ಕೆಲವರು ಅಧಿಕಾರ ಹಂಚಿಕೊಳ್ಳಲು ಒಪ್ಪಲ್ಲ! – ಸಿಎಂ ಸಿದ್ಧರಾಮಯ್ಯಗೆ ಡಿಕೆಶಿ ಟಾಂಗ್‌?

ಕೆಲವರು ಅಧಿಕಾರ ಹಂಚಿಕೊಳ್ಳಲು ಒಪ್ಪಲ್ಲ! – ಸಿಎಂ ಸಿದ್ಧರಾಮಯ್ಯಗೆ ಡಿಕೆಶಿ ಟಾಂಗ್‌?

ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ ಪದೇ ಪದೆ ಮುನ್ನಲೆಗೆ ಬರುತ್ತಿದೆ. ಇದೀಗ ಡಿಸಿಎಂ ಡಿಕೆ ಶಿವಕುಮಾರ್‌ ಸಿಎಂ ಸಿದ್ಧರಾಮಯ್ಯಗೆ ಪರೋಕ್ಷವಾಗಿ ಟಾಂಗ್‌ ಕೊಟ್ಟಿದ್ದಾರೆ. ಕೆಲವರು ಅಧಿಕಾರ ಹಂಚಿಕೊಳ್ಳಲು ಒಪ್ಪಿಕೊಳ್ಳುವುದಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ವರುಣನ ಆರ್ಭಟ – 17 ಜಿಲ್ಲೆಗಳಲ್ಲಿ ಪ್ರವಾಹ

ಡಿಸಿಎಂ ಡಿಕೆ ಶಿವಕುಮಾರ್‌ ಈ ಬಗ್ಗೆ ಹೈಕಮಾಂಡ್‌ ನಾಯಕರ ಮುಂದೆಯೇ ಮಾತಾನಾಡಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಪ್ರಧಾನಿಯಾಗುವ ಅವಕಾಶ ಇತ್ತು. ರಾಷ್ಟ್ರಪತಿಗಳು ಸರ್ಕಾರ ರಚನೆ ಮಾಡುವಂತೆ ಆಹ್ವಾನ ನೀಡಿದ್ದರು. ಆದ್ರೆ ಸೋನಿಯಾ ಗಾಂಧಿ ಅಧಿಕಾರ ಮುಖ್ಯವಲ್ಲ ಅಂದರು. ಒಬ್ಬ ಆರ್ಥಿಕ ತಜ್ಞ ದೇಶ ಉಳಿಸಬಹುದು ಅಂತ ಮನಮೋಹನ್ ಸಿಂಗ್‌ ಅವರನ್ನ ಪ್ರಧಾನಿಯಾಗಿ ಮಾಡಿದ್ರು. ಇದು ಸೋನಿಯ ಗಾಂಧಿ ಅವರ ರಾಜಕೀಯ ತ್ಯಾಗದ ಅಪ್ರತಿಮ ಕಾರ್ಯ ಎಂದು ಶ್ಲಾಘಿಸಿದ್ರು.

ಇಷ್ಟು ದೊಡ್ಡ ಪ್ರಜಾಪ್ರಭುತ್ವದಲ್ಲಿ ಯಾರಾದ್ರೂ ಇಷ್ಟೊಂದು ತ್ಯಾಗ ಮಾಡಿದ್ದಾರೆಯೇ? ಇಂದು ಯಾರಾದರೂ ಸಣ್ಣ ಹುದ್ದೆಯನ್ನ ತ್ಯಾಗ ಮಾಡೋದಕ್ಕೆ ರೆಡಿ ಇದ್ದಾರಾ? ಪಂಚಾಯತ್ ಮಟ್ಟದಲ್ಲು ಸಹ ಅಧಿಕಾರ ತ್ಯಾಗ ಮಾಡಲ್ಲ. ಕೆಲ ಶಾಸಕರು ಮತ್ತು ಸಚಿವರು ಅಧಿಕಾರ ಹಂಚಿಕೊಳ್ಳಲು ಸಹ ಒಪ್ಪುವುದಿಲ್ಲ. ಅಂತಹದ್ರಲ್ಲಿ ಸೋನಿಯಾ ಗಾಂಧಿ ತ್ಯಾಗ ಮಾಡಿದರು ಎಂದು ಸ್ಮರಿಸಿದರು. ನಾನು ತಿಹಾರ್‌ ಜೈಲಿಗೆ ಹೋಗಿ ಬಂದ ಬಳಿಕ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರು. ಅಂದಿನಿಂದ ಪಕ್ಷ ಅಧಿಕಾರಕ್ಕೆ ಬರುವವರೆಗೂ ನಿದ್ದೆ ಮಾಡಿಲಿಲ್ಲ ಎಂದು ಹೇಳಿದರು.

Shwetha M