ಡಿಕೆಶಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೆ ಹದ್ದು ಡಿಕ್ಕಿ – ಕೂದಲೆಳೆ ಅಂತರದಲ್ಲಿ ಪಾರು

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ಹೆಲಿಕಾಪ್ಟರ್ ಗೆ ಹದ್ದೊಂದು ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: ಸನ್ನೆಗೆ ಪ್ರತಿಸನ್ನೆ, ಅತಿರೇಕದ ವರ್ತನೆ – ಕ್ರಿಕೆಟ್ ಆಟವೆಂದರೆ ಕಿತ್ತಾಟವೇ ? – ಕೊಹ್ಲಿ ಮಾಡಿದ್ದೇನು?
ಮಂಗಳವಾರ (ಮೇ.2) ಮುಂಜಾನೆ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಡಿಕೆಶಿ ಹೆಲಿಕಾಪ್ಟರ್ ಮುಖಾಂತರ ಮುಳಬಾಗಿಲಿಗೆ ತೆರಳಿದ್ದರು. ಜಕ್ಕೂರಿನಿಂದ ಹೆಲಿಕಾಪ್ಟರ್ ಟೇಕಾಫ್ ಆಗಿ ಹೊಸಕೋಟೆ ಬಳಿ ಹೋಗುತ್ತಿದ್ದಾಗ ಹದ್ದೊಂದು ಡಿಕ್ಕಿ ಹೊಡೆದಿದೆ. ಹದ್ದು ಡಿಕ್ಕಿ ಹೊಡೆದ ರಭಸಕ್ಕೆ ಹೆಲಿಕಾಪ್ಟರ್ ಮುಂದಿನ ಗಾಜು ಪುಡಿ ಪುಡಿಯಾಗಿದೆ.
ಹದ್ದು ಡಿಕ್ಕಿಯಾದ ಬೆನ್ನಲ್ಲೇ ಹೆಲಿಕಾಪ್ಟರ್ ನಿಯಂತ್ರಣ ತಪ್ಪಿದೆ. ಹೀಗಾಗಿ ಪೈಲೆಟ್ ತಕ್ಷಣ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಡಿಕೆಶಿ ಸೇರಿ 4 ಮಂದಿ ಪ್ರಯಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಹೆಲಿಕಾಪ್ಟರ್‌ನಿಂದ ಇಳಿದ ಡಿಕೆ ಶಿವಕುಮಾರ್ ಕಾರು ಮೂಲಕ ಮುಳಬಾಗಿಲು ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ.
ಜಕ್ಕೂರು ವಿಮಾನ ನಿಲ್ದಾಣದಲ್ಲಿ ಡಿ.ಕೆ ಶಿವಕುಮಾರ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ಗೆ ಹದ್ದು ಡಿಕ್ಕಿಯಾದ ಪರಿಣಾಮ ಗಾಜು ಒಡೆದಿದ್ದು ಯಾವುದೇ ಅನಾಹುತ ಸಂಭವಿಸದಂತೆ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದೆ ಎಲ್ಲರೂ ಸುರಕ್ಷಿತವಾಗಿದ್ದಾರೆ. pic.twitter.com/nwMDlazxU1
— Karnataka Congress (@INCKarnataka) May 2, 2023