ಲೋಕಸಭಾ ಚುನಾವಣೆಗೆ ಡಿಕೆಶಿ ‘ಟಾರ್ಗೆಟ್ 20’ – ತೇಜಸ್ವಿಸೂರ್ಯ ವಿರುದ್ಧ ರಮ್ಯಾ ಅಖಾಡಕ್ಕೆ..?

ಲೋಕಸಭಾ ಚುನಾವಣೆಗೆ ಡಿಕೆಶಿ ‘ಟಾರ್ಗೆಟ್ 20’ – ತೇಜಸ್ವಿಸೂರ್ಯ ವಿರುದ್ಧ ರಮ್ಯಾ ಅಖಾಡಕ್ಕೆ..?

ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಜಯಭೇರಿ ಬಾರಿಸಿರುವ ಕಾಂಗ್ರೆಸ್ ಈಗ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಅದ್ರಲ್ಲೂ ಡಿಸಿಎಂ ಡಿ.ಕೆ ಶಿವಕುಮಾರ್ ಚುನಾವಣೆಯಲ್ಲಿ ಕನಿಷ್ಠ 20 ಕ್ಷೇತ್ರಗಳನ್ನ  ಗೆಲ್ಲುವ ಟಾರ್ಗೆಟ್ ಇಟ್ಟುಕೊಂಡಿದ್ದಾರೆ.. ಹಾಗೇ ಟಾರ್ಗೆಟ್ 20 ಪೂರ್ಣಗೊಳಿಸಲು ಯಾವ ಕ್ಷೇತ್ರದಲ್ಲಿ ಯಾರನ್ನು ಕಣಕ್ಕಿಳಿಸಬೇಕು ಮತ್ತು ಯಾಕೆ ಎಂಬುದರ ಮಾಹಿತಿಯನ್ನು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆಶಿ ಕಲೆ ಹಾಕುತ್ತಿದ್ದಾರೆ.. ಹಾಗೇ ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಬಿಜೆಪಿ ಭದ್ರಕೋಟೆಗಳನ್ನು ವಶಪಡಿಸಿಕೊಳ್ಳುವ ಸವಾಲು ಡಿ.ಕೆ ಶಿವಕುಮಾರ್ ಮುಂದಿದೆ.

ಇದನ್ನೂ ಓದಿ : ಬಿಡಿಎ ಅಧ್ಯಕ್ಷರನ್ನಾಗಿ IAS ಅಧಿಕಾರಿಯನ್ನ ನೇಮಿಸಿದ ರಾಜ್ಯ ಸರ್ಕಾರ – ಹುದ್ದೆ ಮೇಲೆ ಕಣ್ಣಿಟ್ಟಿದ್ದ ಶಾಸಕರಿಗೆ ಶಾಕ್!

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ 14 ಮಂದಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ಈಗ ಅದೇ ರೀತಿ ಬಿಜೆಪಿಯ ಪ್ರಭಾವಿ ಸಂಸದರ ಕ್ಷೇತ್ರಗಳಿಗೆ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ಡಿ.ಕೆ ಶಿವಕುಮಾರ್ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿಕೆಶಿಗೆ ರಾಜಧಾನಿಯಲ್ಲಿ ಕನಿಷ್ಠ ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ಸವಾಲು ಇದೆ. ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ಸೆಂಟ್ರಲ್​ನಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬುದರ ಬಗ್ಗೆ ಕಾಂಗ್ರೆಸ್ ಚುನಾವಣಾ ತಜ್ಞರ ಸಲಹೆ ಕೇಳಿದ್ದಾರಂತೆ.

ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿದೆ. ಈ ಮೊದಲು ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಬೆಂಗಳೂರು ದಕ್ಷಿಣ ಕ್ಷೇತ್ರ ಪ್ರತಿನಿಧಿಸುತ್ತಿದ್ದರು. ಅನಂತಕುಮಾರ್ ನಿಧನದ ಬಳಿಕ ತೇಜಸ್ವಿ ಸೂರ್ಯ ಈ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಬಿಜೆಪಿ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರಾಗಿದ್ದಾರೆ. ಈ ಹಿನ್ನೆಲೆ ತೇಜಸ್ವಿ ಸೂರ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಒಂದು ವೇಳೆ ತೇಜಸ್ವಿ ಸೂರ್ಯ ಪರಾಜಿತರಾದ್ರೆ ಬಿಜೆಪಿಗೆ ದೊಡ್ಡ ಹಿನ್ನಡೆ ಆಗಲಿದೆ ಎಂಬುವುದು ಕಾಂಗ್ರೆಸ್ ಲೆಕ್ಕಾಚಾರ ಆಗಿದೆ.

ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಂಸದೆ ರಮ್ಯಾ ಅವರನ್ನು ಕಣಕ್ಕಿಳಿಸಲು ಡಿ.ಕೆ ಶಿವಕುಮಾರ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ರಮ್ಯಾ ಅವರ ಜನಪ್ರಿಯತೆ ಬೆಂಗಳೂರಿನಲ್ಲಿ ವರ್ಕೌಟ್ ಆಗಬಹುದು. ರಾಜಧಾನಿಯಲ್ಲಿ ರಮ್ಯಾ ಸ್ಪರ್ಧಿಸಿದ್ರೆ ಯುವ ಮತಗಳು, ಕಾಂಗ್ರೆಸ್​​ನ ಸಾಂಪ್ರದಾಯಿಕ ಮತಗಳ ಜೊತೆಗೆ ಒಕ್ಕಲಿಗ ಮತಗಳನ್ನ ಸೆಳೆಯಬಹುದೆಂಬವುದು ಎಂದು ಡಿ.ಕೆ ಶಿವಕುಮಾರ್ ಪ್ಲ್ಯಾನ್ ಎಂದು ಹೇಳಲಾಗುತ್ತಿದೆ.

 

suddiyaana