91ನೇ ವಯಸ್ಸಿನಲ್ಲಿ ಶ್ರೀಮಂತ ಉದ್ಯಮಿಗೆ ಪ್ರೇಮಾಂಕುರ – ಕುಬೇರನ ಮನಗೆದ್ದ ಚೆಲುವೆ ಯಾರು ಗೊತ್ತಾ?
ದೆಹಲಿ ಲ್ಯಾಂಡ್ ಮತ್ತು ಫೈನಾನ್ಸ್ ಗ್ರೂಪ್‌ನ ಮಾಜಿ ಮುಖ್ಯಸ್ಥ ಮತ್ತು ಹಾಲಿ ಅಧ್ಯಕ್ಷ ಕುಶಾಲ್ ಪಾಲ್ ಸಿಂಗ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರಂತೆ. ಹಂಗಂತ ಇವ್ರಿಗೇನು 30, 40 ವರ್ಷನೋ ಇಲ್ಲ 50 ವರ್ಷ ವಯಸ್ಸು ಅನ್ಕೊಳ್ಬೇಡಿ. ಕುಶಾಲ್ ಪಾಲ್ ಸಿಂಗ್ ಗೆ ಸದ್ಯ 91 ವರ್ಷ ವಯಸ್ಸು. ಇಳಿ ವಯಸ್ಸಿನಲ್ಲೂ ತಮಗೆ ಜೊತೆಗಾರ್ತಿ ಸಿಕ್ಕಿದ್ದಾಳೆ ಅಂತಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ಸಿರಿವಂತರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಟ್ವಿಟ್ವರ್ ದೊರೆ – ಎಲಾನ್ ಮಸ್ಕ್ ಮತ್ತೆ ವಿಶ್ವದ ಅತಿ ಶ್ರೀಮಂತ ವ್ಯಕ್ತಿ
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆ.ಪಿ ಸಿಂಗ್ ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ. 2 ವರ್ಷದಿಂದ ಏಕಾಂಗಿಯಾಗಿದ್ದೆ. ಈಗ ನನ್ನ ಸಂಗಾತಿಯಾಗಿ ಶೀನಾ ಎಂಬ ಆಕರ್ಷಕ ವ್ಯಕ್ತಿ ಸಿಕ್ಕಿದ್ದಾಳೆ. ಅವಳು ನನ್ನ ಜೀವನದ ಅತ್ಯುತ್ತಮ ವ್ಯಕ್ತಿ. ಹಾಗೂ ಅವಳು ಅದ್ಭುತ ಸ್ನೇಹಿತರ ಬಳಗ ಹೊಂದಿದ್ದಾಳೆ. ಅಲ್ಲದೇ ಪತ್ನಿ ತೀರಿ ಹೋದಾಗ ಜೀವನದಲ್ಲಿ ಧೈರ್ಯ ತುಂಬಿದ್ದಳು ಎಂದು ಶೀನಾ ಕುರಿತು ಕುಶಾಲ್ ಪಾಲ್ ಸಿಂಗ್ ಹೇಳಿದ್ದಾರೆ. ತಾನು ಕ್ರೀಡಾಪಟುವಾಗಿದ್ದ ದಿನಗಳನ್ನು ಹಾಗೂ ನಂತರ ಉತ್ಪಾದನಾ ಉದ್ಯಮಕ್ಕೆ ಕಾಲಿಟ್ಟಿದ್ದು ಹೇಗೆ ಎಂಬ ಬಗ್ಗೆಯೂ ಅವರು ಹಂಚಿಕೊಂಡಿದ್ದಾರೆ.
2018ರಲ್ಲಿ ಕೆ.ಪಿ ಸಿಂಗ್ರ ಪತ್ನಿ ಕ್ಯಾನ್ಸರ್ನಿಂದ ಮೃತಪಟ್ಟಿದ್ದರು. 65 ವರ್ಷಗಳಿಂದ ಜೊತೆಯಲ್ಲಿದ್ದ ಪತ್ನಿ ತೀರಿ ಹೋದ ಬಳಿಕ ರಿಯಲ್ ಎಸ್ಟೇಟ್ ಉದ್ಯಮದಿಂದ ಪಾಲ್ ಹಿಂದೆ ಸರಿದಿದ್ದರು. KP ಸಿಂಗ್ ಅವರು 1961 ರಲ್ಲಿ ತಮ್ಮ ಮಾವ ಸ್ಥಾಪಿಸಿದ್ದ DLF ಸೇರಿಕೊಂಡಿದ್ದರು. ಚುಕ್ಕಾಣಿ ಹಿಡಿದು 6 ದಶಕಗಳ ನಂತರ ಅಧ್ಯಕ್ಷಸ್ಥಾನದಿಂದ ಅಧಿಕೃತವಾಗಿ 2020ರಲ್ಲಿ ಕೆಳಗಿಳಿದರು. ಸದ್ಯ KP ಸಿಂಗ್ ಅವರ ನಿವ್ವಳ ಮೌಲ್ಯವು ಪ್ರಸ್ತುತ $8 ಶತಕೋಟಿಯಷ್ಟಿದೆ.