ಸಕ್ಸಸ್ ಆಯ್ತು ಡಿಕೆಶಿ ಡೆಲ್ಲಿ ಡೀಲ್? ದಲಿತ ನಾಯಕರಿಗೆ ‘ಹೈ’ ಟೆನ್ಷನ್!
ಸಿದ್ದು ಪ್ಲ್ಯಾನ್ ತಲೆಕೆಳಗಾಯ್ತಾ?

ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಇಳಿದ್ರೆ ಅಲ್ಲಿ ಕುರೋದ್ ಯಾರು ಅನ್ನೋದೇ ಇಡೀ ಕರ್ನಾಟಕವನ್ನ ಕಾಡುತ್ತಿರೋ ಯಕ್ಷ ಪ್ರಶ್ನೆ.. ಇಷ್ಟು ದಿನ ಸಿಎಂ ನಂತ್ರ ಡಿಕೆಶಿನೇ ಸಿಎಂ ಅಂತ ಟಾಕ್ ಇತ್ತು.. ಆದ್ರೆ ಯಾವಾಗ ಯತೀಂದ್ರ ಸಿದ್ದರಾಮಯ್ಯ ನಮ್ಮ ಅಪ್ಪ ರಾಜಕೀಯದ ಕೊನೆಗಾಲದಲ್ಲಿ ಇದ್ದಾರೆ, ನಮ್ಮ ಅಪ್ಪನ ನೆಕ್ಟ್ ಸತೀಶ್ ಜಾರಕಿಹೊಳಿ ಅಂತ ಹೇಳುತ್ತಿದ್ದಂತೆ ಇಡೀ ರಾಜಕೀಯದ ಚದುರಂಗದಾಟವೇ ಬದಲಾಗಿ ಹೋಗಿದೆ ಡಿಕೆಶಿಗೆ ಮಂಡೆಬಿಸಿ ಮಾಡಿದೆ.
ಇದನ್ನೂ ಓದಿ: ಮೋಂತಾ ಚಂಡಮಾರುತ ಎಫೆಕ್ಟ್ – ಬೆಂಗಳೂರು ಸೇರಿ ಕರ್ನಾಟಕದಲ್ಲಿ ಎರಡು ದಿನ ಮಳೆ
ನಿನ್ನೆ ಸಂಜೆ ದೆಹಲಿಗೆ ಹಾರಿರೋ ಡಿಸಿಎಂ ಡಿಕೆ ಶಿವಕುಮಾರ್ ಇಂದು ಕಾಂಗ್ರೆಸ್ ಕಮಾಂಡ್‌ನ್ನ ಭೇಟಿಯಾಗಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ರಾಜ್ಯಉಸ್ತುವಾರಿ ಸುರ್ಜೇವಾಲಾ ಜೊತೆ ಡಿಕೆಶಿ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ ಸಿಎಂ ಕುರ್ಚಿ ಕಿತ್ತಾಟ ಜೋರಾಗಿದೆ. ನಾನೇ ಸಿಎಂ ಆಗ್ತೀನಿ ಅಂತ ತುಂಬಾ ಆಸೆ ಇತ್ತು. ಆದ್ರೆ ಈಗ ಸಿಎಂ ಮಗ ಯತೀಂದ್ರ ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿ ಹೆಸರನ್ನ ಎಳೆದು ತಂದಿದ್ದಾರೆ.. ನಾನು ಪಕ್ಷಕ್ಕಾಗಿ ಹಗಲು ರಾತ್ರಿ ದುಡಿಯುತ್ತೇನೆ.. ಈ ಸಲ ಸರ್ಕಾರ ಬರೋಕೆ ನನ್ನ ಪಾತ್ರ ದೊಡ್ಡದಿದೆ. ಪಕ್ಷ ಸಂಘಟನೆ ಮಾಡಿದ್ದೇನೆ..ರಾಜ್ಯದ ತುಂಬೆಲ್ಲಾ ಸುತ್ತಾಡಿ ಕಾಂಗ್ರೆಸ್ ಬಲಪಡಿಸುತ್ತೇನೆ.. ಈಗ ಯಾರನ್ನೋ ಕರೆದುಕೊಂಡು ಬಂದು ಸಿಎಂ ಮಾಡಿದ್ರೇ ಹೇಗೆೆ ನಾನು ಏನ್ ಮಾಡಬೇಕು ನಿಮ್ಮನ್ನೇ ನಂಬಿಕೊಂಡು ಇದ್ದೇನೆ ಅಂತ ಕೈ ಹೈಕಮಾಂಡ್ ಬಳಿ ಡಿಕೆಶಿ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಹೈ ಕಮಾಂಡ್ ಕೂಡ ಹಾಗೆಲ್ಲ ಆಗಲ್ಲ..ಡೋಂಟ್‌ವರಿ ಅಂತ ಹೇಳಿದ್ದಾರೆ ಎನ್ನಲಾಗಿದೆ. ಹಾಗೇ ರಾಹುಲ್ ಗಾಂಧಿ ಜೊತೆ ಕೂಡ ಈ ವಿಷ್ಯವಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ನೀವ್ ಏನ್ ಮಾಡ್ತೀರೋ ಗೊತ್ತಿಲ್ಲ, ನಾನೇ ಸಿಎಂ ಆಗಬೇಕು.. ನಾನು ನಿಮ್ಮನ್ನೇ ನಂಬಿಕೊಂಡು ಇದ್ದೇನೆ ಅಂತ ಡಿಕೆಶಿ ಹೇಳಿದ್ದಾರಂತೆ. ಕೈ ಹೈಕಮಾಂಡ್ ಬಿಹಾರ ಎಲೆಕ್ಷನ್ ಮುಗಿಲಿ ಎಲ್ಲಾ ಸರಿ ಮಾಡೋಣ ಅಂತ ಇದ್ದಾರಂತೆ, ಇಲ್ಲಿ ಡಿಕೆಶಿ ಸಿಎಂ ಆಗೋಕೆ ಒಂದೇ ಒಂದು ದಾರಿ ಅಂದ್ರೆ ಕಾಂಗ್ರೆಸ್ ಹೈಕಮಾಂಡ್.. ಹೀಗಾಗಿ ಡೈರೆಕ್ಟ್ ಹೈಕಮಾಂಡ್ ಬಳಿಯೇ ಹೋಗಿ ಸ್ಕೆಚ್ ಹಾಕುತ್ತಿದ್ದಾರೆ..
ಇನ್ನೊಂದ್ಕಡೆ ಸಿಎಂ ಸಿದ್ದರಾಮಯ್ಯ ಕುರ್ಚಿ ಬಿಟ್ಟು ಕೊಡುವುದ್ದಕ್ಕೆ ತಯಾರು ಇಲ್ಲ, ಬಿಟ್ಟು ಕೊಟ್ರೆ ಡಿಕೆಶಿಗೆ ಕೊಡಬಾರದು ಅನ್ನೋ ಲೆಕ್ಕಚಾರದಲ್ಲಿದ್ದಾರೆ. ಹೀಗಾಗಿಯೇ ಮಗನ ಕೈಯಲ್ಲಿ ಮುಂದಿನ ಸಾರಥಿ ಸತೀಶ್ ಜಾರಕಿಹೊಳಿ ಅಂತ ಹೇಳಿಸಿದ್ದಾರೆ ಅನ್ನೋ ಮಾತು ಕೂಡ ಕೇಳಿ ಬರ್ತಿದೆ.
ಸಿಎಂ ಕುರ್ಚಿ ಮೇಲೆ ಪರಮೇಶ್ವರ್ ಕಣ್ಣು
ಡಿಕೆಶಿ ಹೈಕಮಾಂಡ್ ಜೊತೆ ಸಿಎಂ ಕುರ್ಚಿ ಬಗ್ಗೆ ಮಾತುಕತೆ ನಡೆಸುತ್ತಿದ್ದರೆ, ರಾಜ್ಯದಲ್ಲಿ ಸಿಎಂ ಕೂಗು ಜೋರಾಗಿದೆ. ಡಿ.ಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ ಬೆನ್ನಲ್ಲೇ ಸಚಿವ ಕೆ.ಎಚ್. ಮುನಿಯಪ್ಪ ಮತ್ತು ಗೃಹ ಸಚಿವ ಜಿ. ಪರಮೇಶ್ವರ್ ಅವರ ಹೆಸರುಗಳು ಮುಂದೆ ಬಂದಿವೆ. ಸಚಿವ ಕೆ.ಎಚ್. ಮುನಿಯಪ್ಪ ಅವರ ಬೆಂಬಲಿಗರು ಕೂಡ ಮುಂದಿನ ಮುಖ್ಯಮಂತ್ರಿ ಮುನಿಯಪ್ಪ ಎಂದು ಘೋಷಣೆಗಳನ್ನು ಕೂಗಿದ್ದಾರೆ. “ಮುನಿಯಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ” ಎಂಬ ಘೋಷಣೆಗಳು ಪಕ್ಷದ ಸಭೆಗಳಲ್ಲಿ ಕೇಳಿಬರುತ್ತಿವೆ
ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಪರಮೇಶ್ವರ್”ಮುನಿಯಪ್ಪ ಸಿಎಂ ಆದರೆ ತಪ್ಪೇನು? ದಲಿತರಿಗೆ ನ್ಯಾಯ ದೊರೆಯುತ್ತದೆ”ಎಂದಿದ್ದಾರೆ. ಇದೇ ಸಮಯದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಅವರ ಬೆಂಬಲಿಗರು ಕೂಡ ಪರಮೇಶ್ವರ್ಮುಂದಿನ ಮುಖ್ಯಮಂತ್ರಿ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ದಿನ ಕಳೆದಂತೆ ಸಿಎಂ ಕುರ್ಚಿ ಮೇಲೆ ಕೈ ನಾಯಕರ ಕಣ್ಣು ಬೀಳುತ್ತಿದ್ದು, ಡಿಕೆಶಿಗೆ ಕುರ್ಚಿ ಕೈ ತಪ್ಪಿ ಹೋಗುವ ಆತಂಕ ಎದುರಾಗಿದೆ.
ದಲಿತ ನಾಯಕರ ಶಕ್ತಿ ಪ್ರದರ್ಶನ
ಸಿಎಂ ಸ್ಥಾನಕ್ಕೆ ಸಚಿವ ಸತೀಶ್ ಜಾರಕಿಹೊಳಿ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಇದು ದಲಿತ ನಾಯಕರಲ್ಲಿ ಉತ್ಸಾಹ ಮೂಡಿಸಿದೆ. ಹೀಗಾಗಿ ಅವರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಡಿಸೆಂಬರ್ ಅಥವಾ ಜನವರಿಯಲ್ಲಿ ದಲಿತರ ಬೃಹತ್ ಸಮಾವೇಶ ಆಯೋಜಿಸುವ ಸಿದ್ಧತೆ ನಡೆದಿದೆ. ಚಿತ್ರದುರ್ಗ ಅಥವಾ ದಾವಣಗೆರೆ ಜಿಲ್ಲೆಯಲ್ಲಿ ಈ ಸಮಾವೇಶ ನಡೆಯಬಹುದು ಎಂದು ಚರ್ಚೆಗಳಿವೆ. ಈ ಸಮಾವೇಶದ ಮೂಲಕ ದಲಿತ ನಾಯಕರ ಒಗ್ಗಟ್ಟಿನ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಸತೀಶ್ ಜಾರಕಿಹೊಳಿ, ಡಾ. ಎಚ್.ಸಿ. ಮಹಾದೇವಪ್ಪ, ಡಾ. ಜಿ. ಪರಮೇಶ್ವರ್ ಮತ್ತು ಕೆ.ಎಚ್. ಮುನಿಯಪ್ಪ ಅವರು ಭಾಗವಹಿಸಿದ್ದಾರೆ. ಈ ಸಮಾವೇಶದ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಬಲ ತುಂಬುವ ಉದ್ದೇಶವಿದೆ. ಜೊತೆಗೆ, ಸಿಎಂ ಬದಲಾವಣೆ ಆದರೆ ದಲಿತರಿಗೆ ಹುದ್ದೆ ನೀಡಿ ಎಂಬ ಬೇಡಿಕೆಯನ್ನು ಒತ್ತಿ ಹೇಳುವ ಸಾಧ್ಯತೆ ಇದೆ. ದಲಿತರ ಒಗ್ಗಟ್ಟು ಪ್ರದರ್ಶಿಸಿ ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಕೆ ಸಂದೇಶ ಕಳುಹಿಸುವ ತಂತ್ರವೂ ಇದರಲ್ಲಿ ಸೇರಿದೆ. ಇದು ಕೂಡ ಡಿಕೆಶಿ ತುಂಬಾ ಎಫೆಕ್ಟ್ ಬೀಳಲಿದೆ.

ನೋಡಿರಿ

