ಡಿಕೆ ರಣಕೇಕೆ! – ಮೋಸಗಾತಿ.. ಬೆನ್ನಿಗೆ ಚೂರಿ.. ಮೋಡಿಗಾರ – ಹೇಗಿದ್ದ ದಿನೇಶ್ ಹೇಗಾದ್ರು ಗೊತ್ತಾ?

ಡಿಕೆ ರಣಕೇಕೆ! – ಮೋಸಗಾತಿ.. ಬೆನ್ನಿಗೆ ಚೂರಿ.. ಮೋಡಿಗಾರ – ಹೇಗಿದ್ದ ದಿನೇಶ್ ಹೇಗಾದ್ರು ಗೊತ್ತಾ?

ಡಿಕೆ.. ಡಿಕೆ.. ಡಿಕೆ.. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ಒಂದೇ ಗುಣಗಾನವಿತ್ತು.. ಈ ಎರಡಕ್ಷರ ಮಾತ್ರ ಪ್ರೇಕ್ಷಕರ ಬಾಯಿಂದ ಹೊರಬರುತ್ತಿತ್ತು.. ಇಷ್ಟು ದಿನ ಕೊಹ್ಲಿ ಕೊಹ್ಲಿ ಕೊಹ್ಲಿ ಎಂದು ಕೂಗುತ್ತಿದ್ದವರಿಗೆ ಈಗ ಡಿಕೆ ಸೂಪರ್‌ ಹೀರೋ ಆಗಿಬಿಟ್ಟಿದ್ದಾರೆ.. ಎಸ್‌ಆರ್‌ಹೆಚ್‌ ವಿರುದ್ಧದ ಪಂದ್ಯವನ್ನು ಆರ್‌ಸಿಬಿ ಸೋತಿರಬಹುದು.. ಆದರೆ ಆ ಸೋಲನ್ನೂ ಮರೆಸುವಂತೆ ಮಾಡಿದ್ದು ಮಾತ್ರ ಡಿಕೆ.. ನಿವೃತ್ತಿಯ ಅಂಚಿನಲ್ಲಿರುವ ಡಿಕೆ, ಹೈದ್ರಾಬಾದ್‌ ವಿರುದ್ಧ ಬ್ಯಾಟಿಂಗ್‌ ಮೂಲಕ ಅಬ್ಬರಿಸಿದ್ದು ಏನೇನೂ ಅಲ್ಲ.. ಈ ಡಿಕೆ ಇಂತದ್ದೊಂದು ಅದ್ಭುತ ಬ್ಯಾಟಿಂಗ್‌ಗೆ ಕಾರಣವಾಗಿದ್ದು ಜೀವನದಲ್ಲಾದ ಆ ಘಟನೆಗಳು.. ಅದಾದ ನಂತರ ಸಂಪೂರ್ಣ ಕುಗ್ಗಿಹೋಗಿದ್ದ ಡಿಕೆಯನ್ನು ಮೇಲೆತ್ತಿದ್ದು ಆ ಒಬ್ಬ ಮೋಡಿಗಾರ.. ಆ ಟ್ರೈನಿಂಗ್‌ ನಂತರ ಡಿಕೆ ಸಂಪೂರ್ಣ ಟಫ್‌ ಆಗಿದ್ದು ಮಾತ್ರವಲ್ಲ.. ಅವರ ಬ್ಯಾಟಿಂಗ್‌ನಲ್ಲೂ ಆ ರೋಷಾವೇಶ ಕಾಣಿಸೋದಿಕ್ಕೆ ಶುರುವಾಗಿತ್ತು.. ಇಷ್ಟೆಲ್ಲಾ ಆಗ್ಬೇಕು ಅಂದ್ರೆ ಲೀಟರ್‌ಗಟ್ಟಲೆ ಬೆವರು ಹರಿಸಿದ್ದಾರೆ ಡಿಕೆ.

ಇದನ್ನೂ ಓದಿ: MI ಫ್ಯಾನ್ಸ್‌ಗೆ ಕೊಹ್ಲಿ ಪಾಠ! – T20 ವರ್ಲ್ಡ್ ಕಪ್‌ಗೆ DK? – ಇಂತಾ ಬೌಲರ್ಸ್ ಬೇಕಾ?

ಹೈದ್ರಾಬಾದ್‌ ವಿರುದ್ಧ ಗೆಲ್ಲೋದಿಕ್ಕೆ ಸಾಧ್ಯವಾಗ್ತಿತ್ತೋ ಇಲ್ಲವೋ ಗೊತ್ತಿಲ್ಲ.. ಆದ್ರೆ ಗೆಲ್ಲಲು ಟ್ರೈ ಮಾಡಬಹುದು.. ಸ್ವಲ್ಪ ಅದೃಷ್ಟವೂ ಕೈಹಿಡಿದರೆ ಗೆದ್ದೇ ಬಿಡಿಬಹುದು ಎಂಬ ರೀತಿಯಲ್ಲಿ ಬ್ಯಾಟ್‌ ಬೀಸಿದ್ದು ದಿನೇಶ್‌ ಕಾರ್ತಿಕ್‌.. ಒಂದು ವೇಳೆ 14ರಿಂದ 16 ಓವರ್‌ ಮಧ್ಯೆ ಏನಾದ್ರೂ 15 ರನ್‌ ಹೆಚ್ಚುವರಿಯಾಗಿ ಸೇರ್ಪಡೆ ಆಗಿರುತ್ತಿದ್ದರೆ, ಪಂದ್ಯದ ಕತೆ ಬೇರೆ ಇತ್ತು.. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕುಗ್ಗಿ ಹೋಗಿದ್ದ ಪ್ರೇಕ್ಷಕರು ಪುಟಿದು ನಿಲ್ಲುವಂತೆ ಮಾಡಿದ್ದು ಮಾತ್ರ ದಿನೇಶ್‌ ಕಾರ್ತಿಕ್‌.. ಕಾರ್ತಿಕ್‌ ಕೇವಲ 35 ಎಸೆತಗಳಲ್ಲಿ 83 ರನ್‌ ಹೊಡೆದ್ರು.. ಮೈದಾನದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿ, 5 ಬೌಂಡರಿ ಹಾಗೂ 7 ಸಿಕ್ಸರ್‌ ಸಿಡಿಸಿದ್ರು.. ಕಡೆಯ ಓವರ್‌ ವರೆಗೂ ಬ್ಯಾಟ್‌ ಬೀಸಿದ್ದರೆ ಬಹುತೇಕ 10 ಸಿಕ್ಸರ್‌ ಆದ್ರೂ ಸಿಡಿಸುವ ರೀತಿಯಲ್ಲೇ ಸಿಡಿಗುಂಡಿನಂತಿತ್ತು ಡಿಕೆ ಬ್ಯಾಟಿಂಗ್‌.. ಅಷ್ಟೊಂದು ಅದ್ಭುತವಾಗಿ ಬ್ಯಾಟ್‌ ಬೀಸಿದ್ದರು ದಿನೇಶ್‌..

ಇಷ್ಟಕ್ಕೂ ದಿನೇಶ್‌ ಕಾರ್ತಿಕ್‌ ಇಂತದ್ದೊಂದು ಅದ್ಭುತ ಬ್ಯಾಟಿಂಗ್‌ ಮಾಡಿದ್ದು ಇದೇ ಮೊದಲೇನೂ ಅಲ್ಲ.. ದಿನೇಶ್‌ ಕಾರ್ತಿಕ್‌ ಈಗ ಕ್ರಿಕೆಟ್‌ ಜೀವನದ ಅಂತಿಮ ಭಾಗದಲ್ಲಿದ್ದಾರೆ.. ನಿವೃತ್ತಿಯ ಕಡೆಗೆ ಹೆಜ್ಜೆ ಹಾಕುತ್ತಿರುವ ದಿನೇಶ್‌ ಕಾರ್ತಿಕ್‌ ಮೊನ್ನೆ ಮುಂಬೈ ವಿರುದ್ಧ ಕೂಡ ಇದೇ ರೀತಿಯಲ್ಲಿ ಅಬ್ಬರಿಸಿದ್ದರು.. ಇದೇ ಕಾರಣಕ್ಕಾಗಿ ಟೀಂ ಇಂಡಿಯಾದ ಕ್ಯಾಪ್ಟನ್‌ ರೋಹಿತ್‌ ಶರ್ಮಾ.. ಶಹಬ್ಬಾಸ್‌ ಡಿಕೆ.. ವರ್ಲ್ಡ್‌ ಕಪ್‌ ಟೀಂ ಸೇರಲು ಒಳ್ಳೆಯ ಟ್ರೈ ಮಾಡ್ತಿದ್ದೀಯಾ.. ಇವ್ನ ತಲೇಲಿ ಈಗ ಕೇವಲ ವರ್ಲ್ಡ್‌ ಕಪ್‌ ಮಾತ್ರ ಓಡ್ತಿದೆ .. ಎಂದು ಕಾಲೆಳೆದಿದ್ದರು.. ಅಷ್ಟರ ಮಟ್ಟಿಗೆ ಡಿಕೆಯ ಬ್ಯಾಟಿಂಗ್‌ ಟೀಂ ಇಂಡಿಯಾದ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಮೆಚ್ಚುಗೆಗೂ ಪಾತ್ರವಾಗಿತ್ತು.. ಯುವ ಆಟಗಾರರಾಗಿ ರಿಷಬ್‌ ಪಂತ್‌.. ಸಂಜು ಸ್ಯಾಮ್ಸನ್‌ ಅಂತವರ ಜೊತೆಗೆ ಕಾಂಪೀಟ್‌ ಮಾಡುವ ರೀತಿಯಲ್ಲಿ ದಿನೇಶ್‌ ಕಾರ್ತಿಕ್ ಬ್ಯಾಟಿಂಗ್‌ ಮಾಡ್ತಿದ್ದಾರೆ ಎನ್ನುವುದನ್ನು ರೋಹಿತ್‌ ಶರ್ಮಾ ಆ ರೀತಿಯಲ್ಲಿ ಹೇಳಿದ್ದರು.. ತನ್ನ ಬ್ಯಾಟಿಂಗ್‌ ಅನ್ನು ಇಡೀ ಕ್ರಿಕೆಟ್‌ ಜಗತ್ತು ಮೆಚ್ಚುವಂತೆ ಮಾಡಿದ್ದಾರೆ ಈಗ ದಿನೇಶ್‌ ಕಾರ್ತಿಕ್‌.. ಅದರಲ್ಲೂ ಸ್ಪಿನ್ನರ್‌ಗಳಿಗೆ ರಿವರ್ಸ್‌ ಸ್ವೀಪ್‌ನಲ್ಲಿ ಸಿಕ್ಸ್‌ ಹೊಡೆಯೋದು ಕಾಮನ್.. ಆದರೆ ಭುವನೇಶ್ವರ್‌ ಕುಮಾರ್‌ ಅವರಂತಹ ಕರಾರುವಾಕ್ಕ್ ಬೌಲಿಂಗ್‌ನ ವೇಗದ ಬೌಲರ್‌ಗೂ ರಿವರ್ಸ್‌ ಸ್ವೀಪ್‌ನಲ್ಲಿ ಸಿಕ್ಸ್‌ ಬಾರಿಸುತ್ತಾರೆ ಅಂದ್ರೆ ದಿನೇಶ್‌ ಕಾರ್ತಿಕ್‌ ಮಾಡುತ್ತಿರುವ ನೆಟ್‌ ಪ್ರಾಕ್ಟೀಸ್‌.. ಪಂದ್ಯದಿಂದ ಪಂದ್ಯಕ್ಕೆ ತನ್ನನ್ನು ಇಂಪ್ರೂವ್‌ ಮಾಡಿಕೊಳ್ಳಲು ಹಾಕುತ್ತಿರುವ ಶ್ರಮ ಎಂತದ್ದು ಎನ್ನುವುದು ಅರ್ಥವಾಗಿಬಿಡುತ್ತದೆ.. ತಂಡದ ಕೋಚ್‌ ಆಗಿರುವ ರಿವರ್ಸ್‌ ಸ್ವೀಪ್‌ ಸ್ಪೆಷಲಿಸ್ಟ್‌ ಆ್ಯಂಡಿ ಫ್ಲವರ್‌ ಅವರನ್ನೂ ಮೀರಿಸುವಂತೆ ದಿನೇಶ್‌ ಕಾರ್ತಿಕ್‌ ಆರ್‌ಸಿಬಿ ಪರವಾಗಿ ಬ್ಯಾಟಿಂಗ್‌ ಮಾಡಿದ್ದಾರೆ..

ಇದೇ ದಿನೇಶ್‌ ಕಾರ್ತಿಕ್‌ ಈ ಬಾರಿಯ ಐಪಿಎಲ್‌ಗೆ ಎಂಟ್ರಿ ಕೊಟ್ಟಾಗ ಅಷ್ಟೇನೂ ಅದ್ಭುತ ಫಾರ್ಮ್‌ನಲ್ಲಿರಲಿಲ್ಲ.. ಆಲ್‌ರೆಡಿ ಕ್ರಿಕೆಟ್‌ ಕಾಮೆಂಟ್ರಿ ಹೇಳಲು ಶುರುಮಾಡಿರುವ ಡಿಕೆಯನ್ನು ನಿನಗೇ ಅದೇ ಬೆಸ್ಟ್‌.. ಆಡೋದು ಬಿಟ್ಟು ಕಾಮೆಂಟ್ರಿ ಮಾಡ್ತಾ ಇರು ಎಂದು ಲೇವಡಿ ಮಾಡಿದವರೂ ಇದ್ದರು.. ಆದ್ರೆ ಡಿಕೆ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ.. ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ತಂಡ ಬಳಸಿಕೊಂಡಾಗಲೂ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು.. ತಾನಿರುವುದು ಕೇವಲ ಸಿಕ್ಸ್‌ ಫೋರ್‌ಗಳ ಮೂಲಕ ಅಬ್ಬರಿಸೋದಿಕ್ಕೆ ಎನ್ನುವುದನ್ನು ಅರ್ಥ ಮಾಡಿಕೊಂಡರು.. ಅದೇ ಮೈಂಡ್‌ ಸೆಟ್‌ನಲ್ಲಿ ಬ್ಯಾಟಿಂಗ್‌ ಮಾಡ್ತಿದ್ದಾರೆ ಡಿಕೆ. ಆದ್ರೆ ಇಂತದ್ದೊಂದು ಮೈಂಡ್‌ ಸೆಟ್‌ ಡಿಕೆಗೆ ಬರೋದಿಕ್ಕೆ ಕಾರಣ ಅವರ ಜೀವದ ಗೆಳೆಯ ಹಾಗೂ ಜೀವವನ್ನೇ ಹಿಂಡಿದ ಮೋಸಗಾರ..

ದಿನೇಶ್‌ ಕಾರ್ತಿಕ್‌ ಭಾರತ ಕಂಡಿರುವ ಒಬ್ಬ ಒಳ್ಳೆಯ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.. ಆದ್ರೆ ಎಂ.ಎಸ್‌.ಧೋನಿ ಯುಗದಲ್ಲಿ ವಿಕೆಟ್‌ ಕೀಪರ್‌ ಆಗಿದ್ದರಿಂದಾಗಿ ಟೀಂ ಇಂಡಿಯಾದಲ್ಲಿ ಶಾಶ್ವತ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ ಅನ್ನೋದು ಬೇರೆ ಮಾತು.. ಹಾಗಿದ್ದರೂ ಟೀಂ ಇಂಡಿಯಾ ಪರ ಧೋನಿಗಿಂತಲೂ ಮುಂಚಿತವಾಗಿಯೇ ಡೆಬ್ಯು ಮಾಡಿದ್ದರು.. ಜೊತೆಗೆ ಧೋನಿ ತಂಡದಲ್ಲಿರುವಾಗಲೂ 26 ಟೆಸ್ಟ್‌, 94 ಒಂಡೇ ಹಾಗೂ 60 ಟಿ20 ಇಂಟರ್‌ ನ್ಯಾಷನಲ್‌ ಮ್ಯಾಚ್‌ಗಳನ್ನು ಆಡಿದ್ದಾರೆ ದಿನೇಶ್ ಕಾರ್ತಿಕ್‌..

ಇಷ್ಟೆಲ್ಲಾ ಟ್ಯಾಲೆಂಟ್‌ ಇದ್ದ ಮತ್ತು ಒಳ್ಳೆಯ ಮಾತುಗಾರ ಕೂಡ ಆಗಿರುವ ದಿನೇಶ್‌ 2007ರಲ್ಲಿ ನಿಕಿತಾ ವಂಜಾರಾ ಅವರನ್ನು ಮದುವೆಯಾಗಿದ್ದರು.. ಆದರೆ ದಿನೇಶ್ ಕಾರ್ತಿಕ್‌ ಭಾರತದ ಪರವಾಗಿ ಆಡಲು ವಿದೇಶಕ್ಕೆ ಹೋಗಿದ್ದಾಗ ದಿನೇಶ್‌ ಪತ್ನಿ ನಿಕಿತಾ, ಗಂಡನಿಗೆ ಮೋಸ ಮಾಡಿ, ಡಿಕೆ ಗೆಳೆಯ ಮುರಳಿ ವಿಜಯ್‌ ಜೊತೆ ಡೇಟಿಂಗ್‌ ಶುರುಮಾಡಿದ್ದರು.. ಇದು ಗೊತ್ತಾದ ನಂತರ ದಿನೇಶ್‌ಗೆ ಎದೆಯೇ ಒಡೆದು ಹೋಗಿತ್ತು.. ಹೆಂಡತಿಗೆ ಡಿವೋರ್ಸ್‌ ಏನೋ ಕೊಟ್ಟಿದ್ದರು.. ಆದರೆ ಕ್ರಿಕೆಟ್‌ ಫೀಲ್ಡ್‌ನಲ್ಲಿ ಈ ವಿಚಾರ ಎಲ್ಲಾ ಕಡೆಯೂ ಹರಿದಾಡಿದಾಗ ಅದನ್ನು ಎದುರಿಸುವ ಕಷ್ಟ ಇತ್ತಲ್ಲ. ಅದು ದಿನೇಶ್‌ ಕಾರ್ತಿಕ್‌ ಅವರನ್ನು ಬಹುವಾಗಿ ಕಾಡಿದ್ದು.. ಇದರ ನೇರ ಹೊಡೆತ ಅವರ ಕ್ರಿಕೆಟ್‌ ಮೇಲೂ ಬಿತ್ತು.. ಬ್ಯಾಟಿಂಗ್‌ನ ಸರಾಸರಿ ಕುಸಿತವಾಯಿತು.. ಫಾರ್ಮ್‌ ಕಳೆದುಕೊಂಡರು.. ಮತ್ತೊಂದು ಕಡೆ ಮುರಳಿ ವಿಜಯ್‌ ಟೀಂ ಇಂಡಿಯಾ ಪರ ಹಾಗೂ ಸಿಎಸ್‌ಕೆ ಪರವಾಗಿ ಐಪಿಎಲ್‌ನಲ್ಲಿ ಮಿಂಚುತ್ತಿದ್ದರು.. ಇಂತ ಸಂದರ್ಭದಲ್ಲೇ ದಿನೇಶ್‌ ಕಾರ್ತಿಕ್‌ ಜೀವನದಲ್ಲಿ ಇಬ್ಬರು ಎಂಟ್ರಿ ಕೊಟ್ಟರು.. ಅವರಿಬ್ಬರ ಎಂಟ್ರಿಯ ನಂತರ ದಿನೇಶ್ ಬದುಕೇ ಬದಲಾಯ್ತು.. ಆಟದಲ್ಲೂ ಬದಲಾಯ್ತು.. ಬ್ಯಾಟಿಂಗ್‌ನಲ್ಲಿ ಅಬ್ಬರ ಶುರುವಾಯ್ತು.. ಹಾಗೆ ಎಂಟ್ರಿ ಕೊಟ್ಟವರಲ್ಲಿ ಒಬ್ಬರು ದೀಪಿಕಾ ಪಲ್ಲಿಕಲ್‌.. ಭಾರತದ ಸ್ಕ್ಯಾಷ್‌ ಆಟಗಾರ್ತಿ..  2015ರಲ್ಲಿ ಈ ಪ್ರೇಮಿಗಳು ವಿವಾಹದ ಜೀವನಕ್ಕೆ ಕಾಲಿಟ್ಟರು.. ಇದೇ ಸಂದರ್ಭದಲ್ಲೇ 2012-13ರ ವರ್ಷದಲ್ಲಿ ಮುಂಬೈ ಇಂಡಿಯನ್ಸ್‌ ಪರ ಐಪಿಎಲ್‌ನಲ್ಲಿ ಆಡಿದ್ದರು ದಿನೇಶ್‌.. ಆಗ ಅಲ್ಲಿ ಸಿಕ್ಕ ಸ್ನೇಹಿತ ಅಂದ್ರೆ ಅಭಿಷೇಕ್‌ ನಾಯರ್‌.. ಡಿಕೆಯ ಬ್ಯಾಟಿಂಗ್‌ ಮತ್ತು ಆಟದ ಸ್ವರೂಪವನ್ನು ಬದಲಾಯಿಸಿದ್ದು ಇದೇ ಅಭಿಷೇಕ್‌ ನಾಯರ್‌.. ಜೀವನದಲ್ಲಿ ನೊಂದಿದ್ದ ಡಿಕೆಯನ್ನು ಆ ದುಃಖದಿಂದ ಮೇಲೆತ್ತಿದ್ದರು.. ದಿನೇಶ್‌ ಇದ್ದ ಸುಖದ ಸುಪ್ಪತ್ತಿಗೆಯಿಂದ ಹೊರತಂದರು.. ಮುಂಬೈನಲ್ಲಿ ಕಠಿಣ ಕೋಚಿಂಗ್‌ ಕೊಟ್ಟರು.. ಪುಟ್ಟದೊಂದು ಕೋಣೆಯಲ್ಲಿ ದಿನೇಶ್‌ ವಾಸಿಸುವಂತೆ ಮಾಡಿದ್ದರು.. ಜೀವನದ ಅತ್ಯಂತ ಕಠಿಣ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂದು ನಿರೂಪಿಸಿದರು.. ಆ ರೀತಿಯ ಕಠಿಣ ಟಾಸ್ಕ್‌ ಸ್ವೀಕರಿಸಿದ ದಿನೇಶ್‌ ಮತ್ತೆ ಕ್ರಿಕೆಟ್‌ನಲ್ಲಿ ಮೇಲೆ ಬರಲು ಲೀಟರ್‌ಗಟ್ಟಲೆ ಬೆವರು ಹರಿಸಿದ್ರು.. ಅದರ ಪರಿಣಾಮವಾಗಿಯೇ ಈಗ ನಿವೃತ್ತಿಯ ಅಂಚಿನಲ್ಲಿದ್ದರೂ ದಿನೇಶ್‌ ಕಾರ್ತಿಕ್‌ ಅವರ ಬ್ಯಾಟಿಂಗ್‌ನಲ್ಲಿ ಹೊಳಪು ಮರೆಯಾಗಿಲ್ಲ.. ಆಟದ ವೈಖರಿ ಮತ್ತಷ್ಟು ಅಗ್ರೆಸ್ಸಿವ್‌ ಆಗಿದೆ.. ವಿಕೆಟ್‌ ಹಿಂದೆಯೂ ಅಷ್ಟೇ ಚುರುಕಿನಿಂದ ಕೀಪಿಂಗ್‌ ಮಾಡ್ತಿದ್ದಾರೆ ದಿನೇಶ್‌.

Sulekha