ಹುಲಿಗೆಮ್ಮ ಭವಿಷ್ಯ.. ಡಿಕೆಶಿನೇ ಸಿಎಂ!- 2 ತಿಂಗಳಲ್ಲಿ ಸಿಗೋ ಪಟ್ಟ 2 ವರ್ಷ ಮಾತ್ರನಾ?
ಎಲ್ಲಾ ಶಾಸಕರ ಹೃದಯ ಗೆಲ್ತಾರಾ DK?

ಹುಲಿಗೆಮ್ಮ ಭವಿಷ್ಯ.. ಡಿಕೆಶಿನೇ ಸಿಎಂ!- 2 ತಿಂಗಳಲ್ಲಿ ಸಿಗೋ ಪಟ್ಟ 2 ವರ್ಷ ಮಾತ್ರನಾ?ಎಲ್ಲಾ ಶಾಸಕರ ಹೃದಯ ಗೆಲ್ತಾರಾ DK?

ಭರ್ಜರಿ ಜನಾದೇಶದ ಮೂಲಕ ಕರ್ನಾಟಕದಲ್ಲಿ ಅಧಿಕಾರ ನಡೆಸುತ್ತಿರೋ ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಕುರ್ಚಿ ಫೈಟ್ ಜೋರಾಗಿದೆ. ಹೈಕಮಾಂಡ್ ನಿರ್ಧಾರವೇ ಫೈನಲ್ ಅಂತ ಹೇಳುತ್ತಲೇ ಕುರ್ಚಿಯಲ್ಲಿ ಕುರುವುದ್ದಕ್ಕೆ ಏನೆಲ್ಲಾ ಮಾಡಬೇಕು ಅದ್ದನ್ನ ಮಾಡುತ್ತಿದ್ದಾರೆ. ಇದ್ರ ನಡುವ ಹುಲಿಗೆಮ್ಮನ ಭವಿಷ್ಯ ಕುರ್ಚಿ ಫೈಟ್‌ ರೋಚಕತೆ ಹೆಚ್ಚಿಸಿದೆ. ಹುಲಿಗೆಮ್ಮ ದೇವಿಯ ಆರಾಧಕಿಯಾಗಿರುವ ಮತ್ತು ಭವಿಷ್ಯವಾಣಿ ನುಡಿಯುವಲ್ಲಿ ಹೆಸರುವಾಸಿಯಾಗಿರುವ ಜೋಗತಿ ಬೈಲಮ್ಮ ಬಾಳಮ್ಮಣ್ಣವರು ರಾಜ್ಯ ಮುಖ್ಯಮಂತ್ರಿ ಕುರ್ಚಿಯ ಫೈಟಿನ ಬಗ್ಗೆ ಅಚ್ಚರಿಯ ಭವಿಷ್ಯವನ್ನು ನುಡಿದಿದ್ದಾರೆ. ಮುಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಕರ್ನಾಟಕದ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಬಿಟ್ಟು ಕೊಡ್ತಾರಾ, ಎಲ್ಲೂ ಮಿಸಕಬೇಡ ಎಂದು ಹೇಳಿದ್ದಾರೆ. ಈ ಮೂಲಕ, ಸಿದ್ದರಾಮಯ್ಯವರು, ಮುಖ್ಯಮಂತ್ರಿ ಕುರ್ಚಿಯನ್ನು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟು ಕೊಡುತ್ತಾರೆ ಎಂದು ಹೇಳಿದ್ದಾರೆ.  ಡಿಕೆ ಶಿವಕುಮಾರ್ ಚಿಂತೆ ಮ್ಯಾಡಬೇಡಿ. ನೀವು ಎರಡು ತಿಂಗಳ ಒಳಗೆ ಸಿಎಂ ಆಗ್ತೀರಾ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿ ರಾಜ್ಯಭಾರ ನಡೆಸುತ್ತೀರಾ ಎಂದು ಭವಿಷ್ಯ  ನುಡಿದಿದ್ದಾರೆ.

ಇದನ್ನೂ ಓದಿ : ಬೆಂಕಿಯಲ್ಲಿ ಅರಳಿದ ಹೂ ರಕ್ಷಿತಾ.. ಕುಡ್ಲದ ಹುಡ್ಗಿ ತಾಕತ್ತು ಅಶ್ವಿನಿಗೇನು ಗೊತ್ತು? – ರೆಬಲ್‌ ರಕ್ಷಿತಾ.. ಈ ಸಲ ಕಪ್‌ ಇವಳದ್ದೇ!?  

ಅಷ್ಟೇ ಅಲ್ಲ ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂದು ನಾಗ ಸಾಧುಗಳು ಆಶೀರ್ವಾದ ಮಾಡಿದ್ದಾರೆ. ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ನಾಗ ಸಾಧುಗಳು ಡಿಕೆ ಶಿವಕುಮಾರ್ ಗೆ ಆಶೀರ್ವಾದ ಮಾಡಿದ್ದಾರೆ. ಡಿಕೆಶಿಗೆ ದೈವ ಬಲದ ಜೊತೆ ಈಗ ಶಾಸಕರ ಬಲ ಕೂಡ ಬೇಕಿದೆ..   ಮುಖ್ಯಮಂತ್ರಿ ವಿಷ್ಯದಲ್ಲಿ ಭವಿಷ್ಯಗಳು ನಿಜವಾಗುತ್ತೆ ಅನ್ನೋದ್ದನ್ನ ಹೇಳುವುದ್ದಕ್ಕೆ ಆಗಲ್ಲ.. ಭವಿಷ್ಯವೆಲ್ಲಾ ನಿಜವಾಗೋದ್ ಆದ್ರೆ ಯಾರ್ ಬೇಕಾದ್ರೂ ಸಿಎಂ ಆಗಬಹುದು. ಆದ್ರೆ ಡಿಕೆಶಿ ಸಿಎಂ ಆಗೋಕೆ ತಮ್ಮ ಶಾಸಕರ ಬೆಂಬಲ ಬೇಕೇ ಬೇಕು. ಎಲ್ಲರೂ ಕೂಡ ಬಣ ರಾಜಕೀಯ ಬಿಟ್ಟು ಡಿಕೆ ಶಿವಕುಮಾರ್ ನಮ್ಮ ಸಿಎಂ ಅಂದ್ರೆ ಹುಲಿಗೆಮ್ಮ ಹೇಳಿದ್ದತ್ತೆ ಡಿಕೆಶಿ ಸಿಎಂ ಆಗ್ತಾರೆ ನಾಗಸಾಧುಗಳ ಆಶೀರ್ವಾದ ಫಲಿಸುತ್ತೆ.

ಬಿಜೆಪಿಯಲ್ಲಿ ಹೇಗೆ ಯತ್ನಾಳ್ ಮತ್ತು ವಿಜಯೇಂದ್ರ ಅಂತ ಕಚ್ಚಾಟ ಇದ್ಯೋ ಹಾಗೇ ಕಾಂಗ್ರೆಸ್‌ನಲ್ಲಿ ಕೂಡ ಉಂಟು.. ನಾನೇ ಸರ್ಕಾರ ಬರುವುದ್ದಕ್ಕೆ ಕಾರಣ ಅಂತ ಡಿಕೆಶಿ ಹೇಳ್ತಾ ಸಿಎಂ ಕುರ್ಚಿ ನನಗೆ ಬೇಕು ಅಂದ್ರೆ ಗೃಹ ಸಚಿವ ಪರಮೇಶ್ವರ್ ಇಲ್ಲ ಇಲ್ಲ ಒಬ್ಬರಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ. ಟೀಂ ಎಫರ್ಟ್ ನಿಂದನೇ 2013ರ ಚುನಾವಣೆಯಲ್ಲೂ ನಾವು ಗೆದ್ದಿದ್ದು ಎಂದು ಹೇಳುತ್ತಾ ನಾನೂ ಮುಖ್ಯಮಂತ್ರಿ ರೇಸಿನಲ್ಲಿ ಇದ್ದೇನೆ ಎಂದು ಪರಂ  ಹೇಳಿದ್ದಾರೆ.  ಇನ್ನೊಂದು ಕಡೆ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಒಬ್ಬರಿಂದಾಗಿಯೇ ಅಧಿಕಾರಕ್ಕೆ ಬಂದಿದ್ದಲ್ಲ ಎಂದು ಹೇಳುವ ಮೂಲಕ, ಡಿಸಿಎಂಗೆ ಟಾಂಗ್ ನೀಡಿದ್ದಾರೆ. ಇಲ್ಲಿ ಡಿಕೆಶಿ ಬಣ ಒಂದ್ಕಡೆಯಾದ್ರೆ, ಸಿಎಂ ಕುರ್ಚಿಯಲ್ಲಿ ಸಿದ್ದರಾಮಯ್ಯನೇ ಇರಬೇಕು ಅಂತ ಒಂದು ಬಣ, ಜಾರಕಿಹೊಳಿ ಸಿಎಂ ಆಗಬೇಕು ಮತ್ತೊಂದು ಬಣ, ಪರಮೇಶ್ವರ್ ಸಿಎಂ ಆಗಬೇಕು ಮತ್ತಷ್ಟು ಜನ ಹೇಳುತ್ತಿದ್ದಾರೆ.

ಹೀಗಾಗಿ ಬಣಗಳನ್ನ ಮೆಟ್ಟಿ ನಿಂತು ಡಿಕೆಶಿ ಇಲ್ಲಿ ಸಾಕಷ್ಟು ಸರ್ಕಸ್  ಮಾಡಲೇಬೇಕು.. ಇಲ್ಲಿ ಪ್ರೀತಿಯಿಂದಲೇ ಕುರ್ಚಿ ಹತ್ತಬೇಕು ಹೊರತು ದ್ವೇಷದಿಂದ ಆಗಲ್ಲ.. ನಾನ್ ಹೇಳಿದ್ದೇ ಆಗಬೇಕು ಅನ್ನೋದ್ದಕ್ಕೂ ಆಗಲ್ಲ.. ಎಲ್ಲಾ ಬಣದವರ ಮನಸ್ಸು ಗೆದ್ದು ಅವರ ಜೊತೆ ನಾನು ಪಕ್ಷಕ್ಕಾಗಿ ದುಡಿದ್ದೇನೆ ನನಗೆ ಸಿಎಂ ಪಟ್ಟ ಕೊಡಿ ಅಂತ ಡಿಕೆಶಿ ಕೇಳಿಕೊಳ್ಳಬೇಕು.. ಹೀಗಿದ್ದಾಗ ಮಾತ್ರ ಭವಿಷ್ಯ ನುಡಿದಂತೆ ಡಿಕೆಶಿ ಸಿಎಂ ಆಗಬಹುದೇನೋ..ಇನ್ನೂ ಹೈಕಮಾಂಡ್ ಹೇಳಿದ ತಕ್ಷಣ ಕೂಡ ಎಲ್ಲ ಶಾಸಕರು ಸಚಿವರು ಕೇಳ್ತಾರೆ ಅಂತ ಹೇಳುವುದ್ದಕ್ಕೆ ಆಗಲ್ಲ. ಈಗ ಹೈಕಮಾಂಡ್ ಡಿಕೆಶಿ ಸಿಎಂ ಆಗೋದು ಬೇಡ  ಪರಮೇಶ್ವರ್ ಆಗಲಿ ಅಂದ್ರೆ ಶಿವಕುಮಾರ್ ಬಣ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲ್ಲ. ಹಾಗೇ ಡಿಕೆಶಿ ಸಿಎಂ ಆಗಲಿ ಅಂತ  ಹೈಕಮಾಂಡ್ ಹೇಳಿದ್ರೂ ಕೂಡ ಪರಂ ಬಣ, ಸಿದ್ದು ಬಣ, ಜಾರಕಿಹೊಳಿ ಬಣ ಒಪ್ಪಿಕೊಳ್ಳುವುದು ಕಷ್ಟ.. ಇಲ್ಲಿ ಡಿಕೆಶಿ ಈ ನಾಯಕರನ್ನ ತಮ್ಮತ್ತ ಸೆಳೆಯೋ ಪ್ರಯತ್ನ ಮಾಡಿ, ನಾನು ಈಗ ಸಿಎಂ ಆಗ್ತೀನಿ.. ನೆಕ್ಟ್ ನಿಮ್ಗೆ ಬಿಟ್ಟು ಕೊಡ್ತೀನಿ ಅಂತ ಏನಾದ್ರೂ ಹೇಳಿ ಅಧಿಕಾರಕ್ಕೆ ಏರಬೇಕು.

ಇದ್ರ ನಡುವೆ ಇದ್ದನ್ನ ನೋಡ್ತಾ ಇರೋ ಬಿಜೆಪಿ ಇದ್ರ ಲಾಭ ತೆಗೆದುಕೊಳ್ಳುವುದ್ದಕ್ಕೆ ಪ್ಲ್ಯಾನ್ ಮಾಡಿದೆ. ಒಂದು ವೇಳೆ ಈ ಸಿಎಂ ಫೈಟ್‌ನಲ್ಲಿ ಸರ್ಕಾರ ಬಿದ್ರೆ ಕೈ ಶಾಸಕರು ನಮ್ಮ ಜೊತೆ ಬಂದ್ರೆ ನಾವು ಜೆಡಿಎಸ್ ಜೊತೆ ಸೇರಿ ಎಲೆಕ್ಷನ್‌ ಎದುರಿಸುತ್ತೇವೆ.. ಸರ್ಕಾರ ರಚನೆ ಮಾಡಲ್ಲ ಅಂತ ಆರ್ ಅಶೋಕ್‌ ಹೇಳಿದ್ದಾರೆ.  ಇಲ್ಲಿ ಒಂದು ಅಂತು ನಿಜ ಇಲ್ಲಿ ಎಲ್ಲರೂ ಕೂಡ ತಮ್ಮ ಲಾಭಕ್ಕೆ ಕಾಯುತ್ತಿದ್ದಾರೆ. ಒಟ್ನಲ್ಲಿ ಹುಲಿಗೆಮ್ಮ  ಭವಿಷ್ಯದ್ದಂತೆ ಡಿಕೆಶಿ ಸಿಎಂ ಆಗ್ತಾರಾ? ಅಥವಾ ಸಿದ್ದರಾಮಯ್ಯನೇ ಕುರ್ಚಿಯಲ್ಲಿ ಗಟ್ಟಿ ಕುರ್ತಾರಾ? ಅಥವಾ ಆರ್ ಅಶೋಕ್ ಹೇಳಿದ್ದಂತೆ ಸಿಎಂ  ಜಗಳದಲ್ಲಿ ಸರ್ಕಾರ ಉರುಳಿ ಬೇರೆ ಎಲೆಕ್ಷನ್ ನಡೆದು  ಬಿಜೆಪಿ ಮತ್ತು ಜೆಡಿಎಸ್ ಸೇರಿ ಹೊಸ ಪಕ್ಷ ಕಟ್ಟುತ್ತಾ ಅನ್ನೋದ್ದನ್ನ ನೋಡೋಕೆ ಇಡೀ ಕರ್ನಾಟಕ ಕಾತುರದಿಂದ  ಕಾಯುತ್ತಿದ್ದಾರೆ.

Kishor KV