ವಿಕೆಟ್ ಕೀಪರ್ಸ್.. ಮ್ಯಾಚ್ ಫಿನಿಶರ್ಸ್ – ಅಂಕಲ್ಸ್ ಅಂದವ್ರಿಗೆ MSD, DK ಡಿಚ್ಚಿ
IPL ನಲ್ಲೀಗ ಧೋನಿ, ಡಿಕೆಯೇ ಬೆಸ್ಟ್
ಐಪಿಎಲ್ ಸೀಸನ್ 17 ಹಿಂದಿನ ಎಲ್ಲಾ ಆವೃತ್ತಿಗಳಿಗಿಂತಲೂ ವಿಭಿನ್ನ ಮತ್ತು ವಿಶೇಷವಾಗಿದೆ. ಯಾಕಂದ್ರೆ ಈ ಸೀಸನ್ನಲ್ಲಿ ಯಾರನ್ನ ಗೇಮ್ ಚೇಂಜರ್ ಅಂತಾ ಕೋಟಿ ಕೋಟಿ ಕೊಟ್ಟು ತಂಡಕ್ಕೆ ಕರೆತಂದಿದ್ರೋ ಅವ್ರೆಲ್ಲಾ ಅಟ್ಟರ್ ಫ್ಲಾಪ್ ಆಗಿದ್ದಾರೆ. ಡೊಮೆಸ್ಟಿಕ್ ಪ್ಲೇಯರ್ ಗಳೇ ಧೂಳೆಬ್ಬಿಸುತ್ತಾ ಟೀಮ್ಗೆ ಆಸರೆಯಾಗ್ತಿದ್ದಾರೆ. ಅದ್ರಲ್ಲೂ ಪ್ರತಿ ಸೀಸನ್ನಲ್ಲೂ ಯಂಗ್ಸ್ಟರ್ಗಳ ಆರ್ಭಟವಾದ್ರೆ, ಈ ಸೀಸನ್ನಲ್ಲಿ ಇಬ್ಬರು ಸೀನಿಯರ್ಗಳ ದರ್ಬಾರ್ ಜೋರಾಗಿದೆ. ಮಹೇಂದ್ರ ಸಿಂಗ್ ಧೋನಿ ಹಾಗೂ ದಿನೇಶ್ ಕಾರ್ತಿಕ್ ಆಟ ಯುವಕರೂ ನಾಚಿಸುವಂತಿದೆ. ಯಾರೆಲ್ಲಾ ಅಂಕಲ್ಗಳು, ನಿವೃತ್ತಿ ತಗೊಳ್ಳಿ ಅಂತಾ ಟೀಕೆ ಮಾಡಿದ್ರೋ ಅವ್ರೇ ಶಹಬ್ಬಾಸ್ ಅಂತಿದ್ದಾರೆ. ಐಪಿಎಲ್ ಪಂದ್ಯಕ್ಕೂ ಮುನ್ನ ದಿನೇಶ್ ಕಾರ್ತಿಕ್ ಹಾಗೂ ಧೋನಿ ಎದುರಿಸಿದ ಸವಾಲುಗಳೇನು? ಟೀಕೆಗಳನ್ನ ಮೆಟ್ಟಿ ನಿಂತು ಮ್ಯಾಜಿಕ್ ಮಾಡಿದ್ದೇಗೆ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕನ್ನಡಿಗ ಕೆ.ಎಲ್ ರಾಹುಲ್ ಮುಂದೆ ಮಂಡಿಯೂರಿದ ಸಿಎಸ್ಕೆ – ಗೆದ್ದು ಬೀಗಿದ ಲಕ್ನೋ ಸೂಪರ್ ಜೈಂಟ್ಸ್
ಈ ಬಾರಿಯ ಐಪಿಎಲ್ನಲ್ಲಿ ರೆಕಾರ್ಡ್ ಬ್ರೇಕರ್ ಮ್ಯಾಚ್ಗಳು, ಹೊಸ ಪ್ರತಿಭೆಗಳ ಪರ್ಫಾಮೆನ್ಸ್, ಬೌಂಡರಿ, ಸಿಕ್ಸರ್ಗಳ ಭರಾಟೆ ಮಸ್ತ್ ಮನರಂಜನೆ ನೀಡ್ತಿದೆ. ಇದೆಲ್ಲದ್ರ ನಡುವೆ ತುಂಬಾನೇ ಗಮನ ಸೆಳೆಯುತ್ತಾ ಇರೋದು ಅಂದ್ರೆ ಮಹೇಂದ್ರ ಸಿಂಗ್ ಧೋನಿ ಹಾಗೂ ದಿನೇಶ್ ಕಾರ್ತಿಕ್ ಬ್ಯಾಟಿಂಗ್. ಪ್ರಸಕ್ತ ಐಪಿಎಲ್ನಲ್ಲಿ ಇವರಿಬ್ಬರ ಆಟವನ್ನ ಮೆಚ್ಚಿಕೊಳ್ಳದ ಕ್ರಿಕೆಟ್ ಅಭಿಮಾನಿಗಳೇ ಇಲ್ಲ. ನಿವೃತ್ತಿನ ಅಂಚಿನಲ್ಲಿ ನೀಡ್ತಿರೋ ಪವರ್ ಫುಲ್ ಫರ್ಮಾಮೆನ್ಸ್ ಯಂಗ್ಸ್ಟರ್ಗಳನ್ನೇ ನಾಚಿಸುವಂತಿದೆ. ಆರ್ಸಿಬಿ ಸಂಕಷ್ಟದಲ್ಲಿದ್ದಾಗ ದಿನೇಶ್ ಕಾರ್ತಿಕ್ ಆಪತ್ಬಾಂದವರಾಗಿ ಬಂದು ಅಬ್ಬರಿಸುತ್ತಿದ್ದಾರೆ. ಬ್ಯಾಟಿಂಗ್ನಲ್ಲಿ ಭರ್ಜರಿ ಪ್ರದರ್ಶನ ನೀಡ್ತಿದ್ದಾರೆ. ಮತ್ತೊಂದೆಡೆ ಧೋನಿ ಫೈರಿಂಗ್ ಸ್ಟಾರ್ ಥರ ಸಿಕ್ಸ್, ಫೋರ್ಗಳ ಮೂಲಕ ಸಿಎಸ್ಕೆ ತಂಡಕ್ಕೆ ಸಾಥ್ ನೀಡ್ತಿದ್ದಾರೆ.
ಧೋನಿ, ಡಿಕೆ ದರ್ಬಾರ್!
ಮಹೇಂದ್ರ ಸಿಂಗ್ ಧೋನಿ ಹಾಗೂ ದಿನೇಶ್ ಕಾರ್ತಿಕ್ ಈ ಬಾರಿಯ ಐಪಿಎಲ್ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸ್ತಿದ್ದಾರೆ. ಡೆತ್ ಓವರ್ಗಳಲ್ಲಿ ಕ್ರೀಸ್ಗೆ ಎಂಟ್ರಿ ನೀಡ್ತಿರೋ ಇವರಿಬ್ಬರು, ಸ್ಟೇಡಿಯಂನಲ್ಲಿ ಫ್ಯಾನ್ಸ್ಗೆ ಭರಪೂರ ಮನರಂಜನೆಯನ್ನೇ ನೀಡ್ತಿದ್ದಾರೆ. ಅದು ಕೂಡ ಬರೋಬ್ಬರಿ 200ರ ಸ್ಟ್ರೈಕ್ರೇಟ್ನಲ್ಲಿ ಅನ್ನೋದೇ ಅಚ್ಚರಿಯ ವಿಚಾರ. ಪ್ರಸಕ್ತ ಐಪಿಎಲ್ನಲ್ಲಿ ಧೋನಿ ಎದುರಿಸಿದ 25 ಎಸೆತಗಳಿಂದ 59 ರನ್ ಸಿಡಿಸಿದ್ದಾರೆ. 236ರ ಸ್ಟ್ರೈಜ್ರೇಟ್ನಲ್ಲಿ ಬ್ಯಾಟ್ ಬೀಸಿರುವ ಧೋನಿ, 4 ಬೌಂಡರಿ, 6 ಸಿಕ್ಸರ್ ದಾಖಲಿಸಿದ್ದಾರೆ. ಇನ್ನು ದಿನೇಶ್ ಕಾರ್ತಿಕ್, 7 ಪಂದ್ಯಗಳಿಂದ 110 ಎಸೆತಗಳಲ್ಲಿ 226 ರನ್ ಸಿಡಿಸಿದ್ದು, 16 ಬೌಂಡರಿ, 18 ಸಿಕ್ಸರ್ ಬಾರಿಸಿದ್ದಾರೆ. 205.45ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಆ ಮೂಲಕ ಡೆತ್ ಓವರ್ಗಳಲ್ಲಿ ನಮ್ಮನ್ನ ಮೀರಿಸುವವರು ಯಾರಿಲ್ಲ ಅಂತಿದ್ದಾರೆ ಧೋನಿ ಮತ್ತು ಡಿಕೆ. ಧೋನಿ ಹಾಗೂ ದಿನೇಶ್ ಕಾರ್ತಿಕ್ ಐಪಿಎಲ್ ಇತಿಹಾಸದ ಅತ್ಯಂತ ಹಿರಿಯ ವಿಕೆಟ್ ಕೀಪರ್ಸ್ ಹಾಗೂ ಮ್ಯಾಚ್ ಫಿನಿಷರ್ಸ್. 2008ರ ಚೊಚ್ಚಲ ಐಪಿಎಲ್ನಿಂದ ಈವರೆಗೆ ಅಂದ್ರೆ, ಸತತ 17 ಸೀಸನ್ಗಳಲ್ಲಿ ವಿಕೆಟ್ ಕೀಪರ್ಗಳಾಗಿ, ಮ್ಯಾಚ್ ಫಿನಿಷರ್ಗಳಾಗಿ ಇಬ್ಬರೂ ಆಟಗಾರರು ಕಾರ್ಯ ನಿರ್ವಹಿಸಿದ್ದಾರೆ. ಸೀಸನ್ನಿಂದ ಸೀಸನ್ಗೆ ಇವ್ರ ವಯಸ್ಸು ಹೆಚ್ಚಾದಂತೆಲ್ಲಾ ಬ್ಯಾಟಿಂಗ್ ಖದರ್ ಹೆಚ್ಚಾಗ್ತಿದೆಯೇ ಹೊರತು ಕಡಿಮೆಯಾಗಿಲ್ಲ. ಪ್ರಸಕ್ತ ಸೀಸನ್ನಲ್ಲೂ ತಾವು ಆಡ್ತಿರೋ ಮೊದಲ ಐಪಿಎಲ್ ಸೀಸನ್ ಎಂಬ ಉತ್ಸಾಹದಲ್ಲೇ ಬ್ಯಾಟಿಂಗ್ ನಡೆಸ್ತಿದ್ದಾರೆ. ವಿಕೆಟ್ ಹಿಂದೆಯೂ ಜಾದೂ ಮಾಡ್ತಿದ್ದಾರೆ. ತಂಡದ ಗೆಲುವಿಗಾಗಿ ಛಲದ ಹೋರಾಟ ನಡೆಸ್ತಿದ್ದಾರೆ.
ಪ್ರತೀ ಸಲ ಐಪಿಎಲ್ ಸೀಸನ್ ನಲ್ಲೂ ಒಂದಿಲ್ಲೊಂದು ವಿಶೇಷತೆಗಳು ಇದ್ದೇ ಇರುತ್ತವೆ. ಆದ್ರೆ ಈ ಬಾರಿಯಂತೂ ತುಂಬಾನೇ ಸ್ಪೆಷಾಲಿಟಿಗಳು ಇವೆ. ಯಾಕಂದ್ರೆ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಆಟಗಾರನೊಬ್ಬ 37ರ ವಯಸ್ಸಿನ ಬಳಿಕ ವಿಕೆಟ್ ಕೀಪರ್ ಅಂಡ್ ಮ್ಯಾಚ್ ಫಿನಿಷರ್ಗಳಾಗಿ ಕಾರ್ಯ ನಿರ್ವಹಿಸಿದ ಉದಾಹರಣೆಗಳೇ ಇಲ್ಲ. ಅಂತಹದ್ರಲ್ಲಿ, 42 ವರ್ಷದ ಧೋನಿ, 38 ವರ್ಷದ ದಿನೇಶ್ ಐಪಿಎಲ್ನಲ್ಲಿ ಚಮತ್ಕಾರ ಮಾಡ್ತಿದ್ದಾರೆ. ಮ್ಯಾಚ್ ಫಿನಿಷರ್ಗಳಾಗಿ ಯುವ ಆಟಗಾರರಿಗೆ ಸೆಡ್ಡು ಹೊಡೆಯುತ್ತಿದ್ದಾರೆ. ಆದ್ರೆ ಒಂದು ಬೇಸರದ ಸಂಗತಿ ಅಂದ್ರೆ ಈ ಹಿರಿಯ ವಿಕೆಟ್ ಕೀಪರ್ಸ್ ನಿವೃತ್ತಿಯ ಅಂಚಿನಲ್ಲಿದ್ದಾರೆ. ಬಹುತೇಕ ಇದೇ ಸೀಸನ್ ಇವರಿಬ್ಬರಿಗೂ ಕೊನೆಯ ಐಪಿಎಲ್ ಆಗಬಹುದು ಎನ್ನಲಾಗಿದೆ. ಆದ್ರೆ ವಯಸ್ಸಾಯ್ತು, ಅಂಕಲ್ಸ್, ತಂಡಕ್ಕೆ ಏನ್ ಆಡ್ತಾರೆ, ಟೀಂ ಗೆಲ್ಲೋಕೆ ಆಗಲ್ಲ, ನಿವೃತ್ತಿ ತಗೊಳ್ಳಿ, ಕಾಮೆಂಟ್ರಿ ಮಾಡ್ಲಿ ಅಂತಾ ಜರಿದವರ ಮುಂದೆಯೇ ಸಾಧಿಸಿ ತೋರಿಸಿದ್ದಾರೆ. ಯುವ ಆಟಗಾರರು ಕೂಡ ಇವ್ರಿಂದ ನೋಡಿ ಕಲಿಯಬೇಕಾಗಿರೋದು ಸಾಕಷ್ಟಿದೆ.