ವಿಕೆಟ್ ಕೀಪರ್ಸ್.. ಮ್ಯಾಚ್ ಫಿನಿಶರ್ಸ್  – ಅಂಕಲ್ಸ್ ಅಂದವ್ರಿಗೆ MSD, DK ಡಿಚ್ಚಿ
IPL ನಲ್ಲೀಗ ಧೋನಿ, ಡಿಕೆಯೇ ಬೆಸ್ಟ್

ವಿಕೆಟ್ ಕೀಪರ್ಸ್.. ಮ್ಯಾಚ್ ಫಿನಿಶರ್ಸ್  – ಅಂಕಲ್ಸ್ ಅಂದವ್ರಿಗೆ MSD, DK ಡಿಚ್ಚಿIPL ನಲ್ಲೀಗ ಧೋನಿ, ಡಿಕೆಯೇ ಬೆಸ್ಟ್

ಐಪಿಎಲ್ ಸೀಸನ್ 17 ಹಿಂದಿನ ಎಲ್ಲಾ ಆವೃತ್ತಿಗಳಿಗಿಂತಲೂ ವಿಭಿನ್ನ ಮತ್ತು ವಿಶೇಷವಾಗಿದೆ. ಯಾಕಂದ್ರೆ ಈ ಸೀಸನ್​ನಲ್ಲಿ ಯಾರನ್ನ ಗೇಮ್ ಚೇಂಜರ್ ಅಂತಾ ಕೋಟಿ ಕೋಟಿ ಕೊಟ್ಟು ತಂಡಕ್ಕೆ ಕರೆತಂದಿದ್ರೋ ಅವ್ರೆಲ್ಲಾ ಅಟ್ಟರ್ ಫ್ಲಾಪ್ ಆಗಿದ್ದಾರೆ. ಡೊಮೆಸ್ಟಿಕ್ ಪ್ಲೇಯರ್ ಗಳೇ ಧೂಳೆಬ್ಬಿಸುತ್ತಾ ಟೀಮ್​ಗೆ ಆಸರೆಯಾಗ್ತಿದ್ದಾರೆ. ಅದ್ರಲ್ಲೂ ಪ್ರತಿ ಸೀಸನ್​ನಲ್ಲೂ​ ಯಂಗ್​ಸ್ಟರ್​ಗಳ ಆರ್ಭಟವಾದ್ರೆ, ಈ ಸೀಸನ್​ನಲ್ಲಿ ಇಬ್ಬರು ಸೀನಿಯರ್​​ಗಳ ದರ್ಬಾರ್​ ಜೋರಾಗಿದೆ. ಮಹೇಂದ್ರ ಸಿಂಗ್ ಧೋನಿ ಹಾಗೂ ದಿನೇಶ್​ ಕಾರ್ತಿಕ್ ಆಟ ಯುವಕರೂ ನಾಚಿಸುವಂತಿದೆ. ಯಾರೆಲ್ಲಾ ಅಂಕಲ್​ಗಳು, ನಿವೃತ್ತಿ ತಗೊಳ್ಳಿ ಅಂತಾ ಟೀಕೆ ಮಾಡಿದ್ರೋ ಅವ್ರೇ ಶಹಬ್ಬಾಸ್ ಅಂತಿದ್ದಾರೆ. ಐಪಿಎಲ್ ಪಂದ್ಯಕ್ಕೂ ಮುನ್ನ ದಿನೇಶ್ ಕಾರ್ತಿಕ್ ಹಾಗೂ ಧೋನಿ ಎದುರಿಸಿದ ಸವಾಲುಗಳೇನು? ಟೀಕೆಗಳನ್ನ ಮೆಟ್ಟಿ ನಿಂತು ಮ್ಯಾಜಿಕ್ ಮಾಡಿದ್ದೇಗೆ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕನ್ನಡಿಗ ಕೆ.ಎಲ್​​ ರಾಹುಲ್​ ಮುಂದೆ ಮಂಡಿಯೂರಿದ ಸಿಎಸ್‌ಕೆ – ಗೆದ್ದು ಬೀಗಿದ ಲಕ್ನೋ ಸೂಪರ್​ ಜೈಂಟ್ಸ್​

ಈ ಬಾರಿಯ ಐಪಿಎಲ್​ನಲ್ಲಿ ರೆಕಾರ್ಡ್​ ಬ್ರೇಕರ್ ಮ್ಯಾಚ್​ಗಳು, ಹೊಸ ಪ್ರತಿಭೆಗಳ ಪರ್ಫಾಮೆನ್ಸ್​, ಬೌಂಡರಿ, ಸಿಕ್ಸರ್​ಗಳ ಭರಾಟೆ ಮಸ್ತ್ ಮನರಂಜನೆ ನೀಡ್ತಿದೆ. ಇದೆಲ್ಲದ್ರ ನಡುವೆ ತುಂಬಾನೇ ಗಮನ ಸೆಳೆಯುತ್ತಾ ಇರೋದು  ಅಂದ್ರೆ ಮಹೇಂದ್ರ ಸಿಂಗ್ ಧೋನಿ ಹಾಗೂ ದಿನೇಶ್​ ಕಾರ್ತಿಕ್ ಬ್ಯಾಟಿಂಗ್. ಪ್ರಸಕ್ತ ಐಪಿಎಲ್​ನಲ್ಲಿ ಇವರಿಬ್ಬರ ಆಟವನ್ನ ಮೆಚ್ಚಿಕೊಳ್ಳದ ಕ್ರಿಕೆಟ್ ಅಭಿಮಾನಿಗಳೇ ಇಲ್ಲ. ನಿವೃತ್ತಿನ ಅಂಚಿನಲ್ಲಿ ನೀಡ್ತಿರೋ ಪವರ್ ಫುಲ್ ಫರ್ಮಾಮೆನ್ಸ್ ಯಂಗ್​ಸ್ಟರ್​ಗಳನ್ನೇ ನಾಚಿಸುವಂತಿದೆ. ಆರ್​ಸಿಬಿ ಸಂಕಷ್ಟದಲ್ಲಿದ್ದಾಗ ದಿನೇಶ್ ಕಾರ್ತಿಕ್ ಆಪತ್ಬಾಂದವರಾಗಿ ಬಂದು ಅಬ್ಬರಿಸುತ್ತಿದ್ದಾರೆ. ಬ್ಯಾಟಿಂಗ್​ನಲ್ಲಿ ಭರ್ಜರಿ ಪ್ರದರ್ಶನ ನೀಡ್ತಿದ್ದಾರೆ. ಮತ್ತೊಂದೆಡೆ ಧೋನಿ ಫೈರಿಂಗ್ ಸ್ಟಾರ್ ಥರ ಸಿಕ್ಸ್, ಫೋರ್​ಗಳ ಮೂಲಕ ಸಿಎಸ್​ಕೆ ತಂಡಕ್ಕೆ ಸಾಥ್ ನೀಡ್ತಿದ್ದಾರೆ.

ಧೋನಿ, ಡಿಕೆ ದರ್ಬಾರ್!  

ಮಹೇಂದ್ರ ಸಿಂಗ್ ಧೋನಿ ಹಾಗೂ ದಿನೇಶ್​ ಕಾರ್ತಿಕ್ ಈ ಬಾರಿಯ ಐಪಿಎಲ್​ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸ್ತಿದ್ದಾರೆ. ಡೆತ್ ಓವರ್​​ಗಳಲ್ಲಿ ಕ್ರೀಸ್​​ಗೆ ಎಂಟ್ರಿ ನೀಡ್ತಿರೋ ಇವರಿಬ್ಬರು, ಸ್ಟೇಡಿಯಂನಲ್ಲಿ ಫ್ಯಾನ್ಸ್​ಗೆ ಭರಪೂರ ಮನರಂಜನೆಯನ್ನೇ ನೀಡ್ತಿದ್ದಾರೆ. ಅದು ಕೂಡ ಬರೋಬ್ಬರಿ 200ರ ಸ್ಟ್ರೈಕ್​ರೇಟ್​ನಲ್ಲಿ ಅನ್ನೋದೇ ಅಚ್ಚರಿಯ ವಿಚಾರ. ಪ್ರಸಕ್ತ ಐಪಿಎಲ್​ನಲ್ಲಿ ಧೋನಿ ಎದುರಿಸಿದ 25 ಎಸೆತಗಳಿಂದ 59 ರನ್ ಸಿಡಿಸಿದ್ದಾರೆ. 236ರ ಸ್ಟ್ರೈಜ್​​ರೇಟ್​​ನಲ್ಲಿ ಬ್ಯಾಟ್ ಬೀಸಿರುವ ಧೋನಿ, 4 ಬೌಂಡರಿ, 6 ಸಿಕ್ಸರ್​ ದಾಖಲಿಸಿದ್ದಾರೆ. ಇನ್ನು ದಿನೇಶ್​ ಕಾರ್ತಿಕ್​, 7 ಪಂದ್ಯಗಳಿಂದ 110 ಎಸೆತಗಳಲ್ಲಿ 226 ರನ್ ಸಿಡಿಸಿದ್ದು, 16 ಬೌಂಡರಿ, 18 ಸಿಕ್ಸರ್ ಬಾರಿಸಿದ್ದಾರೆ. 205.45ರ ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಆ ಮೂಲಕ ಡೆತ್ ಓವರ್​​ಗಳಲ್ಲಿ ನಮ್ಮನ್ನ ಮೀರಿಸುವವರು ಯಾರಿಲ್ಲ ಅಂತಿದ್ದಾರೆ ಧೋನಿ ಮತ್ತು ಡಿಕೆ. ಧೋನಿ ಹಾಗೂ ದಿನೇಶ್​ ಕಾರ್ತಿಕ್ ಐಪಿಎಲ್​ ಇತಿಹಾಸದ ಅತ್ಯಂತ ಹಿರಿಯ ವಿಕೆಟ್ ಕೀಪರ್ಸ್ ಹಾಗೂ ಮ್ಯಾಚ್ ಫಿನಿಷರ್ಸ್. 2008ರ ಚೊಚ್ಚಲ ಐಪಿಎಲ್​ನಿಂದ ಈವರೆಗೆ ಅಂದ್ರೆ, ಸತತ 17 ಸೀಸನ್​ಗಳಲ್ಲಿ ವಿಕೆಟ್ ಕೀಪರ್​ಗಳಾಗಿ, ಮ್ಯಾಚ್ ಫಿನಿಷರ್​ಗಳಾಗಿ ಇಬ್ಬರೂ ಆಟಗಾರರು ಕಾರ್ಯ ನಿರ್ವಹಿಸಿದ್ದಾರೆ. ಸೀಸನ್​ನಿಂದ ಸೀಸನ್​ಗೆ ಇವ್ರ ವಯಸ್ಸು ಹೆಚ್ಚಾದಂತೆಲ್ಲಾ ಬ್ಯಾಟಿಂಗ್​ ಖದರ್​ ಹೆಚ್ಚಾಗ್ತಿದೆಯೇ ಹೊರತು ಕಡಿಮೆಯಾಗಿಲ್ಲ. ಪ್ರಸಕ್ತ ಸೀಸನ್​ನಲ್ಲೂ ತಾವು ಆಡ್ತಿರೋ ಮೊದಲ ಐಪಿಎಲ್​​​​ ಸೀಸನ್ ಎಂಬ ಉತ್ಸಾಹದಲ್ಲೇ ಬ್ಯಾಟಿಂಗ್ ನಡೆಸ್ತಿದ್ದಾರೆ. ವಿಕೆಟ್ ಹಿಂದೆಯೂ ಜಾದೂ ಮಾಡ್ತಿದ್ದಾರೆ. ತಂಡದ ಗೆಲುವಿಗಾಗಿ ಛಲದ ಹೋರಾಟ ನಡೆಸ್ತಿದ್ದಾರೆ.

ಪ್ರತೀ ಸಲ ಐಪಿಎಲ್ ಸೀಸನ್ ನಲ್ಲೂ ಒಂದಿಲ್ಲೊಂದು ವಿಶೇಷತೆಗಳು ಇದ್ದೇ ಇರುತ್ತವೆ. ಆದ್ರೆ ಈ ಬಾರಿಯಂತೂ ತುಂಬಾನೇ ಸ್ಪೆಷಾಲಿಟಿಗಳು ಇವೆ. ಯಾಕಂದ್ರೆ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಆಟಗಾರನೊಬ್ಬ 37ರ ವಯಸ್ಸಿನ ಬಳಿಕ ವಿಕೆಟ್ ಕೀಪರ್ ಅಂಡ್ ಮ್ಯಾಚ್ ಫಿನಿಷರ್​ಗಳಾಗಿ ಕಾರ್ಯ ನಿರ್ವಹಿಸಿದ ಉದಾಹರಣೆಗಳೇ ಇಲ್ಲ. ಅಂತಹದ್ರಲ್ಲಿ, 42 ವರ್ಷದ ಧೋನಿ, 38 ವರ್ಷದ ದಿನೇಶ್ ಐಪಿಎಲ್​ನಲ್ಲಿ ಚಮತ್ಕಾರ ಮಾಡ್ತಿದ್ದಾರೆ. ಮ್ಯಾಚ್ ಫಿನಿಷರ್​ಗಳಾಗಿ ಯುವ ಆಟಗಾರರಿಗೆ ಸೆಡ್ಡು ಹೊಡೆಯುತ್ತಿದ್ದಾರೆ. ಆದ್ರೆ ಒಂದು ಬೇಸರದ ಸಂಗತಿ ಅಂದ್ರೆ ಈ ಹಿರಿಯ ವಿಕೆಟ್ ಕೀಪರ್ಸ್​ ನಿವೃತ್ತಿಯ ಅಂಚಿನಲ್ಲಿದ್ದಾರೆ. ಬಹುತೇಕ ಇದೇ ಸೀಸನ್​ ಇವರಿಬ್ಬರಿಗೂ ಕೊನೆಯ ಐಪಿಎಲ್​​ ಆಗಬಹುದು ಎನ್ನಲಾಗಿದೆ. ಆದ್ರೆ ವಯಸ್ಸಾಯ್ತು, ಅಂಕಲ್ಸ್, ತಂಡಕ್ಕೆ ಏನ್ ಆಡ್ತಾರೆ, ಟೀಂ ಗೆಲ್ಲೋಕೆ ಆಗಲ್ಲ, ನಿವೃತ್ತಿ ತಗೊಳ್ಳಿ, ಕಾಮೆಂಟ್ರಿ ಮಾಡ್ಲಿ ಅಂತಾ ಜರಿದವರ ಮುಂದೆಯೇ ಸಾಧಿಸಿ ತೋರಿಸಿದ್ದಾರೆ. ಯುವ ಆಟಗಾರರು ಕೂಡ ಇವ್ರಿಂದ ನೋಡಿ ಕಲಿಯಬೇಕಾಗಿರೋದು ಸಾಕಷ್ಟಿದೆ.

Shwetha M