‘ಸಾಮ್ರಾಟ್​’ಗೆ ಡಿಕೆ ಬ್ರದರ್ಸ್ ಡಿಚ್ಚಿ – ಪದ್ಮನಾಭನಗರದಲ್ಲಿ ಅಶೋಕ್ ವಿರುದ್ಧ ಸುರೇಶ್ ಸ್ಪರ್ಧೆ?

‘ಸಾಮ್ರಾಟ್​’ಗೆ ಡಿಕೆ ಬ್ರದರ್ಸ್ ಡಿಚ್ಚಿ – ಪದ್ಮನಾಭನಗರದಲ್ಲಿ ಅಶೋಕ್ ವಿರುದ್ಧ ಸುರೇಶ್ ಸ್ಪರ್ಧೆ?

ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗಲು ನಾಯಕರು ನಾನಾ ಕಸರತ್ತು ಮಾಡ್ತಿದ್ದಾರೆ. ಅದ್ರಲ್ಲೂ ವರುಣಾ ಹಾಗೂ ಕನಕಪುರ ಕ್ಷೇತ್ರಗಳು ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿವೆ. ಕನಕಪುರ ಕ್ಷೇತ್ರದಿಂದ ಡಿ.ಕೆ ಶಿವಕುಮಾರ್ ವಿರುದ್ಧ ಸ್ಪರ್ಧಿಸಿರುವ ಆರ್.ಅಶೋಕ್​ಗೆ ಟಕ್ಕರ್ ಕೊಡಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಅಶೋಕ್​ರನ್ನ ಸ್ವಕ್ಷೇತ್ರದಲ್ಲೇ ಕಟ್ಟಿಹಾಕೋಕೆ ಹೊಸ ಅಸ್ತ್ರ ಹೂಡಲು ಸಿದ್ಧವಾಗಿದೆ.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಸಂಸದ ಡಿ.ಕೆ.ಸುರೇಶ್ ಸಹ ನಾಮಪತ್ರ ಸಲ್ಲಿಸುತ್ತಾರೆ. ಬಿಜೆಪಿ, ಜೆಡಿಎಸ್​​ನವರು ಚೆಸ್ ಆಟ ಆಡುತ್ತಿದ್ದಾರೆ, ನಾವೂ ಆಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಈ ಮೂಲಕ ಕುರುಕ್ಷೇತ್ರದಲ್ಲಿ ಡಿಕೆಶಿ ಹೊಸ ದಾಳ ಉರುಳಿಸಿದ್ದಾರೆ. ಕನಕಪುರದಲ್ಲಿ ಡಿಕೆ ಶಿವಕುಮಾರ್​ ವಿರುದ್ಧ ಸಾಮ್ರಾಟ್​​ ಆರ್​. ಅಶೋಕ್​ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಈ ಮೂಲಕ ಪ್ರಭಾವಿ ಇಬ್ಬರು ನಾಯಕರನ್ನು ತವರು ಕ್ಷೇತ್ರದಲ್ಲೇ ಕಟ್ಟಿಹಾಕಲು ಬಿಜೆಪಿ ಸೂತ್ರ ಹೆಣೆದಿದೆ. ಇದಕ್ಕೆ ಪ್ರತಿತಂತ್ರ ಹೆಣೆದಿರುವ ಡಿ.ಕೆ ಶಿವಕುಮಾರ್​​​ ಪದ್ಮನಾಭನಗರದಲ್ಲಿ (Padmanabhanagar) ಸಾಮ್ರಾಟ್​​ ಅಶೋಕ್​ ವಿರುದ್ಧ ಸಂಸದ ಡಿಕೆ ಸುರೇಶ್​ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಇದರಿಂದ ಆರ್​. ಅಶೋಕ್​ ಅವರು ವಿಚಲಿತರಾಗಿ ಕ್ಷೇತ್ರ ಬಿಟ್ಟು ಬರದಂತೆ ಡಿಕೆ ಬ್ರದರ್ಸ್​ ಮಾಸ್ಟರ್​ ಸ್ಟ್ರೋಕ್​ ನೀಡಿದ್ದಾರೆ. ಈ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಿ ಪದ್ಮನಾಭನಗರದಲ್ಲಿ ಡಿ.ಕೆ.ಸುರೇಶ್ (DK Suresh) ಸಹ ನಾಮಪತ್ರ ಸಲ್ಲಿಸುತ್ತಾರೆ. ಬಿಜೆಪಿ, ಜೆಡಿಎಸ್​​ನವರು ಚೆಸ್ ಆಟ ಆಡುತ್ತಿದ್ದಾರೆ, ನಾವೂ ಆಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಚುನಾವಣೆ ಹೊಸ್ತಿಲಲ್ಲೇ ಫೀಲ್ಡಿಗಿಳಿದ ಐಟಿ – ಸಾವಿರ ಕೋಟಿ ಒಡೆಯ ಕೆಜಿಎಫ್ ಬಾಬುಗೆ ಬಿಗ್ ಶಾಕ್!

ಈಗಾಗ್ಲೇ ಕಾಂಗ್ರೆಸ್ ಪದ್ಮನಾಭಗರದ ಟಿಕೆಟ್​ ಅನ್ನು ರಘುನಾಥ ನಾಯ್ಡು ಅವರಿಗೆ ​ನೀಡಿದೆ. ಏಪ್ರಿಲ್ 19ರಂದು  ಪದ್ಮನಾಭನಗರ ಕ್ಷೇತ್ರದಿಂದ ಸಂಸದ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಸುತ್ತಾರೆ. ಹಾಗೇ ರಘುನಾಥ ನಾಯ್ಡು ಅವರು ಕೂಡ ನಾಮಪತ್ರ ಸಲ್ಲಿಸುತ್ತಾರೆ. ನಾನೂ ಕೂಡ ನಾಮಪತ್ರ ಸಲ್ಲಿಕೆಗೆ ಹೋಗುತ್ತೇನೆ. ನಮ್ಮ ಅಭ್ಯರ್ಥಿ ರಘುನಾಥ ನಾಯ್ಡು ಗೆಲ್ಲುವ ವಾತಾವರಣ ಇದೆ ಎಂದರು. ಆದರೆ ಹೈಕಮಾಂಡ್ ನಿರ್ಧಾರದ ಬಳಿಕ ಅಂತಿಮವಾಗಿ ಕಣದಲ್ಲಿ ಉಳಿಯುವವರು ಯಾರೂ ಎಂಬ ಪ್ರಶ್ನೆ ಮೂಡಿದೆ. ಈವರೆಗೆ ಕನಕಪುರದಲ್ಲಿ ಡಿಕೆ ಶಿವಕುಮಾರ್​ ಸ್ಪರ್ಧೆ ಮಾಡಿದರೂ ಕ್ಷೇತ್ರದ ಎಲ್ಲಾ ಜವಾಬ್ದಾರಿಯನ್ನು ಸಹೋದರ ಡಿಕೆ ಸುರೇಶ್ ನೋಡಿಕೊಂಡು ಬರುತ್ತಿದ್ದಾರೆ. ಈ ಕಾರಣಕ್ಕಾಗಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ಡಿಕೆ ಶಿವಕುಮಾರ್ ಹೆಚ್ಚಾಗಿ ಹೋಗುತ್ತಿರಲಿಲ್ಲ. ಆದ್ರೆ, ಈ ಬಾರಿ ಬಿಜೆಪಿ ಪ್ರಬಲ ನಾಯಕ ಆರ್. ಅಶೋಕ್ ಅವರನ್ನು ಕನಕಪುರ ಅಖಾಡಕ್ಕಿಳಿಸಿದ್ದು, ಇದಕ್ಕೆ ತಿರುಗೇಟು ನೀಡಲು ಡಿಕೆ ಸಹೋದರರು ಪ್ರತಿತಂತ್ರ ರೂಪಿಸುತ್ತಿದ್ದಾರೆ.

suddiyaana