ಹೇರ್ ಸ್ಮೂಥನಿಂಗ್, ಕಲರಿಂಗ್ ನಿಂದ ಬರುತ್ತೆ ಕ್ಯಾನ್ಸರ್!

ಹೇರ್ ಸ್ಮೂಥನಿಂಗ್, ಕಲರಿಂಗ್ ನಿಂದ ಬರುತ್ತೆ ಕ್ಯಾನ್ಸರ್!

ಇದು ಮಾಡರ್ನ್ ಯುಗ.. ಎಲ್ಲರಿಂತಲೂ ತಾನು ಚೆನ್ನಾಗಿ ಕಾಣ್ಬೇಕು ಅಂತಾ ಪ್ರತಿಯೊಬ್ಬರು ಬಯಸ್ತಾರೆ. ಹೀಗಾಗಿ ಅನೇಕ ಮಹಿಳೆಯರು ಬ್ಯೂಟಿ ಪಾರ್ಲರ್ನಲ್ಲಿ ಹೆಚ್ಚು ಹೊತ್ತು ಕಾಲ ಕಳೀತಿರುತ್ತಾರೆ.. ಹೇರ್ ಸ್ಪಾ.. ಹೇರ್ ಸ್ಟ್ರೈಟ್ನಿಂಗ್, ಹೇರ್ ಕಲರಿಂಗ್, ಹೇರ್ ಸ್ಮೂಥ್ನಿಂಗ್ ಮಾಡಿಸಿಕೊಳ್ತಿರುತ್ತಾರೆ..  ಆದರೆ ಕೂದಲನ್ನು ಹೀಗೆಲ್ಲಾ ಮಾಡಿಸಿಕೊಳ್ಳುವವರು ಸ್ವಲ್ಪ ಎಚ್ಚರಿಕೆ ವಹಿಸೋದು ಮುಖ್ಯ. ಯಾಕಂದ್ರೆ ಶಾಕಿಂಗ್ ಸಂಗತಿಯೊಂದು ಹೊರಬಿದ್ದಿದೆ.

ಇತ್ತೀಚಿನ ದಿನಗಳಲ್ಲಿ ಹೇರ್ ಸ್ಟ್ರೈಟನಿಂಗ್, ಹೇರ್ ಕಲರಿಂಗ್ ಮತ್ತು ಹೇರ್ ಸ್ಮೂಥನಿಂಗ್ ಈ 3 ವಿಷಯಗಳು ಟ್ರೆಂಡ್ ನಲ್ಲಿವೆ. ಇದ್ರಿಂದ ಬೋಲ್ಡ್ ಲುಕ್ ಸಿಗುತ್ತೆ, ಮಾರ್ಡನ್ ಆಗಿ ಕಾಣ್ಬೋದು.. ಕೂದಲು ಶೈನಿ ಆಗಿ ಕಾಣುತ್ತೆ ಅಂತೆಲ್ಲಾ ಅನೇಕರು ಇವುಗಳನ್ನು ಮಾಡಿಸಿಕೊಂಡು ತಮ್ಮ ಕೂದಲಿಗೆ ಹೊಸ ರೂಪ ನೀಡುತ್ತಿರುತ್ತಾರೆ. ಆದ್ರೆ ಹೀಗೆ ಮಾಡಿಸಿಕೊಳ್ಳುವ ಮೊದಲು ಈ ಹೇರ್ ಸ್ಟೈಲ್ನ ಸೈಡ್ ಎಫೆಕ್ಟ್ಸ್ ಬಗ್ಗೆ ತಿಳಿದುಕೊಳ್ಳಬೇಕು. ಇದ್ರಿಂದ ನಿಮ್ಮ ಆರೋಗ್ಯಕ್ಕೆ ಕುತ್ತು ಬರುತ್ತೆ. ಇತ್ತೀಚಿನ ಅಧ್ಯಯನವೊಂದರಲ್ಲಿ ಶಾಕಿಂಗ್ ವಿಚಾರವೊಂದು ಬಯಲಾಗಿದೆ.. ಹೆಂಗಳೆಯರು ಅಂದವಾಗಿ ಕಾಣಲೆಂದು ಮಾಡಿಸಿಕೊಳ್ಳುವ ಹೇರ್ ಸ್ಟ್ರೈಟ್ನಿಂಗ್, ಹೇರ್ ಕಲರಿಂಗ್ ಮತ್ತು ಹೇರ್ ಸ್ಮೂಥ್ನಿಂಗ್ ಕ್ಯಾನ್ಸರ್ ಬರೋದಿಕ್ಕೂ ಕಾರಣವಾಗಬಹುದು ಅಂತಾ ಈ ಹಿಂದೆ ಅಧ್ಯಯನವೊಂದು ಬಹಿರಂಗಪಡಿಸಿತ್ತು. ಈಗಿನ ಹೊಸ ಬೆಳವಣಿಗೆ ಏನಂದ್ರೆ, ಇತ್ತೀಚೆಗೆ ಆಹಾರ ಮತ್ತು ಔಷಧ ಆಡಳಿತ, ಕ್ಯಾನ್ಸರ್ ತಡೆಗಟ್ಟಲು ಹೇರ್ ಸ್ಟ್ರೈಟ್ನಿಂಗ್, ಕಲರಿಂಗ್ ಸ್ಮೂಥ್ನಿಂಗ್ ಉತ್ಪನ್ನಗಳಲ್ಲಿಬಳಸಲಾಗುವ ರಾಸಾಯನಿಕಗಳನ್ನು ನಿಷೇಧಿಸಿದೆ. ಅಂದ್ರೆ ಇಲ್ಲಿ ಅರ್ಥಮಾಡಿಕೊಳ್ಳಬೇಕಿರೋದು ಏನಂದ್ರೆ ಇವುಗಳ ಬಳಕೆಯಿಂದ ಆರೋಗ್ಯಕ್ಕೆ ಅಪಾಯವಿದೆ ಅಂತ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಲೋಕಾರ್ಪಣೆ – ಅಮೆರಿಕಾ, ಫ್ರಾನ್ಸ್, ಮಾರಿಷಸ್‌ನಲ್ಲೂ ರಾಮಭಕ್ತರ ಜಯಘೋಷ!

ಇನ್ನು ಈ ಕೂದಲಿನ ಉತ್ಪನ್ನಗಳು ಏಕೆ ಮತ್ತು ಹೇಗೆ ಕ್ಯಾನ್ಸರ್ಗೆ ಕಾರಣವಾಗುತ್ತವೆ ಅನ್ನೋ ಪ್ರಶ್ನೆ ಮೂಡೋದು ಸಹಜ.. ಅದನ್ನೂ ಹೇಳ್ತೆನೆ.. ಕೂದಲು ರೇಷ್ಮೆಯಂತೆ ನಯವಾಗಿ ಹೊಳೆಯಲು ಅನೇಕ ಸೌಂದರ್ಯ ವರ್ಧಕಗಳನ್ನು ಬಳಸಲಾಗುತ್ತೆ. ಈ ಸೌಂದರ್ಯ ಉತ್ಮನ್ನಗಳಲ್ಲಿ ಹಲವು ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತೆ. ಇದ್ರಲ್ಲಿ  ‘ಫಾರ್ಮಾಲ್ಡಿಹೈಡ್’ ಕೂಡ ಒಂದು.. ಈ ಫಾರ್ಮಾಲ್ಡಿಹೈಡ್ ಅನ್ನ ಹೆಚ್ಚಾಗಿ ರಸಗೊಬ್ಬರ, ಕಾಗದ, ಪ್ಲೈವುಡ್ ಮುಂತಾದವುಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಸೌಂದರ್ಯ ವರ್ಧಕಗಳಲ್ಲಿ ಇವುಗಳನ್ನು ಬಳಸಿದಾಗ, ಈ ಕೆಮಿಕಲ್ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತೆ. ಫಾರ್ಮಾಲ್ಡಿಹೈಡ್ ಹೊಂದಿರುವ ಹೇರ್ ಸ್ಟ್ರೈಟನಿಂಗ್ ಉತ್ಪನ್ನಗಳ ಬಳಕೆಯಿಂದ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ.

ಈ ರಾಸಾಯನಿಕದ ಹೊಗೆಯ ಸಂಪರ್ಕಕ್ಕೆ ಬಂದಾಗ ಕಣ್ಣು, ಮೂಗು ಮತ್ತು ಗಂಟಲಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ನಂತರ ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು. ಭವಿಷ್ಯದಲ್ಲಿ ಕ್ಯಾನ್ಸರ್ ಅಪಾಯವನ್ನೂ ಹೆಚ್ಚಿಸಬಹುದು. ಹೀಗಾಗಿ ಎಫ್ ಡಿ ಎ ಯು  ಫಾರ್ಮಾಲ್ಡಿಹೈಡ್ ಬಿಡುಗಡೆ ಮಾಡುವ ರಾಸಾಯನಿಕಗಳ ಮೇಲೆ ನಿಷೇಧ ಹೇರಿದೆ. ಈ ಕೂದಲು ಉತ್ಪನ್ನಗಳು ಗರ್ಭಾಶಯದ ಅಥವಾ ಅಂಡಾಶಯದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಅಪಾಯವಿದೆ. ಇದಕ್ಕೆ ಸಂಬಂಧಿಸಿದಂತೆ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ರೆಕಾರ್ಡ್ನ 2022 ರ ಅಧ್ಯಯನದಲ್ಲಿ ಅನೇಕ ಸೂಚನೆಗಳಿವೆ. ಇದರಲ್ಲಿ ಈ ರಾಸಾಯನಿಕಗಳ ಹೊಗೆಯು ಮಹಿಳೆಯರಲ್ಲಿ ಗರ್ಭಾಶಯದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ಹೇಳಿದೆ. ವಾಸ್ತವವಾಗಿ, ಗರ್ಭಾಶಯದ ಒಳಪದರವಾಗಿರುವ ಎಂಡೊಮೆಟ್ರಿಯಂನ ಅಂಗಾಂಶಗಳಲ್ಲಿ ಮಾರಣಾಂತಿಕ ಕ್ಯಾನ್ಸರ್ ಕೋಶಗಳು ರೂಪುಗೊಂಡಾಗ ಈ ಕ್ಯಾನ್ಸರ್ ಸಂಭವಿಸುತ್ತದೆ. ಫಾರ್ಮಾಲ್ಡಿಹೈಡ್ ಈ ಕ್ಯಾನ್ಸರ್ ಕೋಶಗಳನ್ನು ಪ್ರಚೋದಿಸುತ್ತದೆ ಮತ್ತು ದೇಹದಲ್ಲಿ ಅವುಗಳ ರೂಪಾಂತರವನ್ನು ಉತ್ತೇಜಿಸುತ್ತದೆ.

ಅಲ್ಲದೆ Cancer.gov ನ ಸಂಶೋಧನೆ ಹೇಳುವ ಪ್ರಕಾರ ಹೇರ್ ಕಲರಿಂಗ್ನಿಂದಾಗಿ ಗಾಳಿಗುಳ್ಳೆಯ ಕ್ಯಾನ್ಸರ್ ಅಪಾಯ ಹೆಚ್ಚುತ್ತದೆ ಎಂದು ಸೂಚಿಸುತ್ತದೆ. ವಾಸ್ತವವಾಗಿ, ಸುಮಾರು 80% ಹೇರ್ ಡೈ ಉತ್ಪನ್ನಗಳನ್ನು ಹೈಡ್ರೋಜನ್ ಪೆರಾಕ್ಸೈಡ್ನಿಂದ ತಯಾರಿಸಲಾಗುತ್ತದೆ, ಇವು ಮೂತ್ರಕೋಶ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ. ಇದರ ಜೊತೆಗೆ ಹೇರ್ ಡೈಗಳು, ಸ್ಟ್ರೈಟ್ನರ್ಗಳು ಅಥವಾ ರಿಲ್ಯಾಕ್ಸ್ಗಳು ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಕಾರ್ಸಿನೋಜೆನಿಕ್ ಏಜೆಂಟ್ಗಳನ್ನು ಹೊಂದಿರುತ್ತವೆ. ಈ ಉತ್ಪನ್ನಗಳು ಕೂದಲು ಮತ್ತು ನೆತ್ತಿಯಿಂದ ಹೀರಲ್ಪಡುತ್ತವೆ ಮತ್ತು ದೇಹವನ್ನು ತಲುಪುತ್ತವೆ. ವಿಶೇಷವಾಗಿ ಫಾರ್ಮಾಲ್ಡಿಹೈಡ್ ಅಥವಾ ಮೀಥಿಲೀನ್ ಗ್ಲೈಕೋಲ್ ನಂತಹ ಸಂಯುಕ್ತಗಳು. ಫಾರ್ಮಾಲಿನ್, ಮೀಥೇನ್, ಮೆಥನೆಡಿಯೋಲ್, ಫಾರ್ಮಾಲ್ಡಿಹೈಡ್ ಮೊನೊಹೈಡ್ರೇಟ್ ಈ ಉತ್ಪನ್ನಗಳನ್ನು ಬಿಸಿ ಮಾಡಿದಾಗ, ಫ್ಲಾಟ್ ಪ್ರೆಸ್ಸಿಂಗ್ ಅಥವಾ ಬ್ಲೋ-ಡ್ರೈಯಿಂಗ್ ಸಮಯದಲ್ಲಿ ಫಾರ್ಮಾಲ್ಡಿಹೈಡ್ ಬಿಡುಗಡೆಯಾಗುತ್ತದೆ ಮತ್ತು ಇದು ಕ್ಯಾನ್ಸರ್ ಅನ್ನು ಪ್ರಚೋದಿಸುತ್ತದೆ. ಇದಲ್ಲದೆ, ಇದು ಜೀವಕೋಶಗಳ ಆರೋಗ್ಯಕರ ಅನುಕ್ರಮದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹಾರ್ಮೋನುಗಳ ಆರೋಗ್ಯ ಮತ್ತು ಉತ್ತಮ ರಾಡಿಕಲ್ಸ್ ಹೆಚ್ಚಿಸುತ್ತದೆ. ಇದು ಕ್ಯಾನ್ಸರ್ ಅಪಾಯವನ್ನು ಸಹ ಹೆಚ್ಚಿಸುತ್ತದೆ.

ದಿನನಿತ್ಯದ ಉತ್ಪನ್ನಗಳಲ್ಲಿ ಕಾರ್ಸಿನೋಜೆನಿಕ್ ಏಜೆಂಟ್ಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಬಳಸದಿರುವುದು ಬಹಳ ಮುಖ್ಯ ಎಂದು ವೈದ್ಯರು ತಿಳಿಸಿದ್ದಾರೆ. ಇದರೊಂದಿಗೆ ನೀವು ಸಂಭವನೀಯ ಕ್ಯಾನ್ಸರ್ ಸಮಸ್ಯೆಗಳನ್ನು ತಪ್ಪಿಸಬಹುದು ಮತ್ತು ಇದರೊಂದಿಗೆ ನೀವು ಸುರಕ್ಷಿತ ಕೂದಲು ಉತ್ಪನ್ನಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಮಾತ್ರ ಬಳಸುವುದು ಸಹ ಮುಖ್ಯವಾಗಿದೆ.

Shwetha M