ಕಾಟನ್ ಸ್ಟಿಕ್ ಬಳಸಿ ಕಿವಿಯನ್ನು ಸ್ವಚ್ಛ ಮಾಡ್ತೀರಾ – ಈ ಸ್ಪೋರಿಯನ್ನ ತಪ್ಪದೇ ಓದಿ

ಕಾಟನ್ ಸ್ಟಿಕ್ ಬಳಸಿ ಕಿವಿಯನ್ನು ಸ್ವಚ್ಛ ಮಾಡ್ತೀರಾ – ಈ ಸ್ಪೋರಿಯನ್ನ ತಪ್ಪದೇ ಓದಿ

ದೇಹದ ಪ್ರತಿಯೊಂದು ಭಾಗವನ್ನು ಸ್ವಚ್ಛಗೊಳಿಸುವುದು ಎಲ್ಲರ ಇಚ್ಛೆ ಆಗಿರುತ್ತೆ. ಹಾಗೆ ಕಿವಿಗಳನ್ನು ಕೂಡ ನೀವು ಆಗಾಗ ಸ್ವಚ್ಛ ಮಾಡುತ್ತಲೇ ಇರುತ್ತೀರಿ. ಬಹುತೇಕರು ಕಾಟನ್ ಸ್ಟಿಕ್ ಬಳಸಿ ಕಿವಿಯನ್ನು ಸ್ವಚ್ಛ ಮಾಡೋದು ನೋಡಬಹುದು. ಆದ್ರೆ ಬಹುತೇಕರಿಗೆ ಕಿವಿ ಸ್ವಚ್ಛ ಮಾಡುವ ಒಂದು ಹವ್ಯಾಸ ಬರುಬರುತ್ತಾ ಗೀಳಾಗಿ ಪರಿಣಮಿಸಿದೆ.   ಕಿವಿಯನ್ನು ಪದೇ ಪದೇ ಕಾಟಲ್ ಸ್ಟಿಕ್ ಬಳಸಿ ಸ್ವಚ್ಛ ಮಾಡುವುದು, ದಿನದಲ್ಲಿ ಒಂದು ಬಾರಿಯಾದರು ಕಾಟನ್ ಸ್ಟಿಕ್ ಅನ್ನು ಅವು ಕಿರಿಯಲ್ಲಿ ಹಾಕಿ ತೆಗೆಯದಿದ್ದರೆ ಸಮಾಧಾನ ಇರುವುದಿಲ್ಲ. ಹಾಗೆ ಈ ರೀತಿ ಮಾಡುವುದು ಹಲವರಿಗೆ ಇದೊಂದು ದೊಡ್ಡ ಸಮಸ್ಯೆಯನ್ನು ಸಹ ತರಬಹುದು. ಹಾಗಾದ್ರೆ ಕಿವಿಗೆ ಈ ಕಾಟನ್ ಸ್ಟಿಕ್ ಹಾಕಿಕೊಳ್ಳುವುದರಿಂದಾಗುವ ಸಮಸ್ಯೆಗಳೇನು ಎಂಬುದು ನಿಮಗೆ ಗೊತ್ತಿದ್ಯಾ?  

ಕಿವಿ ಸ್ವಚ್ಛಗೊಳಿಸಲು ಹಲವು ರೀತಿಯ ಮಾರ್ಗಗಳಿದ್ದರೂ ಈ ಕಾಟನ್ ಸ್ಟಿಕ್ ಬಳಸುವುದು ಕಾಮನ್ ಆಗಿದೆ. ದಿನಕ್ಕೊಂದು ಸ್ಟಿಕ್ ಅನ್ನು ಕಿವಿಗೆ ಹಾಕಿಕೊಳ್ಳುವುದು ನೋಡಬಹುದು. ಇದರಿಂದ ಕಿವಿಯೊಳಗಿನ ಕಲ್ಮಶ ಹೊರಬರಲಿದೆ ಎಂದು ಭಾವಿಸಲಾಗಿದೆ. ಆದ್ರೆ ಇದು ಅರ್ಧ ಸತ್ಯ ಎಂಬ ವಿಚಾರ ನಿಮಗೆ ಗೊತ್ತಾ? ನೀವು ಕಿವಿಗೆ ಈ ಕಾಟನ್ ಸ್ಟಿಕ್ ಹಾಕುವುದರಿಂದ ಕಿವಿ ಸ್ಚಚ್ಛ ಆಗುವ ಸಾಧ್ಯತೆ ಬಹಳ ಕಡಿಮೆಯಾಗಿರಲಿದೆ. ಏಕೆಂದರೆ ಕಾಟನ್ ಸ್ಟಿಕ್ ಕಿವಿಗೆ ಹಾಕಿದಾಗ ಕಿವಿಯಲ್ಲಿ ಮೇಣದಂತಹ ಕಲುಶಿತ ವಸ್ತು ಮುಂದೆ ದೂಡಲ್ಪಡುತ್ತದೆ. ಆದ್ರೆ ಕೆಲವೊಮ್ಮೆ ಕಾಟನ್‌ಗೆ ಅಂಟಿಕೊಂಡು ಹೊರಬರುತ್ತದೆ. ಆದ್ರೆ ಬಹುತೇಕ ಸಮಯ ಮುಂದೆ ದೂಡಲ್ಪಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಈ ಕಾಟನ್ ಸ್ಟಿಕ್ ಡಬ್ಬಿಯ ಮೇಲೆಯೇ ಅದರ ಬಳಕೆ ಕುರಿತಾಗಿ ಬರೆಯಲಾಗಿರುತ್ತದೆ. ಇದನ್ನು ಕಿವಿಯ ಒಳಗೆ ಹಾಕಬೇಡಿ ಎಂದೇ ಬರೆಯಲಾಗಿರುತ್ತದೆ. ಆದ್ರೆ ಖರೀದಿಸುವ ಮಂದಿ ಇದನ್ನು ಕಿವಿ ಸ್ವಚ್ಛಗೊಳಿಸುವ ವಸ್ತು ಎಂದೇ ಭಾವಿಸುತ್ತಾರೆ. ಹೀಗೆ ಕಾಟನ್ ಸ್ಟಿಕ್ ಅನ್ನು ಕಿವಿಗೆ ಹಾಕುವುದರಿಂದ ಅದು ನಿಮ್ಮ ಕಿವಿಯ ಕಾಲುವೆಯನ್ನು ಬಂದ್ ಮಾಡುವ ಸಾಧ್ಯತೆ ಹೆಚ್ಚಾಗಿರಲಿದೆಯಂತೆ, ಕಿವಿಯಲ್ಲಿನ ಕಲ್ಮಶವು ಈ ಕಾಲುವೆಯನ್ನು ಬಂದ್ ಮಾಡಬಹುದು. ಇದರಿಂದ ಹೆಚ್ಚಿನ ಜನರಿಗೆ ಸಮಸ್ಯೆಗಳಾಗಬಹುದು ಎಂದು ವೈದ್ಯರು ಹೇಳುತ್ತಾರೆ.

Kishor KV