ಡಿಕೆಶಿ ನೀಡಿದ ಟಾಸ್ಕ್ ಗೆಲ್ತಾರಾ ಜಗದೀಶ್ ಶೆಟ್ಟರ್? – ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಹೊಸ ಟ್ರಿಕ್ಸ್!  

ಡಿಕೆಶಿ ನೀಡಿದ ಟಾಸ್ಕ್ ಗೆಲ್ತಾರಾ ಜಗದೀಶ್ ಶೆಟ್ಟರ್? – ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಹೊಸ ಟ್ರಿಕ್ಸ್!  

ನಾಯಕರೇ ಸೋಲಿನ ರುಚಿ ಕಂಡ್ರೆ ಅಂಬೆಗಾಲಿಡುತ್ತಾ ಎಲೆಕ್ಷನ್ ಗೆ ಸ್ಪರ್ಧಿಸಿದ ಹೊಸಬರು ಭರ್ಜರಿ ಜಯ ಗಳಿಸಿದ್ದಾರೆ. ಅದರಲ್ಲೂ ಸತತ 6 ಬಾರಿ ಗೆದ್ದಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಕೈ ಹಿಡಿದು ಕೊನೆಗೆ ಸೋಲು ಅನುಭವಿಸಿದ್ರು. ಆದರೆ ಶೆಟ್ಟರ್ ಸೋತರು ಕೂಡ ಅವರ ಆಗಮನ ಕಾಂಗ್ರೆಸ್ ಗೆ ಲಾಭ ತಂದುಕೊಟ್ಟಿತ್ತು. ಇದೇ ಕಾರಣಕ್ಕೆ ಈಗ ಡಿಸಿಎಂ ಡಿ.ಕೆ ಶಿವಕುಮಾರ್ ಶೆಟ್ಟರ್ ಗೆ ಹೊಸ ಟಾಸ್ಕ್ ನೀಡಿದ್ದಾರೆ ಎನ್ನಲಾಗಿದೆ.

ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷ ಈಗ ಮುಂಬರುವ ಎಲ್ಲಾ ಎಲೆಕ್ಷನ್ ಗಳ ಮೇಲೆ ಕಣ್ಣಿಟ್ಟಿದೆ. ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಶಕ್ಕೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್​ ಅವರಿಗೆ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಸಿಎಂ ಡಿಕೆ ಶಿವಕುಮಾರ್ ಟಾಸ್ಕ್ ಕೊಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಲೋಕಸಭೆಗೂ ಮುನ್ನ ಪಾಲಿಕೆಯಲ್ಲಿ ಕೈ ಬಾವುಟ ಹಾರಾಟಕ್ಕೆ ಪ್ಲಾನ್ ಹಾಕಲಾಗಿದೆ. ಜಗದೀಶ್ ಶೆಟ್ಟರ್ ಮೂಲಕ ಸಾಕಾರಗೊಳಿಸಲು ಕೈ ಪಡೆ ಪ್ರಯತ್ನಿಸುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಫ್ರೀ ಬಸ್‌ ಟಿಕೆಟ್‌ ಎಫೆಕ್ಟ್‌ – ಓಲಾ, ಉಬರ್‌ ಬುಕ್ಕಿಂಗ್‌ನಲ್ಲಿ ಶೇ.30 ರಷ್ಟು ಇಳಿಕೆ!

ಜೂನ್ 20 ರಂದು ಮೇಯರ್, ಉಪ ಮೇಯರ್ ಚುನಾವಣೆ ನಡೆಯಲಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದ್ಯ ಬಿಜೆಪಿ ವಶದಲ್ಲಿದೆ. ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ 16 ಸೀಟು ಗೆದ್ದಿದೆ. ಈ ಪೈಕಿ ಪಾಲಿಕೆಯ 11 ಸದಸ್ಯರು ಶೆಟ್ಟರ್ ಪರವಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. 82 ಸದಸ್ಯ ಬಲ ಹೊಂದಿರೋ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 39, ಕಾಂಗ್ರೆಸ್ 33, ಎಐಎಂಐಎಂ ನ 3, ಜೆಡಿಎಸ್ 1 ಹಾಗೂ 6 ಜನ ಪಕ್ಷೇತರರು ಜಯ ಗಳಿಸಿದ್ದಾರೆ.

ಸಂಸತ್ ಸದಸ್ಯರು, ಶಾಸಕರು, ಪರಿಷತ್ ಸದಸ್ಯರು, ಪಕ್ಷೇತರ ಬೆಂಬಲದೊಂದಿಗೆ ಬಿಜೆಪಿ ಬಲ 46ಕ್ಕೆ ಏರಿಕೆಯಾಗಿತ್ತು. ಶಾಸಕರು, ಎಂಐಎಂ, ಜೆಡಿಎಸ್, ಪಕ್ಷೇತರರನ್ನು ತಮ್ಮೆಡೆ ಸೆಳೆದಲ್ಲಿ ಕಾಂಗ್ರೆಸ್ ಬಲ 44 ಕ್ಕೇರೋ ಸಾಧ್ಯತೆಗಳಿವೆ. ಶೆಟ್ಟರ್ ಆಪ್ತ ವಲಯದ ಸದಸ್ಯರು ಸಭೆಗೆ ಗೈರಾದ್ರೆ ಕಾಂಗ್ರೆಸ್ ಗೆಲುವು ನಿಶ್ಚಿತ ಎಂಬ ಲೆಕ್ಕಾಚಾರ ನಡೆದಿದೆ. ಶೆಟ್ಟರ್ ಹಿಂಬಾಲಕ ಸದಸ್ಯರು ಬಹಿರಂಗವಾಗಿ ಕಾಂಗ್ರೆಸ್ ಗೆ ಬೆಂಬಲಿಸಿದಲ್ಲಿ ಕೈಗೆ ಆನೆ ಬಲ ಸಿಕ್ಕಂತಾಗುತ್ತದೆ. ಶತಾಯಗತಾಯ ಗೆದ್ದೇ ಗೆಲ್ಲಬೇಕೆಂದು ಕಾಂಗ್ರೆಸ್ ಜಿದ್ದಿಗೆ ಬಿದ್ದಿದೆ. ಪಾಲಿಕೆಯಲ್ಲಿ ಗೆಲ್ಲಿಸಿಕೊಂಡು ಬರುವಂತೆ ಶೆಟ್ಟರ್ ಮನವೊಲಿಕೆ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಜಗದೀಶ್ ಶೆಟ್ಟರ್ ಮ್ಯಾಜಿಕ್ ನಡೆದರೆ ಪಾಲಿಕೆ ಸುಲಭವಾಗಿ ಕೈ ಪಾಲಾಗೋದು ಖಚಿತವಾಗಿದೆ. ಮತ್ತೊಂದೆಡೆ ಅಧಿಕಾರ ಗದ್ದುಗೆ ಉಳಿಸಿಕೊಳ್ಳಲು ಬಿಜೆಪಿಯಿಂದ ಇನ್ನಿಲ್ಲದ ಕಸರತ್ತು ಆರಂಭಗೊಂಡಿದೆ.

suddiyaana