ಡಿಮಾರ್ಟ್‌ಗೆ ಹೋದ ಗಂಡನಿಗೆ ಶಾಕ್!‌ – ಪತ್ನಿ ಬರೆದು ಕೊಟ್ಟ ಚೀಟಿಯಲ್ಲಿ ಏನಿತ್ತು ಗೊತ್ತಾ?

ಡಿಮಾರ್ಟ್‌ಗೆ ಹೋದ ಗಂಡನಿಗೆ ಶಾಕ್!‌ – ಪತ್ನಿ ಬರೆದು ಕೊಟ್ಟ ಚೀಟಿಯಲ್ಲಿ ಏನಿತ್ತು ಗೊತ್ತಾ?

ಸೂಪರ್ ಮಾರ್ಕೆಟ್ ಗಳಿಗೂ ಡಿಮಾರ್ಟ್ ಗೂ ವ್ಯತ್ಯಾಸವಿದೆ. ಡಿಮಾರ್ಟ್ ಗ್ರಾಹಕರಿಗೆ ಬಿಗ್ ಆಫರ್ ನೀಡೋ ಮೂಲಕ ಜನರಿಗೆ ಹತ್ತಿರವಾಗಿದೆ. ಹೀಗಾಗಿ ಅನೇಕರು ಶಾಪಿಂಗ್‌ಗೆ ಡಿ ಮಾರ್ಟ್‌ಗೆ ಹೋಗ್ತಾರೆ. ಇದೀಗ ಮನೆ ದಿನಸಿ ತರಲು ಮಹಿಳೆಯೊಬ್ಬರು ಗಂಡನನ್ನ ಡಿಮಾರ್ಟ್‌ಗೆ ಕಳುಹಿಸಿದ್ದು, ಶಾಪಿಂಗ್‌ ವೇಳೆ  ಚೀಟಿಯಲ್ಲಿ ಬರೆದಿದ್ದನ್ನ ನೋಡಿ ಆತ ಶಾಕ್‌ ಆಗಿದ್ದಾನೆ.

ಇದನ್ನೂ ಓದಿ: ದಶಕಗಳಿಂದ ಖಾಕಿ ಸಮವಸ್ತ್ರದ ಮೇಲೆ ಬಳಸುತ್ತಿದ್ದ ಸ್ಲೋಚ್ ಕ್ಯಾಪ್‌ಗೆ ಕೊಕ್ – ರಾಜ್ಯದ ಪೊಲೀಸರಿಗೆ ಇವತ್ತಿಂದ ಪಿ-ಕ್ಯಾಪ್ ಭಾಗ್ಯ

ಡಿ ಮಾರ್ಟ್‌ ಕಡಿಮೆ ದರದಲ್ಲಿ ಗುಣಮಟ್ಟದ ಸರಕುಗಳನ್ನು ನೀಡಲಾಗುತ್ತಿದೆ, ಇದ್ರಿಂದಾಗೇ ಅನೇಕರು, ಸಂಬಳ ಆಗ್ತಿದ್ದಂತೆ ಡಿಮಾರ್ಟ್‌ಗೆ ಹೋಗುತ್ತಾರೆ. ಆದ್ರೀಗ ಡಿ ಮಾರ್ಟ್ ಶಾಪಿಂಗ್‌ಗೆ ಹೋದ ಗಂಡನಿಗೆ ಮಹಿಳೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಹೆಂಡ್ತಿಯ ದಿನಸಿ ಚೀಟಿಯಲ್ಲಿ ಬರೆದು ಕೊಟ್ಟ ಸಂದೇಶದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವ್ಯಕ್ತಿಯೊಬ್ಬರು ಡಿಮಾರ್ಟ್‌ನಲ್ಲಿ ಪತ್ನಿ ಬರೆದುಕೊಟ್ಟ ಚೀಟಿಯಲ್ಲಿ ಇರೋದನ್ನೆಲ್ಲಾ ಖರೀದಿಸಿದ್ದಾರೆ. ಬಳಿಕ ದಿನಸಿ ವಸ್ತುಗಳನ್ನು ಪಟ್ಟಿ ಮಾಡಿದ ಚೀಟಿ ಹಿಂದೆ ಪತ್ನಿಯ ಸಂದೇಶವಿತ್ತು. ಇದನ್ನ ಓದಿ ಗಂಡ ಶಾಕ್‌ ಆಗಿದ್ದಾರೆ. ಬಳಿಕ ಇದನ್ನ ತನ್ನ ಗೆಳೆಯನಿಗೆ ತೋರಿಸುತ್ತಾರೆ. ಹಾಗೆಯೇ ತಾವು ಖರೀದಿಸಿರುವ ವಸ್ತುಗಳ ಬಾಸ್ಕೆಟ್ ತೋರಿಸುತ್ತಾರೆ. ಆ ಸಂದೇಶ ನೋಡಿ ವ್ಯಕ್ತಿ ನಕ್ಕು, ಬೇಗ ಇಲ್ಲಿಂಗ ಹೋಗೋಣ ಎಂದು ಗೆಳೆಯನಿಗೆ ಹೇಳುತ್ತಾರೆ.

ವಿಡಿಯೋದಲ್ಲಿ ಏನಿದೆ?

ಈ ವಿಡಿಯೋವನ್ನು travel_with_raghava ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಶೇರ್ Strict Wife ಶೀರ್ಷಿಕೆಯಡಿ ಮಾಡಿಕೊಳ್ಳಲಾಗಿದೆ. ಡಿಮಾರ್ಟ್‌ನಿಂದ ಯಾವೆಲ್ಲಾ ಏನು ತೆಗೆದುಕೊಂಡು ಬರಬೇಕೆಂದು ರಾಘವೇಂದ್ರ ಅಬರಿಗೆ ಪತ್ನಿ ತೇಜಶ್ರೀ ಪಟ್ಟಿಯೊಂದನ್ನು ಮಾಡಿಕೊಟ್ಟಿದ್ದಾರೆ. ದಿನಸಿ ಪದಾರ್ಥದ ಜೊತೆ ಶಾಂಪೂ, ಸೋಪ್ ಸೇರಿದಂತೆ ಎಲ್ಲಾ ವಸ್ತುಗಳ ಹೆಸರು ಮತ್ತು ಪ್ರಮಾಣವನ್ನು ಸ್ಪಷ್ಟವಾಗಿ ಚೀಟಿಯಲ್ಲಿ ನಮೂದಿಸಿದ್ದಾರೆ. ಚೀಟಿ ಹಿಂಭಾಗದಲ್ಲಿ ಬೇರೆ ಪ್ರೊಡಕ್ಟ್ ತೆಗೆದುಕೊಂಡು ಬಂದ್ರೆ ಮನೆಗೆ ಸೇರಿಸುವದಿಲ್ಲ ಎಂದು ಬರೆದಿದ್ದಾರೆ. ಈ ಚೀಟಿಯನ್ನು ಗೆಳೆಯ ಶೇಖರ್‌ಗೆ ತೋರಿಸುತ್ತಾ, ಇದು ತೇಜು ಬರೆದುಕೊಟ್ಟ ಪಟ್ಟಿ. ಹಿಂದೆ ಏನೋ ಬರೆದಿದೆ ಅಂತ ನೋಡಿದ್ರೆ ಈ ರೀತಿ ಬರೆದಿದ್ದಾರೆ. ಡಿಮಾರ್ಟ್‌ಗೆ ಬಂದಾಗೆಲ್ಲಾ ಕೆಲವೊಮ್ಮೆ ಬೇಡವಾದ ವಸ್ತು ತೆಗೆದುಕೊಂಡು ಹೋಗುತ್ತೇನೆ. ಅದಕ್ಕೆ ಹೀಗೆ ಬರೆದಿದ್ದಾರೆ ಎಂದು ಹೇಳಿದ್ದಾರೆ.

ಡಿಮಾರ್ಟ್‌ನಲ್ಲಿ ಕಡಿಮೆ ಬೆಲೆ ಜೊತೆಯಲ್ಲಿ ಹೆಚ್ಚುವರಿ ರಿಯಾಯ್ತಿಗಳನ್ನು ನೀಡಲಾಗಿರುತ್ತದೆ. ಹಾಗಾಗಿ ಗ್ರಾಹಕರು ಆಕರ್ಷಕ ಆಫರ್ ಲಾಭ ತಮ್ಮದಾಗಿಸಿಕೊಳ್ಳಲು ಕೆಲವೊಂದು ವಸ್ತುಗಳನ್ನು ಖರೀದಿಸುತ್ತಾರೆ. ಮನೆಗೆ ತಂದ್ಮೇಲೆ ಆ ವಸ್ತುಗಳನ್ನು ಏನು ಮಾಡಬೇಕೆಂದು ತೋಚದೇ ಹಾಗೆಯೇ ಉಳಿದುಕೊಂಡಿರುತ್ತವೆ. ಹಾಗಾಗಿ ಗಂಡನಿಗೆ ಈ ಸಂದೇಶ ಕಳುಹಿಸಿರಬಹುದು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

Shwetha M