ವರ್ಷಕ್ಕೆ ಎಷ್ಟು ಪ್ರಮಾಣ ಕುಸಿಯುತ್ತಿದೆ ಗೊತ್ತಾ ಜೋಶಿಮಠ – ದುರಂತಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ತಜ್ಞರು

ವರ್ಷಕ್ಕೆ ಎಷ್ಟು ಪ್ರಮಾಣ ಕುಸಿಯುತ್ತಿದೆ ಗೊತ್ತಾ ಜೋಶಿಮಠ – ದುರಂತಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ತಜ್ಞರು

ಜೋಶಿಮಠ ಕುಸಿಯುತ್ತಿರುವ ಪ್ರಮಾಣವನ್ನು ತಜ್ಞರು ಪತ್ತೆ ಹಚ್ಚಿದ್ದಾರೆ. ಕೇವಲ ಜೋಶಿಮಠ ಮಾತ್ರವಲ್ಲ ಸುತ್ತಮುತ್ತಲಿನ ಪ್ರದೇಶಗಳು ವರ್ಷಕ್ಕೆ 6.5 ಸೆಂ.ಮೀ ಅಥವಾ 2.5 ಇಂಚುಗಳಷ್ಟು ಮುಳುಗುತ್ತಿವೆ ಎಂದು ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್ ಹೇಳಿದೆ.

ಪೌರಿ, ಬಾಗೇಶ್ವರ್, ಉತ್ತರಕಾಶಿ, ತೆಹ್ರಿ ಗರ್ವಾಲ್ ಮತ್ತು ರುದ್ರಪ್ರಯಾಗಗಳಲ್ಲಿನ ಸ್ಥಳೀಯರು ಜೋಶಿಮಠದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ದೇಶದ ಬಹುತೇಕ ಗುಡ್ಡಗಾಡು ಪ್ರದೇಶಗಳು, ಅದರಲ್ಲೂ ವಿಶೇಷವಾಗಿ ಹಿಮನದಿ ಸಮೀಪದ ನಗರಗಳು ಅಪಾಯದಲ್ಲಿವೆ. ಸಮಯಕ್ಕೆ ಸರಿಯಾಗಿ ಪರಿಸ್ಥಿತಿ ನಿಭಾಯಿಸದಿದ್ದರೆ, ಜೋಶಿಮಠದಂತಹ ಪರಿಸ್ಥಿತಿಗಳು ದೇಶದ ಎಲ್ಲಾ ದೊಡ್ಡ ಬೆಟ್ಟಗಳಿಗೂ ಬರಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಾಧನಗಳಿಗೆ ಏಕ ಮಾದರಿ ಚಾರ್ಜರ್! – ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದೇಕೆ?

ಪರ್ವತದ ಮೇಲೆ ಅವ್ಯವಸ್ಥಿತ ಕಟ್ಟಡ ನಿರ್ಮಾಣದಿಂದ ಪರ್ವತಗಳ ಗುರುತ್ವಾಕರ್ಷಣೆಯ ಕೇಂದ್ರದಲ್ಲಿ ಅಡಚಣೆಗಳನ್ನು ಉಂಟುಮಾಡಿದೆ. ಅಲ್ಲದೇ ಅನೇಕ ಬೆಟ್ಟದಲ್ಲಿ ಹೊಂದಿರುವ ನಗರಗಳ ಅಡಿಯಲ್ಲಿ ನೀರಿನ ಸಂಗ್ರಹವನ್ನು ಸಹ ಅಂದಾಜಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಪರ್ವತಗಳ ಮೇಲೆ ನೆಲೆಗೊಂಡಿರುವ ನಗರಗಳ ಭೂಗರ್ಭವು ದುರ್ಬಲವಾಗುವುದಲ್ಲದೆ, ದೊಡ್ಡ ದುರಂತದ ಕಡೆಗೆ ಸಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

ಜೋಶಿಮಠದಂತಹ ಇತರ ಅನೇಕ ನಗರಗಳು ಇದೇ ರೀತಿಯ ವಿನಾಶಕ್ಕೆ ಗುರಿಯಾಗಿವೆ. ಜೋಶಿಮಠವು ಹಿಮಾಲಯ ಪ್ರದೇಶದ ಹಳೆಯ ನಗರವಾಗಿದೆ. ಅಲ್ಲಿ ಮಳೆಯ ಜೊತೆಗೆ ಹಿಮವೂ ಬೀಳುತ್ತದೆ. ಈ ದೃಷ್ಟಿಕೋನದಿಂದ, ಆ ಪ್ರದೇಶಗಳು ಹೆಚ್ಚು ಅಪಾಯಕಾರಿಯಾಗಿದೆ. ಜೊತೆಗೆ ಹಿಮಪಾತ ಮತ್ತು ಮಳೆಯ ಮಟ್ಟವೂ ಸಮಾನವಾಗಿರುತ್ತದೆ. ಹಿಮದ ಬಹುಪಾಲು ಕರಗಿದಾಗ, ಅದು ಪರ್ವತಗಳ ಮೂಲಕ ಹಾದುಹೋಗುತ್ತದೆ ಮತ್ತು ಕೆಳಗಿನ ನದಿಯನ್ನು ಸೇರುತ್ತದೆ. ಇದು ಪ್ರವಾಹದ ಸ್ಥಿತಿಯನ್ನೂ ತಂದೊಡ್ಡುತ್ತದೆ. ಅಲ್ಲದೇ ಇಂತಹ ಆತಂಕಕಾರಿ ಪರಿಸ್ಥಿತಿಗೆ ಜಲವಿದ್ಯುತ್ ಯೋಜನೆಗಳು ಸೇರಿದಂತೆ ಯೋಜಿತವಲ್ಲದ ಮೂಲಸೌಕರ್ಯ ಅಭಿವೃದ್ಧಿಯೇ ಕಾರಣ ಎಂದು ತಜ್ಞರು ಆರೋಪಿಸಿದ್ದಾರೆ.

suddiyaana