ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುತ್ತೀರಾ? – ವಾಟರ್ ಬಾಟಲ್, ಕಾಫಿ, ಟೀ ಗ್ಲಾಸ್ ನಿಂದಲೂ ಬರುತ್ತೆ ಕ್ಯಾನ್ಸರ್! 

ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುತ್ತೀರಾ? – ವಾಟರ್ ಬಾಟಲ್, ಕಾಫಿ, ಟೀ ಗ್ಲಾಸ್ ನಿಂದಲೂ ಬರುತ್ತೆ ಕ್ಯಾನ್ಸರ್! 

ನೀವೇನಾದ್ರೂ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುತ್ತೀರಾ? ಪ್ಲಾಸ್ಟಿಕ್ ಲೋಟದಲ್ಲೇ ಕಾಫಿ, ಟೀ ಹೀರುತ್ತೀರಾ? ಹಾಗಾದ್ರೆ ಈಗಲೇ ಎಚ್ಚೆತ್ತುಕೊಳ್ಳಿ. ಇಲ್ಲದಿದ್ದರೆ ಮುಂದೆ ದೊಡ್ಡ ಅಪಾಯವನ್ನು ಎದುರಿಸಬೇಕಾಗುತ್ತದೆ. ಸಾವಿನ ಆಪತ್ತು ಎದುರಾಗುತ್ತದೆ.

ಇದನ್ನೂ ಓದಿ : ನಿದ್ದೆಯಲ್ಲೇ ಕಳೆದುಹೋಗುವ ಮುನ್ನ ಎಚ್ಚರ! – ಅತಿಯಾಗಿ ನಿದ್ರೆ ಮಾಡಿದ್ರೆ ಆರೋಗ್ಯಕ್ಕೇ ಕುತ್ತು!

35 ವರ್ಷದ ವ್ಯಕ್ತಿಯೊಬ್ಬರು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರು. ಅವ್ರಿಗೆ ಯಾವುದೇ ದುಶ್ಚಟಗಳು, ಕಾಯಿಲೆಗಳು, ಇರಲಿಲ್ಲ. ಸುಖ ಸಂಸಾರ ನಡೆಸುತ್ತಾ ಆರೋಗ್ಯವಾಗಿಯೇ ಇದ್ರು. ಆದ್ರೆ ಆಸ್ಪತ್ರೆಗೆ ಅವ್ರ ದೇಹದಾನ ಮಾಡಿದ ಬಳಿಕ ಸಂಶೋಧನೆಯಿಂದ ಆಘಾತಕಾರಿ ಸತ್ಯ ಹೊರಬಿದ್ದಿದೆ. ಪ್ಲಾಸ್ಟಿಕ್ ಬಾಟಲಿಯ ನೀರು ಕುಡಿದ ಪರಿಣಾಮವಾಗಿ ಬಿಡುಗಡೆಯಾಗುವ ರಾಸಾಯನಿಕಗಳಿಂದ ಕ್ಯಾನ್ಸರ್ ಬಂದಿರುವುದು ಗೊತ್ತಾಗಿದೆ. ಬಳಿಕ ವೈದ್ಯರು ಮೃತನ ಕುಟುಂಬಸ್ಥರು ಮತ್ತು ಸಹೋದ್ಯೋಗಿಗಳನ್ನು ಸಂಪರ್ಕಿಸಿದ್ದಾರೆ. ಅವರ ಆಹಾರ ಪದ್ಧತಿಯ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಮೃತ ವ್ಯಕ್ತಿ ದಿನಕ್ಕೆ ಐದರಿಂದ ಆರು ಬಾರಿ ಪ್ಲಾಸ್ಟಿಕ್ ಕಪ್ಪುಗಳಲ್ಲಿ ಟೀ ಕುಡೀತಿದ್ರು ಅನ್ನೋದು ಗೊತ್ತಾಗಿದೆ. ಕೊನೆಗೆ ಪ್ಲಾಸ್ಟಿಕ್ ಲೋಟ, ವಾಟರ್ ಬಾಟಲಿಯಿಂದಲೇ ಕ್ಯಾನ್ಸರ್ ಬಂದಿರೋದು ಪತ್ತೆಯಾಗಿದೆ. ಅಲ್ಲದೆ ಆರ್ಡರ್ ಮಾಡುವ ಊಟ ಕೂಡ ಕೆಲವೊಮ್ಮೆ ಪ್ಲಾಸ್ಟಿಕ್ ಕವರ್​ಗಳಲ್ಲೇ ಕೊಡ್ತಾರೆ.  ಇದ್ರಿಂದ ಕ್ಯಾನ್ಸರ್ ಸೂಕ್ಷ್ಮಾಣುಗಳು ದೇಹ ಪ್ರವೇಶಿಸಲು ಕಾರಣವಾಗುತ್ತೆ ಅಂತಾ ವೈದ್ಯರು ಹೇಳಿದ್ದಾರೆ. ಹೀಗಾಗಿ ನೀವೂ ಎಚ್ಚೆತ್ತುಕೊಳ್ಳಿ.

Shantha Kumari