ಡಿಕೆ ಬ್ರದರ್ಸ್ ಛಲಕ್ಕೆ ಸಿಕ್ಕಿತು ಪ್ರತಿಫಲ – ಅಣ್ಣನ ಸಿಎಂ ಆಸೆ ಈಡೇರಿತು ಎಂದು ಡಿ.ಕೆ ಸುರೇಶ್ ಭಾವುಕ

ಡಿಕೆ ಬ್ರದರ್ಸ್ ಛಲಕ್ಕೆ ಸಿಕ್ಕಿತು ಪ್ರತಿಫಲ – ಅಣ್ಣನ ಸಿಎಂ ಆಸೆ ಈಡೇರಿತು ಎಂದು ಡಿ.ಕೆ ಸುರೇಶ್ ಭಾವುಕ

ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರಾ.. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡ್ತಾರಾ.. ಮಂಗಳವಾರದಿಂದ ಈ ಸುದ್ದಿ ಬಗ್ಗೆ ಕ್ಷಣ ಕ್ಷಣವೂ ಕುತೂಹಲ ಗರೆಗೆದರುತ್ತಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಗುರುವಾರ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ನನ್ನಣ್ಣನ ಆಸೆ ಈಡೇರಿತು ಎಂದು ಡಿ.ಕೆ ಸುರೇಶ್ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಇನ್ನು ಮುಂದೆ ಸಿಎಂ. ಹೈಕಮಾಂಡ್ ನಾಯಕರು ಸಿಎಂ ಸಿದ್ದರಾಮಯ್ಯ  ಅವರನ್ನು  ರಾಜೀನಾಮೆ ನೀಡಲು ಒಪ್ಪಿಸಿದ್ದಾರೆ.  ಡಿಕೆ ಶಿವಕುಮಾರ್ ಅವರನ್ನ ಸಿಎಂ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ. ಇನ್ನು ಡಿಕೆ ಬ್ರದರ್ಸ್ ಇಬ್ಬರೂ ಕೂಡಾ ದೆಹಲಿಯಲ್ಲೇ ಇದ್ದು, ಈ ವಿಚಾರ ಗೊತ್ತಾಗುತ್ತಿದ್ದಂತೆ ಇಬ್ಬರು ಪರಸ್ಪರ ತಬ್ಬಿಕೊಂಡು ಭಾವುಕರಾಗಿದ್ದಾರೆ ಎಂದು ಹೇಳಲಾಗಿದೆ.

ಡಿಕೆಶಿಗೆ ಮುಖ್ಯಮಂತ್ರಿ ಪಟ್ಟ ಪಟ್ಟ ಖಚಿತವಾಗ್ತಿದ್ದಂತೆ ಡಿಸಿಎಂ ಡಿಕೆ ಸಹೋದರ ಡಿಕೆ ಸುರೇಶ್ ಸಂತಸ ವ್ಯಕ್ತಪಡಿಸಿದ್ದಾರೆ.  ಹೈಕಮಾಂಡ್​​ನಿಂದ ಸುದ್ದಿ ಬರುತ್ತಿದ್ದಂತೆ ಅಣ್ಣ ಡಿಕೆ ಶಿವಕುಮಾರ್ ಅವರನ್ನ ಅಪ್ಪಿಕೊಂಡು ಡಿಕೆ ಸುರೇಶ್ ಸಂಭ್ರಮಿಸಿದ್ದು, ಈ ವೇಳೆ ಇಬ್ಬರು ಭಾವುಕರಾದ್ರು ಎಂದು ತಿಳಿದು ಬಂದಿದೆ. ಗುರುವಾರ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಮೇ 29ರ ಶುಕ್ರವಾರ ಡಿಕೆ ಶಿವಕುಮಾರ್ ನೂತನ ಸಿಎಂ ಆಗಿ ಆಯ್ಕೆಯಾಗಲಿದ್ದು, ಪ್ರಮಾಣವಚನಕ್ಕೂ ಸಿದ್ಥತೆ ನಡೆದಿದೆ ಎನ್ನಲಾಗ್ತಿದೆ.

ಡಿ.ಕೆ ಶಿವಕುಮಾರ್ ಗುರುವಾರ ಬೆಳಗ್ಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ. ಗುರುವಾರ 5.45ರ ಫೈಟ್​​​ಗೆ ದೆಹಲಿಯಿಂದ ನಿರ್ಗಮಿಸಿ, ಬೆಳಿಗ್ಗೆ 8-30ಕ್ಕೆ ಬೆಂಗಳೂರು ಏರ್‌ಪೋರ್ಟ್‌ಗೆ ಡಿಕೆ ಶಿವಕುಮಾರ್​​ ಬಂದಿಳಿಯಲಿದ್ದಾರಂತೆ. ಬೆಂಗಳೂರಿಗೆ ಬರ್ತಿದ್ದಂತೆ ಡಿಕೆ ಶಿವಕುಮಾರ್ ಅವ್ರು ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ನೀಡಲಿದ್ದು, ಕಾವೇರಿ ನಿವಾಸದಲ್ಲಿ ನಡೆಯೋ ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಡಿಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

Sulekha

Leave a Reply

Your email address will not be published. Required fields are marked *