ನೀವು ಮಕ್ಕಳಿಗೆ ಕಾಜಲ್ ಹಚ್ಚುತ್ತೀರಾ?  ಮಗುವಿನ ಕಣ್ಣುಗಳಿಗೆ ಕಾಡಿಗೆ ಹಚ್ಚುವ ಮುನ್ನ ಈ ವಿಚಾರ ತಿಳಿದುಕೊಳ್ಳಿ!

ನೀವು ಮಕ್ಕಳಿಗೆ ಕಾಜಲ್ ಹಚ್ಚುತ್ತೀರಾ?  ಮಗುವಿನ ಕಣ್ಣುಗಳಿಗೆ ಕಾಡಿಗೆ ಹಚ್ಚುವ ಮುನ್ನ ಈ ವಿಚಾರ ತಿಳಿದುಕೊಳ್ಳಿ!

ನಮ್ಮ ಅಜ್ಜಿಯಂದಿರ ಕಾಲದಿಂದಲೂ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುವ ಅಭ್ಯಾಸ ರೂಢಿಯಲ್ಲಿದೆ. ಆದರೆ ಸಮಯ ಕಳೆದಂತೆ, ಅದನ್ನು ಹಚ್ಚುವ ವಿಧಾನ, ಬ್ರಾಂಡ್ ಜೊತೆಗೆ ಹೆಸರೂ ಕೂಡ ಬದಲಾಗಿದೆ. ಆದ್ರೆ ಇಂದಿಗೂ ಬದಲಾಗದೇ ಇರುವಂತದ್ದು ಅಂದ್ರೆ, ಆ ಮಕ್ಕಳ ಕಣ್ಣಗೆ ಕಾಜಲ್ ಹಚ್ಚುವ ಪದ್ಧತಿ. ಅದ್ರೆ ಮಕ್ಕಳ ಕಣ್ಣಿಗೆ ಕಾಜಲ್ ಹಚ್ಚಬಾರದು ಅಂತಾ ತಜ್ಞರು ಹೇಳ್ತಾರೆ.

ಕಣ್ಣಿಗೆ ಹಚ್ಚುವ ಕಾಜಲ್ ತಯಾರಿಸಲು 50 % ನಷ್ಟು ಹೆಚ್ಚಿನ ಸೀಸವನ್ನು ಬಳಸಲಾಗುತ್ತದೆ. ಮಗುವಿನ ದೇಹವು ಇನ್ನೂ ಅಭಿವೃದ್ಧಿ ಹೊಂದುತ್ತಿರುವುದರಿಂದ, ಸೀಸ ಬಳಸಿ ಮಾಡಿರುವ ಕಾಜಲ್ ಹಚ್ಚುವುದರಿಂದ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೂತ್ರಪಿಂಡ, ಮೆದುಳು, ಮೂಳೆ ಮತ್ತು ದೇಹದ ಇತರ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ರಕ್ತದಲ್ಲಿ ಸೀಸದ ಮಟ್ಟ ಏರಿಕೆಯಾದರೆ, ಮೂರ್ಛೆ ರೋಗ, ಕೋಮಾ ಸ್ಥಿತಿಗೆ ಹೋಗುವುದಲ್ಲದೇ, ಇದ್ರಿಂದ ಸಾವನ್ನಪ್ಪುವ್ ಸಾಧ್ಯತೆ ಕೂಡ ಇರುತ್ತೆ.

ಇದನ್ನೂ ಓದಿ: ನಿಮ್ಮ ಮಕ್ಕಳು “W” ಭಂಗಿಯಲ್ಲಿ ಕುಳಿತುಕೊಳ್ತಾರಾ? – ಪೋಷಕರು ತಿಳಿದುಕೊಳ್ಳಲೇ ಬೇಕಾದ ವಿಚಾರ ಇದು!

ಇನ್ನು ಮನೆಯಲ್ಲಿ ತಯಾರಿಸಿದ ಕಾಜಲ್ ಸುರಕ್ಷಿತವೇ ಅಂತಾ ಅನೇಕರು ಕೇಳ್ತಾರೆ. ಮನೆಯಲ್ಲಿ ತಯಾರಿಸಿದ ಕಾಜಲ್ ನೈಸರ್ಗಿಕವಾಗಿದೆ. ಅದರಿಂದ ಮಕ್ಕಳ ಕಣ್ಣಿಗೆ ಹಚ್ಚಲು ಮನೆಯಲ್ಲಿ ತಯಾರಿಸಿದ ಕಾಜಲ್ ಅನ್ನು ಬಳಸುವುದು ಸುರಕ್ಷಿತವಾಗಿದೆ ಎಂದು ಹೇಳಲಾಗುತ್ತದೆ. ಆದರೆ ವೈದ್ಯರ ಅಭಿಪ್ರಾಯದ ಪ್ರಕಾರ, ಇದು ಕೂಡ ಸರಿಯಲ್ಲ. ಸಾಮಾನ್ಯವಾಗಿ, ಮಗುವಿನ ಕಣ್ಣುಗಳಿಗೆ ಬೆರಳಿನಿಂದ ಕಾಜಲ್ ನ್ನು ಹಚ್ಚಲಾಗುತ್ತದೆ. ಈ ಕಾರಣದಿಂದಾಗಿ, ಮಗುವಿನ ಕಣ್ಣುಗಳಿಗೆ ಸೋಂಕು ಬರಬಹುದು ಎಂದು ಹೇಳುತ್ತಾರೆ.

Shwetha M