200 ವರ್ಷಗಳಿಂದ ಈ ಊರಿನಲ್ಲಿ ದೀಪಾವಳಿ ಅಚರಣೆಯೇ ಇಲ್ಲವಂತೆ! – ಕಾರಣವೇನು ಗೊತ್ತಾ?

200 ವರ್ಷಗಳಿಂದ ಈ ಊರಿನಲ್ಲಿ ದೀಪಾವಳಿ ಅಚರಣೆಯೇ ಇಲ್ಲವಂತೆ! – ಕಾರಣವೇನು ಗೊತ್ತಾ?

ಭಾರತದಾದ್ಯಂತ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬೀದಿ ಬೀದಿಗಳಲ್ಲಿ ದೀಪಗಳನ್ನು ಬೆಳಗಿಸಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಗುತ್ತದೆ. ಆದರೆ ಕರ್ನಾಟಕದ ಒಂದು ಸ್ಥಳವು ದೀಪಾವಳಿ ಹಬ್ಬವನ್ನು ಕಳೆದ 200 ವರ್ಷಗಳಿಂದ ಆಚರಿಸುತ್ತಿಲ್ಲವಂತೆ.

ಆ ಸ್ಥಳ ಮತ್ಯಾವುದೂ ಅಲ್ಲ, ನಮ್ಮ ಕರ್ನಾಟಕದ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ. ಇದಕ್ಕೆ ಕಾರಣ ಟಿಪ್ಪು ಸುಲ್ತಾನ್‌ನ ಆಡಳಿತ ಎಂದು ಹೇಳಲಾಗುತ್ತದೆ. ಇದು 700 ರಿಂದ 800 ಕ್ಕೂ ಹೆಚ್ಚು ಅಯ್ಯಂಗಾರ್ ಬ್ರಾಹ್ಮಣರನ್ನು ಹತ್ಯೆ ಮಾಡಿದ ಕಥೆಯನ್ನು ಅಲ್ಲಿನ ಜನರು ಹೇಳುತ್ತಾರೆ. ಹೀಗಾಗಿ ಅಲ್ಲಿ ದೀಪಾವಳಿ ಹಬ್ಬದ ಆಚರಣೆ ಮಾಡುತ್ತಿಲ್ಲವಂತೆ.

ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ! – ಮಾದಪ್ಪನ ಬೆಟ್ಟಕ್ಕೆ ದ್ವಿಚಕ್ರ ವಾಹನ, ಆಟೋಗಳಿಗೆ ನಿರ್ಬಂಧ!

ಪ್ರತಿ ದೀಪಾವಳಿಯಲ್ಲಿ ಮೇಲುಕೋಟೆ ಕತ್ತಲಾಗುವುದೇಕೆ?

ದೀಪಗಳಿಂದ ಕಂಗೊಳಿಸಬೇಕಾದ ಭಾರತದ ಸ್ಥಳಗಳು, ಮಂಡ್ಯ ಜಿಲ್ಲೆಯ ಮೇಲುಕೋಟೆ ಮಾತ್ರ ಪ್ರತಿ ದೀಪಾವಳಿಯಲ್ಲೂ ಕತ್ತಲೆಯಾಗುತ್ತದೆ. ಮೇಲುಕೋಟೆ ಒಂದು ಪವಿತ್ರ ಆಧ್ಯಾತ್ಮಿಕ ತಾಣವು ಹೌದು. ಆದರೂ ಮೇಲ್ಕೋಟೆಯಂತಹ ಪವಿತ್ರ ಸ್ಥಳವು ದೀಪಾವಳಿಯನ್ನು ಆಚರಿಸುವುದಿಲ್ಲ ಎಂದು ಯಾರಾದರೂ ನಂಬುವುದು ಕಷ್ಟವಾಗಿದೆ. ಈ ಸ್ಥಳವು 12 ವರ್ಷಗಳಿಂದ ಶ್ರೀ ವೈಷ್ಣವ ಸಂತ ರಾಮಾನುಜಾಚಾರ್ಯರಿಗೆ ನೆಲೆಯಾಗಿತ್ತು. ಇಲ್ಲಿ ಭವ್ಯವಾದ ಚೆಲುವನಾರಾಯಣ ಸ್ವಾಮಿ ದೇವಾಲಯವು ಅನೇಕ ಇತರ ಪ್ರಮುಖ ದೇವಾಲಯಗಳೊಂದಿಗೆ ನೆಲೆಗೊಂಡಿದೆ. ಮೇಲುಕೋಟೆ, ಅಯ್ಯಂಗಾರ್ ಬ್ರಾಹ್ಮಣರೆಂದು ಕರೆಯಲ್ಪಡುವ ಸಮುದಾಯಕ್ಕೆ ನೆಲೆಯಾಗಿದೆ. ಅವರು ಕಳೆದ 200 ವರ್ಷಗಳಿಂದ ದೀಪಾವಳಿಯನ್ನು ಆಚರಿಸುವುದಿಲ್ಲ.

ಇದಕ್ಕೆ ಪ್ರಮುಖ ಕಾರಣ, ದೀಪಾವಳಿಯು ಕ್ರೂರ ಟಿಪ್ಪು ಸುಲ್ತಾನ್‌ನೊಂದಿಗಿನ ಸಂಬಂಧ ಹೊಂದಿದ್ದು, ಕರಾಳ ಘಟನೆಗೆ ಸಾಕ್ಷಿಯಾಗಿದೆ. ಮತಾಂತರ ಆಗದ ಬ್ರಾಹ್ಮಣರನ್ನು ದೀಪಾವಳಿಯಂದೇ ಹತ್ಯೆ ಮಾಡಿಸಿದ್ದಕ್ಕಾಗಿ, ದೀಪಾವಳಿ ಹಬ್ಬವನ್ನು ಜನರು ಇಂದಿಗೂ ಆಚರಿಸಲು ಮನಸ್ಸು ಮಾಡುವುದಿಲ್ಲ.

ಘಟನೆ ಟಿಪ್ಪು ಸುಲ್ತಾನ್ ಮತ್ತು ಅವನ ದಬ್ಬಾಳಿಕೆಯ ಆಳ್ವಿಕೆಯೊಂದಿಗೆ ಸಂಪರ್ಕ ಹೊಂದಿದೆ. ಮೈಸೂರು ಸಾಮ್ರಾಜ್ಯದಲ್ಲಿ, 1600 ರ ದಶಕದಲ್ಲಿ ಈ ಪ್ರದೇಶವನ್ನು ಒಡೆಯರ್ ಆಳ್ವಿಕೆ ನಡೆಸಿದರು. ಒಡೆಯರ್‌ಗಳ ಅಡಿಯಲ್ಲಿ ಮಂಡ್ಯದ ಅಯ್ಯಂಗಾರ್‌ಗಳು – ವಲಸೆಯ ನಂತರ ಕರ್ನಾಟಕದಲ್ಲಿ ನೆಲೆಸಿದ ಅಯ್ಯಂಗಾರ್‌ಗಳ ಉಪವಿಭಾಗ, ಅಭಿವೃದ್ಧಿ ಹೊಂದಿದರು ಮತ್ತು ಚೆಲುವನಾರಾಯಣ ದೇವಸ್ಥಾನದ ಅಧಿಕಾರ ಸೇರಿದಂತೆ ಪ್ರಮುಖ ಆಡಳಿತ ಮತ್ತು ಧಾರ್ಮಿಕ ಹುದ್ದೆಗಳನ್ನು ಆಕ್ರಮಿಸಿಕೊಂಡರು. ಕಾಲಾನಂತರದಲ್ಲಿ ಹೈದರ್ ಅಲಿ ನಂತರ ಅವನ ಮಗ ಟಿಪ್ಪು ಸುಲ್ತಾನ್ ಅಧಿಕಾರಕ್ಕೆ ಬಂದನು. ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ, ಮಂಡ್ಯಂ ಅಯ್ಯಂಗಾರ್‌ಗಳು ದೀಪಾವಳಿ ಹಬ್ಬವನ್ನು ಆಚರಿಸಲು ಶ್ರೀರಂಗಪಟ್ಟಣದ ಕಾವೇರಿ ತೀರದಲ್ಲಿರುವ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸಭೆ ಸೇರಿದ್ದರು. ಈ ವಿಷಯ ತಿಳಿದ ಟಿಪ್ಪು ಸುಲ್ತಾನ್‌ ತನ್ನ ಹಿಂದಿನ ಸೇಡು ತೀರಿಸಿಕೊಳ್ಳಲು ಹಬ್ಬದ ದಿನವನ್ನು ಸೂಕ್ತವೆಂದು ಆಯ್ಕೆ ಮಾಡಿಕೊಂಡನು. ಹಿಂದೂಗಳ ಮೇಲಿನ ದ್ವೇಷದಿಂದ ಅವನು ಇಡೀ ಸಮುದಾಯದ ಹತ್ಯಾಕಾಂಡಕ್ಕೆ ಆದೇಶಿಸಿದನು. ಸುಮಾರು 700 ರಿಂದ 800 ಕ್ಕೂ ಹೆಚ್ಚು ಅಯ್ಯಂಗಾರ್ ಬ್ರಾಹ್ಮಣರನ್ನು ಟಿಪ್ಪು ಸೈನ್ಯವು ಕೊಂದು ಹಾಕಿದರು. ಅಲ್ಲಿನ ಜನರನ್ನು ಪಲಾಯನ ಮಾಡಲು ಒತ್ತಾಯಿಸಲಾಯಿತು. ಮೇಲ್ಕೋಟೆ ರಾತ್ರೋರಾತ್ರಿ ಪ್ರೇತ ಪಟ್ಟಣವಾಗಿ ಮಾರ್ಪಟ್ಟಿತ್ತು. ಹಬ್ಬದ ದಿನದಂದೇ ನಡೆದ ಈ ದಾರುಣ ಘಟನೆಯಿಂದ ಇಂದಿಗೂ ಅಲ್ಲಿನ ಜನರು ದೀಪಾವಳಿ ಹಬ್ಬವನ್ನು ಸಂಭ್ರಮಿಸುವುದಿಲ್ಲ.

ಶೋಕದ ದಿನವಾಗಿ ಆಚರಿಸಲಾಗುತ್ತದೆ

ಈ ಕ್ರೂರ ಹತ್ಯಾಕಾಂಡ ನೆನಪುಗಳು ಇಂದಿಗೂ ಅಲ್ಲಿನ ಜನರ ಮನಸ್ಸಿನಿಂದ ಹೋಗಿಲ್ಲ. ದೀಪಾವಳಿ ಹಬ್ಬದಂದು ಅವರು ತಮ್ಮ ಬ್ರಾಹ್ಮಣರ ಶೋಕದ ದಿನವಾಗಿ ಆಚರಿಸುತ್ತಾರೆ. ಕೇವಲ ಹಿಂಸಾಚಾರವಲ್ಲ, ಧಾರ್ಮಿಕ ಮತಾಂತರ, ಬಲವಂತದ ಸುನ್ನತಿ, ಧ್ವಂಸಗೊಳಿಸುವಿಕೆ ಮತ್ತು ದೇವಾಲಯಗಳ ಲೂಟಿ, ಅತ್ಯಾಚಾರ ಮತ್ತು ಕೊಲೆಗಳ ಮೂಲಕ ಇತಿಹಾಸದಲ್ಲಿ ಟಿಪ್ಪು ಎಂಬ ಹೆಸರು ಸೇರ್ಪಟ್ಟಿದೆ.

Shwetha M