ಬಿಗ್‌ಬಾಸ್ ಶೋ ಎಪಿಸೋಡ್ ಎಷ್ಟು ರೆಡಿ ಇದೆ ಗೊತ್ತಾ? – ಆಮೇಲೆ ಬಿಗ್‌ಬಾಸ್ ಶೋ ಕಥೆಯೇನು?

ಬಿಗ್‌ಬಾಸ್ ಶೋ ಎಪಿಸೋಡ್ ಎಷ್ಟು ರೆಡಿ ಇದೆ ಗೊತ್ತಾ? – ಆಮೇಲೆ ಬಿಗ್‌ಬಾಸ್ ಶೋ ಕಥೆಯೇನು?

ಬಿಗ್ ಬಾಸ್ ಇತಿಹಾಸದಲ್ಲಿ ಇದೊಂದು ಅನಿರೀಕ್ಷಿತ ತಿರುವು. ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸಧ್ಯಕ್ಕೆ ಸ್ಥಗಿತವಾಗಿದೆ. ಈಗ ವೀಕ್ಷಕರಿಗೆ ಎಷ್ಟು ಎಪಿಸೋಡ್ ನೋಡಲು ಇದೆ. ಆಮೇಲೆ ಶೋ ಕಥೆಯೇನು ಅನ್ನೋ ವಿವರ ಇಲ್ಲಿದೆ.

ಇದನ್ನೂ ಓದಿ: ರೆಸಾರ್ಟ್‌ನಲ್ಲಿ ಬಿಗ್‌ಬಾಸ್ ಶೋ ಶುರು – ಪ್ರತ್ಯೇಕ ರೂಮ್‌ನಲ್ಲಿ ಸ್ಪರ್ಧಿಗಳಿಗೆ ಟಾಸ್ಕ್

ಜಾಲಿವುಡ್‌ ಸ್ಟುಡಿಯೋಗೆ ಬೀಗ ಹಾಕಿರುವ ಪರಿಣಾಮ ಬಿಗ್‌ಬಾಸ್ ಮನೆಯಿಂದ ಈಗಾಗಲೇ ಸ್ಪರ್ಧಿಗಳು ಹೊರಬಂದಿದ್ದಾರೆ. ಬಿಗ್‌ಬಾಸ್ ಸ್ಪರ್ಧಿಗಳು ಸದ್ಯಕ್ಕೆ ರೆಸಾರ್ಟ್‌ನಲ್ಲಿದ್ದಾರೆ. ಸದ್ಯ ಎದುರಾಗಿರುವ ಗಂಭೀರ ಸಮಸ್ಯೆಯೊಂದರ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ವೀಕ್ಷರಿಗೆ ಕೆಲವೊಂದು ಮಾಹಿತಿ ನೀಡಿದೆ. ಬಿಗ್ ಬಾಸ್ ಸಂಚಿಕೆಗಳು ಇನ್ನು ಕೇವಲ ಮೂರು ದಿನಗಳ ಕಾಲ ಮಾತ್ರ ಪ್ರಸಾರವಾಗಲಿವೆ. ಅಂದರೆ, ಇವತ್ತು, ನಾಳೆ ಮತ್ತು ನಾಡಿದ್ದು ಪ್ರೇಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಗಳ ಆಟವನ್ನು ನೋಡಬಹುದು. ಆ ನಂತರ ಹೊಸ ಸಂಚಿಕೆಗಳ ಪ್ರಸಾರ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಸದ್ಯಕ್ಕೆ ಬಿಗ್ ಬಾಸ್ ಸ್ಪರ್ಧಿಗಳು ರೆಸಾರ್ಟ್‌ನಲ್ಲಿ ಪ್ರತ್ಯೇಕ ರೂಮ್‌ಗಳಲ್ಲಿ ಇದ್ದಾರೆ. ಬಿಗ್ ಬಾಸ್ ತಂಡವು ಎದುರಾಗಿರುವ ಸಮಸ್ಯೆಯನ್ನು ಬಗೆಹರಿಸುವವರೆಗೂ ಎಲ್ಲಾ ಸ್ಪರ್ಧಿಗಳು ಇದೇ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಒಂದು ವೇಳೆ, ಸಮಸ್ಯೆ ಬಗೆಹರಿಯುವುದು ತಡವಾದರೆ, ಸ್ಪರ್ಧಿಗಳನ್ನು ಅವರವರ ಮನೆಗೆ ಕಳುಹಿಸಿಕೊಡುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಅಲ್ಲಿಯವರೆಗೂ ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಪರ್ಕವಿಲ್ಲದಂತೆ ಸ್ಪರ್ಧಿಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತಂಡವೇ ಹೊತ್ತುಕೊಂಡಿದೆ.

ಬಿಗ್ ಬಾಸ್ ಕಾರ್ಯಕ್ರಮ ಅರ್ಧಕ್ಕೆ ನಿಲ್ಲುವುದು ಇದೇ ಮೊದಲೇನಲ್ಲ. ನಿಮಗೆ ನೆನಪಿರಬಹುದು, ಬಿಗ್ ಬಾಸ್ ಸೀಸನ್ 8 ಕೂಡ ಕರೋನಾ ಮಹಾಮಾರಿಯ ಕಾರಣದಿಂದಾಗಿ 70 ದಿನಗಳ ನಂತರ ಅರ್ಧಕ್ಕೆ ನಿಂತಿತ್ತು. ಆಗಲೂ ಇದೇ ರೀತಿ ಎಲ್ಲಾ ಸ್ಪರ್ಧಿಗಳನ್ನು ಅವರವರ ಮನೆಗಳಿಗೆ ಕಳುಹಿಸಿಕೊಡಲಾಗಿತ್ತು. ಆ ಸಮಯದಲ್ಲಿ ಶೋ ಮುಗಿದೇ ಹೋಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಕೊರೋನಾ ಅಲೆ ಕಡಿಮೆಯಾದ ನಂತರ, ಅದೇ ಸ್ಪರ್ಧಿಗಳನ್ನು ಮತ್ತೆ ಬಿಗ್ ಬಾಸ್ ಮನೆಗೆ ವಾಪಸ್ ಕರೆಸಲಾಗಿತ್ತು. ಸೆಕೆಂಡ್ ಇನ್ನಿಂಗ್ಸ್ ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಪುನರಾರಂಭಿಸಿ, ವಿಜೇತರನ್ನು ಘೋಷಿಸಲಾಗಿತ್ತು.

Sulekha