ಮಾಡೋದು 1 ಗಂಟೆ ಕೆಲಸ.. ಪಡೆಯೋದು ₹1.2 ಕೋಟಿ ಸಂಬಳ – ಬೋನಸ್ ಜೊತೆಗೆ ಸಿಗುತ್ತೆ  ಹಲವು ಸೌಲಭ್ಯ

ಮಾಡೋದು 1 ಗಂಟೆ ಕೆಲಸ.. ಪಡೆಯೋದು ₹1.2 ಕೋಟಿ ಸಂಬಳ – ಬೋನಸ್ ಜೊತೆಗೆ ಸಿಗುತ್ತೆ  ಹಲವು ಸೌಲಭ್ಯ

ದಿನಕ್ಕೆ 8ರಿಂದ 10 ಗಂಟೆ ದುಡಿದರೂ ತಿಂಗಳಾಂತ್ಯದಲ್ಲಿ ಖರ್ಚಿಗೆ ಕಾಸು ಇರೋದಿಲ್ಲ. ಇನ್ನೂ ಕೆಲವೆಡೆ ದಿನವಿಡೀ ದುಡಿದ್ರೂ ಕೈ ತುಂಬಾ ಸಂಬಳ ಸಿಗಲ್ಲ. ಆದರೆ ಇವರು ಮಾತ್ರ ಕೇವಲ 1 ಗಂಟೆ ಕೆಲಸ ಮಾಡಿ ವರ್ಷಕ್ಕೆ 1,50,000 ಡಾಲರ್​ ಅಂದರೆ ಭಾರತೀಯ ಕರೆನ್ಸಿ ಪ್ರಕಾರ 1.2 ಕೋಟಿ ರೂ. ಸಂಪಾದನೆ ಮಾಡುತ್ತಾರೆ.

ಹೀಗೆ ಕಡಿಮೆ ಕೆಲಸ ಮಾಡಿ ಕೋಟಿಗಟ್ಟಲೆ ಸಂಬಳ ಪಡೆಯುವ ಇವರ ಹೆಸರು ಡೆವೊನ್. ಇವರು ಒಂದು ದಿನವೂ ಪೂರ್ತಿ ದಿನ ಕೆಲಸ ಮಾಡಿಲ್ಲವಂತೆ. ಆದರೆ, ಉತ್ತಮ ಸಂಬಳ ಪಡೆಯುತ್ತಿರುವ ಡೆವೂನ್​, ವರ್ಷಾಂತ್ಯದಲ್ಲಿ ಬೋನಸ್​ ಸಹ ಪಡೆಯುತ್ತಾರೆ. ಟೆಕ್​ ದೈತ್ಯ ಕಂಪನಿಯಲ್ಲಿ ಕೋಡ್​ ಬರೆಯುವುದೇ ಡೆವೂನ್​ ಅವರ ಕೆಲಸ. ಅಲ್ಲದೆ, ತಮ್ಮ ಟೆಕ್ಕಿ ಸ್ನೇಹಿತರ ಜತೆ ಸೇರಿ ಕಂಪನಿ ನಿರ್ಮಾಣ ಮಾಡಲು ಸಹ ಮುಂದಾಗಿದ್ದಾರೆ. ಕಂಪನಿ ಕೊಡುವ ಕೆಲಸಕ್ಕೆ ಅನುಗುಣವಾಗಿ ಕೋಡ್​ ರಚನೆ ಮಾಡಿ, ಅದನ್ನು ಮ್ಯಾನೇಜರ್​ಗೆ ಕಳುಹಿಸಿಕೊಡುತ್ತಾರೆ. ಸಾಮಾನ್ಯವಾಗಿ ಬೆಳಗ್ಗೆ 9 ಗಂಟೆಗೆ ಏಳುವ ಡೆವೂನ್​, ಸ್ನಾನ ಮಾಡಿ, ಬ್ರೇಕ್​ಫಾಸ್ಟ್​ ಮುಗಿಸಿಕೊಂಡು 11 ಗಂಟೆ ಅಥವಾ ಮಧ್ಯಾಹ್ನದ ವೇಳೆ ಕೆಲಸಕ್ಕೆ ಕೂರುತ್ತಾರೆ. ಕೇವಲ ಒಂದು ಗಂಟೆಯಷ್ಟೇ ಕೆಲಸ ಮಾಡುತ್ತಾರೆ. ಉಳಿದ ಸಮಯದಲ್ಲಿ ಡೆವೂನ್​ ತಮ್ಮ ಸ್ಟಾರ್ಟಪ್​ಗಾಗಿ ಕೆಲಸ ಮಾಡುತ್ತಾರೆ.

ಇದನ್ನೂ ಓದಿ : ರಾಜ್ಯದ ಮಹಿಳೆಯರಿಗೆ ಸರ್ಕಾರದಿಂದ ಗುಡ್‌ನ್ಯೂಸ್‌! – ವರಮಹಾಲಕ್ಷ್ಮಿ ಹಬ್ಬಕ್ಕೆ ಅರಿಶಿನ, ಕುಂಕುಮ & ಬಳೆ ಗಿಫ್ಟ್!

ಅಂದಹಾಗೆ 97 ಪ್ರತಿಶತ ಗೂಗಲ್​ ಉದ್ಯೋಗಿಗಳು ಇಲ್ಲಿ ಕೆಲಸ ಮಾಡಲು ಉತ್ತಮ ಸ್ಥಳವೆಂದು ಕರೆಯುತ್ತಾರೆ. ಸಾಮಾನ್ಯ ಯುಎಸ್​ ಕಂಪನಿಯ ಉದ್ಯೋಗಿಗಳ 57% ಜನರು ಇದನ್ನು ಹೇಳುತ್ತಾರೆ. ಯಾಕಂದ್ರೆ ಗೂಗಲ್ ತನ್ನ ಉದ್ಯೋಗಿಗಳಿಗೆ ನೀಡುವ ಪ್ರಯೋಜನಗಳ ಕಾರಣದಿಂದಾಗಿ ಹೆಸರುವಾಸಿಯಾಗಿದೆ. ಇಲ್ಲಿನ ಉದ್ಯೋಗಿಗಳಿಗೆ ಬೈಸಿಕಲ್‌ಗಳು, ಜಿಮ್‌ ಮತ್ತು ಉಚಿತ ಊಟಗಳಿಂದ ತುಂಬಿರುವ ಚಮತ್ಕಾರಿ ಕ್ಯಾಂಪಸ್ ಮತ್ತು ಹೆಚ್ಚಿನ ಸಂಬಳದಿಂದಾಗಿ ಗೂಗಲ್​ ಒಳ್ಳೆಯ ಹೆಸರು ಮಾಡಿದೆ.

ಹೆಚ್ಚಿನ ಜನರು ಕೆಲಸ-ಜೀವನದ ಸಮತೋಲನ ಮತ್ತು ಪ್ರಯೋಜನಗಳ ಕಾರಣದಿಂದಾಗಿ ಗೂಗಲ್​ ಅನ್ನು ತಮ್ಮ ಕೆಲಸದ ಸ್ಥಳವಾಗಿ ಆಯ್ಕೆ ಮಾಡುತ್ತಾರೆ. ನೀವು ಆ್ಯಪಲ್​ ಕಂಪನಿಯಲ್ಲಿ ಕೆಲಸ ಮಾಡಬಹುದು, ಆದರೆ ಆ್ಯಪಲ್ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ತನ್ನದೇಯಾದ ಮನವಿಯನ್ನು ಹೊಂದಿದೆ. ಅವರು ದೀರ್ಘಕಾಲ ಕೆಲಸ ಮಾಡುತ್ತಾರೆ. ಆದರೆ ಗೂಗಲ್​ನಲ್ಲಿ ಹೆಚ್ಚಿನ ಜನರು ಏನು ಮಾಡುತ್ತಿದ್ದಾರೆಂದು ಎಲ್ಲರಿಗು ತಿಳಿದಿದೆ ಎಂದು ಡೆವೂನ್​ ಹೇಳಿದ್ದಾರೆ.

suddiyaana