ಶೀಘ್ರದಲ್ಲೇ ಕುಲದೀಪ್‌ ಮದ್ವೆ!! – ಬಾಲಿವುಡ್‌ ನಟಿ ಕೈ ಹಿಡಿತಾರಾ ಕ್ರಿಕೆಟರ್?
ಲವ್‌ ಸೀಕ್ರೆಟ್ ಬಿಚ್ಚಿಟ್ಟ ‌ಸ್ಪಿನ್ನರ್!

ಶೀಘ್ರದಲ್ಲೇ ಕುಲದೀಪ್‌ ಮದ್ವೆ!! – ಬಾಲಿವುಡ್‌ ನಟಿ ಕೈ ಹಿಡಿತಾರಾ ಕ್ರಿಕೆಟರ್?ಲವ್‌ ಸೀಕ್ರೆಟ್ ಬಿಚ್ಚಿಟ್ಟ ‌ಸ್ಪಿನ್ನರ್!

ಕುಲದೀಪ್ ಯಾದವ್.. ಟೀಂ ಇಂಡಿಯಾದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್..  ಈ ಬಾರಿಯ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಒಳ್ಳೆ ಪ್ರದರ್ಶನ ನೀಡಿದ್ರು.. ಕಪ್‌ ಗೆಲ್ಲಿಸಿಕೊಡುವಲ್ಲಿ ಕುಲದೀಪ್‌ ಕೂಡ ಪ್ರಮುಖ ಪಾತ್ರ ವಹಿಸಿದ್ರು.. ಇದೀಗ ಕುಲದೀಪ್‌ ಮದುವೆ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ.. ಬಾಲಿವುಡ್‌ ಬೆಡಗಿಯನ್ನ ಮದುವೆ ಆಗಲಿದ್ದಾರೆ ಅನ್ನೋ ಸಮಾಚಾರ ಬಿಟೌನ್‌ನಲ್ಲಿ ಭಾರಿ ಸದ್ದು ಮಾಡ್ತಾ ಇದೆ. ಇದೀಗ ತನ್ನ ಮದುವೆ, ಮನದರಸಿ ಬಗ್ಗೆ ಕುಲದೀಪ್‌ ಮಾತನಾಡಿದ್ದಾರೆ.

ಇದನ್ನೂ ಓದಿ: ಮದುವೆಗೆ ಸಜ್ಜಾದ ಸ್ಮೃತಿ ಮಂದಾನ – RCB ಕ್ವೀನ್ ಮನಗೆದ್ದ ಮುಚ್ಚಲ್

ಟೀಂ ಇಂಡಿಯಾ ಕ್ರಿಕೆಟರ್ಸ್‌ ಮಾಡೆಲ್‌, ಸಿನಿಮಾ ನಟಿಯರನ್ನ ಮದುವೆ ಆಗೋದು ಹೊಸದೇನು ಅಲ್ಲ.. ಈಗಾಗಲೇ ಅನೇಕರು ಪ್ರೀತಿ ಮಾಡಿ, ಮದುವೆ ಆಗಿರೋ ವಿಚಾರ ನಿಮ್ಗೆಲ್ಲಾ ಗೊತ್ತೇ ಇದೆ. ಬಾಲಿವುಡ್‌ ನಟಿಯರ ಜೊತೆ ಪ್ರೀತಿ, ಡೀಟಿಂಗ್‌ ಗಾಸಿಪ್‌ಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಇದೀಗ ಟೀಂ ಇಂಡಿಯಾ ಬೌಲರ್‌ ಕುಲದೀಪ್‌ ಯಾದವ್‌ ಮದುವೆ ಆಗಲಿದ್ದಾರೆ ಅನ್ನೋ ವಿಚಾರ ಸುಂಟರಗಾಳಿಯಂತೆ ಹಬ್ಬುತ್ತಾ ಇದೆ. ಬಾಲಿವುಡ್‌ ಚೆಲುವೆಯನ್ನ ಮದುವೆ ಆಗಲಿದ್ದಾರೆ ಎಂಬ ವಿಚಾರ ಭಾರಿ ಸದ್ದು ಮಾಡ್ತಾ ಇದೆ.

17 ವರ್ಷಗಳ ಬಳಿಕ ಭಾರತಕ್ಕೆ ವಿಶ್ವಕಪ್ ತಂದುಕೊಡುವಲ್ಲಿ ಕುಲ್‌ದೀಪ್ ಪ್ರಮುಖ ಪಾತ್ರ ವಹಿಸಿದ್ರು.. ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ಸಂಭ್ರಮದಲ್ಲಿ ಭಾಗಿಯಾಗಿದ್ದ ಕುಲ್‌ದೀಪ್, ಮುಂಬೈನ ಜನಸಾಗರದೊಂದಿಗೆ ತಮ್ಮ ಗೆಲುವನ್ನು ಸಂಭ್ರಮಿಸಿದ್ರು.. ಅದಾದ ಬಳಿಕ  ಕುಲದೀಪ್‌ ತಮ್ಮ ತವರು ಕಾಸ್ಪುರಕ್ಕೆ ಹೋಗಿದ್ದಾರೆ. ಹುಟ್ಟೂರಿನಲ್ಲಿಯೂ ಅದ್ದೂರಿಯಾಗಿ ಸ್ವಾಗತಿಸಲಾಗಿತ್ತು. ಸದ್ಯ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ತಮ್ಮವರೊಂದಿಗೆ ಸಮಯ ಕಳೆಯುತ್ತಿರುವ ಸ್ಟಾರ್ ಸ್ಪಿನ್ನರ್ ತಮ್ಮ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಕುಲದೀಪ್‌, ನಾನು ಮದುವೆಯಾಗುವ ಸುದ್ದಿ ಸತ್ಯ. ಆದರೆ ನಟಿಯೊಂದಿಗೆ ಅದರಲ್ಲೂ ಬಾಲಿವುಡ್ ಚಿತ್ರನಟಿಯ ಜತೆಗೆ ಎಂಬ ಸುದ್ದಿ ಅಕ್ಷರಶಃ ಸುಳ್ಳು. ಇದು ಕೇವಲ ವದಂತಿ ಅಷ್ಟೇ. ಶೀಘ್ರವೇ ನಿಮ್ಮೆಲ್ಲರಿಗೂ ಸಿಹಿ ಸುದ್ದಿ ನೀಡುವೆ. ನನ್ನ ಮತ್ತು ನನ್ನ ಕುಟುಂಬದವರನ್ನು ಆಕೆ ಹೇಗೆ ನೋಡಿಕೊಳ್ಳುತ್ತಾಳೆ ಎಂಬುದು ನನಗೆ ಬಹಳ ಮುಖ್ಯ.  ತನ್ನನ್ನು ಪ್ರೀತಿಸುವ ಹುಡುಗಿಯ ಜೊತೆಗೆ ಮದುವೆಯಾಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಇದೀಗ ಕುಲದೀಪ್‌ ಮನ ಗೆದ್ದ ಆ ಹುಡುಗಿ ಯಾರು ಅನ್ನೋದು ಈಗ ಟಾಪಿಕ್ ಆಗಿಬಿಟ್ಟಿದೆ. ಶೀಘ್ರದಲ್ಲೇ ಆಕೆ ಯಾರು ಅನ್ನೋದು ಕೂಡ ಅಧಿಕೃತವಾಗಿ ಬಹಿರಂಗಗೊಳ್ಳುವ ಸಾಧ್ಯತೆಯಿದೆ.

Shwetha M