ಮಹಾಭಾರತ ಯುದ್ಧಕ್ಕೆ , ಸಾವಿರಾರು ಸಾವಿಗೆ ಕಾರಣವಾದ ಕುತಂತ್ರಿ ಶಕುನಿ ಸ್ವರ್ಗ ಸೇರಿದ್ದು ಹೇಗೆ ಗೊತ್ತಾ?

ಮಹಾಭಾರತದಲ್ಲಿ ನಾವು ಕಾಣುವಂತಹ ಪ್ರಮುಖ ಪಾತ್ರಗಳಲ್ಲಿ ಶಕುನಿಯ ಪಾತ್ರವೂ ಒಂದು. ಶಕುನಿಯನ್ನು ಮಹಾಭಾರತದ ಕುತಂತ್ರಿ ಎಂದೂ ಅನೇಕರು ಕರೆಯುತ್ತಾರೆ. ಶಕುನಿ ಬೇರಾರೂ ಅಲ್ಲ, ಈತ ದುರ್ಯೋಧನನ ಸ್ವತಃ ಚಿಕ್ಕಪ್ಪ. ಶಕುನಿಯ ಕುತಂತ್ರವೇ ಪಾಂಡವರು 14 ವರ್ಷಗಳ ಕಾಲ ವನವಾಸವನ್ನು ಅನುಭವಿಸಲು ಕಾರಣವಾಯಿತು. ಮತ್ತೊಂದಡೆ, ಮಹಾಭಾರತ ಯುದ್ಧ ನಡೆಯುವುದಕ್ಕೂ ಇವನೇ ಪರೋಕ್ಷವಾಗಿ ಕಾರಣನಾಗಿದ್ದ. ಮಹಾಭಾರತದಲ್ಲಿ ಲಕ್ಷಾಂತರ ವೀರ ಯೋಧರ ಮರಣಕ್ಕೆ ಕಾರಣನಾದವನು, ಕೌರವ ರಾಜವಂಶವನ್ನೇ ಸರ್ವನಾಶ ಮಾಡಿದವನು ಶಕುನಿ. ಇಷ್ಟೆಲ್ಲಾ ಕುತಂತ್ರವನ್ನು ಮಾಡಿದ್ದರೂ ಶಕುನಿ ಮರಣಾ ನಂತರ ಸ್ವರ್ಗವನ್ನು ಸೇರಿದನೆಂದು ಕೆಲವೊಂದು ಪೌರಾಣಿಕ ಕಥೆಗಳು ಹೇಳುತ್ತವೆ. ಶಕುನಿ ಸ್ವರ್ಗವನ್ನು ಸೇರಿದ್ದು ಹೇಗೆ ಅನ್ನೋದ್ದನ್ನ ನೋಡೋಣ ಬನ್ನಿ.
ಮಹಾಭಾರತ ಯುದ್ಧ ನಡೆಯುವುದಕ್ಕೆ ಮುಖ್ಯ ಕಾರಣೀಕರ್ತ ಶಕುನಿ. ಕೌರವರು ಮತ್ತು ಪಾಂಡವರ ನಡುವೆ ಜೂಜಾಟ ನಡೆಯುತ್ತೆ. ಅದೇ ಪಗಡೆಯಾಟದಲ್ಲಿ ಶಕುನಿ ಕೌರವರ ಪರವಾಗಿ ಗೆದ್ದು ಪಾಂಡವರನ್ನು ಸೋಲಿಸಿ ಅವರಿಂದ ಎಲ್ಲವನ್ನೂ ಕಸಿದುಕೊಂಡನು. ಇದರ ನಂತರ, ಮಹಾಭಾರತ ಯುದ್ಧ ನಡೆದು ಕೌರವ ರಾಜವಂಶ ಕೊನೆಗೊಂಡಿತು. ಈ ರೀತಿಯಾಗಿ, ಶಕುನಿ ಧೃತರಾಷ್ಟ್ರನ ಎಲ್ಲಾ ಪುತ್ರರನ್ನು ಕೊಲ್ಲುವ ಮೂಲಕ ತನ್ನ ಕುಟುಂಬದ ಸಾವಿಗೆ ಸೇಡು ತೀರಿಸಿಕೊಂಡನು.
ಸ್ವತಃ ಈ ಯುದ್ಧದಲ್ಲಿ ಶಕುನಿ ಮರಣ ಹೊಂದುತ್ತಾನೆ. ಶಕುನಿ ಮರಣದ ನಂತರ ಸ್ವರ್ಗದಲ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತಾನೆ. ಶಕುನಿ ಕೆಟ್ಟವನಾದರೂ ಸ್ವರ್ಗದಲ್ಲಿ ಹೇಗೆ ಸ್ಥಾನ ಪಡೆದನು ಎಂದು ನೀವು ಪ್ರಶ್ನಿಸಬಹುದು. ಇದರ ಹಿಂದೆ ಎರಡು ಕಾರಣಗಳಿವೆ. ಮೊದಲನೇಯದಾಗಿ, ಶಕುನಿ ತನ್ನ ಕುಟುಂಬದ ಸಾವಿಗೆ ಸೇಡು ತೀರಿಸಿಕೊಳ್ಳಲು ಮತ್ತು ನ್ಯಾಯವನ್ನು ಪಡೆಯಲು ಯುದ್ಧವನ್ನು ಪ್ರಾರಂಭಿಸಿದ್ದನು. ಎರಡನೆಯದಾಗಿ, ಶ್ರೀಕೃಷ್ಣನು ಸ್ವತಃ ಮಹಾಭಾರತದ ಯುದ್ಧಭೂಮಿಯಲ್ಲಿ ಇದ್ದುದರಿಂದ, ಈ ಯುದ್ಧಭೂಮಿಯಲ್ಲಿ ಯಾರೇ ಮರಣ ಹೊಂದಿದರೂ ಅವರು ಸ್ವರ್ಗವನ್ನು ಸೇರುತ್ತಾರೆ ಎಂದು ಹೇಳಿದ್ದನು. ಅದಕ್ಕಾಗಿಯೇ ಶಕುನಿ ಹಲವಾರು ಪಾಪ ಕೃತ್ಯಗಳನ್ನು ಮಾಡಿದ್ದರೂ ಮರಣಾ ನಂತರ ಸ್ವರ್ಗ ಸೇರುತ್ತಾನೆ.

ನೋಡಿರಿ

