ಹಾಡಿನ ಮೂಲಕ ದಿಲ್ ಗೆದ್ದ ದಿಯಾ! – ಶ್ರೇಯಾ ಘೋಷಾಲ್ ಖುಷಿ ಪಟ್ಟಿದ್ದೇಕೆ?

ಹಾಡಿನ ಮೂಲಕ ದಿಲ್ ಗೆದ್ದ ದಿಯಾ! – ಶ್ರೇಯಾ ಘೋಷಾಲ್ ಖುಷಿ ಪಟ್ಟಿದ್ದೇಕೆ?

ದಿಯಾ ಹೆಗ್ಡೆ.. ಹಾಡಿಗೂ ಸೈ.. ಡ್ಯಾನ್ಸಿಗೂ ಸೈ.. ಮಾತಿಗೂ ಸೈ.. ಸರಿಗಮಪ ಸೀಸನ್ 19ರ ಪೋರಿ ದಿಯಾ ಪ್ರತಿಭೆಗೆ ತಲೆದೂಗದವರೇ ಇಲ್ಲ. ಕರುನಾಡ ಜನರ ಮನಗೆದ್ದಿದ್ದ ದಿಯಾ ಈಗ ರಾಷ್ಟ್ರ ಮಟ್ಟದಲ್ಲಿ ಸೌಂಡ್ ಮಾಡ್ತಾ ಇದ್ದಾಳೆ.. ಒಂದಾದ ಮೇಲೊಂದು ಶೋಗಳಲ್ಲಿ ಕಾಣಿಸಿಕೊಳ್ತಾ ಇದ್ದಾಳೆ.. ಈಗ ಹಿಂದಿ ರಿಯಾಲಿಟಿ ಶೋಗಳಲ್ಲೂ ದಿಯಾ ಎಲ್ಲರ ಮೆಚ್ಚುಗೆ ಗಳಿಸುತ್ತಿದ್ದಾಳೆ.. ಶ್ರೇಯಾ ಘೋಷಾಲ್ ಕೂಡ ಇವಳ ನಗು, ಹಾಡಿಗೆ ಮನಸೋತಿದ್ದಾರೆ..

ಇದನ್ನೂ ಓದಿ: ಭಾಗ್ಯಲಕ್ಷ್ಮೀ ಮಹಾಸಂಚಿಕೆ ಸಂಕಟ! – ಮದುವೆ ಕಾರ್ಡ್‌ ಗಾಗಿ ತಾಂಡವ್‌ ಹೋರಾಟ

ದಿಯಾ ಹೆಗ್ಡೆ ಕನ್ನಡ ಕಿರುತೆರೆಯಲ್ಲಿ ಹಾಡು ಮತ್ತು ನೃತ್ಯದ ಮೂಲಕವೇ ಸೈ ಎನಿಸಿಕೊಂಡು, ಕರುನಾಡ ಮನೆ ಮಂದಿಯಿಂದಲೂ ಶಹಬ್ಬಾಷ್ ಅನ್ನಿಸಿಕೊಂಡಿರುವ ಪುಟಾಣಿ.. ಜೀ ಕನ್ನಡದಲ್ಲಿ ಪ್ರಸಾರವಾದ ಸರಿಗಮಪ ಶೋನಲ್ಲಿ ತಮ್ಮ ಗಾಯನದ ಮೂಲಕವೇ ಮಿಂಚು ಹರಿಸಿದ್ದಳು. ಹರಳು ಹುರಿದಂತೆ ಪಟ ಪಟ ಮಾತನಾಡುವ, ಯಾರ ಮೇಲಾದರೂ ಪದ ಕಟ್ಟಿ ಹಾಡು ಹಾಡುವ, ತಾನೇ ಪದ್ಯ ಸೃಷ್ಟಿಸಿ ಹಾಡುತ್ತಿದ್ದ ನಮ್ಮ ಸಾಗರದ ಹುಡುಗಿ ದಿಯಾ ಹೆಗ್ಡೆಯ ಟ್ಯಾಲೆಂಟ್ ಗೆ ಕರ್ನಾಟಕ ಜನ ಮನಸೋತಿದ್ದರು.

ಇನ್ನು ಈ ಪುಟಾಣಿ ಹಾಡು, ಡ್ಯಾನ್ಸ್ ಪ್ರೆಸೆಂಟ್ ಮಾಡೋ ರೀತಿ ನಿಜಕ್ಕೂ ಅದ್ಭುತ. ಮುಗ್ಧ ನಗುವಿನ ದಿಯಾ ಹೆಗ್ಡೆ ಮೋಡಿಗೆ ವೀಕ್ಷಕರು ಫಿದಾ ಆಗಿದ್ರು. ದಿಯಾಗೆ ಹಿರಿಯರು-ಕಿರಿಯರು ಇದ್ಯಾವ ಮಿತಿಯೇ ಇಲ್ಲದೇ ಅಪಾರ ಅಭಿಮಾನಿ ಬಳಗ ಇದೆ. ತನ್ನ ಪ್ರತಿಭೆ ಮೂಲಕ ಮನರಂಜನೆ ನೀಡುತ್ತಿದ್ದಾಳೆ ಈ ಪೋರಿ ದಿಯಾ.

ಈ ಚಿನಕುರುಳಿ ದಿಯಾ ಹೆಗ್ಡೆ ಈಗ ನ್ಯಾಷನಲ್ ಲೆವೆಲ್ ನಲ್ಲೂ ಹವಾ ಸೃಷ್ಟಿಸಿದ್ದಾಳೆ. ದಿಯಾ ಹೆಗ್ಡೆ ಜನಪ್ರಿಯ ಹಿಂದಿಯ ‘ಇಂಡಿಯನ್ ಐಡಲ್ 14 ಗ್ರ್ಯಾಂಡ್ ಫಿನಾಲೆ’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಳು. ಇಂಡಿಯನ್ ಐಡಲ್ ಗ್ರ್ಯಾಂಡ್ ಫಿನಾಲೆಯಲ್ಲಿ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದಳು.  ಈ ಶೋನಲ್ಲಿ ವಿಶಾಲ್ ದದ್ಲಾನಿ, ಕುಮಾರ್ ಸಾನು, ಶ್ರೇಯಾ ಘೋಷಾಲ್ ಅವರು ಜಡ್ಜ್ ಆಗಿದ್ದಾರೆ. ಆ ಸ್ಟೇಜ್ನಲ್ಲೂ ದೀಯಾ ಹಾಡಿದ್ದು. ಆಕೆಯ ಗಾಯನವನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ ಸ್ಟಾರ್ ಸಿಂಗರ್ ಶ್ರೇಯಾ ಘೋಷಾಲ್.

ಇದೀಗ ದಿಯಾ ಹೆಗ್ಡೆ ಹಿಂದಿಯ ಸೋನಿ ಎಂಟರ್ ಟೇನ್ಮೆಂಟ್ ನಲ್ಲಿ ಪ್ರಸಾರವಾಗುತ್ತಿರುವ ಸಿಂಗಿಂಗ್ ರಿಯಾಲಿಟಿ ಶೋ, ಸೂಪರ್ ಸ್ಟಾರ್ ಸಿಂಗರ್ ಸೀಸನ್ 3 ನಲ್ಲಿ ಮಿಂಚುತ್ತಿದ್ದಾಳೆ. ಮಧುರ ಕಂಠದ ಗಾಯನದ ಮೂಲಕ ಜಡ್ಜಸ್ ಗಳಿಂದ ಭೇಷ್ ಅನಿಸಿಕೊಳ್ಳುತ್ತಿದ್ದಾಳೆ.  ಇನ್ನು ದಿಯಾ ಮಿಮಿಕ್ರಿ ಮಾಡೊದ್ರಲ್ಲಿ ಕೂಡ ತುಂಬಾನೆ ಫೇಮಸ್.. ಹಿಂದಿ ರಿಯಾಲಿಟಿ ಶೋನಲ್ಲಿ ಜಡ್ಜ್ ಗಳನ್ನು ಸಹ ಮಿಮಿಕ್ ಮಾಡುವ ಮೂಲಕ ಸಖತ್ ಮನರಂಜನೆ ಕೊಡುತ್ತಿದ್ದಾಳೆ.

ಜೀ ಕನ್ನಡ ಸರಿಗಮಪ ಸೀಸನ್ 10ರ ಫೈನಲಿಸ್ಟ್ ಆಗಿದ್ದ ದಿಯಾ ಹೆಗ್ಡೆ ವಿಭಿನ್ನವಾದ ಹಾಡು, ಡ್ಯಾನ್ಸ್ನಿಂದಲೇ ಎಲ್ಲರ ಗಮನ ಸೆಳೆದಿದ್ದರು. ರಕ್ಷಿತಾ ಪ್ರೇಮ್, ವಿಜಯ್ ಪ್ರಕಾಶ್, ಅರ್ಜುನ್ ಜನ್ಯ, ಹಂಸಲೇಖ ಕೂಡ ಈ ಪೋರಿಯ ಹಾಡು ಕೇಳಿ ಚಪ್ಪಾಳೆ ತಟ್ಟಿ ಭೇಷ್ ಎಂದಿದ್ದರು. ಇದೀಗ ಹಿಂದಿಯ ಸೂಪರ್ ಸ್ಟಾರ್ ಸಿಂಗರ್ ಸೀಸನ್‌ 3 ಭಾಗಿಯಾಗಿರೋದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಸದ್ಯ ದಿಯಾ ಹೆಗ್ಡೆ ಹಿಂದಿ ಹಾಡನ್ನು ಹಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿದ್ದಾರೆ. ದಿಯಾ ಹಿಂದಿಯಲ್ಲಿ ಹಾಡಿದ ಹಾಡುಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಕನ್ನಡಿಗರ ಹೃದಯ ಗೆದ್ದಿರುವ ಈ ಪೋರಿ ಈಗ ಎಲ್ಲಾ ಭಾರತೀಯರ ಮನಸ್ಸು ಗೆಲ್ಲೋದರಲ್ಲಿ ಅನುಮಾನವೇ ಇಲ್ಲ.

Shwetha M