ತಮಿಳುನಾಡು ವಿಧಾನಸಭೆಯಲ್ಲಿ ಭಾರಿ ಹೈಡ್ರಾಮ! – ರಾಷ್ಟ್ರಗೀತೆಗೆ ಡಿಎಂಕೆ ಸರ್ಕಾರ ವಿರೋಧ, ಭಾಷಣ ತಿರಸ್ಕರಿಸಿ ಹೊರ ನಡೆದ ರಾಜ್ಯಪಾಲ

ತಮಿಳುನಾಡು ವಿಧಾನಸಭೆಯಲ್ಲಿ ಭಾರಿ ಹೈಡ್ರಾಮ! – ರಾಷ್ಟ್ರಗೀತೆಗೆ ಡಿಎಂಕೆ ಸರ್ಕಾರ ವಿರೋಧ, ಭಾಷಣ ತಿರಸ್ಕರಿಸಿ ಹೊರ ನಡೆದ ರಾಜ್ಯಪಾಲ

ತಮಿಳುನಾಡು ಸರ್ಕಾರ ಹಾಗೂ ರಾಜ್ಯಪಾಲರು ನಡುವಿನ ಶೀತಲ ಸಮರ ಈಗ ವಿಕೋಪಕ್ಕೆ ತಿರುಗಿದೆ. ಈ ಶೀತಲ ಸಮರದಿಂದಾಗಿಯೇ ತಮಿಳುನಾಡು ವಿಧಾನಸಭೆಯಲ್ಲಿ ಹೈಡ್ರಾಮಾ ನಡೆದಿದೆ. ರಾಷ್ಟ್ರಗೀತೆಗೆ ಡಿಎಂಕೆ ಸರ್ಕಾರ ವಿರೋಧ ವ್ಯಕ್ತಪಡಿಸಿದೆ ಎಂದು ಆರೋಪಿಸಿ ರಾಜ್ಯಪಾಲ ರವಿ ಅವರು ಕಾರ್ಯಕ್ರಮ ಮೊಟಕುಗೊಳಿಸಿ ಹೊರ ನಡೆದಿದ್ದಾರೆ.

ಇದನ್ನೂ ಓದಿ: ಅಭಿಮಾನಿಯ ಮೊಬೈಲ್ ಕಿತ್ತುಕೊಂಡು ಎಸೆದ ಸಿಂಗರ್ – ದುರಂಹಕಾರದ ಗಾಯಕನ ಮೇಲೆ ಸಿಟ್ಟಾದ ಫ್ಯಾನ್ಸ್

ಹೌದು, ತಮಿಳುನಾಡಿನಲ್ಲಿ ಸೋಮವಾರ ವಿಧಾನಸಭೆ ಕಲಾಪ ಆರಂಭವಾಗಿದೆ. ಈ ವೇಳೆ  ಸದನ ಆರಂಭವಾಗುವ ಮುನ್ನ ಹಾಗೂ ಕೊನೆಯಲ್ಲಿ ರಾಷ್ಟ್ರಗೀತೆ ಹಾಡಬೇಕೆಂದು ರಾಜ್ಯಪಾಲ ರವಿ ಸೂಚನೆ ನೀಡಿದ್ದರು. ಸ್ಟಾಲಿನ್ ಸರ್ಕಾರವು ಇದನ್ನು ನಿರ್ಲಕ್ಷಿಸಿದೆ. ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿದ್ದಾರೆ. ಬಳಿಕ ರಾಷ್ಟ್ರಗೀತೆಗೆ ಗೌರವ ಕೊಡದ ಕಾರಣ ನನಗೆ ಭಾಷಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಅವರು ವಿಧಾನಸಭೆಯ ಅಧಿವೇಶನದ ಆರಂಭಿಕ ಸಾಂಪ್ರದಾಯಿಕ ಭಾಷಣವನ್ನು ಓದಲು ನಿರಾಕರಿಸಿ ಸದನದಿಂದ ಹೊರನಡೆದಿದ್ದಾರೆ.

ಈ ಬಗ್ಗೆ ಎಐಎಡಿಎಂಕೆ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಮಾತನಾಡಿದ್ದಾರೆ. ತಮಿಳುನಾಡು ವಿಧಾನಸಭೆಯ ಅಧಿವೇಶನದ ಆರಂಭ ಹಾಗೂ ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡುವಂತೆ ರಾಜ್ಯಪಾಲರು ವಿನಂತಿಸಿದ್ದರು. ಅವರ ಸಲಹೆಯನ್ನು ನಿರ್ಲಕ್ಷಿಸಿದ ಕಾರಣ ಅವರು ಸಾಂಪ್ರದಾಯಿಕ ಭಾಷಣ ಮಾಡಲು ನಿರಾಕರಿಸಿದ್ದು, ಇದು ರಾಜ್ಯಪಾಲರು ಹಾಗೂ ಸರ್ಕಾರದ ನಡುವಿನ ಸಮಸ್ಯೆಯಾಗಿದೆ ಎಂದಿದ್ದಾರೆ.

Shwetha M