ಶಿಗ್ಗಾಂವಿ ಅಖಾಡಕ್ಕೆ ಸಿದ್ದು ಎಂಟ್ರಿ – ಚನ್ನಪಟ್ಟಣದಲ್ಲಿ HDKಗೆ ತಿವಿದ ಡಿಕೆಶಿ
ಗೊಂಬೆಯಾಟ ರೋಡಿಗಿಳಿದ ರೇವತಿ
ದೀಪಾವಳಿ ಹಬ್ಬದ ಸಂಭ್ರಮ ಮುಗಿಯುತ್ತಿದ್ದಂತೆ ದಿದ್ದು, ರಾಜ್ಯದ ಬೈ ಎಲೆಕ್ಷನ್ ಕ್ಷೇತ್ರದ ಕಣಗಳು ರಂಗೇರಿದೆ. ಮೂರು ವಿಧಾನಸಭಾ ಕ್ಷೇತ್ರಗಳ ಉಪಸಮರಕ್ಕೆ ಕೇವಲ 10 ದಿನ ಬಾಕಿ ಇದ್ದು, ಬಹಿರಂಗ ಪ್ರಚಾರಕ್ಕೆ 8 ದಿನ ಮಾತ್ರ ಉಳಿದಿವೆ. ಆಡಳಿತಾರೂಢ ಕಾಂಗ್ರೆಸ್ ಪಾಲಿಗೆ ಮೂರೂ ಕ್ಷೇತ್ರಗಳು ಪ್ರತಿಷ್ಠೆಯ ಕಣವಾಗಿವೆ.ಈ ನಿಟ್ಟಿನಲ್ಲಿ ಘಟಾನುಘಟಿ ನಾಯಕರು ಇಂದಿನಿಂದ ಪ್ರಚಾರದ ಅಖಾಡಕ್ಕೆ ಧುಮುಕುತ್ತಿದ್ದಾರೆ. ಹಾಗೇ ಚನ್ನಪಟ್ಟಣದಲ್ಲಿ ಹೇಗಾದ್ರೂ ಮಾಡಿ ಮೊಮ್ಮಗನನ್ನ ಗೆಲ್ಲಿಸಲೇ ಬೇಕೆಂದು ದೇವೇಗೌಡ್ರು ಪಣ ತೊಟ್ಟಿದ್ದು, ಪ್ರಚಾರದ ಅಖಾಡಕ್ಕೆ ಧುಮಿಕ್ಕಿದ್ದಾರೆ. ಹಾಗಿದ್ರೆ ಎಲ್ಲೆಲ್ಲಿ ಯಾಱರು ಪ್ರಚಾರದಲ್ಲಿ ಅಖಾಡದಲ್ಲಿದ್ದಾರೆ? 3 ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರ ಯಾರ ಪರವಿದೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: 0, 1, 2 ರನ್.. ವೈಟ್ ವಾಷ್! – ರೋಹಿತ್ & ಕೊಹ್ಲಿಗೆ ಗೇಟ್ ಪಾಸ್?
ದೀಪಾವಳಿ ಹಬ್ಬ, ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ನಾಯಕರು ತೊಡಗಿಸಿಕೊಂಡಿದ್ದರಿಂದ ಶಿಗ್ಗಾಂವಿ, ಚನ್ನಪಟ್ಟಣ ಹಾಗೂ ಸಂಡೂರಿನಲ್ಲಿ ಚುನಾವಣ ಬಿಸಿ ಸ್ವಲ್ಪ ಕಡಿಮೆಯಾಗಿತ್ತು. ಆದರೆ ಎಲ್ಲಾ ಮುಗಿಯುತ್ತಿದ್ದಂತೆ ರಾಜಕೀಯ ಜಟಾಪಟಿ ಹೆಚ್ಚಾಗಿದೆ.3 ಕ್ಷೇತ್ರ ಗೆಲ್ಲೋಕೆ 3 ಪಕ್ಷಗಳ ರಣ ಕಹಳೆಯನ್ನ ಊದಿವೆ.
ಸಿಎಂ ಸಿದ್ದರಾಮಯ್ಯ 2 ದಿನ ಶಿಗ್ಗಾವಿಯಲ್ಲಿ ಬಿಡಾರ ಹೂಡಿದ್ರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಚನ್ನಪಟ್ಟಣದಲ್ಲಿ ಬೀಡು ಬಿಟ್ಟಿದ್ದಾರೆ. ಇನ್ನು ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಚಾರಕ್ಕೆ ಇಳಿಯಲಿದ್ದಾರೆ. ಸಂಡೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ.
ಶಿಗ್ಗಾಂವಿಯಲ್ಲಿ ಸಿಎಂ ಸಿದ್ದರಾಮಯ್ಯ ಮತಬೇಟೆ
ಶಿಗ್ಗಾವಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಅವರನ್ನೇ ಬಿಜೆಪಿಯಿಂದ ಅಗ್ನಿಪರೀಕ್ಷೆಗೆ ಇಳಿಸಲಾಗಿದೆ. ಆದ್ರೆ ಹೇಗಾದ್ರೂ ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಬೇಕೆಂದು ಸಿಎಂ ಸಿದ್ದರಾಮಯ್ಯ ಶಿಗ್ಗಾವಿಯಲ್ಲಿ ಠಿಕಾಣಿ ಹೂಡಿದ್ದು, ಬಿಜೆಪಿಗೆ ಟಕ್ಕರ ಕೂಡುತ್ತಾ ಭರ್ಜರಿ ಮತ ಶಿಕಾರಿ ಮಾಡುತ್ತಿದ್ದಾರೆ.ಆದ್ರೆ ಮತಬೇಟೆಗೆ ಎಂಟ್ರಿಕೊಟ್ಟ ಸಿಎಂಗೆ ಬಿಜೆಪಿಯಿಂದ ವಕ್ಫ್ ಪ್ರತಿಭಟನೆಯ ಬಿಸಿ ತಟ್ಟಿತು. ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸಿದ್ದು ವಿರುದ್ಧ ರೈತರನ್ನ ಒಕ್ಕಲೆಬ್ಬಿಸುವ ಹುನ್ನಾರ ಎಂದು ಕಿಡಿ ಕಾರಿದ್ರು.
ಚನ್ನಪಟ್ಟಣದಲ್ಲಿ ಡಿಕೆಶಿ Vs ಹೆಚ್ಡಿಕೆ
ಇನ್ನೂ ಹೈವೋಲ್ಟೇಜ್ ಕ್ಷೇತ್ರವಾಗಿರೋ ಚನ್ನಪಟ್ಟಣದಲ್ಲಿ ಕೈ ಅಭ್ಯರ್ಥಿ ಯೋಗೇಶ್ವರ್ ಪರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್, ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ ಕೇಂದ್ರ ಸಚಿವ ವಿ. ಸೋಮಣ್ಣ ನಿಖಿಲ್ ಪರ ಒಂದು ಸುತ್ತಿನ ಪ್ರಚಾರ ನಡೆಸಿದ್ದು, ನವೆಂಬರ್ 6 ಮತ್ತು 11 ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ನವೆಂಬರ್ 8 ಮತ್ತು 9ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಿಖಿಲ್ ಪರ ಪ್ರಚಾರ ನಡೆಸಲಿದ್ದಾರೆ. ಈ ನಡುವೆ ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿಯನ್ನ ಗೆಲ್ಲಿಸಲೇ ಬೆೇಕೆಂದು ಮಾಜಿ ಪ್ರಧಾನಿ ದೇವೇಗೌಡರು ಪಣ ತೊಟ್ಟಿದ್ದು ಮತಪ್ರಚಾರಕ್ಕೆ ಇಳಿಯಬೇಕಿತ್ತು. ಆದ್ರೆ ಆರೋಗ್ಯದ ಸಮಸ್ಯೆಯಿಂದ ದೇವೇಗೌಡ್ರು ಇನ್ನೂ ಪ್ರಚಾರಣದ ಕಣಕ್ಕೆ ಇಳಿದಿಲ್ಲ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕೂಡ ಪುತ್ರನ ಪರ ಪ್ರಚಾರಕ್ಕೆ ಇಳಿದಿದ್ದಾರೆ.
ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಕೂಟ ನೀರಾವರಿ ಮಂತ್ರ ಪಠಿಸಿದರೆ, ಕಾಂಗ್ರೆಸ್ ನಾಯಕರು ಭಗೀರಥ ಅಸ್ತ್ರ ಹೂಡಿದ್ದಾರೆ. ಕೆರೆ ತುಂಬಿಸಿದ್ದು ನಾನು ಎಂದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅಬ್ಬರಿಸಿದರೆ, ಆ ಕೆರೆ ತುಂಬಿಸಲು ಡ್ಯಾಮ್ ಕಟ್ಟಿಸಿದ್ದು ದೇವೇಗೌಡರು ಎಂದು ಜೆಡಿಎಸ್ ನಾಯಕರು ತಿರುಗೇಟು ಕೊಟ್ಟಿದ್ದಾರೆ. ಹೀಗೆ ರಂಗೇರಿರುವ ಚನ್ನಪಟ್ಟಣ ಉಪಚುನಾವಣೆ ಅಖಾಡದಲ್ಲಿ ಮಾತಿನ ಯುದ್ಧ ಶುರುವಾಗುತ್ತಿದೆ.
ಸಂಡೂರಿನಲ್ಲಿ ವಿಜಯೇಂದ್ರ ಭರ್ಜರಿ ಪ್ರಚಾರ
ಸಂಡೂರು ಕಾಂಗ್ರೆಸ್ ಗೆದ್ದಿದ್ದ ಕ್ಷೇತ್ರವೇ ಆದ್ದರಿಂದ ಶತಾಯಗತಾಯ ಇಲ್ಲಿ ಪಕ್ಷವನ್ನು ಗೆಲ್ಲಿಸಲೇಬೇಕಿದೆ. ಸಂಸದ ಇ. ತುಕಾರಾಂ ಪತ್ನಿಯೇ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಪ್ರಚಾರ ಬಿರುಸುಗೊಳ್ಳಲಿದೆ. ಹಾಗೇ ಬಿಜೆಪಿಯಿಂದ ಬಂಗಾರು ಹನುಮಂತು ಸ್ಪರ್ಧಾಕಣದಲ್ಲಿದ್ದು, ಕೈವಶವಾಗಿರುವ ಕ್ಷೇತ್ರವನ್ನು ಕಮಲ ಪಾಳೆಯ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿದೆ. ಜೆಡಿಎಸ್ ಬೆಂಬಲದೊಂದಿಗೆ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಾ ಅಖಾಡದಲ್ಲಿ ತೊಡೆ ತಟ್ಟಿ ನಿಂತಿದ್ದಾರೆ. 3 ಕ್ಷೇತ್ರಗಳೂ 3 ಪಕ್ಷಗಳಿಗೆ ಪ್ರತಿಷ್ಠೆಯಾಗಿದ್ದು, ಗೆಲುವಿಗಾಗಿ ಅಖಾಡದಲ್ಲಿ ಸೆಣಸಾಡುತ್ತಿದ್ದಾರೆ.