸ್ಟ್ ಆಗುತ್ತಿವೆ. ಆನೆಗಳನ್ನ ನೋಡಿ ಸ್ಥಳೀಯರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

ಇದನ್ನೂ ಓದಿ: ‘ಮೊಸರು ಕುಡಿಕೆ’ ಎತ್ತರ 14 ಅಡಿ ಮಾತ್ರ!  -ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಹೊಸ ಗೈಡ್‌ ಲೈನ್ಸ್‌

ಪ್ರತಿ ಬಾರಿಯಂತೆ ಈ ಬಾರಿಯೂ ದಸರಾ ಮಹೋತ್ಸವಕ್ಕೆ ಮೊದಲ ಹಂತದಲ್ಲಿ 9 ಆನೆಗಳು ಆಗಮಿಸಿದ್ದು , ಕಾವಾಡಿಗಳು ಹಾಗೂ ಮಾವುತರು ಆನೆಗಳ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳ ತಂಡ ವೀರನ ಹೊಸಹಳ್ಳಿ ಯಿಂದ ಮೈಸೂರಿನ ಅರಣ್ಯ ಭವನ ಆಗಮಿಸಿವೆ.

ಸೆ. 5 ಕ್ಕೆ ಅರಮನೆಗೆ ಗಜಪಡೆ

ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಆನೆಗಳಿಗಾಗಿ ತಾತ್ಕಾಲಿಕ ಶೆಡ್ ಗಳನ್ನ ನಿರ್ಮಾಣ ಮಾಡಲಾಗಿದೆ. ಕಾವಾಡಿಗಳು ಹಾಗೂ ಮಾವುತರಿಗೂ ಸೂರು ನಿರ್ಮಾಣವಾಗಿದ್ದು, ಸೆ.5 ರಂದು ಅರಮನೆಗೆ ಆನೆಗಳು ಪ್ರವೇಶ ಮಾಡಲಿವೆ.

ಆನೆಗಳ ವಯಸ್ಸು ಹಾಗೂ ತೂಕ ಎಷ್ಟು..?

ನಾಡಹಬ್ಬ ಮೈಸೂರು ದಸರಾದಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ 14 ಆನೆಗಳು ಪಾಲ್ಗೊಳ್ಳಲಿದೆ. ಶುಕ್ರವಾರ 9 ಆನೆಗಳಿಗೆ ಸಂಪ್ರದಾಯಿಕ ಪೂಜೆ ನೆರವೇರಿಸಲಾಗಿದೆ. ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಆನೆಗಳು ಫಿಟ್‌ ಆಗಿರಬೇಕಾಗಿರುತ್ತದೆ. ಹೀಗಾಗಿ ಆನೆಗಳ ಫಿಟ್‌ನೆಸ್‌ ಬಗ್ಗೆಯೂ ಹೆಚ್ಚು ಕಾಳಜಿ ವಹಿಸಲಾಗಿದೆ. ಹೀಗಾಗಿ ಜಂಬೂ ಸವಾರಿಯಲ್ಲಿ ಭಾಗವಹಿಸುವ ಆನೆಗಳಿಗೆ ನಿರ್ಧಿಷ್ಟ ತೂಕ, ಎತ್ತರ ಹಾಗೂ ವಯಸ್ಸನ್ನು ನಿಗಧಿ ಮಾಡಲಾಗಿದೆ. ಆನೆಗಳ ವಯಸ್ಸು, ತೂಕದ ವಿವರ ಕೆಳಗಿನಂತಿದೆ..

ಆನೆಗಳ ವಯಸ್ಸು,ತೂಕ ಮತ್ತು ಎತ್ತರದ ವಿವರ..

  • ಅಭಿಮನ್ಯು – 57ವರ್ಷ,ಮತ್ತಿಗೋಡು ಆನೆ ಶಿಬಿರ,274ಮೀ ಎತ್ತರ, 4,700ರಿಂದ 5,000ಕೆಜಿ.
  • ವಿಜಯ – 63ವರ್ಷ,ದುಬಾರೆ ಆನೆ ಶಿಬಿರ, 244ಮೀ ಎತ್ತರ, 3,250ರಿಂದ 3,500ಕೆಜಿ.
  • ವರಲಕ್ಷ್ಮಿ – 67ವರ್ಷ, ಭೀಮನಕಟ್ಟೆ, 236ಮೀ ಎತ್ತರ, 3,300ರಿಂದ 3,500ಕೆಜಿ.
  • ಅರ್ಜುನ  – 65ವರ್ಷ, ಬಳ್ಳೆ, 288ಮೀ ಎತ್ತರ, 5,800ರಿಂದ 6,000 ಕೆಜಿ.
  • ಧನಂಜಯ  – 43ವರ್ಷ, ದುಬಾರೆ, 280ಮೀ ಎತ್ತರ,4,000ರಿಂದ 4,200 ಕೆಜಿ.
  • ಮಹೇಂದ್ರ – 40ವರ್ಷ, ಮತ್ತಿಗೋಡು, 275ಮೀ ಎತ್ತರ, 3,800ರಿಂದ 4,000 ಕೆಜಿ.
  • ಭೀಮ – 23ವರ್ಷ, ಮತ್ತಿಗೋಡು, 285ಮೀ ಎತ್ತರ, 3,800ರಿಂದ 4,000ಕೆಜಿ.
  • ಗೋಪಿ – 41ವರ್ಷ, ದುಬಾರೆ, 286ಮೀ ಎತ್ತರ, 3,700ರಿಂದ 3,800ಕೆಜಿ.
  • ಪ್ರಶಾಂತ್ – 50ವರ್ಷ, ದುಬಾರೆ,300ಮೀ ಎತ್ತರ,,4000ರಿಂದ 4,200ಕೆಜಿ.
  • ಸುಗ್ರೀವ – 41ವರ್ಷ,ದುಬಾರೆ,277ಮೀ ಎತ್ತರ, 4,000ರಿಂದ 4,100ಕೆಜಿ.
  • ಕಂಜನ್ – 24ವರ್ಷ,ದುಬಾರೆ, 262ಮೀ ಎತ್ತರ, 3,700ರಿಂದ 3,900ಕೆಜಿ.
  • ರೋಹಿತ್ – 21ವರ್ಷ, ರಾಮಾಪುರ,270ಮೀ ಎತ್ತರ, 2,900ರಿಂದ 3,000ಕೆಜಿ.
  • ಲಕ್ಷ್ಮಿ – 52 ವರ್ಷ, ದೊಡ್ಡಹರವೆ, 252 ಮೀ. ಎತ್ತರ, 3,000ರಿಂದ 3,200ಕೆಜಿ.
  • ಹಿರಣ್ಯ – 46 ವರ್ಷ, ರಾಮಾಪುರ, 250ಮೀ ಎತ್ತರ, 3,000ರಿಂದ 3,200ಕೆಜಿ

ಕಂಜನ್, ಲಕ್ಷ್ಮೀ, ಹಿರಣ್ಯರಿಗೆ ಇದು ಮೊದಲ ದಸರಾ

ಅರ್ಜುನ ಈ ಬಾರಿಯ ದಸರಾ ಮಹೋತ್ಸವದ ಹಿರಿಯ ವಯಸ್ಸಿನ ಆನೆಯಾಗಿದೆ. ರೋಹಿತ್ ಅತ್ಯಂತ ಕಿರಿಯ ವಯಸ್ಸಿನ ಆನೆ ಹಾಗೂ ಮೊದಲ ಬಾರಿಗೆ ದಸರಾದಲ್ಲಿ ಭಾಗಿಯಾಗಲಿದೆ. ಕಂಜನ್,ಲಕ್ಷ್ಮಿ,ಹಿರಣ್ಯ ಸಹ ಆನೆಗಳಿಗೂ ಇದೇ ಮೊದಲ ದಸರಾ ಆಗಿದೆ.

suddiyaana