ತಮಿಳುನಾಡಿನ ಖ್ಯಾತ ನಟ, ರಾಜಕಾರಣಿ ವಿಜಯಕಾಂತ್  ವಿಧಿವಶ

ತಮಿಳುನಾಡಿನ ಖ್ಯಾತ ನಟ, ರಾಜಕಾರಣಿ ವಿಜಯಕಾಂತ್  ವಿಧಿವಶ

ತಮಿಳುನಾಡಿನ ಖ್ಯಾತ ನಟ, ಡಿಎಂಡಿಕೆ ಮುಖ್ಯಸ್ಥ ಕ್ಯಾಪ್ಟನ್ ವಿಜಯಕಾಂತ್  ನಿಧನರಾಗಿದ್ದಾರೆ. ಗುರುವಾರ ಮುಂಜಾನೆ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಕ್ಯಾಪ್ಟನ್‌ ವಿಜಯಕಾಂತ್‌ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಇತ್ತೀಚೆಗಷ್ಟೇ ಅವರಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ತತಕ್ಷಣವೇ ಅವರನ್ನು ತೀವ್ರ ಘಟಕದಲ್ಲಿ ಶಿಫ್ಟ್‌ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಇಸ್ರೋದಿಂದ ಮತ್ತೊಂದು ಯೋಜನೆ! – ನ್ಯೂಟ್ರಾನ್ ನಕ್ಷತ್ರ, ಕಪ್ಪು ಕುಳಿ ಅಧ್ಯಯನಕ್ಕೆ XPoSAT ಉಪಗ್ರಹ ಉಡಾವಣೆ!

ತಮಿಳು ನಾಡಿನ ಡಿಎಂಡಿಕೆ ಮುಖ್ಯಸ್ಥರೂ ಆಗಿರುವ ಕ್ಯಾಪ್ಟನ್ ವಿಜಯಕಾಂತ್ ಹಲವಾರು ವರ್ಷಗಳ ಕಾಲ ನಟರಾಗಿ ಚಿತ್ರೋದ್ಯಮಕ್ಕೆ ಸೇವೆ ಸಲ್ಲಿಸಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಗಳು ಅವರನ್ನೂ ಕಾಡುತ್ತಿದ್ದವು. ಗುರುವಾರ ಅವರು ಕೋವಿಡ್‌ಗೆ ತುತ್ತಾಗಿ ನಿಧನಹೊಂದಿದ್ದಾರೆ.

ವಿಜಯಕಾಂತ್ ಅವರನ್ನು ಮಂಗಳವಾರ (ಡಿಸೆಂಬರ್ 26) ಸಾಮಾನ್ಯ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ‘ವಿಜಯ್ ಅವರು ಆರೋಗ್ಯವಾಗಿದ್ದಾರೆ. ಇದೊಂದು ಸಾಮಾನ್ಯ ಪರೀಕ್ಷೆ. ಅವರು ಶೀಘ್ರವೇ ಮನೆಗೆ ಮರಳಲಿದ್ದಾರೆ’ ಎಂದು ಡಿಎಂಡಿಕೆ ಪಕ್ಷದವರು ಹೇಳಿದ್ದರು. ಆ ಬಳಿಕ ಅವರಿಗೆ ಕೊವಿಡ್ ಇರುವ ವಿಚಾರ ದೃಢವಾಯಿತು. ಅವರ ಸಾವಿನ ಸುದ್ದಿ ಪಕ್ಷದವರಿಗೆ ಹಾಗೂ ಅಭಿಮಾನಿಗಳಿಗೆ ಶಾಕ್ ನೀಡಿದೆ. ಈ ಮೊದಲು ನವೆಂಬರ್ 20ರಂದು ವಿಜಯಕಾಂತ್ ಆಸ್ಪತ್ರೆಗೆ ದಾಖಲಾಗಿದ್ದರು.

Shwetha M