ಡಿಕೆಶಿ CM ಕನಸಿಗೆ HDK ಕೊಳ್ಳಿ!? – ಸೇಡಿಗೆ ಸೇಡು!

ಡಿಕೆಶಿ CM ಕನಸಿಗೆ HDK ಕೊಳ್ಳಿ!? –  ಸೇಡಿಗೆ ಸೇಡು!

ಡಿಕೆಶಿ ಅವರೇ ನೀವು ಜೈಲಿಗೆ ಹೋಗುವ ದಿನಗಳು ದೂರ ಇಲ್ಲ.. ಕೇಳಿದ್ರಿ ಅಲ್ವಾ ನಮ್ಮ ಕೇಂದ್ರ ಸಚಿವ ಕುಮಾರಸ್ವಾಮಿಯವರ ಮಾತನ್ನ.. ಇವರ ಮಾತಿನಲ್ಲಿ ಎದ್ದು ಕಾಣ್ತಾ ಇದ್ದಿದ್ದು ಸೇಡಿಗೆ ಸೇಡು ಅನ್ನೋ ಕಿಚ್ಚು.. ತನ್ನ ಕುಟುಂಬವನ್ನ ನಾಶ ಮಾಡೋಕೆ ಹೊರಟ ಡಿಕೆಶಿಯನ್ನ ಬಗ್ಗು ಬಡಿಯೋ ಆಕ್ರೋಶ.. ನಿಜ ರಾಜ್ಯರಾಜಕೀಯದಲ್ಲಿ ಯತ್ನಾಳ್ ಮತ್ತು ವಿಜಯೇಂದ್ರಕ್ಕಿಂತ ಬದ್ಧ ವೈರಿ ಅಂದ್ರೆ ಅದು ಡಿಕೆಶಿ ಮತ್ತು ಹೆಚ್‌ಡಿಕೆ.. ದೇವೇಗೌಡ್ರು ಕುಟುಂಬದಲ್ಲಿ ಏನೇಲ್ಲಾ ಆಯ್ತು ಅದಕ್ಕೆಲ್ಲಾ ಕಾರಣ ಡಿಕೆ ಶಿವಕುಮಾರ್ ಅನ್ನೋ ಟಾಕ್ ಇದೆ. ಅದು ವಾಸ್ತವಕ್ಕೂ ಹತ್ತಿರವಿದೆ. ಅದ್ದನ್ನೇ ಕುಮಾರಸ್ವಾಮಿ ಒತ್ತಿ ಒತ್ತಿ ಹೇಳಿದ್ದಾರೆ. ನಮ್ಮ ಕುಟುಂಬ ಮುಗಿಸೋಕೆ ಏನೆಲ್ಲಾ ಮಾಡಿದ್ರಿ ಎಲ್ಲಾ ಗೊತ್ತು  ದೇವರೇ ತಕ್ಕ ಪಾಠ ಕಲಿಸ್ತಾನೆ ಅಂತ ಹೇಳಿದ್ದಾರೆ. ಹೆಚ್‌ಡಿಕೆ ಹಾಕಿರೋ ಈ ಬಾಂಬ್ ಈಗ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್ ಆಗಿದೆ. ಡಿಕೆಶಿ ಟೀಂ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಡಿಸಿಎಂ ಡಿಕೆ ಶಿವಕುಮಾರ್ ಮುಂದೆ ಇರೋ ದೊಡ್ಡ ಟಾರ್ಗೆಟ್ ಅಂದ್ರೆ ಸಿಎಂ ಆಗೋದು. ಇದೇ ಅವಧಿಯಲ್ಲೇ ಸಿಎಂ ಆಗಬೇಕು ಅನ್ನೋ ಕನಸನ್ನ ಡಿಕೆಶಿ ಇಟ್ಟುಕೊಂಡಿದ್ದಾರೆ. ಅಧಿಕಾರದಲ್ಲಿರೋ ಸಿದ್ದರಾಮಯ್ಯರನ್ನ ಕೆಳಗಿಳಿಸಿ ಅಲ್ಲಿ ಡಿಕೆಶಿ ಕುರುವ ಪ್ಲ್ಯಾನ್ ಇದೆ. ಬಟ್ ಇದ್ದಕ್ಕೆ ವಿರೋಧ ಉಂಟಾದ್ರೆ ನೆಕ್ಟ್ ಟರ್ಮ್‌ನಲ್ಲಿ ಕಾಂಗ್ರೆಸ್‌ನಿಂದ ಡಿಕೆಶಿನೇ ಸಿಎಂ ಆಗೋದು ಫಿಕ್ಸ್..  ತಾನು ಸಿಎಂ ಆಗೇ ಆಗ್ತೀನಿ ಅನ್ನೋ ಖುಷಿಯಲ್ಲಿದ್ದ ಡಿಕೆಶಿ ತೆಲೆಗೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಯವರು ಒಂದು ಹುಳ ಬಿಟ್ಟಿದ್ದಾರೆ..

ಇದನ್ನೂ ಓದಿ: ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡ್ತಿಲ್ಲ.. ಡಿಕೆಶಿ ಹಠ ಬಿಡ್ತಿಲ್ಲ! – ಸರ್ಕಾರ ಪತನ ನಿಶ್ಚಿತ ಎಂದ ಆರ್‌.ಅಶೋಕ್!

ಇದು ಹೆಚ್‌ಡಿ ಕುಮಾರಸ್ವಾಮಿ ಕೆಲ ದಿನಗಳ ಹಿಂದೆ ಮಾತನಾಡಿರೋ ಮಾತು.. ಡಿಕೆಶಿಯನ್ನ ಟಾರ್ಗೆಟ್ ಮಾಡಿದ ಹೆಚ್‌ಡಿಕೆ.. ನೀವು ಜೈಲಿಗೆ ಹೋಗುವ ದಿನ ಹತ್ತಿರದಲ್ಲಿದೆ.. ನೀವು ಕಾನೂನು ಬಾಹಿರವಾಗಿ ಏನೆಲ್ಲಾ ನಡೆಸಿದ್ದೀರಾ ಅನ್ನೋದು ಗೊತ್ತಿದೆ. ಮುಂದೆ ದೊಡ್ಡ ಮಟ್ಟದಲ್ಲಿ ಭಗವಂತನನ್ನ ನಂಬಿದ್ದೇನೆ ಅಂತ ಹೆಚ್‌ಡಿಕೆ ಹೇಳಿದ್ದಾರೆ. ಈ ಮಾತುಗಳನ್ನ ಕೇಳಿದ್ರೆ ಗೊತ್ತಾಗುತ್ತೆ.. ಡಿಕೆಶಿಯನ್ನ ಖೆಡ್ಡಾಕ್ಕೆ ಬೀಳಿಸೋಕೆ ದೊಡ್ಡ ಮಟ್ಟದಲ್ಲೇ ಪ್ಲ್ಯಾನ್ ಮಾಡಲಾಗಿದೆ ಅನ್ನೋದು..

ಒಂದ್ ಕಾಲದಲ್ಲಿ ದಿಗ್ಗಜುರು ಸಿನಿಮಾದಲ್ಲಿ ಅಂಬರೀಷ್ ಮತ್ತು ವಿಷ್ಣುವರ್ಧನ್ ತರ ಇದ್ದ ಡಿಕೆ ಶಿವಕುಮಾರ್ ಮತ್ತು ಹೆಚ್‌ಡಿ ಕುಮಾರ ಸ್ವಾಮಿ.. ಈಗ ಹಾವು ಮುಂಗುಸಿ ತರ ಆಗಿದ್ದಾರೆ.. ಯಾವಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಉರುಳಿ ಬಿತ್ತೋ ಅವಾಗ್ಲೇ ಇವರ ನಡುವೆ ಬಿರುಕು ಶುರುವಾಯ್ತು.. ಸರ್ಕಾರ ಉರುಳುವುದ್ದಕ್ಕೆ ಕಾರಣನೇ ಡಿಕೆಶಿ ಅನ್ನೋ ಕಿಚ್ಚು ಕುಮಾರಸ್ವಾಮಿಯಲ್ಲಿ ಹೆಚ್ಚಾಗಿ ಹೋಯ್ತು.. ನಂತ್ರ ಏನೇನೋ ನಡದೇ ಹೋಯ್ತು.. ಅಲ್ಲಿಂದ ಇಲ್ಲಿ ತನಕ ದೇವೇಗೌಡ್ರು ಕುಟುಂಬದಲ್ಲಿ ಏನೆಲ್ಲಾ ಬೆಳವಣಿಗೆ ಆಗಿದ್ಯೋ ಅದಕ್ಕೆಲ್ಲಾ ಕಾರಣ ಡಿಕೆಶಿ ಅನ್ನೋದು ಗುಟ್ಟಾಗಿ ಉಳಿದಿಲ್ಲ. ಪ್ರಜ್ವಲ್ ಪೆನ್‌ಡ್ರೈವ್ ಕೇಸ್ ಆಚೆ ಬರೋಕೆ ಕಾರಣನೇ ಡಿಕೆಶಿ. ಜೆಡಿಎಸ್ ಪಕ್ಷದ ಮರ್ಯಾದೆಯನ್ನ ದೇಶ ಮಟ್ಟದಲ್ಲಿ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿ ತಗೆದಿದ್ದು ಇದೇ ಡಿಕೆ ಶಿವಕುಮಾರ್ ಅನ್ನೋ ಕಿಚ್ಚು ಹೆಚ್‌ಡಿಕೆಯನ್ನ ಕಾಡ್ತಿದೆ. ಹೀಗಾಗಿಯೇ ಕುಮಾರಸ್ವಾಮಿ ಈಗ ಡಿಕೆಶಿ ವಿರುದ್ಧ ಗುಟುರು ಹಾಕುತ್ತಿದ್ದಾರೆ. ಅದ್ರಲ್ಲೂ ಈಗ ಡಿಕೆಶಿ ಸಿಎಂ ಆಗೋ ಟೈಂಗೆ ಹತ್ತಿರ ಬರ್ತಿದೆ.. ಡಿಕೆಶಿ ಬಣದ ಪ್ರಕಾರ 2025 ಮುಗಿದ ನಂತ್ರ ಸಿದ್ದರಾಮಯ್ಯ ಕುರ್ಚಿಯಿಂದ ಕೆಳಗಿಳಿದು ಶಿವಕುಮಾರ್ ಸಿಎಂ ಆಗ್ತಾರೆ ಅನ್ನೋದು. ಈ ಟೈಂನಲ್ಲಿ ಹೆಚ್‌ಡಿಕೆ ಹೇಳಿಕೆ ಸೇಡಿಗೆ ಸೇಡು ತೀರಿಸಿಕೊಳ್ಳುವಂತೆ ಇದೆ. ಯಾಕಂದ್ರೆ ಇಲ್ಲಿ  ಹೆಚ್‌ಡಿಕೆ ಮಾಡಿರೋದು ಕೇವಲ ಭೂಕಬಳಿಕೆ ಆರೋಪ ಅಲ್ಲ..   ತಮ್ಮ ಕುಟುಂಬವನ್ನೇ ಮುಗಿಸುತ್ತಿದ್ದಾರೆ ಅಂತ ಹೆಚ್‌ಡಿಕೆ ಆರೋಪಿಸಿದ್ದಾರೆ. ಇದು ಎಲ್ಲೋ ಒಂದ್ಕಡೆ ದೇವೇಗೌಡ್ರು ಕುಟುಂಬ ಹಾಕಿದ ಮಂತ್ರವೇ ಡಿಕೆಶಿಗೆ ಎಫೆಕ್ಟ್ ಆಗಬಹುದು.. ಹೇಗೆ  ಪ್ರಜ್ವಲ್ ರೇವಣ್ಣನ ಪೆನ್‌ಡ್ರೈವ್ ಡಿಕೆಶಿ ಕೈಯಲ್ಲಿ ಇತ್ತೋ, ಹಾಗೇ ಡಿಕೆಶಿಯ ಕೆಲ ಆಕ್ರಮದ ಬಗ್ಗೆ ಹೆಚ್‌ಡಿಕೆಗೆ ಗೊತ್ತಿರಬಹುದು. ಅದ್ದನ್ನ ಇಟ್ಟುಕೊಂಡು, ಆ ಕುಟುಂಬಗಳ ಬೆನ್ನಿಗೆ ನಿಂತು ಕೇಂದ್ರದ ಸಪೋರ್ಟ್ ಪಡೆದುಕೊಂಡು ಹೆಚ್‌ಡಿಕೆ ಡಿಕೆಶಿ ಸಿಎಂ ಆಗೋ ಟೈಂಗೆ ಕೇಸ್‌ ಅಂತ ಹೊಸ ಬಾಂಬ್‌ ಹಾಕಬಹುದು..  ಭೂಕಬಳಿಕೆ ಕೇಸ್ ದೊಡ್ಡದ್ದು ಮಾಡಿ.. ಡಿಕೆಶಿ ಇನ್ನೇನು ಸಿಎಂ ಕುರ್ಚಿಯಲ್ಲಿ ಕುರುವ ವೇಳೆಗೆ ಜೆಡಿಎಸ್ ಮತ್ತು ಬಿಜೆಪಿ ಸೇರಿಕೊಂಡು ದೊಡ್ಡದಾಗಿ ಪ್ರತಿಭಟನೆ ನಡೆಸಬಹುದು.. ಡಿಕೆಶಿ ಸಿಎಂ ಆಗಬಾರದು ಅಂತ ರಾಜ್ಯದಲ್ಲಿ ದೊಡ್ಡ ಕಿಡಿ ಕೂಡ ಹಚ್ಚಬಹುದು.. ಹಾಗಾಗಿ ನನ್ನ ಪ್ರಕಾರ ಡಿಕೆಶಿ ಸಿಎಂ ಆಗೋ ಟೈಂನಲ್ಲೇ ಹೆಚ್‌ಡಿಕೆ ದೊಡ್ಡದಾಗಿ ಬಾಂಬ್ ಹಾಕೋಕೆ ಕಾಯ್ತಾ ಇದ್ದಾರೆ.. ಯಾಕಂದ್ರೆ ಇವರೇ ಹೇಳುವಂತೆ ಆ ಭಗವಂತ ನಿಮ್ಗೆ ಏನ್ ಶಿಕ್ಷೆ ಕೊಡಬೇಕು ಕೊಡ್ತಾನೆ ಅಂತ ಹೆಚ್‌ಡಿಕೆ ಹೇಳಿದ್ದಾರೆ. ಇದ್ರಲ್ಲೇ ಗೊತ್ತಾಗುತ್ತೆ ದೊಡ್ಡದಾಗಿ ಖೆಡ್ಡಾ ತೋಡಿದ್ದಾರೆ ಅನ್ನೋದು..

ಕಳೆದ ಒಂದು ವರ್ಷದಿಂದ ಡಿಕೆಶಿ ಅಕ್ರಮ ಆಸ್ತಿಗಳಿಕೆ ಕೇಸ್‌ನಲ್ಲಿ ಸ್ವಲ್ಪ ರಿಲೀಫ್ ಆಗಿದ್ರೂ. ಬಟ್ ಈಗ  ಕೇಸ್‌ನ ಅರ್ಜಿಯ ವಿಚಾರಣೆಯನ್ನ ಸುಪ್ರೀಂ ಕೋರ್ಟ್‌ ಬೇರೊಂದು ಪೀಠಕ್ಕೆ ವರ್ಗ ಮಾಡಿದೆ. ಇದು ಈಗಾಗಾಲೇ ಡಿಕೆಶಿ ಪಾಳಯದಲ್ಲಿ ಭಯ ಹುಟ್ಟಿಸಿದೆ. ಹಳೇ ಅಕ್ರಮ ಆಸ್ತಿ ಕೇಸ್‌ ಮತ್ತೆ ಬಾಲ ಬಿಚ್ಚಿಕೊಳ್ಳಬಹುದು. ಅಲ್ಲದೇ ಹೆಚ್‌ಡಿಕೆ ಈಗ ಪವರ್ ಫುಲ್ ಕೇಂದ್ರ ಸಚಿವ.. ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು.. ಇವರು ಈಗ ತಮ್ಮ ಪವರ್ ಬಳಸಿಕೊಂಡು ತನಿಖೆ ಸಂಸ್ಥೆ ಮೇಲೆ ಒತ್ತಡ ತಂದು ಡಿಕೆಶಿಯನ್ನ ಜೈಲಿಗೆ ಕಳುಹಿಸುವಂತೆ ಕೂಡ ಮಾಡಬಹುದು. ಇದ್ರ ಜೊತೆ ಈಗ ಹೊಸದಾಗಿ ಹೆಚ್‌ಡಿಕೆ ಒಂದಷ್ಟು ಆರೋಪ ಕೂಡ ಮಾಡಿದ್ದಾರೆ.. ಅದು ಕೂಡ ಎಫೆಕ್ಟ್ ಆಗಬಹುದು.  ರಾಮಸ್ವಾಮಿ  ಅನ್ನೋರು ಭಾರತೀಯ ಸೇನೆಯಲ್ಲಿ ರಾಷ್ಟ್ರಸೇವೆ ಮಾಡಿ ಬಂದಿದ್ದರು. ಅವರು ತಮ್ಮ ಕಷ್ಟದ ಹಣದಿಂದ ಒಂದಿಷ್ಟು ಜಮೀನು ಖರೀದಿಸಿ ಬದುಕು ಕಟ್ಟಿಕೊಂಡಿದ್ದರು. ಆ ಭೂಮಿಯ ಮೇಲೆ ಡಿಕೆಶಿ ಕಾಕದೃಷ್ಟಿ ಬಿದ್ದಿತು. ಆ ಜಮೀನು ಬಿಟ್ಟುಕೊಡಿ ಎಂದು ಅವರಿಗೆ ಧಮ್ಕಿ ಹಾಕಿದ್ದರು. ಅವರು ಬಿಟ್ಟು ಕೊಡಲಿಲ್ಲ. ಕೊನೆಗೆ ಆ ಸೈನಿಕನ ಮಗಳನ್ನೇ ಕಿಡ್ನಾಪ್ ಮಾಡಿ ಆ ಜಮೀನನ್ನು ಬರೆಸಿಕೊಂಡಿದ್ದಾರೆ ಅಂತ ಆರೋಸಿದ ಹೆಚ್‌ಡಿಕೆ,  ಇಂತಹ ನೀಚ ಕೆಲಸ ನಾವು ಮಾಡಿದ್ದೇವೆಯೇ? ಎಂದು ಪ್ರಶ್ನಿಸಿದ್ದಾರೆ.

ಅಲ್ಲದೇ ಬೆಂಗಳೂರು ಸುತ್ತಮುತ್ತ ನೈಸ್ ರಸ್ತೆ ಇದೆ. ಹೊಸಕೆರೆಹಳ್ಳಿ ಸುತ್ತಮುತ್ತ ಸಾರ್ವಜನಿಕರಿಂದ ಸ್ವಾಧೀನ ಮಾಡಿಕೊಂಡಿರುವ ಭೂಮಿಯನ್ನೂ ಡಿಕೆಶಿ ಕಬಳಿಸಿದ್ದಾರೆ ಅಂತಾನೂ ಆರೋಪ ಮಾಡಿದ್ದಾರೆ. ಟೌನ್ ಶಿಪ್ ಹೆಸರಿನಲ್ಲೂ ಫಲವತ್ತಾದ ಭೂಮಿಯನ್ನು ಲೂಟಿ ಮಾಡಲು ಹೊರಟಿದ್ದಾರೆ ಅನ್ನೋದು ಮತ್ತೊಂದು ಆರೋಪ. ಹೀಗೆ ಹಳೇ ಕೇಸ್ ಜೊತೆ ಹೊಸ ಕೇಸ್ ಹಾಕಿ ಡಿಕೆಶಿಯನ್ನ ಬಗ್ಗು ಬಡಿಯೋಕೆ ಅದ್ರಲ್ಲೂ ಸಿಎಂ ಕುರ್ಚಿ ಹತ್ತೋಕೆ ಬಿಡದಂತೆ ಮಾಡೋದು ಹೆಚ್‌ಡಿಕೆ ಪ್ಲ್ಯಾನ್.. ಯಾಕಂದ್ರೆ ಡಿಕೆಶಿ ಸಿಎಂ ಆದ್ರೆ ಜೆಡಿಎಸ್‌ನ್ನ ಮುಗಿಸಿ ಬಿಡಬಹುದು. ತಮ್ಮ ಪವರ್ ಬಳಸಿ ದೇವೇಗೌಡ್ರ ಕುಟುಂಬವನ್ನ ನೆಲಕಚ್ಚುವಂತೆ ಮಾಡಬಹುದು..

ಹಾಗೇ ಈಗ ಒಕ್ಕಲಿಗ ಪವರ್ ಫುಲ್ ನಾಯಕ ಅಂತ ದೇವೇಗೌಡ್ರು ಮಗ ಕುಮಾರಸ್ವಾಮಿ ಗುರುತಿಸಿಕೊಂಡಿದ್ದಾರೆ. ಒಂದು ವೇಳೆ ಡಿಕೆಶಿ ಸಿಎಂ ಆದ್ರೆ ಒಕ್ಕಲಿಗ ಪವರ್ ಫುಲ್ ನಾಯಕ ಡಿಕೆ ಶಿವಕುಮಾರ್ ಆಗ್ತಾರೆ.. ಈಗಾಗಲೇ ಡಿಕೆಶಿ ಒಕ್ಕಲಿಗ ಸಮುದಾಯದ ಮೇಲೆ ತಮ್ಮ ಹಿಡಿತ ಸಾಧಿಸಿದ್ದಾರೆ. ಮುಂದೆ ಸಿಎಂ ಆದ್ರೂ ಮೇಲೆ ಸಂಪೂರ್ಣ ಹಿಡಿತ ಸಾಧಿಸೋದು ಪಕ್ಕಾ. ಹೀಗಾಗಿ  ಸಿಎಂ ಪಟ್ಟ ಏರುವ ಮುಂಚೆಯೇ ಡಿಕೆಶಿಯನ್ನ ಕಟ್ಟಿಹಾಕೋದು ಹೆಚ್‌ಡಿಕೆ ತಂತ್ರ. ಬಟ್ ಇದು ಎಷ್ಟರಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದ್ದನ್ನ ಕೂಡ ಕಾದು ನೋಡಬೇಕಿದೆ.

ಡಿಕೆಶಿ ಜೈಲಿಗೆ ಹೋಗ್ತಾರೆ ಎಂಬ ಹೆಚ್‌ಡಿಕೆ ಹೇಳಿಕೆಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಹೇಳಿದ್ದನ್ನ ನೋಡಿದ್ದೇನೆ. ಮೊದಲಿಂದಲೂ ನನ್ನನ್ನ ಜೈಲಿಗೆ ಹಾಕಲು ಸಂಕಲ್ಪ, ಷಡ್ಯಂತ್ರ ಮಾಡಿದ್ದಾರೆ. ಏನೇನು ಮಾತನಾಡಿದ್ದಾರೆ ಎಲ್ಲದಕ್ಕೂ ಉತ್ತರ ಕೊಡ್ತೇನೆ.  ಮೊದಲಿಂದಲೂ ಅವರ ಕುಟುಂಬ ನಮ್ಮ ವಿರುದ್ದ ದೊಡ್ಡ ಷಡ್ಯಂತ್ರ ಮಾಡ್ತಿದೆ. ಅವರು ಸಿಎಂ ಆಗಿದ್ದಾಗ ನನ್ನ ತಂಗಿ, ನನ್ನ ತಮ್ಮನ ಮೇಲೆ ಕೇಸ್ ಹಾಕಿಸಿದ್ರು. ಈಗಲೂ ಅದೇ ರೀತಿ ಷಡ್ಯಂತ್ರ ಮಾಡ್ತಿದ್ದಾರೆ. ಅದಕ್ಕೂ ಉತ್ತರ ಕೊಡ್ತೇನೆ, ಅವರಿಗೂ ಉತ್ತರ ಕೊಡ್ತೆನೆ ಎಂದರು. ಇದು ಕೊನೆ ಆಗಬೇಕು, ಯಾವುದಾದರೂ ಮಾಧ್ಯಮದ ಡಿಬೆಟ್‌‌ಗೆ ಬರಲಿ, ಪಕ್ಕದಲ್ಲಿ ಅವರನ್ನೂ ಕೂರಿಸಿ ಎಲ್ಲಾ ಚರ್ಚೆ ಮಾಡೋಣ ಅಂತ ಸವಾಲು ಹಾಕಿದ್ರು. ನ್ನಲ್ಲಿರುವ ಅಗಾಧ ಭಂಡಾರದಿಂದ ಎಲ್ಲ ತೆಗಿತೀನಿ. ಅವರು ಕೂಡ ಬತ್ತಳಿಕೆಯಲ್ಲಿ ಏನೇನಿದೆ ತೆಗೆಯಲಿ. ಅವರು ಜಡ್ಜ್ ತರ ಮಾತನಾಡ್ತಿದ್ದಾರೆ ಅಲ್ವಾ? ಜಡ್ಜ್ ತಾನೆ ಜೈಲಿಗೆ ಹಾಕೋದು ಅಂತ ಹೆಚ್‌ಡಿಕೆಗೆ ಡಿಕೆಶಿ ತಿರುಗೇಟು ಕೊಟ್ಟಿದ್ದಾರೆ.

Kishor KV