ಡಿಕೆಶಿ ಸೈಲೆಂಟ್ ಪ್ಲ್ಯಾನ್ ಸಕ್ಸಸ್ ಆಯ್ತಾ? – ನವೆಂಬರ್ 21ಕ್ಕೆ ಪದಗ್ರಹಣ ನಿಜನಾ?

ಡಿಕೆಶಿ ಸೈಲೆಂಟ್ ಪ್ಲ್ಯಾನ್ ಸಕ್ಸಸ್ ಆಯ್ತಾ?  –  ನವೆಂಬರ್ 21ಕ್ಕೆ ಪದಗ್ರಹಣ ನಿಜನಾ?

ಕಾಂಗ್ರೆಸ್‌ನಲ್ಲಿ ಈ ವರ್ಷವೇ, ಅದ್ರಲ್ಲೂ ಈ ತಿಂಗಳೇ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಹಲವರು ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರೇ ಸಿಎಂ ಕುರ್ಚಿಯ ಪ್ರಬಲ ಆಕಾಂಕ್ಷಿ ಅನ್ನೋದು ಇವತ್ತು ನಿನ್ನೆಯ ಸುದ್ದಿ ಅಲ್ಲ.. ಹಳೇ ಸುದ್ದಿನೇ.. ಆದ್ರೆ ಈ ರೇಸ್‌ ಹೊಸಬರು ಮಾತ್ರ ಸೇರುತ್ತಿದ್ದಾರೆ. ಹಾಗಂತ ಸಿದ್ದರಾಮಯ್ಯ ಕೂಡ ಸುಮ್ಮನೆ ಇಲ್ಲ..  ಹಲವು ವೇದಿಕೆಗಳಲ್ಲಿ ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂಬ ಸಂದೇಶ ರವಾನಿಸಿದ್ದಾರೆ. ಇದರ ನಡುವೆಯೂ ಸಿಎಂ ಬದಲಾವಣೆಯ ಚರ್ಚೆಗಳು ಬಿರುಸುಗೊಂಡಿವೆ. ಇದೀಗ ಡಿ.ಕೆ.ಶಿವಕುಮಾರ್‌ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ದಿನಾಂಕ ಕೂಡ ಘೋಷಣೆಯಾಗಿದೆ. ಇದೇ ನವೆಂಬರ್ 21ಕ್ಕೆ ಡಿಕೆಶಿ ಸಿಎಂ ಆಗಿ ಪ್ರಾಮಾಣ ವಚನ ಸ್ವೀಕಾರ ಮಾಡ್ತಾರೆ ಎನ್ನಲಾಗಿದೆ..  ಇದು ಸತ್ಯನಾ ಸುಳ್ಳಾ ಅನ್ನೋದು ಡಿಕೆಶಿಗೆ ಕೂಡ ಗೊತ್ತಿಲ್ಲ ಅನ್ಸುತ್ತೆ.. ಯಾಕಂದ್ರೆ ರಾಜಕಾರಣ ಅಂದ್ರೆ ಹಾಗೇ ಅಲ್ವಾ.. ಇಲ್ಲಿ ಆಗೋದೆಲ್ಲ ಫಾಟಫಟ್ ಅಂತಾ.. ಯಾರ್ ಯಾವಾಗ ಎಲ್ಲಿ ಸಿಎಂ ಆಗ್ತಾರೆ ಅನ್ನೋದೂ ಉಹಿಸೋಕೆ ಆಸಾಧ್ಯ.. ಹಿಗಿರುವಾಗ ಡೇಟ್ ಫಿಕ್ಸ್ ಮಾಡಿ ಸಿಎಂ ಆಗೋದು ಸುಲಭ ಅಲ್ಲ.. ಮುಹೂರ್ತ ಇಟ್ಟು ಮುಖ್ಯಮಂತ್ರಿ ಆಗಿ ಸಿಎಂ ಆಗೋದು ಕನಸಿನ ಮಾತು.. ಬಟ್ ಯಾಕೆ ನವೆಂಬರ್ 21 ಅನ್ನೋ ಡೇಟ್ ಬಂದಿದೆ ಅಂದ್ರೆ.. ನವೆಂಬರ್ 20ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರೂಡುವರೆ ವರ್ಷ ಆಗುತ್ತೆ.. ಅದ್ರ ನೆಕ್ಟ್ ಸಿಎಂ ಚೇಂಜ್ ಆಗ್ತಾರೆ.. ಡಿಕೆ ಶಿವಕುಮಾರ್ ಅವತ್ತು ಪ್ರಮಾಣವಚನ ಸ್ವೀಕಾರ ಮಾಡ್ತಾರೆ ಅನ್ನೋ ಟಾಕ್ ಶುರುವಾಗಿದೆ ಅಷ್ಟೇ.. ಇಂತಹ ದೊಡ್ಡ ಬದಲಾವಣೆ ಆಗಬೇಕಾದ್ರೆ ಡಿಕೆಶಿ ಹೇಳಿದ ತಕ್ಷಣ ಆಗಲ್ಲ. ಹೈಕಮಾಂಡ್ ಒಪ್ಪಿಗೆ ಕೊಟ್ಟ ತಕ್ಷಣ ಆಗಲ್ಲ.. ರಾಜ್ಯದಲ್ಲೂ ಕೂಡ ನಾಯಕರು ಕುತ್ತು, ಚರ್ಚೆ ಮಾಡಬೇಕು.. ಕಾಂಗ್ರೆಸ್‌ನ ಎಲ್ಲ ಶಾಸಕರ ಜೊತೆ ಇದ್ರ ಬಗ್ಗೆ ಮಾತುಕಥೆ ನಡೆಸಬೇಕು.. ಹೀಗಾಗಿ ಹೇಳಿದ ತಕ್ಷಣ ಡೇಟ್ ಫಿಕ್ಸ್ ಮಾಡಿದ ತಕ್ಷಣ ಸಿಎಂ ಆಗಲ್ಲ.  ಹಾಗೇ ಆದ್ರೆ ಅದೊಂದು  ಜಾದು ಅಂತನೇ ಹೇಳಬಹುದು..

ಇನ್ನೂ ನವೆಂಬರ್ 14ಕ್ಕೆ ಬಿಹಾರ ಎಲೆಕ್ಷನ್ ಫಲಿತಾಂಶ ಕೂಡ ಪ್ರಕಟ ಆಗುತ್ತೆ. ಚುನಾವಣೆ ನಂತ್ರ ಏನೆಲ್ಲಾ ಆಗುತ್ತೆ ಅನ್ನೋದು ಕೂಡ ಗೊತ್ತಿಲ್ಲ. ಒಂದು ವೇಳೆ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದ್ರೆ ಕಾಂಗ್ರೆಸ್ ಹೈಕಮಾಂಡ್ ಬಿಹಾರದಲ್ಲಿ ಸರ್ಕಾರ ರಚಿಸೋ ಬಗ್ಗೆ ತಲೆಕೆಡಿಸಿಕೊಳ್ಳುತ್ತೆ.. ಅದ್ರ ಬ್ಯುಸಿಯಲ್ಲಿರುತ್ತೆ.. ಕರ್ನಾಟಕದ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳಲ್ಲ.. ಅದ್ರು ಬಗ್ಗೆ ಹೆಚ್ಚು ಒಲವು ಕೂಡ ತೋರಿಸಲ್ಲ.. ಯಾಕಂದ್ರೆ ಇಲ್ಲಿ ಹೇಗಿದ್ರೂ ಕಾಂಗ್ರೆಸ್ ಅಧಿಕಾರದಲ್ಲಿದೆ. ಯಾವಾಗ ಬೇಕಾದ್ರೂ ಸಿಎಂ ಬದಲಾವಣೆ ಮಾಡಬಹುದು , ನವೆಂಬರ್ 21ಕ್ಕೆ ಮಾಡಬೇಕು ಅಂತ ಇಲ್ಲ ಅನ್ನೋ ರೀತಿಯಲ್ಲಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತೆ. ಇನ್ನೂ ನವೆಂಬರ್ 15ಕ್ಕೆ ಸಿಎಂ ಸಿದ್ದರಾಮಯ್ಯ ಕೂಡ ಡೆಲ್ಲಿಗೆ ಹೋಗುತ್ತಿದ್ದಾರೆ..

 

ಈ ಬೆಳವಣಿಗೆಯನ್ನ ನೋಡಿದ್ರೆ ಡಿಕೆ ಶಿವಕುಮಾರ್ ಕನಸನ್ನ ಕಾಣಬಹುದು ಅಷ್ಟೇ.. ನಾನೇ ಸಿಎಂ.. ನಾನು ಹೇಳಿದ ಡೇಟ್‌ನಲ್ಲಿ ಸಿಎಂ ಆಗ್ತೀನಿ ಅನ್ನೋ ವಿಶ್ವಾಸದಲ್ಲಿ ಇರಬಹುದು.. ಅದು ತಪ್ಪಂತ ಹೇಳುವುದ್ದಕ್ಕೆ ಆಗಲ್ಲ..ಯಾಕಂದ್ರೆ ಡಿಕೆಶಿ ಕೂಡ ತಮ್ಮ ಪಕ್ಷಕ್ಕೆ ತಮ್ಮದೇ ಆದ ಕೂಡುಗೆಯನ್ನ ಕೊಟ್ಟಿದ್ದಾರೆ. ಹಾಗಂತ ಒಬ್ಬರ ಕನಸು, ಯೋಚನೆಯಂತೆ ರಾಜಕೀಯ ನಡೆಯಲ್ಲ.. ತಾಳ ತಪ್ಪೇ ತಪ್ಪುತ್ತೆ. ಇನ್ನೂ ಸಿದ್ದರಾಮಯ್ಯ ಕೂಡ ತಕ್ಷಣ ಅಧಿಕಾರ ಬಿಟ್ಟು ಕೊಡಲ್ಲ.. ಅವರಿಗೂ ಆಸೆ ಇದ್ದೇ ಇರುತ್ತೆ.. ನಾನೇ ಕಳದ ಸಲದಂತೆ ಈ ಸಲ ಕೂಡ ಪೂರ್ಣಾವಧಿ ಸಿಎಂ ಆಗಿ ಇರಬೇಕು ಅಂತ.. ಹೀಗಾಗಿ ಸಿದ್ದರಾಮಯ್ಯ ಕೂಡ ಗೇಮ್ ಪ್ಲ್ಯಾನ್ ಮಾಡೇ ಮಾಡ್ತಾರೆ.. ತನ್ನ ತಂತ್ರಗಾರಿಕೆ ಮತ್ತು ಬಲದ ಮೂಲಕ ದಾಳ ಉರುಳಿಸುತ್ತಾರೆ.

ನಾವು ಇಲ್ಲಿ ಇನ್ನೊಂದು ಅರ್ಥ ಮಾಡಿಕೊಳ್ಳಬೇಕು.. ಒಂದು ವೇಳೆ ಇದೇ ತಿಂಗಳು ಅಂದ್ರೆ ನವೆಂಬರ್‌ನಲ್ಲೇ ಸಂಪುಟ ಪುನರ್ ರಚನೆಗೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ರೆ ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ಇಲ್ಲ ಅನ್ನೋ ಸಂದೇಶವನ್ನ ಕೊಡುತ್ತೆ.. ಒಂದು ವೇಳೆ ಒಪ್ಪಿಗೆ ಸೂಚಿಸಿಲ್ಲ ಅಂದ್ರೆ ಡಿಕೆಶಿಗೆ ಸಿಎಂ ಆಗುವುದ್ದಕ್ಕೆ ಅವಕಾಶ ಇದೆ ಅನ್ನೋ ಸಂದೇಶವನ್ನ ನೀಡುತ್ತೆ. ಅಂದ್ರೆ   ಸಿದ್ದರಾಮಯ್ಯ ಸಿಎಂ  ಆಗಿರೋದು ಖಚಿತವಿಲ್ಲ.. ಯಾವಾಗ ಬೇಕಾದ್ರೂ ಖುರ್ಚಿಯಿಂದ ಇಳಿಬಹುದು ಅನ್ನೋ ಸಂದೇಶ ರವಾನೆ ಆಗುತ್ತೆ.. ಇದೆಲ್ಲಾ ಕೂಡ ಸಿಎಂ ಬದಲಾವಣೆಗೆ ಮಹತ್ವದ ಪಾತ್ರವನ್ನ ವಹಿಸುತ್ತೆ..

ಸದ್ಯ ಡಿಕೆಶಿ ನವೆಂಬರ್ 21ಕ್ಕೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ ಅನ್ನೋ ಬಗ್ಗೆ ಪತ್ರಿಕೆಯ ವರದಿ ಫೋಟೋ ವೈರಲ್‌ ಆಗಿರುವುದು ಮಾತ್ರವಲ್ಲದೆ, ಕಾಂಗ್ರೆಸ್‌ನಲ್ಲಿ ಕಿಡಿ ಹೊತ್ತಿಸಿದೆ. ಸೋಷಿಯಲ್ ಮೀಡಿಯಾದಲ್ಲೂ ಡಿಕೆ ಫ್ಯಾನ್ಸ್ ಇದ್ದನ್ನ ವೈರಲ್ ಮಾಡ್ತಿದ್ದಾರೆ. ನಮ್ಮ ಬಾಸ್ ಸಿಎಂ ಆಗ್ತಾರೆ ಅನ್ನೋ ಖುಷಿಯಲ್ಲಿದ್ದಾರೆ.. ಬಟ್ ಸೋಷಿಯಲ್ ಮೀಡಿಯಾದಲ್ಲಿ ಆಗೋ ಚರ್ಚೆ ನಿಜವಾಗೋದ್ ಆಗಿದ್ರೆ,  ನಮ್ಮ ದೇಶದಲ್ಲಿ ಸಾಕಷ್ಟು ಬದಲವಾಣೆ ಆಗ್ತಾ ಇತ್ತು.. ಬಟ್ ಇತ್ತೀಚೆಗೆ ಡಿ.ಕೆ.ಶಿವಕುಮಾರ್‌ ಅವರು ದೆಹಲಿಗೆ ಹೋಗಿಬಂದ ಮೇಲೆ ಡಿಕೆಶಿ ಹೈಕಮಾಂಡ್‌ ಭೇಟಿಯಾಗಿ ಸಿಎಂ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಹೈ ಕಮಾಂಡ್‌ನಿಂದ ಕೂಡ ಒಪ್ಪಿಗೆ  ಕ್ಕಿರಬಹುದು. ಹೀಗಾಗಿ ದಿನಾಂಕ ಕೂಡ ಹೊರಬಿದ್ದಿದೆ ಎಂದು ಹೇಳಲಾಗುತ್ತಿದೆ.  ಬಟ್  ನಿಜಕ್ಕೂ ಡಿಕೆಶಿ ನವೆಂಬರ್ 21ಕ್ಕೆ ಸಿಎಂ ಆಗ್ತಾರಾ? ಪ್ರಮಾಣವಚನ ಸ್ವೀಕಾರ ಮಾಡ್ತಾರಾ ಅನ್ನೋದು ಕರ್ನಾಟಕದ ಜನರಿಗೆ ಯಕ್ಷ ಪ್ರಶ್ನೆಯಾಗಿ ಉಳಿದಿದೆ.

Kishor KV