ನೀವು ಮೊಬೈಲ್ ಅನ್ನು ಜೇಬಿನಲ್ಲಿ ಇಟ್ಕೊಳ್ತೀರಾ? ಹಾಗಾದ್ರೆ ಅಪಾಯ ಗ್ಯಾರಂಟಿ!
ಈಗಿನ ಕಾಲದಲ್ಲಿ ಕೈಯಲ್ಲಿ ಫೋನ್ ಇಲ್ಲಂದ್ರೆ ಯಾವುದೇ ಕೆಲಸ ನಡೆಯುವುದಿಲ್ಲ. ಫೋನ್ ಬಳಸೋದ್ರಿಂದ ಎಷ್ಟು ಪ್ರಯೋಜನ ಇದ್ಯೋ ಅಷ್ಟೇ ಅಡ್ಡ ಪರಿಣಾಮಗಳೂ ಇವೆ. ಅನೇಕರು ಫೋನ್ ನ ಜೇಬಲ್ಲಿ ಇಟ್ಕೊಳ್ತಾರೆ. ಇದು ತುಂಬಾ ಡೇಂಜರ್.
ಜೇಬಿನಲ್ಲಿ ವೈರ್ ಲೆಸ್ ನೆಟ್ವರ್ಕ್ಗೆ ಸಂಪರ್ಕ ಹೊಂದಿದ ಫೋನ್ನ್ನು ಇಟ್ಕೊಂಡ್ರೆ ದೇಹವು 2 ರಿಂದ 7 ಪಟ್ಟು ವಿಕಿರಣಗಳನ್ನು ಹೊರಬೇಕಾಗುತ್ತದೆ. ಈ ವಿಕಿರಣಗಳು ಮಾನವನ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಅಂಶವಾಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಫೋನ್ ನ ವಿಕಿರಣಗಳಿಂದ ಕೂಡಾ ಕ್ಯಾನ್ಸರ್ ಬರೋ ಸಾಧ್ಯತೆ ಇದೆ ಅಂತಾ ಗೊತ್ತಾಗಿದೆ. ಈ ವಿಕಿರಣಗಳು ನಿಮ್ಮ ಡಿ.ಎನ್.ಎ ರಚನೆಯನ್ನು ಸಹ ಬದಲಾಯಿಸಬಹುದು. ಈ ಕಾರಣದಿಂದ ಆರೋಗ್ಯಕ್ಕೆ ಹಲವು ಅಪಾಯಗಳು ಉಂಟಾಗಬಹುದು.
ಇದನ್ನೂ ಓದಿ: ಮೊಬೈಲ್ ಕವರ್ ನಲ್ಲಿ ನೋಟು ಇಡುತ್ತೀರಾ? – ಸಣ್ಣ ತಪ್ಪಿನಿಂದ ಜೀವಕ್ಕೆ ಅಪಾಯ!
ಶರ್ಟ್ ಜೇಬಿನಲ್ಲಿ ಸ್ಮಾರ್ಟ್ ಫೋನ್ ಇಟ್ಟರೆ ಅದು ಹೃದಯ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡಬಹುದು.ಇಷ್ಟೇ ಅಲ್ದೇ ಮೂಳೆ ವಿಶೇಷವಾಗಿ ಸೊಂಟದ ಮೂಳೆಯನ್ನು ದುರ್ಬಲವಾಗಬಹುದು. ಪ್ಯಾಂಟ್ ಜೇಬಿನಲ್ಲಿ ಸ್ಮಾರ್ಟ್ ಫೋನ್ ಇಟ್ಟುಕೊಳ್ಳುವುದರಿಂದ ನಿಮಗೆ ಸಯಾಟಿಕಾ ನರನೋವಿನ ಸಮಸ್ಯೆ ಉಂಟಾಗಬಹುದು. ಇದು ಸೊಂಟದ ಕೆಳಭಾಗದಿಂದ ಸೊಂಟ ಮತ್ತು ಕಾಲಿನ ನೋವು ಉಂಟು ಮಾಡಬಹುದು. ಇದರಿಂದಾಗಿ ನೀವು ಕುಳಿತುಕೊಳ್ಳುವಲ್ಲಿ ಅಥವಾ ನಡೆಯುವಲ್ಲಿ ತುಂಬಾ ನೋವನ್ನು ಕಾಣಿಸಿಕೊಳ್ಳೋ ಸಾಧ್ಯತೆ ಇರುತ್ತೆ.