ಕುಂಭಮೇಳದಲ್ಲಿ ಡಿಕೆಶಿ ಪುಣ್ಯಸ್ನಾನ – ಖರ್ಗೆಗೆ ಡಿಚ್ಚಿ ಕೊಟ್ರಾ ಡಿಸಿಎಂ?
ಏನಿದು ಪರ ವಿರೋಧ ಚರ್ಚೆ?

ಕುಂಭಮೇಳದಲ್ಲಿ ಡಿಕೆಶಿ ಪುಣ್ಯಸ್ನಾನ – ಖರ್ಗೆಗೆ ಡಿಚ್ಚಿ ಕೊಟ್ರಾ ಡಿಸಿಎಂ?ಏನಿದು ಪರ ವಿರೋಧ ಚರ್ಚೆ?

ಕುಂಭಮೇಳದಲ್ಲಿ ದೇಶ ಸೇರಿದಂತೆ ವಿದೇಶದ ಗಣ್ಯರು ಬಂದು ಪುಣ್ಯಸ್ನಾನ ಮಾಡುತ್ತಿದ್ದಾರೆ. ಆದ್ರೆ ಈ ಕುಂಭಮೇಳದ ಬಗ್ಗೆ ಕಾಂಗ್ರೆಸ್‌ನ ಸಾಕಷ್ಟು ನಾಯಕರು ಅಪಸ್ವರ ಎತ್ತಿದ್ರು.. ಮಲ್ಲಿಕಾರ್ಜುನ ಖರ್ಗೆ ಕೂಡ ಅಲ್ಲಿಗೆ ಹೋದ್ರೆ ಬಡತನ ನಿರ್ಮೂಲನೆ ಆಗುತ್ತಾ ಕೇಳಿದ್ರು. ಹಾಗೇ ಅಲ್ಲಿ ನಡದೆ ಕಾಲ್ತುಳಿತದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ರು ಅಂತ ಆರೋಪಿಸಿದ್ರು.. ಹೀಗೆ ಕುಂಭಮೇಳದ ಬಗ್ಗೆ ಕಾಂಗ್ರೆಸ್‌ನಲ್ಲೇ ಅಪಸ್ವರ ಇರಬೇಕಾದ್ರೆ ಕಾಂಗ್ರೆಸ್ ನಾಯಕರ ಸಿದ್ದರಾಮಯ್ಯ ಸರ್ಕಾರದಲ್ಲಿ ಡಿಸಿಎಂ ಆಗೋರೋ ಡಿಕೆ ಶಿವಕುಮಾರ್ ಕುಂಭಮೇಳಕ್ಕೆ ಹೋಗಿ ಪುಣ್ಯಸ್ನಾನ ಮಾಡಿದ್ದಾರೆ. ಇದು ಪರ ವಿರೋಧ ಚರ್ಚೆಗೆ ಕಾರಣವಾಗಿದ್ದು, ರಾಜಕಾರಣ ಮತ್ತು ನಂಬಿಕೆ ನಡುವೆ ಜೋರಾದ ವಾರ್ ನಡೆಯುತ್ತಿದೆ.

ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್  ಕುಂಭಮೇಳಕ್ಕೆ ಹೋಗಿ ಗಂಗಾನದಿಯಲ್ಲಿ ಪುಣ್ಯಸ್ನಾನವನ್ನು ಮಾಡಿದ್ದಾರೆ. ಪತ್ನಿ ಸಮೇತ ಪ್ರಯಾಗರಾಜ್ ಗೆ ಬಂದಿಳಿದ ಡಿಕೆಶಿ ದಂಪತಿಗಳನ್ನು ಉತ್ತರ ಪ್ರದೇಶದ ಕೈಗಾರಿಕಾ ಸಚಿವರು, ಖುದ್ದಾಗಿ ವಿಮಾನ ನಿಲ್ದಾಣಕ್ಕೆ ಬಂದು ಸ್ವಾಗತಿಸಿದ್ದಾರೆ. ಆದ್ರೆ ಖರ್ಗೆಯವರ ಹೇಳಿಕೆಯ ಮಧ್ಯೆ, ಡಿಕೆಶಿ ಅವರ ಪುಣ್ನಸ್ನಾನ ಚರ್ಚೆಗೆ ಗ್ರಾಸವಾಗಿದೆ. ರ್ನಾಟಕದ ಉಪ ಮುಖ್ಯಮಂತ್ರಿ ಮತ್ತು ಮಹಾನ್ ದೈವಭಕ್ತರಾದ ಡಿ.ಕೆ.ಶಿವಕುಮಾರ್, ಪತ್ನಿ ಸಮೇತರಾಗಿ ಪ್ರಯಾಗರಾಜ್ ಗೆ ತೆರಳಿ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ರು.

 

ತ್ರಿವೇಣಿ ಸಂಗಮದಲ್ಲಿ ಡಿ.ಕೆ.ಶಿವಕುಮಾರ್ ದಂಪತಿ ಪುಣ್ಯಸ್ನಾನ ಮಾಡಿದ್ದಾರೆ. ಅವರಿಗೆ ಮಂತ್ರಘೋಷದ ಮೂಲಕ ರುದ್ರಾಕ್ಷಿ ಮಾಲೆಯೊಂದಿಗೆ ಸ್ವಾಮೀಜಿಯೊಬ್ಬರು ಗಂಗಾ, ಯಮುನಾ, ಸರಸ್ವತಿ ನದಿಯ ಜಲವನ್ನು ಪ್ರೋಕ್ಷಣೆ ಮಾಡಿದ್ದಾರೆ. ನಂತರ, ಗಂಗಾನದಿಗೆ ಪೂಜೆಯನ್ನು ಸಲ್ಲಿಸಿದ್ದಾರೆ.

ಕುಂಭಮೇಳದಲ್ಲಿ ಭಾಗವಹಿಸಲು ಡಿಕೆಶಿಗೆ ಯೋಗಿ ಸರ್ಕಾರ, ಪ್ರತ್ಯೇಕ ಆಹ್ವಾನವನ್ನು ನೀಡಿತ್ತು. ಆದ್ರೆ  ಡಿ.ಕೆ.ಶಿವಕುಮಾರ್ ಅವರ ಕುಂಭಮೇಳದ ಪುಣ್ಯಸ್ನಾನ ಹಲವು ರೀತಿಯಲ್ಲಿ ಚರ್ಚೆ ಆಗುತ್ತಿದೆ. ರಾಜಕೀಯ ಗುದ್ದಾಟ ಶುರುವಾಗಿದೆ.  ಗಂಗಾನದಿಯಲ್ಲಿ ಸ್ನಾನ ಮಾಡಿದರೆ, ಬಡತನ ನಿರ್ಮೂಲನೆ ಆಗುತ್ತಾ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದರು. ಖರ್ಗೆ ಮಾತನ್ನು ಕರ್ನಾಟಕ ಸಿಎಂ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದರು.

ಆದರೆ, ಅವರದೇ ಮೈತ್ರಿಕೂಟದ ಅಖಿಲೇಶ್ ಯಾದವ್, ಪುಣ್ಯಸ್ನಾನ ಮಾಡಿದ್ದರು. ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರ ಆಗುತ್ತೆ ಎನ್ನುವ ನಂಬಿಕೆಯಿದೆ. ಆದರೆ, ನಾವೆಲ್ಲಾ ಬಸವಣ್ಣನ ಫಾಲೋವರ್ಸ್. ಪಾಪ, ಪುಣ್ಯ ಎಲ್ಲಾ ಹೆಂಗೆ? ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಅನ್ನುವುದರಲ್ಲಿ ನನ್ನ ನಂಬಿಕೆ ಎಂದು ಸಿದ್ದರಾಮಯ್ಯ ಹೇಳಿದ್ದರು.

ಇದಕ್ಕೂ ಮೊದಲು ಸತೀಶ್ ಜಾರಕಿಹೊಳಿ ಕೂಡ ಮತನಾಡಿ ಈಗ ಡಿ.ಕೆ.ಶಿವಕುಮಾರ್ ಅವರು ಕುಂಭಮೇಳಕ್ಕೆ ಹೋಗುತ್ತೇನೆ ಎಂದು ಹೇಳಿದ್ದಾರೆ. ನಾನು ಹೋಗುವುದಿಲ್ಲ, ಡಿಕೆಶಿಯವರನ್ನು ಹೋಗಬೇಡಿ ಎಂದು ತಡೆಯಲು ಆಗುತ್ತಾ ಎಂದು ಹೇಳಿದ್ರು.

ದೇವರು, ದೈವ ಇದು ನನ್ನ ನಂಬಿಕೆ. ಯಾರು ಏನು ಹೇಳಿದರೂ, ನಾನು ಮಾತ್ರ ಕುಟುಂಬ ಸಮೇತ ಪ್ರಯಾಗರಾಜ್ ಕುಂಭಮೇಳದಲ್ಲಿ ಭಾಗವಹಿಸಿ ಪುಣ್ಯಸ್ನಾನ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ’ಭಕ್ತಿಯಿಂದ ಕರೆದರೆ ಬರುವ, ಭಕ್ತರ ಇಷ್ಟಾರ್ಥ ಈಡೇರಿಸುವ ಅವನೇ ನಮ್ಮ ಪರಶಿವ!’ ಎಂದು ವಿಡಿಯೋ ಸಮೇತ ಡಿ.ಕೆ.ಶಿವಕುಮಾರ್ ಇನ್ಸ್ಟಾ ಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಹೀಗೆ ಕಾಂಗ್ರೆಸ್‌ನಲ್ಲೇ ಕುಂಭಮೇಳಕ್ಕೆ ವಿರೋಧವಿರುವಾಗ ಕಾಂಗ್ರೆಸ್‌ನ ಪ್ರಮುಖ ನಾಯಕ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರೋ ಡಿಕೆಶಿ ಹೋಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಅಂದ್ರೆ ಇಲ್ಲಿ ಡಿಕೆಶಿ ಹೋಗಿದಕ್ಕೆ ಯಾರದ್ದು ವಿರೋಧ ಇಲ್ಲದಿದ್ದರೂ, ಖರ್ಗೆ ಮತ್ತು ಸಿದ್ದರಾಮಯ್ಯ ಹೇಳಿಕೆ ಇಲ್ಲಿ ಪ್ರಮುಖ್ಯತೆ ಪಡೆದುಕೊಂಡಿದೆ.

ಗಂಗೆಯಲ್ಲಿ ಮಿಂದ ತಕ್ಷಣ ಡಿಸಿಎಂ @DKShivakumar ಅವರು ಪಾಪಗಳೆಲ್ಲ ಕಳೆದುಹೋಗುತ್ತಾ? ಕುಂಭ ಮೇಳದಲ್ಲಿ ಕೆಪಿಸಿಸಿ ಅಧ್ಯಕ್ಷ @DKShivakumar ಅವರು ಪುಣ್ಯಸ್ನಾನ ಮಾಡಿದ ತಕ್ಷಣ ಕರ್ನಾಟಕದಲ್ಲಿ ಬಡತನ ನಿರ್ಮೂಲನೆ ಆಗುತ್ತಾ? ಹೀಗಂತ ಈಗ @kharge ಸಾಹೇಬರು ಪ್ರಶ್ನೆ ಮಾಡಲ್ವಾ? ಎಂದು ವಿಪಕ್ಷದ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದರು. ಹೀಗೆ ಜನ ಕೂಡ ಖರ್ಗೆ ಅವರನ್ನ ಪ್ರಶ್ನೆ ಮಾಡೋ ರೀತಿಯಲ್ಲಿ ಕಮೆಂಟ್ಸ್ ಹಾಕುತ್ತಿದ್ದಾರೆ. ಅಲ್ಲದೇ ಡಿ.ಕೆ.ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಕೂಡಾ ಎರಡು ದಿನಗಳ ಹಿಂದೆ ಪುಣ್ಯಸ್ನಾನ ಮಾಡಿದ್ದರು. ಇಡೀ ಕುಟುಂಬ ಕುಂಭಮೇಳದಲ್ಲಿ ಮಿಂದೆದಿದ್ದೇ..ಒಂದ್ಕಡೆ ರಾಜಕೀಯ ಮತ್ತೊಂದು ಕಡೆ ನಂಬಿಕೆಯ ನಡುವೆ ದೊಡ್ಡ ಘರ್ಷಣೆ ಆಗುತ್ತಿದೆ..

 

Kishor KV

Leave a Reply

Your email address will not be published. Required fields are marked *