DK ಬಾಸ್ ಗೆ ಲಾಸ್ಟ್ ಐಪಿಎಲ್ – ಟೀಕಿಸಿದವ್ರ ಎದುರೇ ಗೆದ್ದ ಹೀರೋ
ಬೆಸ್ಟ್ ಫಿನಿಶರ್ ಗೆ RCB ಗಿಫ್ಟ್ ಏನು?

DK ಬಾಸ್ ಗೆ ಲಾಸ್ಟ್ ಐಪಿಎಲ್ – ಟೀಕಿಸಿದವ್ರ ಎದುರೇ ಗೆದ್ದ ಹೀರೋಬೆಸ್ಟ್ ಫಿನಿಶರ್ ಗೆ RCB ಗಿಫ್ಟ್ ಏನು?

ಆರ್​ಸಿಬಿ ಮ್ಯಾಚ್ ಇತ್ತು ಅಂದ್ರೆ ಅಲ್ಲಿ ಕೇಳೋದು ಮೂರೇ ಹೆಸ್ರು. ಒಂದು RCB RCB ಅಂತಾ ಜೋಶ್‌ನಲ್ಲಿ ಕೂಗೋ ಫ್ಯಾನ್ಸ್ ನಂತರ ಕರೆಯೋ ಹೆಸರೇ ಕೊಹ್ಲಿ ಕೊಹ್ಲಿ ಅಂತಾ. ಅದಾದ ಮೇಲೆ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಲ್ಲೇ ವೆಲ್‌ಕಮ್ ಮಾಡೋ ಹೆಸಡು ಡಿಕೆ.. ಡಿಕೆ.. ಆರ್‌ಸಿಬಿ ಮ್ಯಾಚ್ ನಲ್ಲಿ ಇದೇ ಮೂರು ಕೂಗು ಇಡಿ ಸ್ಟೇಡಿಯಂನಲ್ಲಿ ಮೊಳಗುತ್ತಿರುತ್ತದೆ. ಕೊಹ್ಲಿ ನಂತರ ಅಷ್ಟರಮಟ್ಟಿಗೆ ಆರ್‌ಸಿಬಿ ಟೀಮ್‌ನ ಜೀವಾಳವಾಗಿದ್ದಾರೆ ದಿನೇಶ್ ಕಾರ್ತಿಕ್. ಆರ್‌ಸಿಬಿ ಟೀಮ್ ಬ್ಯಾಟಿಂಗ್‌ನಲ್ಲಿ ಫೆಲ್ಯೂರ್ ಆದಾಗ ಫ್ಯಾನ್ಸ್ ಕಾಯೋದೇ ಡಿಕೆಗಾಗಿ. ಡಿಕೆ ಇದ್ದಲ್ಲಿ ಗೆಲುವಿನ ಕೇಕೆ ಗ್ಯಾರಂಟಿ ಅನ್ನೋ ಲೆಕ್ಕಾಚಾರ ಇರುತ್ತೆ. ಆರ್‌ಸಿಬಿ ತಂಡದ ಮೈನ್ ಸ್ಟ್ರೆಂಥ್, ವಿಕೆಟ್ ಕೀಪಿಂಗ್‌ನ ಬಲ, ಗ್ರೇಟ್ ಫಿನಿಶರ್, ತಂಡದ ಅಪ್ರತಿಮ ಹೋರಾಟಗಾರ ದಿನೇಶ್​ ಕಾರ್ತಿಕ್. ಆದ್ರೆ ಆರ್​ಸಿಬಿ ಫ್ಯಾನ್ಸ್​ಗೆ ಆಘಾತಕಾರಿ ವಿಷ್ಯವೊಂದಿದೆ. ಅದುವೇ ಡಿಕೆ​ಗೆ ಇದೇ ಲಾಸ್ಟ್ ಐಪಿಎಲ್ ಸೀಸನ್. ಹೀಗಾಗಿ ಡಿಕೆ ಬಾಸ್​ಗೆ ಆರ್‌ಸಿಬಿ ಕೂಡಾ ಸ್ಪೆಷಲ್​ ಗಿಫ್ಟ್​ ಕೊಡಲು ಪ್ಲಾನ್​ ಮಾಡಿದೆ.

ಇದನ್ನೂ ಓದಿ: 4 ಪಂದ್ಯ ಗೆಲುವು.. 2 ಸವಾಲು – RCB ಪ್ಲೇ ಆಫ್ ಹಾದಿ ತೆರೆಯಿತಾ?

ಆರ್​​ಸಿಬಿ ಅಂತಾ ಬಂದಾಗ ಫ್ಯಾನ್ಸ್‌ಗೆ ವಿಕೆ, ಡಿಕೆ ಫೆವರೇಟ್. ಅತ್ಯದ್ಭುತ ಬ್ಯಾಟಿಂಗ್​.  ಬಿರುಗಾಳಿಯಂತಾ ಕೀಪಿಂಗ್, ನಿವೃತ್ತಿಯ ಅಂಚಿನಲ್ಲಿದ್ದರೂ ಡಿಕೆ ಬಾಸ್ ಹವಾ ಜೋರಾಗಿಯೇ ಇದೆ. ಈ ಬಾರಿ ದಿನೇಶ್ ಕಾರ್ತಿಕ್‌ಗೆ ಕೊನೇ ಐಪಿಎಲ್ ಅಂತಾನೇ ಹೇಳಲಾಗ್ತಿದೆ. ಹೀಗಾಗಿ ತಂಡಕ್ಕಾಗಿ ಎಂಥದ್ದೇ ಪರಿಸ್ಥಿತಿಯಲ್ಲೂ ನೆರವಾಗಬಲ್ಲ ಗ್ರೇಟ್ ಕ್ರಿಕೆಟರ್ ಡಿಕೆಗೆ ಸರ್‌ಪ್ರೈಸ್ ಗಿಫ್ಟ್ ನೀಡಲು ಆರ್‌ಸಿಬಿ ಟೀಮ್ ಪ್ಲ್ಯಾನ್ ಮಾಡ್ತಿದೆ. ಡಿಕೆ ಬಾಸ್​ಗೆ ಗೆಲುವಿನ ಗಿಫ್ಟ್​ ನೀಡಿ ಗ್ರ್ಯಾಂಡ್​​ ವಿದಾಯ ಹೇಳಲು ಆರ್‌ಸಿಬಿ ಆಟಗಾರರು ಎಫರ್ಟ್ ಹಾಕ್ತಿದ್ದಾರೆ. ಇದಕ್ಕೂ ಮೊದಲು ಛಲದಂಕ ಮಲ್ಲ ದಿನೇಶ್​ ಕಾರ್ತಿಕ್​ ಕಮ್​ಬ್ಯಾಕ್​ ಕಥೆ ನೀವು ತಿಳಿಯಲೇ ಬೇಕು.

2008ರಿಂದ 14ರವರೆಗೆ ಡೇರ್ ಡೆವಿಲ್ಸ್ ಪರ ಆಡಿದ್ದ ಅವರು, 2011ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ರತಿನಿಧಿಸಿದ್ದರು. 2012-13ರಲ್ಲಿ ಮುಂಬೈ ಇಂಡಿಯನ್ಸ್, 2016-17ರಲ್ಲಿ ಗುಜರಾತ್ ಲಯನ್ಸ್ ಪರ ಆಡಿದ್ದರು. 2018ರಿಂದ 21ರವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದಾರೆ. 2015ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಡಿಕೆ, 2022ರಿಂದ ಮತ್ತೆ ತಂಡ ಸೇರಿಕೊಂಡು ಪ್ರಸ್ತುತ ಆರ್‌ಸಬಿ ತಂಡದಲೇ ಉಳಿದಿದ್ದಾರೆ. 2022ರಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ 5.5 ಕೋಟಿ ರೂಪಾಯಿಗೆ ಆರ್‌ಸಿಬಿ ತಂಡ ಖರೀದಿಸಿದ ನಂತರ ಅವರು ಕಳೆದ ಎರಡು ಋತುಗಳಿಂದ ಆರ್‌ಸಿಬಿ ತಂಡದ ಪ್ರಮುಖ ಫಿನಿಶರ್‌ ಆಗಿದ್ದಾರೆ. ಅದಕ್ಕೂ ಹಿಂದೆ 2015ರಲ್ಲಿ ಆರ್‌ಸಿಬಿಯು ಅವರನ್ನು 10.5 ಕೋಟಿ ರೂಪಾಯಿಗೆ ಖರೀದಿಸಿ ನಂತರ ಕೈಬಿಟ್ಟಿತ್ತು. ನಂತ್ರ 2022ರಲ್ಲಿ ಮತ್ತೆ ಆರ್​ಸಿಬಿ ಹರಾಜಿನಲ್ಲಿ ಡಿಕೆಯನ್ನು ಖರೀದಿಸಿದಾಗ ಎಲ್ರೂ ಟೀಕಿಸಿದ್ರು. ಆದ್ರೆ 2022ರಲ್ಲೇ 16 ಪಂದ್ಯಗಳಲ್ಲಿ 55ರ ಸರಾಸರಿಯಲ್ಲಿ 330 ರನ್ ಗಳಿಸಿದ್ದರು. ಆ ವರ್ಷ 183.33ರ ಸ್ಫೋಟಕ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದರು. ತಂಡವು ಪ್ಲೇ ಆಫ್‌ ಪ್ರವೇಶಿಸುವಲ್ಲಿ ನೆರವಾಗಿದ್ದರು. ಹೀಗೆ ತಮ್ಮ ವಿರುದ್ಧದ ಟೀಕೆಗಳಿಗೆಲ್ಲಾ ಕಾರ್ತಿಕ್​, ತಮ್ಮ ಬ್ಯಾಟ್​ನಿಂದಲೇ ಉತ್ತರ ಕೊಟ್ರು. ಫಿನಿಷರ್​​ ಆಗಿ ಮಿಂಚು ಹರಿಸಿದ ಡಿಕೆ ಬಾಸ್​​ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು. ಎಬಿಡಿ ಅಲಭ್ಯತೆಯ ಕೊರತೆ ಕಾಡದಂತೆ ತಮ್ಮ ರೋಲ್​ನ ಸ್ಪಷ್ಟವಾಗಿ ನಿಭಾಯಿಸಿದ್ರು. ಈ ಸೀಸನ್​ನಲ್ಲೂ ಅಷ್ಟೇ ಡಿಕೆ ಬೊಂಬಾಟ್​ ಆಟದ ಮೂಲಕ ಆರ್‌ಸಿಬಿ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಎಂಟರ್‌ಟೈನ್‌ಮೆಂಟ್ ನೀಡಿದ್ದಾರೆ. ಜೊತೆಗೆ ಈ ಬಾರಿಯ ಐಪಿಎಲ್‌ಗೆ ಎಂಟ್ರಿ ಕೊಟ್ಟಾಗ ಕ್ರಿಕೆಟ್‌ ಕಾಮೆಂಟ್ರಿ ಹೇಳಲು ನೀನು ಬೆಸ್ಟ್ ಅನ್ನೋ ಟೀಕೆಯನ್ನೂ ಎದುರಿಸಿದ್ದರು. ಆಡೋದು ಬಿಟ್ಟು ಕಾಮೆಂಟ್ರಿ ಮಾಡ್ತಾ ಇರು ಎಂದು ಕೆಲವರು ಲೇವಡಿ ಮಾಡಿದ್ದರು. ಆದ್ರೆ ಡಿಕೆ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ.. ನಿವೃತ್ತಿ ಬಗ್ಗೆ ಟೀಕಿಸಿದವರಿಗೂ ಕೂಡಾ ತನ್ನ ಬ್ಯಾಟ್ ಮೂಲಕವೇ ತಿರುಗೇಟು ಕೊಟ್ಟಿದ್ದರು. ಕೇವಲ ಸಿಕ್ಸ್‌ ಫೋರ್‌ಗಳ ಮೂಲಕ ಅಬ್ಬರಿಸಿ ಬಾಯಿ ಮುಚ್ಚಿಸಿದ್ದರು.

ನಿವೃತ್ತಿಯ ಅಂಚಿನಲ್ಲಿದ್ದರೂ ದಿನೇಶ್ ಕಾರ್ತಿಕ್ ಅವರ ಬ್ಯಾಟಿಂಗ್ನಲ್ಲಿ ಹೊಳಪು ಮರೆಯಾಗಿಲ್ಲ ಅನ್ನೋದನ್ನು ಟೀಕಾಕಾರಿಗೂ ಮನದಟ್ಟು ಮಾಡಿಸಿದ್ರು. ಇಷ್ಟೇ ಅಲ್ಲ, ವಿಕೆಟ್ ಹಿಂದೆಯೂ ಚುರುಕಿನಿಂದ ಕೀಪಿಂಗ್ ಮಾಡ್ತಿದ್ದಾರೆ ದಿನೇಶ್.

ವಯಸ್ಸಿನ ಕಾರಣಕ್ಕೆ ಟಿ20 ವರ್ಲ್ಡ್ ಕಪ್ ಟೀಂನಿಂದ ಹೊರಗಿದ್ದರೂ ತನ್ನ ದೇಹದ ಕಣಕಣದಲ್ಲೂ ಕ್ರಿಕೆಟ್ ಗಾಗಿ ಎನರ್ಜಿ ಇದೆ ಅಂತಾ ತೋರಿಸಿಕೊಟ್ಟಿದ್ದಾರೆ ದಿನೇಶ್ ಕಾರ್ತಿಕ್. 2024 ರ ಐಪಿಎಲ್ ಟೂರ್ನಿಯಲ್ಲಿ 12 ಪಂದ್ಯಗಳನ್ನ ಆಡಿರುವ ಡಿಕೆ 301 ರನ್​ಗಳನ್ನ ಕಲೆ ಹಾಕಿದ್ದಾರೆ. 83 ರನ್ ಅವ್ರ ಹೈಯೆಸ್ಟ್ ಸ್ಕೋರ್ ಆಗಿದೆ. 196.73 ಸ್ಕ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸುವ ಡಿಕೆ ಆರ್​ಸಿಬಿಗೆ ಯಾವಾಗ್ಲೂ ಆಸರೆಯಾಗಿದ್ದಾರೆ. ಇನ್ನೂ ಎರಡು ಪಂದ್ಯಗಳು ಇರೋದ್ರಿಂದ ಡಿಕೆ ಇನ್ನುಷ್ಟು ಸ್ಕೋರ್ ಮಾಡೋ ಸಾದ್ಯತೆ ಇದೆ. ಒಟ್ಟಾರೆ ಐಪಿಎಲ್ ಕರಿಯರ್​ನಲ್ಲಿ ಈವರೆಗೂ 254 ಪಂದ್ಯ ಆಡಿರುವ ಡಿಕೆ 4817 ರನ್ ಬಾರಿಸಿದ್ದಾರೆ. ಆದ್ರೆ, 38 ವರ್ಷದ ದಿನೇಶ್​ ಕಾರ್ತಿಕ್​ಗೆ ಇದೇ ಕೊನೆಯ ಐಪಿಎಲ್​ ಟೂರ್ನಿ. ಈ ಸೀಸನ್​ ಆರಂಭಕ್ಕೂ ಮುನ್ನವೇ ವಿದಾಯದ ಸುಳಿವನ್ನ ಸ್ವತಃ ದಿನೇಶ್​ ಕಾರ್ತಿಕ್​​ ನೀಡಿದ್ದಾರೆ. ಈ ಸೀಸನ್‌ನ ಮೊದಲ ಪಂದ್ಯದಲ್ಲಿ ಮಾತನಾಡಿದ ಡಿಕೆ, ಚೆಪಾಕ್​ನಲ್ಲಿ ಪ್ಲೇಆಫ್ ಪಂದ್ಯವನ್ನು ಆಯೋಜಿಸುವ ಸಾಧ್ಯತೆ ಇರುವುದರಿಂದ ನಾನು ಇಲ್ಲಿ ಇನ್ನೊಂದು ಪಂದ್ಯ ಆಡಬಹುದು. ಒಂದು ವೇಳೆ ನಮ್ಮ ತಂಡ ಪ್ಲೇಆಫ್‌ಗೆ ಅರ್ಹತೆ ಪಡೆಯದಿದ್ದರೆ, ಇದು ಈ ಮೈದಾನದಲ್ಲಿ ನನ್ನ ಕೊನೆಯ ಪಂದ್ಯ ಎಂದಿದ್ದರು. ಈ ಮೂಲಕ ಇದೇ ನನ್ನ ಕೊನೇ ಐಪಿಎಲ್ ಎಂಬಂತೆ ಮಾತಾಡಿದ್ದರು. ಡಿಕೆ ಈ ಹೇಳಿಕೆಯನ್ನು ಆರ್​​ಸಿಬಿ ಟೀಮ್ ಫುಲ್ ಸೀರಿಯಸ್ಸಾಗಿ ತೆಗೆದುಕೊಂಡಿದೆ. ಪ್ಲೇ ಆಫ್ ಗೇರೇಬೇಕು. ಡಿಕೆಗಾಗಿ ಕಪ್ ಗೆಲ್ಲಬೇಕು ಅನ್ನೋ ಟಾರ್ಗೆಟ್ ಇಟ್ಟುಕೊಂಡು ಆರ್‌ಸಿಬಿ ಟೀಮ್ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ಈ ಕಮ್‌ಬ್ಯಾಕ್ ಹಿಂದಿರೋ ಸೀಕ್ರೆಟ್ ಡಿಕೆ. ದಿನೇಶ್ ಕಾರ್ತಿಕ್‌ಗಾಗಿ ಗೆಲ್ಲಲೇಬೇಕು ಅಂತಾ ಒಗ್ಗಟ್ಟಿನಲ್ಲಿ ಹೋರಾಟ ಮುಂದುವರೆಸಿದೆ ಆರ್‌ಸಿಬಿ. ಈ ಮೂಲಕ ಡಿಕೆಗೆ ಗೆಲುವಿನ ಸೆಂಡ್ ಆಫ್ ಕೊಡಲು ಆರ್‌ಸಿಬಿ ನಿರ್ಧರಿಸಿದೆ.

ಸ್ನೇಹಿತರೇ. ಡಿಕೆ ಬಗ್ಗೆ ಇನ್ನೊಂದು ವಿಚಾರವನ್ನ ನಾವಿಲ್ಲಿ ಹೇಳಲೇಬೇಕು. 2008ರಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ಪ್ರತಿ ಆವೃತ್ತಿಯಲ್ಲಿ ಕಾಣಿಸಿಕೊಂಡ ಆಟಗಾರ ದಿನೇಶ್‌ ಕಾರ್ತಿಕ್. ಕೇವಲ ಏಳು ಕ್ರಿಕೆಟಿಗರು ಮಾತ್ರ ಈ ಸಾಧನೆ ಮಾಡಿದ್ದಾರೆ. ಸಿಎಸ್‌ಕೆ ನಾಯಕ ಧೋನಿ, ಆರ್‌ಸಿಬಿಯ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ವೃದ್ಧಿಮಾನ್ ಸಹಾ ಮತ್ತು ಮನೀಶ್ ಪಾಂಡೆ ಎಲ್ಲಾ ಆವೃತ್ತಿಗಳಲ್ಲಿ ಆಡಿದ್ದಾರೆ.‌ ಈ ಸಾಲಿನಲ್ಲಿ ಡಿಕೆ ಕೂಡ ಇದ್ದಾರೆ. ಇನ್ನು ಭಾರತ ತಂಡದ ಪರ ಕಾರ್ತಿಕ್ ಕೊನೆಯ ಬಾರಿಗೆ 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಆಡಿದ್ದರು. ಆ ಬಳಿಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿಲ್ಲ. ಸದ್ಯ ಐಪಿಎಲ್​ನಲ್ಲಿ ಆರ್​ಸಿಬಿ ಪರ ಮಿಂಚು ಹರಿಸುತ್ತಿದ್ದಾರೆ. ಇದೇ ಕೊನೆ ಆವೃತ್ತಿ ಎನ್ನಲಾಗಿದೆ

Shwetha M